April 2022

ಕರ್ನಾಟಕದ ”ಸೇವಾಸಿಂಧು” ಪೋರ್ಟಲ್ ಗೆ ಕೇಂದ್ರ ಪ್ರಶಸ್ತಿಯ ಗರಿ

ಸಮಗ್ರ ನ್ಯೂಸ್: ಕರ್ನಾಟಕ ರಾಜ್ಯ ಸರ್ಕಾರದ ಮುಡಿಗೆ ಮತ್ತೊಂದು ಪ್ರಶಸ್ತಿಯ ಗರಿ ದೊರೆತಿದೆ. ಸರ್ಕಾರದ ಸೇವಾ ಸಿಂಧು ಪೋರ್ಟಲ್‌ಗೆ ಕೇಂದ್ರ ಸರ್ಕಾರದ ಉತ್ಕೃಷ್ಟ ಪ್ರಶಸ್ತಿ ದೊರೆತಿದೆ. ಸಾರ್ವಜನಿಕ ಆಡಳಿತಕ್ಕೆ ಕೇಂದ್ರ ಸರ್ಕಾರ ನೀಡುವ ಸುಗಮ ಸೇವೆ ವಿಭಾಗದ ಪ್ರಶಸ್ತಿಗೆ ಕರ್ನಾಟಕ ಆಯ್ಕೆಯಾಗಿದ್ದು, ದೆಹಲಿ ವಿಜ್ಞಾನ ಭವನದಲ್ಲಿ ಪ್ರಧಾನಿ ಮೋದಿ ಪ್ರಶಸ್ತಿ ಪ್ರಧಾನ ಮಾಡಿದ್ದಾರೆ. ರಾಜ್ಯ ಸರ್ಕಾರದ ಪರ ಐಎಎಸ್‌ ಅಧಿಕಾರಿ ದೀಪ್ತಿ ಆದಿತ್ಯ ಕಾನಡೆ ಪ್ರಶಸ್ತಿ ಸ್ವೀಕರಿಸಿದರು. ಉತ್ಕೃಷ್ಟ ಸಾರ್ವಜನಿಕ ಆಡಳಿತಕ್ಕೆ ಕೇಂದ್ರ ನೀಡುವ ಪ್ರಶಸ್ತಿ ಇದಾಗಿದ್ದು, […]

ಕರ್ನಾಟಕದ ”ಸೇವಾಸಿಂಧು” ಪೋರ್ಟಲ್ ಗೆ ಕೇಂದ್ರ ಪ್ರಶಸ್ತಿಯ ಗರಿ Read More »

‘ಕುಸುಮ ಕರೀತಿದಾಳೆ ಓಡಿ ಹೋಗೋ ವಿಶಾಲ್’!? ನೋಟಿನಲ್ಲೊಂದು ರೋಚಕ ಲವ್ ಕಹಾನಿ

ಸಮಗ್ರ ನ್ಯೂಸ್: ಕೆಲವರ ಕೈಗೆ ಪೆನ್ ಸಿಕ್ಕಿದ್ರೆ ಸಾಕು, ಏನಾದ್ರೂ ಗೀಚ್ತಾ ಇರ್ತಾರೆ. ಇನ್ನು ಕೆಲವರಿಗೆ ಕರೆನ್ಸಿ ನೋಟಿನಲ್ಲಿ ಏನಾದ್ರೂ ಬರೆಯುವ ಹುಚ್ಚಿರುತ್ತದೆ. ಇತ್ತೀಚಿನ ದಿನಗಳಲ್ಲಿ ನೋಟುಗಳಲ್ಲಿ ಯಾರೂ ಸಂದೇಶ ಬರೆಯುವುದಿಲ್ಲ. ಆದರೆ, ಇಲ್ಲೊಂದೆಡೆ 10 ರೂಪಾಯಿಯ ನೋಟಿನಲ್ಲಿ ಯುವತಿಯೊಬ್ಬಳು ತನ್ನ ಪ್ರೇಮಿಗೆ ಬರೆದಿರುವ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದೆ. ಯುವತಿಯೊಬ್ಬಳು 10 ರೂ. ನೋಟಿನಲ್ಲಿ ವಿಶಾಲ್, ನನ್ನ ಮದುವೆ ಏಪ್ರಿಲ್ 26ರಂದು ನಿಶ್ಚಯವಾಗಿದೆ. ದಯವಿಟ್ಟು ನನ್ನನ್ನು ಕರೆದುಕೊಂಡು ಹೋಗು. ನಾವು ಓಡಿ ಹೋಗೋಣ. ನಾನು

