ಸಮಗ್ರ ನ್ಯೂಸ್: ನವೀಕರಣಕ್ಕಾಗಿ ದರ್ಗಾವೊಂದನ್ನು ಕೆಡವಿದ್ದಾಗ ಹಿಂದು ಶೈಲಿಯ ದೇವಸ್ಥಾನದ ಗುಡಿಯೊಂದು ಪತ್ತೆಯಾದ ಘಟನೆ ಮಂಗಳೂರು ಹೊರವಲಯದ ಗಂಜಿಮಠ ಬಳಿಯ ಮಳಲಿಯಲ್ಲಿ ಪತ್ತೆಯಾಗಿದೆ.

ಮಾಹಿತಿ ತಿಳಿದು ಮಂಗಳೂರು ತಹಶಿಲ್ದಾರರು ಭೇಟಿ ನೀಡಿ ಪರಿಶೀಲಿಸಿದರು. ವಿಶ್ವ ಹಿಂದೂ ಪರಿಷತ್ತು ಪ್ರಮುಖರು, ಹಿಂದೂ ಸಂಘಟನಾ ಕಾರ್ಯಕರ್ತರು ಭೇಟಿ ನೀಡಿದ್ದಾರೆ.
ಸ್ಥಳದ ದಾಖಲೆ ಹಾಗೂ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.
ಸದ್ಯ ಸ್ಥಳೀಯಾಡಳಿತ ಕಾಮಗಾರಿ ಸ್ಥಗಿತಗೊಳಿಸಲು ಆದೇಶಿಸಿದೆ ಎಂದು ತಿಳಿದುಬಂದಿದೆ.