April 2022

ಪತಿಯ ಸಾವಿನ‌ ಸುದ್ದಿ ಸಹಿಸದ ಸತಿ| ಮಗುವನ್ನು ಕೊಂದು ಸಾವಿಗೆ ಶರಣಾದ ಪತ್ನಿ

ಸಮಗ್ರ ನ್ಯೂಸ್: ಪತಿ ಇಲ್ಲದೆ ಬದುಕೇ ಇಲ್ಲ ಎಂಬ ನಿರ್ಧಾರಕ್ಕೆ ಬಂದ ಮಹಿಳೆ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾಳೆ. ಮುದ್ದಾದ ಮಗುವನ್ನು ಕೊಂದು ತಾನೂ ಸಹ ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ರಾಯಚೂರಿನಲ್ಲಿ ನಡೆದಿದೆ. ಮಂಗಳೂರು ನಗರದಲ್ಲಿ ಅಪಘಾತದಲ್ಲಿ ಪತಿ ಸಾವನ್ನಪ್ಪಿದ್ದಾನೆ ಎನ್ನುವ ಸುದ್ದಿ ತಿಳಿಯುತ್ತಿದ್ದಂತೆ ಪತ್ನಿ ಶೃತಿ ಆಘಾತಕ್ಕೊಳಗಾಗಿದ್ದಾಳೆ. ರಾಯಚೂರಿನಲ್ಲಿದ್ದ ಶೃತಿ ತನ್ನ 6 ತಿಂಗಳ ಮಗುವನ್ನು ನೇಣುಹಾಕಿ ಹತ್ಯೆಗೈದು ತಾನೂ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಮಾಡಿಕೊಂಡಿದ್ದಾಳೆ. ಮಂಗಳೂರಿನ ಅಗ್ನಿಶಾಮಕ ದಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗಂಗಾಧರ ಬಿ. […]

ಪತಿಯ ಸಾವಿನ‌ ಸುದ್ದಿ ಸಹಿಸದ ಸತಿ| ಮಗುವನ್ನು ಕೊಂದು ಸಾವಿಗೆ ಶರಣಾದ ಪತ್ನಿ Read More »

ಅಯೋಧ್ಯೆಯ ರಾಮ ಮಂದಿರ ಲೋಕಾರ್ಪಣೆಗೆ ಮುಹೂರ್ತ ಫಿಕ್ಸ್

ಸಮಗ್ರ ನ್ಯೂಸ್: ಉತ್ತರ ಪ್ರದೇಶದ ಅಯೋಧ್ಯಾ ನಗರ ಶ್ರೀರಾಮನ ಜನ್ಮಸ್ಥಳವಾಗಿದ್ದು, ಹಾಗಾಗಿಯೇ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿದೆ. 2024 ರ ಸಂಕ್ರಾಂತಿಯಂದು ರಾಮ ಮಂದಿರವನ್ನು ಉದ್ಘಾಟಿಸುವ ಸಾಧ್ಯತೆಯಿದೆ ಎಂದು ರಾಮ ಜನ್ಮಭೂಮಿ ಮಂದಿರ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಮಾಹಿತಿ ನೀಡಿದ್ದಾರೆ. ರಾಮನ ಮೂರ್ತಿ ಪ್ರತಿಷ್ಟಾಪಿಸಲು ಸಿದ್ದತೆಗಳು ನಡೆಯುತ್ತಿದೆ. 2024 ರಲ್ಲಿ ಉದ್ಘಾಟಿಸುವ ಸಾದ್ಯತೆ ಇದೆ ಎಂದಿದ್ದಾರೆ.