‘ಕುಸುಮ ಕರೀತಿದಾಳೆ ಓಡಿ ಹೋಗೋ ವಿಶಾಲ್’!? ನೋಟಿನಲ್ಲೊಂದು ರೋಚಕ ಲವ್ ಕಹಾನಿ Read More »

ಕರ್ನಾಟಕದಲ್ಲಿ 40% ಹೋಗಲಿ, 0%ಗಾಗಿ ಎಎಪಿ ಬರಲಿ – ಕೇಜ್ರಿವಾಲ್

ಸಮಗ್ರ ನ್ಯೂಸ್: ದೆಹಲಿ, ಪಂಜಾಬ್ ನಲ್ಲಿ ನಮ್ಮ ಸರ್ಕಾರ ಇದೆ. ಈಗ ಕರ್ನಾಟಕದಲ್ಲಿ ನಮ್ಮ ಸರ್ಕಾರ ಬರಬೇಕು. ಇಲ್ಲಿ 40% ಸರ್ಕಾರ ಇದೆ. ದೆಹಲಿಯಲ್ಲಿ ೦% ಸರ್ಕಾರ ಇದೆ. ಈ ಸರ್ಕಾರ ಹೋಗಿ, ನಮ್ಮ ಎಎಪಿ ಸರ್ಕಾರ ಬರಬೇಕು ಎಂಬುದಾಗಿ ಎಎಪಿ ಅಧ್ಯಕ್ಷ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕರೆ ನೀಡಿದ್ದಾರೆ. ಇಂದು ರೈತ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಮೂರು‌ ಕೃಷಿ ಕಾಯ್ದೆ ತಂದಿತ್ತು. ಅಹಂಕಾರದಿಂದ ಕಾಯ್ದೆ ಜಾರಿ‌ ಮಾಡಿತ್ತು. ಲಂಕಾಧಿಪತಿ ಅಹಂಕಾರ

ಕರ್ನಾಟಕದಲ್ಲಿ 40% ಹೋಗಲಿ, 0%ಗಾಗಿ ಎಎಪಿ ಬರಲಿ – ಕೇಜ್ರಿವಾಲ್ Read More »

ದರ್ಗಾ ಕೆಡವಿದಾಗ ದೇವಸ್ಥಾನದ ಗುಡಿ ಪತ್ತೆ; ಕಾಮಗಾರಿ ಸ್ಥಗಿತ

ಸಮಗ್ರ ನ್ಯೂಸ್: ನವೀಕರಣಕ್ಕಾಗಿ ದರ್ಗಾವೊಂದನ್ನು ಕೆಡವಿದ್ದಾಗ ಹಿಂದು ಶೈಲಿಯ ದೇವಸ್ಥಾನದ ಗುಡಿಯೊಂದು ಪತ್ತೆಯಾದ ಘಟನೆ ಮಂಗಳೂರು ಹೊರವಲಯದ ಗಂಜಿಮಠ ಬಳಿಯ ಮಳಲಿಯಲ್ಲಿ ಪತ್ತೆಯಾಗಿದೆ. ಮಾಹಿತಿ ತಿಳಿದು ಮಂಗಳೂರು ತಹಶಿಲ್ದಾರರು ಭೇಟಿ ನೀಡಿ ಪರಿಶೀಲಿಸಿದರು. ವಿಶ್ವ ಹಿಂದೂ ಪರಿಷತ್ತು ಪ್ರಮುಖರು, ಹಿಂದೂ ಸಂಘಟನಾ ಕಾರ್ಯಕರ್ತರು ಭೇಟಿ ನೀಡಿದ್ದಾರೆ.ಸ್ಥಳದ ದಾಖಲೆ ಹಾಗೂ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಸದ್ಯ ಸ್ಥಳೀಯಾಡಳಿತ ಕಾಮಗಾರಿ ಸ್ಥಗಿತಗೊಳಿಸಲು ಆದೇಶಿಸಿದೆ ಎಂದು ತಿಳಿದುಬಂದಿದೆ.

