March 2022

ಹಿಜಾಬ್ ಗಾಗಿ ಭವಿಷ್ಯ ಶಿಕ್ಷಣಕ್ಕೆ ಸೆಡ್ಡು ಹೊಡೆದ ವಿದ್ಯಾರ್ಥಿಗಳು| ಎಸ್ಎಸ್ಎಲ್ ಸಿ ಪರೀಕ್ಷೆ ಬಹಿಷ್ಕರಿಸಿದ ವಿದ್ಯಾರ್ಥಿಗಳೆಷ್ಟು ಗೊತ್ತಾ?

ಸಮಗ್ರ ನ್ಯೂಸ್: ರಾಜ್ಯದಲ್ಲಿ ಇಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪ್ರಾರಂಭ ಮಾಡಲಾಗಿದ್ದು, ರಾಜ್ಯದ ಹಲವು ವಿದ್ಯಾರ್ಥಿಗಳು ಹಿಜಾಬ್‌ ವಿಚಾರಕ್ಕೆ ಪಟ್ಟು ಹಿಡಿದು ಪರೀಕ್ಷೆಯನ್ನೇ ಬಹಿಷ್ಕಾರ ಮಾಡಿದ್ದಾರೆ. ಮೈಸೂರು ಜಿಲ್ಲೆಯಲ್ಲಿ 39 ಮುಸ್ಲಿಂ ವಿದ್ಯಾರ್ಥಿನಿಯರು ಗೈರಾಗಿದ್ದು, ಪರೀಕ್ಷೆ ಬೇಡ, ಹಿಜಾಬ್‌ ಬೇಕೆಂದು ಪಟ್ಟು ಹಿಡಿದಿದ್ದಾರೆ. ಬಾಗಲಕೋಟೆ ಜಿಲ್ಲೆಯ ಇಳಕಲ್‌ ಪಟ್ಟಣದಲ್ಲಿ ವಿದ್ಯಾರ್ಥಿನಿ ಪರೀಕ್ಷಾ ಕೊಠಡಿಗೆ ಹಿಜಾಬ್‌ ಧರಿಸಿಯೇ ಬಂದಿದ್ದು, ಹಿಜಾಬ್‌ ತೆಗೆದಿಟ್ಟು ಪರೀಕ್ಷೆ ಬರೆಯುವಂತೆ ಅಧೀಕ್ಷಕರು ಸೂಚನೆ ನೀಡಿದ್ದಾರೆ.‌ ಏಕಾಏಕಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನೇ ಬಹಿಷ್ಕಾರ ಮಾಡಿ ಮನೆಗೆ ತೆರಳಿದ್ದಾರೆ. ಒಟ್ಟು […]

ಹಿಜಾಬ್ ಗಾಗಿ ಭವಿಷ್ಯ ಶಿಕ್ಷಣಕ್ಕೆ ಸೆಡ್ಡು ಹೊಡೆದ ವಿದ್ಯಾರ್ಥಿಗಳು| ಎಸ್ಎಸ್ಎಲ್ ಸಿ ಪರೀಕ್ಷೆ ಬಹಿಷ್ಕರಿಸಿದ ವಿದ್ಯಾರ್ಥಿಗಳೆಷ್ಟು ಗೊತ್ತಾ? Read More »

ಧರ್ಮಸ್ಥಳ: ನೇತ್ರಾವತಿ ಯಾತ್ರಿಕರ ಬ್ಯಾಗ್ ನಿಂದ ಚಿನ್ನಾಭರಣ ಕಳವು| ಅಂತರಾಜ್ಯ ಚೋರನ ಬಂಧನ| 2.5 ಲಕ್ಷ ಮೌಲ್ಯದ ಚಿನ್ನಾಭರಣ ವಶ

