Ad Widget .

ಎಸಿ ಸ್ಪೋಟ; ಮಲಗಿದ್ದಲ್ಲೇ ದಂಪತಿ ಹಾಗೂ ಮಕ್ಕಳು ದುರ್ಮರಣ

Ad Widget . Ad Widget .

ಸಮಗ್ರ ನ್ಯೂಸ್: ಎಸಿ ಸ್ಫೋಟದಿಂದ ಸಂಭವಿಸಿದ ಅಗ್ನಿ ಅವಘಡದಲ್ಲಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನ ಹಳ್ಳಿಯಲ್ಲಿ ನಡೆದಿದೆ.

Ad Widget . Ad Widget .

ವೆಂಕಟ್ ಪ್ರಶಾಂತ್​ (42) ಪತ್ನಿ ಡಿ. ಚಂದ್ರಕಲಾ (38 ) ಹಾಗೂ ಮಕ್ಕಳಾದ ಎಚ್.ಎ. ಅರ್ದ್ವಿಕ್(16) ಮತ್ತು ಪ್ರೇರಣಾ (8) ಮೃತ ದುರ್ದೈವಿಗಳು.

ರಾಘವೇಂದ್ರ ಶೆಟ್ಟಿ ಎನ್ನುವವರ ಮನೆಯಲ್ಲಿ ಅವಘಡ ಸಂಭವಿಸಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್​ ಮತ್ತು ಎ.ಸಿ ಸ್ಫೋಟದಿಂದ ಮನೆಗೆ ಬೆಂಕಿ ಹತ್ತಿಕೊಂಡು ದಟ್ಟ ಹೊಗೆ ಆವರಿಸಿದಾಗ ರಾಘವೇಂದ್ರ ಶೆಟ್ಟಿ ಮತ್ತ ಅವರ ಪತ್ನಿ ರಾಜಶ್ರೀ ಅವರು ಮನೆಯಿಂದ ಹೊರಗಡೆ ಓಡಿ ಬಂದಿದ್ದಾರೆ. ಆದರೆ, ವೆಂಕಟ್​ ಪ್ರಶಾಂತ್​ ಮತ್ತು ಅವರ ಪತ್ನಿ ಮತ್ತು ಮಕ್ಕಳು ಹೊರಬರಲಾಗದೇ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಮರಿಯಮ್ಮನ ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *