Ad Widget .

ಎ.22ರಿಂದ ದ್ವಿತೀಯ ಪಿಯುಸಿ ಪರೀಕ್ಷೆ| ಹೀಗಿರಲಿದೆ ನಿಮ್ಮ ಪ್ರಶ್ನೆಪತ್ರಿಕೆ

ಸಮಗ್ರ ನ್ಯೂಸ್ : ಪದವಿಪೂರ್ವ ಶಿಕ್ಷಣ ಇಲಾಖೆ ದ್ವಿತೀಯ ಪಿಯು ಪರೀಕ್ಷೆಗೆ ಬಹು ಆಯ್ಕೆ ಪ್ರಶ್ನೆಗಳ ಸಂಖ್ಯೆ ಹೆಚ್ಚಿಸಿದ್ದು, ಈ ವರ್ಷ ಹೊಸರೂಪದಲ್ಲಿ ಪರೀಕ್ಷೆ ನಡೆಯಲಿದೆ.

Ad Widget . Ad Widget .

ಈ ಶೈಕ್ಷಣಿಕ ವರ್ಷದ ದ್ವಿತೀಯ ಪಿಯು ಪರೀಕ್ಷೆ ಏ. 22ರಿಂದ ಮೇ 18ರವರೆಗೆ ಪರೀಕ್ಷೆ ನಡೆಯಲಿದೆ. ಇದಕ್ಕಾಗಿ ಪ.ಪೂರ್ವ ಶಿಕ್ಷಣ ಇಲಾಖೆ ಸಕಲ ಸಿದ್ದತೆ ಮಾಡಿಕೊಂಡಿದೆ.

Ad Widget . Ad Widget .

ಕೋವಿಡ್‌ ಕಾರಣಕ್ಕೆ ಕಳೆದ ವರ್ಷ ಪರೀಕ್ಷೆ ಇಲ್ಲದೆಯೇ ದ್ವಿತೀಯ ಪಿಯು ವಿದ್ಯಾರ್ಥಿಗಳನ್ನು ಪಾಸ್​ ಮಾಡಲಾಗಿತ್ತು. ಆದರೆ ಈ ವರ್ಷ ಪರೀಕ್ಷೆ ನಡೆಸಲಾಗುತ್ತಿದ್ದು, ವಿದ್ಯಾಥಿಗಳಿಗೆ ಸರಳ ಆಗುವಂತೆ ಪ್ರಶ್ನೆ ಪತ್ರಿಕೆಯನ್ನು ರಚಿಸಲಾಗಿದೆ. ಒಂದು ಅಂಕ ಬಹುಆಯ್ಕೆಯ ಪ್ರಶ್ನೆಗಳು ಈ ಬಾರಿ ಹೆಚ್ಚು ನೀಡಲಾಗಿದೆ.

ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದ ಪ್ರತಿ ಪತ್ರಿಕೆಯನ್ನು ಸುಲಭ ಮಾದರಿಯಲ್ಲಿ ರೂಪಿಸಲಾಗುತ್ತಿದೆ. 1 ಅಂಕದ ಪ್ರಶ್ನೆಗಳನ್ನು 10ಕ್ಕೆ ಹೆಚ್ಚಿಸಲಾಗಿದೆ. ಒಂದು ಅಂಕದ ಪ್ರಶ್ನೆಗಳನ್ನು ಹೆಚ್ಚಿಸಿದ್ದು ಮತ್ತು ಪ್ರಶ್ನೆಗಳಿಗೆ ಬಹು ಆಯ್ಕೆ ನೀಡಿರುವುದು ಇನ್ನಷ್ಟು ಸರಳವಾಗಿದೆ.

ಮೊದಲು ವಿಜ್ಞಾನ ವಿಷಯದಲ್ಲಿ ಒಂದು ಪ್ರಶ್ನೆ ಪತ್ರಿಕೆಯಲ್ಲಿ 105 ಪ್ರಶ್ನೆಗಳು ಇರುತ್ತಿದ್ದವು. ಈ ಬಾರಿಯಿಂದ 140 ಪ್ರಶ್ನೆಗಳಿರಲಿದೆ. ಆದರೆ, ವಿದ್ಯಾರ್ಥಿಗಳು 70 ಅಂಕಗಳಿಗೆ ಉತ್ತರಿಸಬೇಕಿದೆ. ಈ‌ ಮೊದಲು ಕಲಾ ಹಾಗೂ ವಾಣಿಜ್ಯ ವಿಭಾಗದ ಪತ್ರಿಕೆಗಳಿಗೆ ಈ ಮೊದಲು 140 ಪ್ರಶ್ನೆಗಳಿರುತ್ತಿದ್ದವು, ಈ ಸಲ 167 ಕ್ಕೆ ಹೆಚ್ಚಿಸಲಾಗಿದೆ. 100 ಅಂಕಗಳಿಗಷ್ಟೇ ಉತ್ತರಿಸಬೇಕಿದೆ.

ಬಹುಆಯ್ಕೆ ಪ್ರಶ್ನೆಗಳ ಸಂಖ್ಯೆ ಹೆಚ್ಚಾಗಿರುವ ಕಾರಣಕ್ಕೆ ಶೇಕಡಾ 50-60 ರಷ್ಟು ಪಠ್ಯ ಓದಿದರೂ ಶೇ.‌ 75 ರಷ್ಟು ಅಂಕ ಪಡೆಯಬಹುದು. ಈ‌ ಮೊದಲು ಡಿಸ್ಟಿಂಕ್ಷನ್‌ನಷ್ಟು ಅಂಕ ಪಡೆಯಲು ಕನಿಷ್ಠ ಶೇ. 80 ರಷ್ಟು ಪಠ್ಯ ಓದಬೇಕಿತ್ತು. ಆದರೆ ಈಗ ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ಪ್ರಶ್ನೆ ಪತ್ರಿಕೆ ರೂಪಿಸಲಾಗುತ್ತಿದ್ದು, ಡಿಸ್ಟಿಂಕ್ಷನ್‌ನಲ್ಲಿ ಪಾಸ್ ಆಗುವುದು ಸುಲಭವಾಗಿದೆ. ಪ್ರಶ್ನೆ ಪತ್ರಿಕೆಯ ಈ ಹೊಸ ನಿಯಮ ಈ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರ ಇರಲಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

Leave a Comment

Your email address will not be published. Required fields are marked *