Ad Widget .

ಕೊರೊನಾ ಭಯಕ್ಕೆ ಕ್ವಾರಂಟೈನ್ ಆದ ಡೆಲ್ಲಿ ಕ್ಯಾಪಿಟಲ್ಸ್| ಮತ್ತೆ ಐಪಿಎಲ್ ಕ್ಯಾನ್ಸಲ್ ಆಗುತ್ತಾ?

ಕೊರೊನಾ ಭಯ ಐಪಿಎಲ್ 2021ನೇ ಆವೃತ್ತಿಯಲ್ಲಿ ಆಕ್ರಮಿಸಿ ಐಪಿಎಲ್‌ ಸ್ಥಗಿತಕ್ಕೆ ಕಾರಣವಾಗಿದ್ದ ಕೊರೊನಾ ಕಾಟ ಇದೀಗ ಮತ್ತೊಮ್ಮೆ ವಕ್ಕರಿಸುವ ಲಕ್ಷಣಗಳು ಕಂಡುಬರುತ್ತಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡವು ಇದೀಗ ಕೊರೊನಾ ಭೀತಿಗೆ ಒಳಗಾಗಿದ್ದು, ಅಭ್ಯಾಸ ಪಂದ್ಯವನ್ನ ತ್ಯಜಿಸಿ ಸಂಪೂರ್ಣ ತಂಡದ ಆಟಗಾರರು ಕ್ವಾರಂಟೈನ್ ಆಗಿದ್ದಾರೆ.

Ad Widget . Ad Widget .

ಪುಣೆಗೆ ತೆರಳಬೇಕಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪ್ರಯಾಣವನ್ನ ರದ್ದುಗೊಳಿಸಿದ್ದು, ಹೋಟೆಲ್ ರೂಂಗಳಲ್ಲಿ ಕ್ವಾರಂಟೈನ್ ಆಗಿದ್ದಾರೆ. ಪ್ರತಿ ರೂಂಗಳಲ್ಲಿ ಆಟಗಾರರ ಕೋವಿಡ್-19 ಟೆಸ್ಟ್ ಮಾಡಲಾಗುವುದು.

Ad Widget . Ad Widget .

ತಂಡದ ಫಿಸಿಯೋ ಪ್ಯಾಟ್ರಿಕ್ ಪರ್ಹಾರ್ಟ್‌ ಕೋವಿಡ್-19 ಪಾಸಿಟಿವ್ ಆಗಿದ್ದರ ಪರಿಣಾಮ ಐಸೋಲೆಟ್ ಆಗಿದ್ದರು. ಹೀಗಾಗಿ ಪ್ರತಿಯೊಬ್ಬ ಆಟಗಾರರು ಕೋವಿಡ್-19 ರಾಪಿಡ್ ಪರೀಕ್ಷೆಗೆ ಒಳಪಡಿಸಿದ್ದಾಗ ಓರ್ವ ಆಟಗಾರ ಪಾಸಿಟಿವ್ ಆಗಿದ್ದಾನೆ. ಹೀಗಾಗಿ ಆರ್‌ಟಿಪಿಸಿಆರ್‌ ಟೆಸ್ಟ್ ಫಲಿತಾಂಶ ಬರುವವರೆಗೂ ಡೆಲ್ಲಿ ಕ್ಯಾಪಿಟಲ್ಸ್ ಚಿಂತೆಗೊಳಗಾಗಿದೆ.

ಬುಧವಾರ ಪುಣೆಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್‌ ಪಂದ್ಯವನ್ನಾಡಲಿದೆ. ಆದ್ರೆ ಈಗ ಕೋವಿಡ್-19 ಕೇಸ್‌ಗಳು ಹೆಚ್ಚುತ್ತಿರುವುದರಿಂದ ಬಿಸಿಸಿಐ ಬುಧವಾರ ನಡೆಯಲಿರುವ ಪಂದ್ಯದ ಕುರಿತು ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದು ಗೊಂದಲಕ್ಕಿಡಾಗಿದೆ.

Leave a Comment

Your email address will not be published. Required fields are marked *