ದರ್ಗಾ ಕೆಡವಿದಾಗ ದೇವಸ್ಥಾನದ ಗುಡಿ ಪತ್ತೆ; ಕಾಮಗಾರಿ ಸ್ಥಗಿತ Read More »

ರಾಜ್ಯದ ಜನರಿಗೆ ಮತ್ತೊಂದು ಶಾಕ್| ಟೊಮೆಟೊ ಬೆಲೆ ಹೆಚ್ಚಳ

ಸಮಗ್ರ ನ್ಯೂಸ್: ಕಳೆದ ಒಂದು ವಾರದಿಂದ ಸುರಿದ ಮಳೆಯಿಂದಾಗಿ ತರಕಾರಿ ಬೆಲೆಗಳು ಗಗನಕ್ಕೇರಿದೆ. ಅದರಲ್ಲೂ ಜನರು ಹೆಚ್ಚಾಗಿ ಬಳಸುವ ಟೊಮೆಟೊ ಬೆಲೆ ಹೆಚ್ಚಳವಾಗಿದೆ. ಮಳೆ ಹಾಗೂ ಬಿಸಿಲಿನ ತಾಪಮಾನದಿಂದ ಮಾರುಕಟ್ಟೆಗೆ ಪೂರೈಕೆ ಕಡಿಮೆಯಾಗಿದೆ. ಹೀಗಾಗಿ ಟೊಮೆಟೊ ಬೆಲೆ ಹೆಚ್ಚಾಗಿದ್ದು, ಈ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಪೆಟ್ರೋಲ್, ಡೀಸೆಲ್ ಬೆಲೆ ಹೊಡೆತದ ಮೇಲೆ ಟೊಮೆಟೊ ಬೆಲೆಯು ಹೊಡೆತ ಬಿದ್ದಿದೆ. ಅಕಾಲಿಕ ಮಳೆ ಹಾಗೂ ಬಿಸಿಲಿನ ತಾಪಮಾನ ಹೆಚ್ಚಾದ್ದರಿಂದ ಟೊಮೆಟೊ ಬೆಳೆ ನಾಶವಾಗುತ್ತಿದೆ. ಹೀಗಾಗಿ ಮಾರುಕಟ್ಟೆಗೆ ಪೂರೈಕೆ

ರಾಜ್ಯದ ಜನರಿಗೆ ಮತ್ತೊಂದು ಶಾಕ್| ಟೊಮೆಟೊ ಬೆಲೆ ಹೆಚ್ಚಳ Read More »

ಹುಬ್ಬಳ್ಳಿ ಗಲಭೆಯ ಮಾಸ್ಟರ್ ಮೈಂಡ್ ಅರೆಸ್ಟ್

ಸಮಗ್ರ ನ್ಯೂಸ್: ಹುಬ್ಬಳ್ಳಿ ಗಲಭೆ ಮಾಸ್ಟರ್​​​ ಮೈಂಡ್ ಅರೆಸ್ಟ್​ ಆಗಿದ್ದು, ಮತ್ತೊಬ್ಬ ಮಾಸ್ಟರ್​ ಮೈಂಡ್​ ಪೊಲೀಸರು ಬಂಧಿಸಿದ್ದಾರೆ.AIMIM ಮುಖಂಡ ಮಹ್ಮದ್​ ಆರೀಫ್​​​​ ಅರೆಸ್ಟ್​ ಆಗಿದ್ದು, ಕಳೆದ ರಾತ್ರಿ ಪೊಲೀಸರು ಬಂಧಿಸಿ ಕರೆತಂದಿದ್ದಾರೆ . ಆರೀಫ್​​​ ಹುಬ್ಬಳ್ಳಿ ಹೊರವಲಯದಲ್ಲಿ ಅವಿತು ಕುಳಿತಿದ್ದ, ಮೌಲ್ವಿ ವಸೀಂ ಪಠಾಣ್ ಜೊತೆ ಸೇರಿ ಗಲಭೆಗೆ ಪ್ರಚೋದನೆ ನೀಡಿದ್ದ. ಈ ಆರೋಪ ಹೊತ್ತಿರೋ ಆರೀಫ್,​​ ಕಳೆದ 4 ದಿನದಿಂದ ಪರಾರಿಯಾಗಿದ್ದ. ಹಳೇ ಹುಬ್ಬಳ್ಳಿ ಠಾಣೆ ಮುಂದೆ ಆರೀಫ್ ಯುವಕರ ಸೇರಿಸಿದ್ದ. ಸದ್ಯ ಆರೀಫ್​​ ಮೊಬೈಲ್​