ಸಮಗ್ರ ನ್ಯೂಸ್ : ಶ್ರೀ ಕ್ಷೇತ್ರ‌ ಧರ್ಮಸ್ಥಳ ದೇವಸ್ಥಾನಕ್ಕೆ ಬರುವ ಯಾತ್ರಿಕರ ಬ್ಯಾಗ್ ನಿಂದ ಚಿನ್ನಾಭರಣ ಹಾಗೂ ಹಣವನ್ನು ಕಳ್ಳತನ ಮಾಡಿದ ಅಂತರಾಜ್ಯ ಚೋರನನ್ನು‌ ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದರು. ಈ ಕುರಿತು ತನಿಖೆ ಮಾಡಿ ಆರೋಪಿ ಹಾಗೂ ಕಳ್ಳತನ ಮಾಡಿದ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಧರ್ಮಸ್ಥಳ ಪೊಲೀಸರು ಯಶಸ್ವಿಯಾಗಿದ್ದಾರೆ. ಉಡುಪಿ ಜಿಲ್ಲೆಯ ಕುಂದಾಪುರ ಮೂಲದ ಶ್ರೀಧರ‌ ನಾಯರಿ ಎಂಬವರು ಸ್ನಾನ ಮಾಡಲು ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಬಳಿ ತಮ್ಮ‌ ಚಿನ್ನಾಭರಣ ಹಾಗೂ ಹಣ ಇದ್ದ ಬ್ಯಾಗ್ ಇಟ್ಟಿದ್ದರು.

ಧರ್ಮಸ್ಥಳ: ನೇತ್ರಾವತಿ ಯಾತ್ರಿಕರ ಬ್ಯಾಗ್ ನಿಂದ ಚಿನ್ನಾಭರಣ ಕಳವು| ಅಂತರಾಜ್ಯ ಚೋರನ ಬಂಧನ| 2.5 ಲಕ್ಷ ಮೌಲ್ಯದ ಚಿನ್ನಾಭರಣ ವಶ Read More »

ವಿಟ್ಲ: ಬಲ್ಲಮಲೆ ಗುಡ್ಡದಲ್ಲಿ ಯುವಜೋಡಿಯ ರಾಸಲೀಲೆ| ಮಟಮಟ ಬಿಸಿಲಲ್ಲೂ ಇದೆಂತಾ ”ಹೀಟ್” ಮರ್ರೆ?

ಸಮಗ್ರ ನ್ಯೂಸ್: ವಿಟ್ಲ ತಾಲೂಕಿನ ಅನಂತಾಡಿ ಗ್ರಾಮದ ಬಲ್ಲಮಲೆ ಗುಡ್ಡದಲ್ಲಿ ಮೈಮರೆತು ರಾಸಲೀಲೆ ನಡೆಸುತ್ತಿದ್ದ ಯುವಜೋಡಿಯೊಂದು ಪೊಲೀಸ್ ವಶವಾಗಿದೆ. ಗುಡ್ಡದ ಮರೆಯಲ್ಲಿ ಮೈ ಮರೆತು ‘ಕರ್ತವ್ಯ ನಿರತ ‘ ರಾಗಿದ್ದ ಮುಸ್ಲಿಂ ಜೋಡಿಗಳಿಬ್ಬರ ಸಂಗತಿ ಊರವರ ಮೂಲಕ ಬೆಳಕಿಗೆ ಬಂದಿದ್ದು, ಸುಡು ಬಿಸಿಲನ್ನು ಕೂಡಾ ಲೆಕ್ಕಿಸದೆ ರಾಸಲೀಲೆ ನಡೆಸುತ್ತಿದ್ದುದಾಗಿ‌ ತಿಳಿದುಬಂದಿದೆ. ಹಾಡಹಗಲೇ ಜೋಡಿಯು ರಾಸಲೀಲೆಯಲ್ಲಿ ನಿರತರಾಗಿದ್ದನ್ನು ಕಂಡ ಸ್ಥಳೀಯರು ವಿಟ್ಲ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದು ಕಾರ್ಯಪ್ರವೃತ್ತರಾದ ಪೊಲೀಸರು ಗುಡ್ಡ ತಲುಪಿ ಈ ಜೋಡಿಯನ್ನು

