Ad Widget .

ಮಂಗಳೂರು: ಜ್ಯೂಸ್ ಮೆಷಿನ್ ಒಳಗಿಟ್ಟು ಅಕ್ರಮ ಚಿನ್ನ ಸಾಗಾಟ| ದುಬೈನಿಂದ ಮರಳಿದಾತ ಪೊಲೀಸ್ ಬಲೆಗೆ

ಸಮಗ್ರ ನ್ಯೂಸ್: ಜ್ಯೂಸ್ ಮೆಷಿನ್ ಒಳಗಡೆ ಚಿನ್ನ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ದುಬೈನಿಂದ ಮರಳುತ್ತಿದ್ದ ಓರ್ವನನ್ನು ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.

Ad Widget . Ad Widget .

ಬಂಧಿತ ವ್ಯಕ್ತಿ ಕಾಸರಗೋಡು ಮೂಲದವನೆಂದು ತಿಳಿದು ಬಂದಿದೆ. ಈತನಿಂದ ಸುಮಾರು 10,62,660 ರೂ.ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Ad Widget . Ad Widget .

ಬಂಧಿತ ಸೋಮವಾರ ರಾತ್ರಿ ದುಬೈಯಿಂದ ಆಗಮಿಸಿದ್ದ.‌ ಈತನ ಬಳಿ ಇದ್ದ ಜ್ಯೂಸ್ ಮೆಶಿನ್ ಒಂದನ್ನು ತಪಾಸಣೆಗೆ ಒಳಪಡಿಸಿದಾಗ ಅದರ ಒಳಭಾಗದಲ್ಲಿ ಅಡಗಿಸಿಟ್ಟಿದ್ದ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ‌ ಎಂದು ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ‌ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

Leave a Comment

Your email address will not be published. Required fields are marked *