ಹುಬ್ಬಳ್ಳಿ ಗಲಭೆಯ ಮಾಸ್ಟರ್ ಮೈಂಡ್ ಅರೆಸ್ಟ್ Read More »

ಶಾಲಾ ಪಠ್ಯದಲ್ಲಿ ರಾಮಾಯಣ, ಭಗವದ್ಗೀತೆ ಅಳವಡಿಸಲ್ಲ – ಸಚಿವ ಬಿ.ಸಿ ನಾಗೇಶ್

ಸಮಗ್ರ ನ್ಯೂಸ್: ರಾಜ್ಯದ ಶಾಲಾ ಪಠ್ಯಕ್ರಮದಲ್ಲಿ ರಾಮಾಯಣ, ಭಗವದ್ಗೀತೆ ಅಳವಡಿಸುವುದಿಲ್ಲ. ಅದರ ಬದಲಾಗಿ ನೈತಿಕ ಶಿಕ್ಷಣ ತರಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ . ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ರಾಜ್ಯ ಸರ್ಕಾರ ಪಠ್ಯಕ್ರಮದಲ್ಲಿ ರಾಮಾಯಣ , ಭಗವದ್ಗೀತೆ ಅಳವಡಿಸುವುದಾಗಿ ಯಾವತ್ತೂ ಹೇಳಿಲ್ಲ . ಮನುಷ್ಯನ ಶಿಕ್ಷಣಕ್ಕೆ ಅಗತ್ಯವಾಗಿ ಬೇಕಾಗಿರುವ ಶಿಕ್ಷಣವನ್ನು ಕಲಿಸುವಲ್ಲಿ ಗಮನ ಹರಿಸಲಾಗಿದೆ.ಕೆಲ ನೈತಿಕ ಅಂಶಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಪ್ರಯತ್ನ ಮಾಡಲಾಗುವುದು. ಜೊತೆಗೆ ಜೀವನಕ್ಕೆ ಬೇಕಾದ ಶಿಕ್ಷಣವನ್ನು ನಾವು

ಶಾಲಾ ಪಠ್ಯದಲ್ಲಿ ರಾಮಾಯಣ, ಭಗವದ್ಗೀತೆ ಅಳವಡಿಸಲ್ಲ – ಸಚಿವ ಬಿ.ಸಿ ನಾಗೇಶ್ Read More »

ಸುಳ್ಯ – ಲಾರಿಗೆ ತಲೆ ಕೊಟ್ಟು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಸಾವು

ಸಮಗ್ರ ನ್ಯೂಸ್: ಸುಳ್ಯದ ಗಾಂಧಿನಗರದಲ್ಲಿ ಎ‌.20ರಂದು ಲಾರಿಗೆ ತಲೆ ಕೊಟ್ಟು ಆತ್ಮಹತ್ಯೆಗೆ ಯತ್ನಿಸಿ ತೀವ್ರ ಗಾಯಗೊಂಡಿದ್ದ ವ್ಯಕ್ತಿಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತ ಚಿಕಿತ್ಸೆ ಫಲಿಸದೇ ಇಂದು ಬೆಳಿಗ್ಗಿನ ಜಾವ 6.30 ಕ್ಕೆ ಆತ ಕೊನೆಯುಸಿರೆಳೆದಿದ್ದಾನೆ. ಈತ ಉತ್ತರ ಕನ್ನಡ ಜಿಲ್ಲೆಯ ಮಂಜುನಾಥ್ ಎಂಬವನು ಕೆಲವು ಸಮಯಗಳಿಂದ ಸುಳ್ಯದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ, ಪತ್ನಿ, ಮಗನೊಂದಿಗೆ ಜೊತೆಗೆ ವಾಸವಿದ್ದ. ಆದರೆ ಇತ್ತೀಚೆಗೆ ಅವರನ್ನು ಊರಿಗೆ ಕಳುಹಿಸಿದ. ಈತ ಮಾನಸಿಕವಾಗಿ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಸುಳ್ಯ – ಲಾರಿಗೆ ತಲೆ ಕೊಟ್ಟು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಸಾವು Read More »

ಸುಳ್ಯ: ಜಾಲ್ಸೂರು ಬಳಿ ಓಮಿನಿ ಕಾರುಗಳ ಮುಖಾಮುಖಿ ಡಿಕ್ಕಿ

ಸಮಗ್ರ ನ್ಯೂಸ್: ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಜಾಲ್ಸೂರು ಬಳಿ ಓಮಿನಿ ಕಾರು ಎರಡು ಮುಖಾಮುಖಿ ಡಿಕ್ಕಿಯಾದ ಘಟನೆ ನಡೆದಿದೆ. ಪುತ್ತೂರಿನಿಂದ ಸುಳ್ಯ ಕಡೆಗೆ ಪ್ರಯಾಣಿಸುತ್ತಿದ್ದ ಹಾಗು ಜಾಲ್ಸೂರಿನಲ್ಲಿ ರಸ್ತೆ ಟರ್ನ್ ಮಾಡುತ್ತಿದ್ದ ಓಮಿನಿ ಕಾರು ಡಿಕ್ಕಿ ಹೊಡೆದಿದು, ಅಪಘಾತದಲ್ಲಿ ಕಾರು ಜಖಂಗೊಂಡಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಸುಳ್ಯ: ಜಾಲ್ಸೂರು ಬಳಿ ಓಮಿನಿ ಕಾರುಗಳ ಮುಖಾಮುಖಿ ಡಿಕ್ಕಿ Read More »

ತಿರುವು ಪಡೆದುಕೊಂಡ ಸಂತೋಷ್ ಆತ್ಮಹತ್ಯೆ ಪ್ರಕರಣ| ಅನುದಾನ ಮಂಜೂರಾತಿಗೆ ಬರೆದ ಪತ್ರ ಬಹಿರಂಗ

ಸಮಗ್ರ ನ್ಯೂಸ್: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ತಿರುವು ಪಡೆದುಕೊಂಡಿದ್ದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಅಂದಿನ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬರೆದಿದ್ದ ಪೊಲೀಸರಿಗೆ ಲಭ್ಯವಾಗಿದೆ. 2021 ರ ಫೆಬ್ರವರಿ 15 ರಂದು ಆಗಿನ ಬೆಳಗಾವಿ ಜಿ.ಪಂ ಅಧ್ಯಕ್ಷೆ ಆಶಾ ಐಹೋಳೆ ಹಿಂಡಲಗಾ ಗ್ರಾಮದಲ್ಲಿ ರಸ್ತೆ ಚರಂಡಿ ಅಭಿವೃದ್ಧಿಗೆ ವಿಶೇಷ ಅನುದಾನ ಮಂಜೂರು ಮಾಡುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. 2021 ರ ಫೆಬ್ರವರಿ

ತಿರುವು ಪಡೆದುಕೊಂಡ ಸಂತೋಷ್ ಆತ್ಮಹತ್ಯೆ ಪ್ರಕರಣ| ಅನುದಾನ ಮಂಜೂರಾತಿಗೆ ಬರೆದ ಪತ್ರ ಬಹಿರಂಗ Read More »