ವಿಟ್ಲ: ಬಲ್ಲಮಲೆ ಗುಡ್ಡದಲ್ಲಿ ಯುವಜೋಡಿಯ ರಾಸಲೀಲೆ| ಮಟಮಟ ಬಿಸಿಲಲ್ಲೂ ಇದೆಂತಾ ”ಹೀಟ್” ಮರ್ರೆ? Read More »

ಕೋವಿಡ್ ಕಾಲರ್ ಟ್ಯೂನ್ ಕೇಳಿ ಸುಸ್ತಾಗಿದ್ರೆ ಇಲ್ಲಿದೆ ಗುಡ್ ನ್ಯೂಸ್| ಕೇಂದ್ರ ಸಚಿವಾಲಯ ಹೇಳಿದ್ದೇನು?

ಸಮಗ್ರ ನ್ಯೂಸ್: ಕೋವಿಡ್​ ಕಾಲರ್​ ಟ್ಯೂನ್​ ಕೇಳಿ ಸುಸ್ತಾಗಿದ್ದ ಜನರಿಗೆ ಇದೀಗ ಗುಡ್​ ನ್ಯೂಸ್​ ಒಂದು ಸಿಕ್ಕಿದೆ. ಅದೇನೆಂದರೆ, ಕೋವಿಡ್ ಕಾಲರ್ ಟ್ಯೂನ್‌ಗಳು ಇನ್ನು ಮುಂದೆ ಕೇಳಿಸುವುದಿಲ್ಲ. ಶೀಘ್ರದಲ್ಲೇ ಕಾಲರ್ ಟ್ಯೂನ್​ಗೆ ಅಂತ್ಯ ಹಾಡಲಾಗುತ್ತದೆ. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಪರಿಶೀಲನೆ ನಡೆಸುತ್ತಿದೆ. ಕೋವಿಡ್-19 ಕುರಿತು ಜಾಗೃತಿಗಾಗಿ ಟೆಲಿಕಾಂ ಆಪರೇಟರ್‌ಗಳು ಪರಿಚಯಿಸಿದ ಪ್ರೀ-ಕಾಲ್-ಆಡಿಯೋ ಜಾಹೀರಾತುಗಳು ಮತ್ತು ಕಾಲರ್-ಟ್ಯೂನ್‌ಗಳನ್ನು ಶೀಘ್ರದಲ್ಲೇ ಸ್ಥಗಿತಗೊಳಿಸಲಾಗುವುದು. ದೇಶದಲ್ಲಿ ಕರೊನಾ ಪ್ರಕರಣಗಳು ಇಳಿಮುಖವಾಗುತ್ತಿದ್ದು, ಕೋವಿಡ್ ಪೂರ್ವ ಕರೆ ಸಂದೇಶಗಳನ್ನು ಸ್ಥಗಿತಗೊಳಿಸಲು ಕೇಂದ್ರ ಸರ್ಕಾರ

ಕೋವಿಡ್ ಕಾಲರ್ ಟ್ಯೂನ್ ಕೇಳಿ ಸುಸ್ತಾಗಿದ್ರೆ ಇಲ್ಲಿದೆ ಗುಡ್ ನ್ಯೂಸ್| ಕೇಂದ್ರ ಸಚಿವಾಲಯ ಹೇಳಿದ್ದೇನು? Read More »

ಇಂದು ಮತ್ತು ನಾಳೆ ಭಾರತ್ ಬಂದ್| ಮುಷ್ಕರಕ್ಕೆ ಕರೆನೀಡಿದ ಕಾರ್ಮಿಕ‌ ಸಂಘಟನೆಗಳು; ಹಲವು ಸೇವೆಗಳಲ್ಲಿ ವ್ಯತ್ಯಯ ಸಾಧ್ಯತೆ