ಅಯೋಧ್ಯೆಯ ರಾಮ ಮಂದಿರ ಲೋಕಾರ್ಪಣೆಗೆ ಮುಹೂರ್ತ ಫಿಕ್ಸ್ Read More »

ಕಲಬುರಗಿ ಖಾಸಗಿ ಬಸ್ – ಟ್ಯಾಂಕರ್ ನಡುವೆ ಭೀಕರ ಅಪಘಾತ; ಮೂವರು ಗಂಭೀರ

ಸಮಗ್ರ ನ್ಯೂಸ್: ಖಾಸಗಿ ಬಸ್-ಟ್ಯಾಂಕರ್ ನಡುವೆ ಭೀಕರ ಅಪಘಾತ ನಡೆದಿದ್ದು ಮೂವರ ಸ್ಥಿತಿ ಗಂಭೀರ, ಹಲವು ಪ್ರಯಾಣಿಕರಿಗೆ ಗಾಯಗಳಾದ ಘಟನೆ ಕಲಬುರ್ಗಿಯಲ್ಲಿ ನಡೆದಿದೆ. ಕಲಬುರ್ಗಿಯ ಹುಮನಾಬಾದ್ ರಿಂಗ್ ರಸ್ತೆಯ ಹೊರವಲಯದಲ್ಲಿ ಖಾಸಗಿ ಬಸ್ ಹಾಗೂ ಸಿಮೆಂಟ್ ಟ್ಯಾಂಕರ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಎರಡೂ ವಾಹನಗಳು ಪಲ್ಟಿಯಾದ ಪರಿಣಾಮ, ಮೂವರು ಗಂಭೀರವಾಗಿ ಗಾಯಗೊಂಡು ಚಿಂತಾಜನಕ ಸ್ಥಿತಿ ತಲುಪಿದ್ದಾರೆ. ಅಲ್ಲದೇ ಹಲವರಿಗೆ ಸಣ್ಣ ಪುಟ್ಟ ಗಾಯವಾಗಿರೋದಾಗಿ ತಿಳಿದು ಬಂದಿದೆ. ಇನ್ನೂ ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ

ಕಲಬುರಗಿ ಖಾಸಗಿ ಬಸ್ – ಟ್ಯಾಂಕರ್ ನಡುವೆ ಭೀಕರ ಅಪಘಾತ; ಮೂವರು ಗಂಭೀರ Read More »

ಉಕ್ರೇನ್ ರಾಜಧಾನಿ ಸುತ್ತಮುತ್ತ ನೂರಾರು ಮೃತ ದೇಹ..

ರಷ್ಯಾ ಉಕ್ರೇನ್ ಯುದ್ದ ದೇಶದೆಲ್ಲೆಡೆ ಭಯ ಬೀಳಿಸಿದೆ. ರಷ್ಯಾ ಸೇನೆ ವಾಪಸಾತಿ ನಂತರ ಉಕ್ರೇನ್ ರಾಜಧಾನಿ ಕೈವ್ ಸುತ್ತಮುತ್ತ 900ಕ್ಕೂ ಹೆಚ್ಚು ನಾಗರಿಕ ದೇಹಗಳು ಪತ್ತೆಯಾಗಿದ್ದು. ಅವರಲ್ಲಿ ಹೆಚ್ಚಿನವರು ಮಾರಣಾಂತಿಕವಾಗಿ ಗುಂಡು ಹಾರಿಸಿದ್ದರಿಂದ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ರಾಜಧಾನಿಯ ಪ್ರಾದೇಶಿಕ ಪೊಲೀಸ್ ಪಡೆಯ ಮುಖ್ಯಸ್ಥ ಕೈವ್ ಸುತ್ತಲೂ ಶವಗಳನ್ನು ಬೀದಿಗಳಲ್ಲಿ ಬಿಡಲಾಗಿದೆ ಹಾಗೆ ತಾತ್ಕಾಲಿಕ ಸಮಾಧಿ ಮಾಡಲಾಗಿದೆ. ಶೇ.95 ಮಂದಿ ಗುಂಡೇಟಿನ ಗಾಯಗೊಂಡು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ. ರಷ್ಯನ್ ಪಡೆಗಳು ಉಕ್ರೇನ್‍ನ ಸೇನೆಯನ್ನಷ್ಟೇ ಅಲ್ಲ,

ಉಕ್ರೇನ್ ರಾಜಧಾನಿ ಸುತ್ತಮುತ್ತ ನೂರಾರು ಮೃತ ದೇಹ.. Read More »

ಚಾಕಲೇಟ್ ಖರೀದಿಸಲು ಭಾರತಕ್ಕೆ ಬಂದ ಯುವಕ ಅರೆಸ್ಟ್…..!

