April 2022

ಉಪ್ಪಿನಂಗಡಿ: ನೇತ್ರಾವತಿಗೆ ಹಾರಿ ಗದಗ ಮೂಲದ ವ್ಯಕ್ತಿ ಆತ್ಮಹತ್ಯೆ

ಸಮಗ್ರ ನ್ಯೂಸ್: ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಸೇತುವೆಯಿಂದ ನದಿಗೆ ಧುಮುಕಿ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ. ಮೂಲತಃ ಗದಗ ಜಿಲ್ಲೆಯ ರೋಣ ಮನೆ ನಿವಾಸಿ ಭರಮಪ್ಪ (31), ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಈತ ಕೂಲಿ ಕಾರ್ಮಿಕನಾಗಿದ್ದು, ತನ್ನ ಕುಟುಂಬ ಸಮೇತ ತೆಕ್ಕಾರು ಗ್ರಾಮದ ಸರಳೀಕಟ್ಟೆಯ ಮೂಡಡ್ಕ ಎಂಬಲ್ಲಿ ಬಾಡಿಗೆ ಮನೆಯಲ್ಲಿದ್ದುಕೊಂಡು ಸ್ಥಳೀಯ ನಿವಾಸಿಯೋರ್ವರ ತೋಟಕ್ಕೆ ಕೆಲಸಕ್ಕೆ ಹೋಗುತ್ತಿದ್ದ. ವಿಪರೀತ ಮದ್ಯವ್ಯಸನಿಯಾಗಿದ್ದರು. ಕೂಲಿ ಕೆಲಸಕ್ಕೆಂದು ಹೋದವರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತನ ಪತ್ನಿ […]

ಉಪ್ಪಿನಂಗಡಿ: ನೇತ್ರಾವತಿಗೆ ಹಾರಿ ಗದಗ ಮೂಲದ ವ್ಯಕ್ತಿ ಆತ್ಮಹತ್ಯೆ Read More »

ಅರಣ್ಯ ಇಲಾಖೆ ಸಿಬ್ಬಂದಿ ನದಿಗೆ ಜಿಗಿದು ಆತ್ಮಹತ್ಯೆ| ಬೈಕ್, ಮೊಬೈಲ್, ಹಗ್ಗ ಕೊಟ್ಟಿತ್ತು ಸುಳಿವು|

ಸಮಗ್ರ ನ್ಯೂಸ್: ಕೃಷ್ಣಾ ನದಿಗೆ ಜಿಗಿದ್ದು ಅರಣ್ಯ ಇಲಾಖೆ ಸಿಬ್ಬಂದಿ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದ ಕೃಷ್ಣಾ ನದಿಯಲ್ಲಿ ಘಟನೆ ನಡೆದಿದೆ. ಕೊಲ್ಹಾರ ಸೇತುವೆಯ ಮೇಲಿಂದ ಹಾರಿ ಕೊಲ್ಹಾರ ವಲಯ ಅರಣ್ಯ ಇಲಾಖೆಯ ಅರಣ್ಯ ರಕ್ಷಕ ಈರಪ್ಪ ದುಂಡಪ್ಪ ದಟ್ಟಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸುಮಾರು 8 ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ನಿಡಗುಂದಿ ತಾಲೂಕಿನ ಗೊಳಸಂಗಿ ಗ್ರಾಮದ ನಿವಾಸಿ ಈರಪ್ಪ ದುಂಡಪ್ಪ ದಟ್ಟಿ ನಿನ್ನೆ ಮಧ್ಯಾಹ್ನ ಕೃಷ್ಣಾ ನದಿಗೆ

ಅರಣ್ಯ ಇಲಾಖೆ ಸಿಬ್ಬಂದಿ ನದಿಗೆ ಜಿಗಿದು ಆತ್ಮಹತ್ಯೆ| ಬೈಕ್, ಮೊಬೈಲ್, ಹಗ್ಗ ಕೊಟ್ಟಿತ್ತು ಸುಳಿವು| Read More »

ಎಸಿ ಸ್ಪೋಟ; ಮಲಗಿದ್ದಲ್ಲೇ ದಂಪತಿ ಹಾಗೂ ಮಕ್ಕಳು ದುರ್ಮರಣ

ಸಮಗ್ರ ನ್ಯೂಸ್: ಎಸಿ ಸ್ಫೋಟದಿಂದ ಸಂಭವಿಸಿದ ಅಗ್ನಿ ಅವಘಡದಲ್ಲಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನ ಹಳ್ಳಿಯಲ್ಲಿ ನಡೆದಿದೆ. ವೆಂಕಟ್ ಪ್ರಶಾಂತ್​ (42) ಪತ್ನಿ ಡಿ. ಚಂದ್ರಕಲಾ (38 ) ಹಾಗೂ ಮಕ್ಕಳಾದ ಎಚ್.ಎ. ಅರ್ದ್ವಿಕ್(16) ಮತ್ತು ಪ್ರೇರಣಾ (8) ಮೃತ ದುರ್ದೈವಿಗಳು. ರಾಘವೇಂದ್ರ ಶೆಟ್ಟಿ ಎನ್ನುವವರ ಮನೆಯಲ್ಲಿ ಅವಘಡ ಸಂಭವಿಸಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್​ ಮತ್ತು ಎ.ಸಿ ಸ್ಫೋಟದಿಂದ ಮನೆಗೆ ಬೆಂಕಿ ಹತ್ತಿಕೊಂಡು ದಟ್ಟ ಹೊಗೆ

ಎಸಿ ಸ್ಪೋಟ; ಮಲಗಿದ್ದಲ್ಲೇ ದಂಪತಿ ಹಾಗೂ ಮಕ್ಕಳು ದುರ್ಮರಣ Read More »

ಹುಬ್ಬಳ್ಳಿ: ಸೈಯದ್ ವೆಡ್ಸ್ ಸ್ನೇಹಾ; ಲವ್ ಜಿಹಾದ್ ಗೆ ಪುಲ್ ಸ್ಟಾಪ್| ಆತನೊಂದಿಗೇ ಬಾಳುವೆ ಎಂದ ಯುವತಿ

ಸಮಗ್ರ ನ್ಯೂಸ್:: ಮುಸ್ಲಿಂ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದ ಯುವತಿ, ‘ನಾನು ಮತ್ತೆ ಮನೆಗೆ ವಾಪಸ್ ಹೋಗುವುದಿಲ್ಲ. ಪತಿ ಜೊತೆಯೇ ಬದುಕುತ್ತೇನೆ. ನನ್ನ ಪಾಡಿಗೆ ಬಿಟ್ಟಬಿಡಿ’ ಎಂದು, ತಮ್ಮ ಅಂತರ ಧರ್ಮೀಯ ಪ್ರೇಮ ವಿವಾಹದ ಸುತ್ತ ಎದ್ದಿದ್ದ ‘ಲವ್ ಜಿಹಾದ್’ ಆರೋಪಕ್ಕೆ ತೆರೆ ಎಳೆದರು. ನಗರದ ಹಳೇ ಹುಬ್ಬಳ್ಳಿಯ ಮುಸ್ಲಿಂ ಯುವಕ ಇಬ್ರಾಹಿಂ ಸೈಯದ್ ಅವರನ್ನು ಉಣಕಲ್‌ನ ಹಿಂದೂ ಯುವತಿ ಸ್ನೇಹಾ ಢಮಾಮಘರ ಅವರು, ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಫೆ. 11ರಂದು ಮದುವೆಯಾಗಿದ್ದರು. ವಿಷಯ ತಿಳಿದು ಕುಟುಂಬದವರು, ಸ್ಥಳೀಯ

ಹುಬ್ಬಳ್ಳಿ: ಸೈಯದ್ ವೆಡ್ಸ್ ಸ್ನೇಹಾ; ಲವ್ ಜಿಹಾದ್ ಗೆ ಪುಲ್ ಸ್ಟಾಪ್| ಆತನೊಂದಿಗೇ ಬಾಳುವೆ ಎಂದ ಯುವತಿ Read More »

ಕರಾವಳಿ, ಮಲೆನಾಡಿನ ಹಲವೆಡೆ ಭಾರೀ ಮಳೆ ನಿರೀಕ್ಷೆ| 4 ದಿನ ಮುಂದುವರಿಯಲಿದೆ ವರ್ಷಧಾರೆ

ಸಮಗ್ರ ನ್ಯೂಸ್: ರಾಜ್ಯದ ಕರಾವಳಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಇನ್ನೂ 4 ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರ್ನಾಟಕದ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ. ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಏಪ್ರಿಲ್ 11 ರವರೆಗೂ ಮಳೆ ಮುಂದುವರೆಯಲಿದೆ. ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಉತ್ತರ ಕನ್ನಡ, ಹಾಸನ, ದಾವಣಗೆರೆ, ಬೆಂಗಳೂರು, ಮೈಸೂರು, ಕೊಡಗು ಸೇರಿದಂತೆ ಹಲವು ಜಿಲ್ಲೆಗಳಲ್ಲಿ