ಸಮಗ್ರ ನ್ಯೂಸ್: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳು ಸೋಮವಾರ ಬೆಳಗ್ಗೆ 6ರಿಂದ ಬುಧವಾರ ಬೆಳಗ್ಗೆ 6ರವರೆಗೆ ದೇಶಾದ್ಯಂತ ‘ಭಾರತ್‌ ಬಂದ್‌’ ಹೆಸರಿನಲ್ಲಿ ಮುಷ್ಕರಕ್ಕೆ ಕರೆ ನೀಡಿವೆ. ಬ್ಯಾಂಕಿಂಗ್‌, ವಿಮೆ, ರಸ್ತೆ ಸಾರಿಗೆ, ವಿದ್ಯುಚ್ಛಕ್ತಿ, ಕಲ್ಲಿದ್ದಲು, ತೈಲ, ದೂರಸಂಪರ್ಕ, ಆದಾಯ ತೆರಿಗೆ ಸೇರಿ ವಿವಿಧ ವಲಯದ ಕಾರ್ಮಿಕರು ಈ ಮುಷ್ಕರಕ್ಕೆ ಬೆಂಬಲ ಘೋಷಣೆ ಮಾಡಿರುವುದರಿಂದ ಹಲವು ಸೇವೆಗಳಲ್ಲಿ ವ್ಯತ್ಯಯವಾಗುವ ನಿರೀಕ್ಷೆ ಇದೆ. ಕೇಂದ್ರ ಸರ್ಕಾರದ ನೀತಿಗಳಿಂದ ಕಾರ್ಮಿಕರು, ರೈತರು ಹಾಗೂ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ಈ ಕಾರ್ಮಿಕ,

ಇಂದು ಮತ್ತು ನಾಳೆ ಭಾರತ್ ಬಂದ್| ಮುಷ್ಕರಕ್ಕೆ ಕರೆನೀಡಿದ ಕಾರ್ಮಿಕ‌ ಸಂಘಟನೆಗಳು; ಹಲವು ಸೇವೆಗಳಲ್ಲಿ ವ್ಯತ್ಯಯ ಸಾಧ್ಯತೆ Read More »

“ಕೆಜಿಎಫ್ 2 ” ಟ್ರೈಲರ್ ಬಿಡುಗಡೆ| ವಿಭಿನ್ನ ಶೇಡ್ ನಲ್ಲಿ ರಾಕಿಭಾಯ್

ಸಮಗ್ರ ನ್ಯೂಸ್: ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಪ್ರಶಾಂತ್ ನೀಲ್ ನಿರ್ದೇಶನದ, ಹೊಂಬಾಳೆ ಫಿಲಂಸ್ ನಿರ್ಮಾಣದ ‘ಕೆಜಿಎಫ್ ಚಾಪ್ಟರ್ 2’ ಟ್ರೈಲರ್ ಅದ್ದೂರಿಯಾಗಿ ಬಿಡುಗಡೆಯಾಗಿದೆ. ನಟ ಶಿವರಾಜ್ ಕುಮಾರ್, ಸಂಜಯ್ ದತ್, ಕರಣ್ ಜೋಹರ್ ಸೇರಿದಂತೆ ಘಟಾನುಘಟಿ ಕಲಾವಿದರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್ ಚಾಪ್ಟರ್ 2’ ಟ್ರೈಲರ್ ಬಿಡುಗಡೆ ಮಾಡಲಾಗಿದೆ. ಕನ್ನಡ, ತೆಲುಗು, ತಮಿಳು, ಹಿಂದಿ ಮಲಯಾಳಂ ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್

“ಕೆಜಿಎಫ್ 2 ” ಟ್ರೈಲರ್ ಬಿಡುಗಡೆ| ವಿಭಿನ್ನ ಶೇಡ್ ನಲ್ಲಿ ರಾಕಿಭಾಯ್ Read More »

ನಾಳೆ(ಮಾ.28) SSLC ಪರೀಕ್ಷೆ ಶುರು| ಹಿಜಾಬ್ ಗಾಗಿ ಪರೀಕ್ಷೆ ತಪ್ಪಿಸಿದ್ರೆ ಮರು ಪರೀಕ್ಷೆ ಮಾಡಲ್ಲ – ಸಚಿವ ಬಿ.ಸಿ‌ ನಾಗೇಶ್