ಚಾಕೋಲೇಟ್ ಖರೀದಿಸಲು ಅಕ್ರಮವಾಗಿ ಗಡಿದಾಟಿ ಭಾರತಕ್ಕೆ ಬಂದ ಬಾಂಗ್ಲ ಯುವಕನನ್ನು ಬಿಎಸ್‌ಎಫ್ ಬಂಧಿಸಿದೆ. ಎರಡು ದೇಶಗಳ ನಡುವಿನ ಅಂತಾರಾಷ್ಟ್ರೀಯ ಗಡಿಯನ್ನು ಗುರುತಿಸುವ ಶಾಲ್ದಾ ನದಿಯ ಸಮೀಪವಿರುವ ಬಾಂಗ್ಲಾದೇಶದ ಹಳ್ಳಿಯ ನಿವಾಸಿ ಎಮಾನ್ ಹೊಸೈನ್, ತ್ರಿಪುರಾದ ಸಿಪಾಹಿಜಾಲಾ ಜಿಲ್ಲೆಯಲ್ಲಿ ತಮ್ಮ ನೆಚ್ಚಿನ ಭಾರತೀಯ ಚಾಕೊಲೇಟ್ ಖರೀದಿಸಲು ನದಿಯ ಮೂಲಕ ಈಜುತ್ತಿದ್ದ. ಭಾರತದ ಕಲಾಂಚೌರಾ ಗ್ರಾಮದ ಅಂಗಡಿಯಿಂದ ಚಾಕೊಲೇಟ್ ಖರೀದಿಸಲು ಮುಳ್ಳುತಂತಿ ಬೇಲಿಯಲ್ಲಿನ ರಂಧ್ರದ ಮೂಲಕ ನುಸುಳುತ್ತಿದ್ದ. ನಂತರ ಅದೇ ರೀತಿಯಲ್ಲಿ ಮನೆಗೆ ಮರಳುತ್ತಿದ್ದ. ಆದರೆ, ಏಪ್ರಿಲ್ 13 ರಂದು

ಚಾಕಲೇಟ್ ಖರೀದಿಸಲು ಭಾರತಕ್ಕೆ ಬಂದ ಯುವಕ ಅರೆಸ್ಟ್…..! Read More »

ರಾಜ್ಯದಲ್ಲಿ ಇನ್ನೂ ಎರಡು ದಿನ ಮಳೆ ಮುನ್ಸೂಚನೆ…

ಸಮಗ್ರ ನ್ಯೂಸ್: ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯ ಅಬ್ಬರ ಹೆಚ್ಚಾಗಿದೆ.ಏಪ್ರಿಲ್ 18ರ ತನಕ ರಾಜ್ಯದಲ್ಲಿ ಮಳೆ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಪರಿಣಾಮದಿಂದ ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಕೇರಳ, ತಮಿಳುನಾಡು ರಾಜ್ಯಗಳಲ್ಲಿಯೂ ಧಾರಾಕಾರ ಮಳೆ ಸುರಿಯುತ್ತಿದೆ.ಏಪ್ರಿಲ್ 17, 18ರಂದು ಚಿಕ್ಕಮಗಳೂರು, ಕೊಡಗು, ಹಾಸನ, ಶಿವಮೊಗ್ಗ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ, ಕೋಲಾರ, ಮೈಸೂರು, ಚಾಮರಾಜನಗರ, ಚಿಕ್ಕಬಳ್ಳಾಪುರ,

ರಾಜ್ಯದಲ್ಲಿ ಇನ್ನೂ ಎರಡು ದಿನ ಮಳೆ ಮುನ್ಸೂಚನೆ… Read More »

ಕೆ.ಎಸ್ ಈಶ್ವರಪ್ಪ ಮನೆಗೆ ವಿವಿಧ ಸ್ವಾಮೀಜಿಗಳು ಭೇಟಿ ನೀಡಿ ಧೈರ್ಯ ತುಂಬಿದ ಮಠಾಧೀಶರು| ಸ್ವಾಮೀಜಿಗಳ ನಡೆಗೆ ವ್ಯಾಪಕ ಆಕ್ರೋಶ