ಕರಾವಳಿ, ಮಲೆನಾಡಿನ ಹಲವೆಡೆ ಭಾರೀ ಮಳೆ ನಿರೀಕ್ಷೆ| 4 ದಿನ ಮುಂದುವರಿಯಲಿದೆ ವರ್ಷಧಾರೆ Read More »

ಒಂದೊಂದು ಹುದ್ದೆಗೂ ಕೋಟ್ಯಂತರ ಹಣ; ಬೆಲೆ ಏರಿಕೆ ಮರೆಮಾಚಲು ಹಿಜಾಬ್, ಹಲಾಲ್ ವಿವಾದ ಸೃಷ್ಟಿ – ಭಾಸ್ಕರ ರಾವ್

ಸಮಗ್ರ ನ್ಯೂಸ್: ‘ನನ್ನ ಸೇವಾ ಅವಧಿಯಲ್ಲಿ ರಾಜ್ಯದ ವಿದ್ಯಮಾನಗಳನ್ನು ಚೆನ್ನಾಗಿ ಅರಿತಿದ್ದೇನೆ. ಒಂದೊಂದು ಹುದ್ದೆಗೂ ಕೋಟ್ಯಂತರ ಹಣ ಕೊಡಬೇಕು. ಉತ್ತಮವಾಗಿ ಮಾತನಾಡುವ ನಾಯಕರ ಬಂಡವಾಳವನ್ನು ಮುಂದೆ ಬಿಚ್ಚಿಡುತ್ತೇನೆ’ಎಂದು ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಗುಡುಗಿದ್ದಾರೆ. ಇತ್ತೀಚೆಗಷ್ಟೇ ಆಮ್ ಆದ್ಮಿ ಪಾರ್ಟಿ ಸೇರಿರುವ ಅವರು ಮಾಧ್ಯಮಗಳ ಜೊತೆ ಸಂವಾದದಲ್ಲಿ ಪಾಲ್ಗೊಂಡು, ಪೊಲೀಸ್ ಅಧಿಕಾರಿಯಾಗಿದ್ದರಿಂದ ನಾನು ಆಗ ಸರಕಾರದ ವಿರುದ್ಧ ಮಾತನಾಡಲು ಸಾಧ್ಯವಾಗಿರಲಿಲ್ಲ. ವ್ಯವಸ್ಥೆಯಿಂದ ಬೇಸತ್ತು ನಿವೃತ್ತಿ ತೆಗೆದುಕೊಂಡಿದ್ದೇನೆ. ಇನ್ಮುಂದೆ ಎಲ್ಲರ ಬಂಡವಾಳ ಬಿಚ್ಚಿಡ್ತೀನಿ ಎಂದರು. ಕೊರೋನ ಸಂದರ್ಭದಲ್ಲಿ

ಒಂದೊಂದು ಹುದ್ದೆಗೂ ಕೋಟ್ಯಂತರ ಹಣ; ಬೆಲೆ ಏರಿಕೆ ಮರೆಮಾಚಲು ಹಿಜಾಬ್, ಹಲಾಲ್ ವಿವಾದ ಸೃಷ್ಟಿ – ಭಾಸ್ಕರ ರಾವ್ Read More »