ಸಮಗ್ರ ನ್ಯೂಸ್: ನಾಳೆ ಎಸ್ ಎಸ್ ಎಲ್ ಸಿ ಪರೀಕ್ಷೆ ಪ್ರತಿವರ್ಷದಂತೆ ಯಾವುದೇ ಅಡ್ಡಿ ಆತಂಕವಿಲ್ಲದೆ ನಡೆಯಲಿದೆ ಎನ್ನುವ ವಿಶ್ವಾಸವಿದೆ. ಕೋರ್ಟ್ ಆದೇಶವನ್ನು ಪಾಲಿಸಿ ವಿದ್ಯಾರ್ಥಿಗಳು ಹಿಜಾಬ್ ಬಿಟ್ಟು ಸಮವಸ್ತ್ರದಲ್ಲಿ ಪರೀಕ್ಷೆ ಬರೆಯಬೇಕು. ಹಿಜಾಬ್ ಗಾಗಿ ಪರೀಕ್ಷೆ ತಿರಸ್ಕರಿಸಿದರೆ ಮತ್ತೆ ಮರು ಪರೀಕ್ಷೆ ಕೂಡ ಇಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆಯ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಎಲ್ಲಾ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ.

ನಾಳೆ(ಮಾ.28) SSLC ಪರೀಕ್ಷೆ ಶುರು| ಹಿಜಾಬ್ ಗಾಗಿ ಪರೀಕ್ಷೆ ತಪ್ಪಿಸಿದ್ರೆ ಮರು ಪರೀಕ್ಷೆ ಮಾಡಲ್ಲ – ಸಚಿವ ಬಿ.ಸಿ‌ ನಾಗೇಶ್ Read More »

ಯುಗಾದಿಗೆ ಎಸ್ಕಾಂಗಳಿಂದ ಶಾಕ್ ಟ್ರೀಟ್ಮೆಂಟ್| ಎ.1ರಿಂದ ದರ ಹೆಚ್ಚಳಕ್ಕೆ‌ ನಿರ್ಧಾರ

ಸಮಗ್ರ ನ್ಯೂಸ್: ಏಪ್ರಿಲ್ 1ರಿಂದ ವಿದ್ಯುತ್ ದರ ಹೆಚ್ಚಳಕ್ಕೆ ಬೆಸ್ಕಾಂ, ಮೆಸ್ಕಾಂ, ಚೆಸ್ಕಾಂ ಸೇರಿದಂತೆ ಇತರ ವಿದ್ಯುತ್ ಸರಬರಾಜು ಕಂಪನಿಗಳಿಂದ ವಿದ್ಯುತ್ ದರ ಪರಿಷ್ಕರಣೆಗೆ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿದು ಬಂದಿದೆ. 2022-23ರ ಸಾಲಿನಲ್ಲಿ ಪ್ರತಿ ಯೂನಿಟ್‌ಗೆ 35 ರಿಂದ 45 ಪೈಸೆ ಹೆಚ್ಚಳವಾಗುವ ಸಾಧ್ಯತೆ ಇದೇ ಅಂತ ಬೆಸ್ಕಾಂ ತಾಂತ್ರಿಕ‌ ವಿಭಾಗದ ನಿರ್ದೇಶಕ ನಾಗಾರ್ಜುನ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಪ್ರತಿ ವರ್ಷ ಏಪ್ರಿಲ್ ತಿಂಗಳಿನಲ್ಲಿ ಕೆಇಆರ್‌ಸಿ ದರ ಪರಿಷ್ಕರಣೆ ಮಾಡುತ್ತದೆ. ಈ ನಡುವೆ

ಯುಗಾದಿಗೆ ಎಸ್ಕಾಂಗಳಿಂದ ಶಾಕ್ ಟ್ರೀಟ್ಮೆಂಟ್| ಎ.1ರಿಂದ ದರ ಹೆಚ್ಚಳಕ್ಕೆ‌ ನಿರ್ಧಾರ Read More »

ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿದ್ದಾಗ ಹೃದಯಾಘಾತ; ಮಹಿಳೆ ಸಾವು

ಸಮಗ್ರ ನ್ಯೂಸ್: ಜಿಮ್‍ನಲ್ಲಿ ವರ್ಕೌಟ್ ಮಾಡುವಾಗ ಮಹಿಳೆಯೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ನಗರದ ಮಲ್ಲೇಶಪಾಳ್ಯದಲ್ಲಿ ನಡೆದಿದೆ. ಮೃತಳನ್ನು ವಿನಯಕುಮಾರಿ(44) ಎಂದು ಗುರುತಿಸಲಾಗಿದೆ. ಇವರು ಪ್ರತಿದಿನದಂತೆ ಶನಿವಾರವೂ ಮಲ್ಲೇಶಪಾಳ್ಯದಲ್ಲಿರುವ ಜಿಮ್ ಸೆಂಟರ್‍ಗೆ ತೆರಳಿದ್ದಾರೆ. ಈ ವೇಳೆ ಜಿಮ್‍ನಲ್ಲಿ ವರ್ಕೌಟ್ ಮಾಡುತ್ತಿರುವಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲು ಪ್ರಯತ್ನಪಟ್ಟರೂ, ಮಾರ್ಗ ಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ. ಮೃತ ವಿನಯಕುಮಾರಿ ಮೂಲತಃ ಮಂಗಳೂರು ನಿವಾಸಿಯಾಗಿದ್ದು, ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಮಲ್ಲೇಶಪಾಳ್ಯದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು ಎಂದು

ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿದ್ದಾಗ ಹೃದಯಾಘಾತ; ಮಹಿಳೆ ಸಾವು Read More »

ದ್ವಾದಶ ರಾಶಿಗಳ ವಾರಭವಿಷ್ಯ

ಪ್ಲವ ನಾಮ‌ ಸಂವತ್ಸರದ ಕೊನೆಯಲ್ಲಿ ನಾವಿದ್ದೇವೆ. ವಾರಾಂತ್ಯದಲ್ಲಿ ಹೊಸ ಸಂವತ್ಸರವನ್ನು ಬರಮಾಡಿಕೊಳ್ಳಲು ತಯಾರಾಗಿರುವ ಈ ಹೊತ್ತಿನಲ್ಲಿ ಹನ್ನೆರಡು ರಾಶಿಗಳ ಈ ವಾರದ ಗೋಚಾರಫಲ ತಿಳಿಯಬೇಕಿದೆ. ಶುಭಕೃತ್ ಸಂವತ್ಸರವು ಸರ್ವರಿಗೂ ಶುಭತರಲಿ ಎಂದು ಹಾರೈಸುತ್ತಾ ಈ ವಾರದ ರಾಶಿಫಲ ಏನು ಎಂಬುದನ್ನು ತಿಳಿಯೋಣ. ಮೇಷ ರಾಶಿ: ನಿರಾಯಾಸವಾಗಿ ಕೆಲಸ ಮಾಡಲು ಸಾಕಷ್ಟು ತಾಳ್ಮೆ ಅಗತ್ಯ. ಸಂಘ-ಸಂಸ್ಥೆಗಳಲ್ಲಿ ಕೆಲಸ ಮಾಡಲು ರಾಜಕೀಯ ವ್ಯಕ್ತಿಗಳ ಶಿಫಾರಸುಗಳನ್ನು ಬಳಸಿಕೊಳ್ಳುವಿರಿ. ಸರ್ಕಾರಿ ಮಟ್ಟದ ಕೆಲಸಕಾರ್ಯಗಳಲ್ಲಿ ಹಿನ್ನಡೆ ಸಾಧ್ಯತೆ. ಭರವಸೆಗಳ ಈಡೇರಿಕೆಗೆ ಅತ್ಯಂತ ಶ್ರಮವಹಿಸುವುದು ಅಗತ್ಯ.

ದ್ವಾದಶ ರಾಶಿಗಳ ವಾರಭವಿಷ್ಯ Read More »