ಹುಬ್ಬಳ್ಳಿ ಹಿಂಸಾಚಾರ ಮಾಸುವ ಮುನ್ನವೇ ಚಿಕ್ಕಬಳ್ಳಾಪುರದಲ್ಲಿ ಮತ್ತೊಂದು ಘಟನೆ| ಅಕ್ರಮ ಕಸಾಯಿಖಾನೆ ಕೇಸ್ ನಲ್ಲಿ ಪೊಲೀಸರಿಗೆ ಕಲ್ಲೇಟು|
ಸಮಗ್ರ ನ್ಯೂಸ್: ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಅಲ್ಲೀಪುರ ಗ್ರಾಮದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಕೂಡಿ ಹಾಕಿ ಕಸಾಯಿಖಾನೆಗೆ ಬಳಸಲಾಗುತ್ತಿದೆ ಎಂದು ಮಂಚೇನಹಳ್ಳಿ ಗೋ ಸಂರಕ್ಷಣಾ ಸಂಘಟನೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತನಿಖೆ ನಡೆಸಲು ಹೋದ ಪೊಲೀಸರಿಗೆ ಕಲ್ಲೇಟು ಬಿದ್ದಿದೆ. ಪೋಲೀಸ್ ಠಾಣಾ ಪಿಎಸ್ ಐ ಹರೀಶ್ ಅವರು ಗೋ ಸಂರಕ್ಷಣಾ ಸಂಘಟನೆಯ ಕಾರ್ಯಕರ್ತರೊಂದಿಗೆ ಘಟನಾ ಸ್ಥಳ ಅಲ್ಲಿಪುರಕ್ಕೆ ತೆರಳಿದ್ದರು. ಗ್ರಾಮದ ಗ್ರೇವ್ ಯಾರ್ಡ್ ರಸ್ತೆಯಲ್ಲಿ ಅಕ್ರಮವಾಗಿ ಕೂಡಿ ಹಾಕಲಾಗಿದ್ದ ಜಾನುವಾರುಗಳ ಕಂಡು ವಾರಸುದಾರರ ಪತ್ತೆಗೆ ಮುಂದಾಗಿತ್ತು. […]