ಮತ್ತೆ ಬೆಚ್ಚಿಬಿದ್ದ ಶಿವಮೊಗ್ಗ| ಅನ್ಯಕೋಮಿನ ಯುವಕರಿಂದ ಹಿಂದೂ ಯುವಕನ ಮೇಲೆ ಮಾರಣಾಂತಿಕ ದಾಳಿ|

ಸಮಗ್ರ ನ್ಯೂಸ್: ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ಭಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣ ಮಾಸುವ ಮುನ್ನವೇ ಶಿವಮೊಗ್ಗ ನಗರದಲ್ಲಿ ಹಿಂದೂ ಯುವಕನ ಮೇಲೆ ಅನ್ಯಕೋಮಿನ ಯುವಕರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ನಗರದ ನ್ಯೂ ಮಂಡ್ಲಿ ಬಡಾವಣೆಯಲ್ಲಿ ಈ ಘಟನೆ ನಡೆದಿದ್ದು, ಮಧು (21) ಎಂಬಾತನ ಮೇಲೆ ಅನ್ಯಕೋಮಿನ 6 ಯುವಕರ ತಂಡ ಹಲ್ಲೆ ನಡೆಸಿದ್ದಾರೆ. ಹೂವಿನ ವ್ಯಾಪಾರಿಯಾಗಿರುವ ಮಧು, ಮಂಡ್ಲಿ ಬಡಾವಣೆಯಲ್ಲಿ ಹೂವು ವಿತರಣೆಗೆ ಹೋಗಿದ್ದಾನೆ. ಈ ವೇಳೆ ಲಾಂಗು-ಮಚ್ಚು ಝಳಪಿಸುತ್ತ ಓಡಿಸಿಕೊಂಡು ಬಂದ ಅನ್ಯಕೋಮಿನ ಯುವಕರು

ಮತ್ತೆ ಬೆಚ್ಚಿಬಿದ್ದ ಶಿವಮೊಗ್ಗ| ಅನ್ಯಕೋಮಿನ ಯುವಕರಿಂದ ಹಿಂದೂ ಯುವಕನ ಮೇಲೆ ಮಾರಣಾಂತಿಕ ದಾಳಿ| Read More »

ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿಯಲ್ಲಿ ಬದಲಾವಣೆ| ವಿಷಯವಾರು ದಿನಾಂಕ ಬದಲು

ಸಮಗ್ರ ನ್ಯೂಸ್: ರಾಜ್ಯ ಪಿಯು ಬೋರ್ಡ್ ಈ ಹಿಂದೆ ಪ್ರಕಟಿಸಿದ್ದ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷಾ ವೇಳಾಪಟ್ಟಿಯಲ್ಲಿ ಬದಲಾವಣೆಯಾಗಿದೆ. ವಿವಿಧ ವಿಷಯಗಳ ಪರೀಕ್ಷೆ ದಿನಾಂಕ ಕೆಲ‌ ತಾಂತ್ರಿಕ ಕಾರಣಗಳಿಂದ ಬದಲಾವಣೆಯಾಗಿದೆ. ಈ ಮೊದಲು ತಿಳಿಸಿದಂತೆ ಏ. 22ರಿಂದ‌ ಮೇ 18ರವರೆಗೆ ಪರೀಕ್ಷೆ ನಡೆಯಲಿದ್ದು ವಿಷಯಗಳ ದಿನಾಂಕವಷ್ಟೆ ಬದಲಾಗಿದೆ ಎಂದು ಪಿಯು ಬೋರ್ಡ್ ಮಾಹಿತಿ ನೀಡಿದೆ. ಎಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರುಗಳು ಈ ಬದಲಾವಣೆಯನ್ನು ವಿದ್ಯಾರ್ಥಿಗಳ ಗಮನಕ್ಕೆ ತರುವಂತೆ ಸೂಚನೆ ನೀಡಲಾಗಿದೆ. ತಮ್ಮೆಲ್ಲರ ಗಮನಕ್ಕೆ ಈ ಹಿಂದೆ

ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿಯಲ್ಲಿ ಬದಲಾವಣೆ| ವಿಷಯವಾರು ದಿನಾಂಕ ಬದಲು Read More »

“ಅಪ್ಪಾ ಪ್ಲೀಸ್ ಕೊಲ್ಬೇಡ” ಅಂದ್ರೂ ಕರಗದ ಕ್ರೂರಮನ| ಹೆತ್ತ ಮಗನನ್ನೇ ಬೆಂಕಿ ಇಟ್ಟು ಕೊಂದ ಅಪ್ಪ| ಜೀವಕ್ಕಿಂತ ವ್ಯವಹಾರವೇ ದೊಡ್ಡದಾಯ್ತು!