ಶಿವಮೊಗ್ಗ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಹಿನ್ನೆಲೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಮನೆಗೆ ಸ್ವಾಮೀಜಿಗಳು ಭೇಟಿ ನೀಡಿ, ಮಾಜಿ ಸಚಿವರಿಗೆ ಧೈರ್ಯ ತುಂಬಿದ್ದು, ಈ ಸುದ್ದಿ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. ಶಿವಮೊಗ್ಗದಲ್ಲಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಮನೆಗೆ ಕಾಗಿನೆಲೆಯ ಪುರುಷೋತ್ತಮನಂದಪುರಿ ಸ್ವಾಮೀಜಿ, ಮಾದಾರ ಚನ್ನಯ್ಯ ಸ್ವಾಮೀಜಿ, ಹೊಸದುರ್ಗದ ಈಶ್ವರನಂದಪುರಿ, ಸಹಿತ ಒಟ್ಟು 9 ಸ್ವಾಮೀಜಿಗಳು ಈಶ್ವರಪ್ಪ ಮನೆಗೆ ಭೇಟಿ ನೀಡಿ, ಮಾತುಕತೆ ನಡೆಸಿದ್ದಾರೆ. ಸಂತೋಷ್ ಆತ್ಮಹತ್ಯೆ ಕೇಸ್‌ನಲ್ಲಿ ಈಶ್ವರಪ್ಪ ರಾಜೀನಾಮೆ ಹಿನ್ನೆಲೆ ಈಶ್ವರಪ್ಪಗೆ ಸ್ವಾಮೀಜಿಗಳು

ಕೆ.ಎಸ್ ಈಶ್ವರಪ್ಪ ಮನೆಗೆ ವಿವಿಧ ಸ್ವಾಮೀಜಿಗಳು ಭೇಟಿ ನೀಡಿ ಧೈರ್ಯ ತುಂಬಿದ ಮಠಾಧೀಶರು| ಸ್ವಾಮೀಜಿಗಳ ನಡೆಗೆ ವ್ಯಾಪಕ ಆಕ್ರೋಶ Read More »

ವಿವಾಹ ನೋಂದಣಿ ಅಧಿಕಾರಿಯಾಗಿ ಪಿಡಿಒಗಳ ನೇಮಕ; ಸರ್ಕಾರದಿಂದ ಅಧಿಕೃತ ಆದೇಶ

ಸಮಗ್ರ ನ್ಯೂಸ್: ಗ್ರಾಮ ಪಂಚಾಯತ್​ ಅಭಿವೃದ್ಧಿ ಅಧಿಕಾರಿಗಳನ್ನು ವಿವಾಹ ನೋಂದಣಿ ಅಧಿಕಾರಿಯಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ. ಇನ್ಮುಂದೆ ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲೇ ವಿವಾಹ ದೃಢಪತ್ರ ಸಿಗಲಿದೆ. ಈ ಕುರಿತು ಅಧಿಕೃತ ಆದೇಶ ಹೊರಡಿಸಿದ ರಾಜ್ಯ ಸರ್ಕಾರ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಅಡಿಯಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ನೇಮಿಸಿದ್ದು, ಮದುವೆ ನೋಂದಣಿ‌ ಅಧಿಕಾರವನ್ನ ನೀಡಲಾಗಿದೆ. ವಿವಾಹ ನೋಂದಣಿ ಮಾಡಿಸಿಕೊಳ್ಳಲು ತಾಲ್ಲೂಕು ಕೇಂದ್ರಗಳಿಗೆ ಬರಬೇಕಿತ್ತು. ಸರ್ಕಾರದ ಈ ಹೊಸ ತೀರ್ಮಾನದಿಂದಾಗಿ ಗ್ರಾಮ ಪಂಚಾಯತಿ ಕೇಂದ್ರ

ವಿವಾಹ ನೋಂದಣಿ ಅಧಿಕಾರಿಯಾಗಿ ಪಿಡಿಒಗಳ ನೇಮಕ; ಸರ್ಕಾರದಿಂದ ಅಧಿಕೃತ ಆದೇಶ Read More »