ಸಮಗ್ರ ನ್ಯೂಸ್: ಹಾಡಹಗಲೇ ಅಪ್ಪನೊಬ್ಬ ತನ್ನ ಮಗನಿಗೆ ನಡುರಸ್ತೆಯಲ್ಲಿ ಬೆಂಕಿ ಇಟ್ಟು ಕೊಂದ ಘಟನೆ ಅಜಾದ್ ನಗರದಲ್ಲಿ ಸಂಭವಿಸಿದೆ. ಈ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲ್​ ಆಗಿದೆ. ಅಪ್ಪನಿಂದಲೇ ಕೊಲೆಯಾದ ಮಗನ ಹೆಸರು ಅರ್ಪಿತ್​. ಆರೋಪಿ ಸುರೇಂದ್ರನನ್ನು ಪೊಲೀಸರು ಬಂಧಿಸಿದ್ದಾರೆ. ಸುರೇಂದ್ರ ದೊಡ್ಡ ದೊಡ್ಡ ಬಿಲ್ಡಿಂಗ್ ಪ್ಯಾಬ್ರಿಕೇಷನ್ ಬಿಜಿನೆಸ್ ಮಾಡಿಕೊಂಡಿದ್ದ. ಈ ಜವಾಬ್ದಾರಿಯನ್ನು ಮಗನಿಗೆ ಸುರೇಂದ್ರ ನೀಡಿದ್ದ. ವ್ಯವಹಾರದಲ್ಲಿ ಸಾಕಷ್ಟು ಏರುಪೇರಾಗಿತ್ತು. ಹಣದ ಲೆಕ್ಕದಲ್ಲೂ ವ್ಯತ್ಯಾಸ ಕಂಡುಬಂದಿತ್ತು. ಇದೇ ವಿಚಾರಕ್ಕೆ ಬಿಜಿನೆಸ್ ಮೆಟೀರಿಯಲ್ ಇಟ್ಟಿದ್ದ

“ಅಪ್ಪಾ ಪ್ಲೀಸ್ ಕೊಲ್ಬೇಡ” ಅಂದ್ರೂ ಕರಗದ ಕ್ರೂರಮನ| ಹೆತ್ತ ಮಗನನ್ನೇ ಬೆಂಕಿ ಇಟ್ಟು ಕೊಂದ ಅಪ್ಪ| ಜೀವಕ್ಕಿಂತ ವ್ಯವಹಾರವೇ ದೊಡ್ಡದಾಯ್ತು! Read More »

ಉಡುಪಿ: ಸೈಂಟ್ ಮೇರಿಸ್ ಐಲ್ಯಾಂಡ್ ನಲ್ಲಿ ಪ್ರವಾಸಿ ವಿದ್ಯಾರ್ಥಿಗಳು ಸಮುದ್ರ ಪಾಲು

ಸಮಗ್ರ ನ್ಯೂಸ್: ಮಲ್ಪೆ ಸೈಂಟ್ ಮೇರಿಸ್ ಐಲ್ಯಾಂಡ್ ನಲ್ಲಿ ಪ್ರವಾಸಕ್ಕೆಂದು ಆಗಮಿಸಿದ್ದ ಮೂಲದ ಮೂವರು ವಿದ್ಯಾರ್ಥಿಗಳು ಸಮುದ್ರ ಪಾಲಾಗಿದ್ದು, ಇಬ್ಬರ ಮೃತ ದೇಹ ಪತ್ತೆಯಾಗಿದೆ. ಇನ್ನೊಬ್ಬ ವಿದ್ಯಾರ್ಥಿಯ ಮೃತ ದೇಹಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ. ಕೇರಳ ರಾಜ್ಯದ ಕೊಟ್ಟಾಯಂ ನ ಮಂಗಳಂ ಇಂಜಿನಿಯರಿಂಗ್ ಕಾಲೇಜಿನ ಅಲೆನ್ ರೇಜಿ (22), ಅಮಲ್ ಸೀ ಅನಿಲ್( 22) ಮತ್ತು ಆ್ಯಂಟನಿ ಶೆಣೈ (21) ಮೃತ ವಿದ್ಯಾರ್ಥಿಗಳು. ಕೊಟ್ಟಾಯಂ ನಿಂದ 42 ವಿದ್ಯಾರ್ಥಿಗಳು ಮತ್ತು ಇಬ್ಬರು ಪ್ರಾಧ್ಯಾಪಕರ ಜೊತೆ ಪ್ರವಾಸಕ್ಕೆ ಬಂದಿದ್ದು,

ಉಡುಪಿ: ಸೈಂಟ್ ಮೇರಿಸ್ ಐಲ್ಯಾಂಡ್ ನಲ್ಲಿ ಪ್ರವಾಸಿ ವಿದ್ಯಾರ್ಥಿಗಳು ಸಮುದ್ರ ಪಾಲು Read More »