ದ್ವಾದಶ ರಾಶಿಗಳ ವಾರಭವಿಷ್ಯ

ಮೇಷ: ಈ ತಿಂಗಳ 28ರ ನಂತರ ಬಹಳ ಎಚ್ಚರಿಕೆಯಿಂದ ಸಾಗಬೇಕು. ಕೀರ್ತಿಗೆ ಧಕ್ಕೆ ಬಂದು ಜನಾನುರಾಗ ಕಳೆದುಕೊಳ್ಳಬಹುದು. ಸಂಚಿನಲ್ಲಿ ಸಿಲುಕಿ ದುಃಖ ಪಡುವ ಸಂದರ್ಭ ಬರಬಹುದು. ಅದಕ್ಕಾಗಿ 14 ತಿಂಗಳುಗಳ ಕಾಲ ಅಂದರೆ ಗುರುವು ಮೇಷರಾಶಿಗೆ ಬರುವವರೆಗೂ ದತ್ತಾತ್ರೇಯನ ಪೂಜೆ ಮಾಡುವ ಜತೆಗೆ, ಸುಬ್ರಹ್ಮಣ್ಯ ದೇವರನ್ನೂ ಪೂಜಿಸಿ. ವೃಷಭ: ಏಕಾದಶಕ್ಕೆ ಗುರು ಬಂದಿದ್ದಾನೆ. ರಾಹು-ಕೇತುಗಳು ಚಲನವನ್ನು ತೋರಿಸುತ್ತಿದ್ದಾರೆ. ಕುತಂತ್ರವನ್ನು ದೇವರು ಒಪುಪವುದಿಲ್ಲ. ಧರ್ಮವೇ ಬುದ್ಧಿಯ ಮೂಲವಾಗಿರಬೇಕು. ಏಕಾದಶ ಗುರುವನ್ನು ಸದ್ವಿನಿಯೋಗಿಸಿಕೊಳ್ಳಿ. ಗುರುಸೇವೆ ಬಿಡದೆ ಮಾಡಿದಲ್ಲಿ ಕೀರ್ತಿಯನ್ನು ಪಡೆಯುವಿರಿ.

ದ್ವಾದಶ ರಾಶಿಗಳ ವಾರಭವಿಷ್ಯ Read More »

ವಿವಾದಾತ್ಮಕ ಪೊಸ್ಟ್‌: ಹುಬ್ಬಳ್ಳಿಯಲ್ಲಿ ಗಲಾಟೆ, ಪರಿಸ್ಥಿತಿ ಉದ್ವಿಗ್ನ

ವಾಹನಗಳಿಗೆ ಕಲ್ಲು ತೂರಾಟ ಹಳೆ ಹುಬ್ಬಳ್ಳಿ ಪೊಲೀಸ್‌ ಠಾಣೆಗೆ ರಾತ್ರೋ ರಾತ್ರಿ ಮುತ್ತಿಗೆ ಹುಬ್ಬಳ್ಳಿ: ಫೇಸ್‌ಬುಕ್‌ನಲ್ಲಿ ವಿವಾದಾತ್ಮಕ ಪೋಸ್ಟ್‌ ಹಾಕಿರುವ ವಿಚಾರವಾಗಿ ಹಳೆ ಹುಬ್ಬಳ್ಳಿ ಪ್ರದೇಶದಲ್ಲಿ ಶನಿವಾರ ರಾತ್ರಿ ತೀವ್ರ ಹಿಂಸಾಚಾರ ಸಂಭವಿಸಿದೆ. ಪೊಲೀಸ್‌ ಠಾಣೆಗೆ ಮುತ್ತಿಗೆ ಹಾಕಿದ ಉದ್ರಿಕ್ತರ ಗುಂಪು, ಬಸ್ಸು ಹಾಗೂ ಮತ್ತಿತರ ವಾಹನಗಳಿಗೆ ಕಲ್ಲು ತೂರಾಟ ನಡೆಸಿದೆ. ಘಟನೆಯಲ್ಲಿ ಇನ್‌ಸ್ಪೆಕ್ಟರ್‌ ಸೇರಿ ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ. ಭಾರೀ ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ, ಅಶ್ರುವಾಯು ಪ್ರಯೋಗ ಮಾಡಿದ್ದಾರೆ. ನಗರದಲ್ಲಿ

ವಿವಾದಾತ್ಮಕ ಪೊಸ್ಟ್‌: ಹುಬ್ಬಳ್ಳಿಯಲ್ಲಿ ಗಲಾಟೆ, ಪರಿಸ್ಥಿತಿ ಉದ್ವಿಗ್ನ Read More »