March 2022

ಆಗುಂಬೆ ಘಾಟ್ ನಲ್ಲಿ ಇಂದಿನಿಂದ ವಾಹನ ಸಂಚಾರ ನಿಷೇಧ

ಸಮಗ್ರ ನ್ಯೂಸ್: ಆಗುಂಬೆ ಘಾಟಿಯಲ್ಲಿ ರಸ್ತೆ ದುರಸ್ತಿ ಕಾಮಗಾರಿಯ ಹಿನ್ನಲೆಯಲ್ಲಿ ವಾಹನ ಸಂಚಾರ ನಿಷೇಧಗೊಳಿಸಿರುವುದಾಗಿ ಶಿವಮೊಗ್ಗ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆದೇಶ ಹೊರಡಿಸಿದ್ದಾರೆ. ಮಾರ್ಚ್ 5ರಿಂದ ಮಾರ್ಚ್ 15ರವರೆಗೆ ಬೆಳಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆವರೆಗೆ ವಾಹನ ಸಂಚಾರ ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದ್ದು, ಲಘು ಮತ್ತು ಭಾರಿ ವಾಹನಗಳಿಗೆ ಪ್ರತ್ಯೇಕ ಮಾರ್ಗವನ್ನು ಸೂಚಿಸಲಾಗಿದೆ. ಆಗುಂಬೆ ಘಾಟಿಯ ತಪಾಸಣಾ ಕೇಂದ್ರದಿಂದ ಹೆಬ್ರಿವರೆಗೆ 5.25 ಕೋಟಿ ರೂ. ವೆಚ್ಚದಲ್ಲಿ 20 ಕಿ.ಮೀ ಡಾಂಬರೀಕರಣ ಕಾಮಗಾರಿ ಆರಂಭಿಸಲಾಗುತ್ತಿದೆ. ಸಂಜೆ 7ರಿಂದ […]

ಆಗುಂಬೆ ಘಾಟ್ ನಲ್ಲಿ ಇಂದಿನಿಂದ ವಾಹನ ಸಂಚಾರ ನಿಷೇಧ Read More »

ಕ್ರಿಕೆಟ್ ದಂತ ಕಥೆ ಶೇನ್ ವಾರ್ನ್ ಇನ್ನಿಲ್ಲ

ಸಮಗ್ರ ನ್ಯೂಸ್ : ಆಸ್ಟ್ರೇಲಿಯಾದ ದಂತಕಥೆ ಶೇನ್ ವಾರ್ನ್ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. 52 ವರ್ಷದ ಮಾಜಿ ಕ್ರಿಕೆಟಿಗ ಟೆಸ್ಟ್ ಕ್ರಿಕೆಟ್ʼನ ಎರಡನೇ ಅತ್ಯಂತ ಪ್ರಭಾವಶಾಲಿ ವಿಕೆಟ್ ಟೇಕರ್ ಆಗಿದ್ದು, ಶ್ರೇಷ್ಠ ಬೌಲರ್ʼಗಳಲ್ಲಿ ಒಬ್ಬರಾಗಿದ್ದರು. ಶೇನ್ ತಮ್ಮ ನಿವಾಸದಲ್ಲಿ ವೈದ್ಯಕೀಯ ಸಿಬ್ಬಂದಿಯ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ, ಅವರನ್ನ ಉಳಿಸಿಕೊಳ್ಳಲಾಗಿಲ್ಲ ಎಂದು ವಾರ್ನ್ ಅವರ ಆಡಳಿತ ಮಂಡಳಿ ಹೇಳಿಕೆಯಲ್ಲಿ ದೃಢಪಡಿಸಿದೆ.

ಕ್ರಿಕೆಟ್ ದಂತ ಕಥೆ ಶೇನ್ ವಾರ್ನ್ ಇನ್ನಿಲ್ಲ Read More »

ಮಂಗಳೂರು : ಮತ್ತೆ ಭುಗಿಲೆದ್ದ ಹಿಜಾಬ್ ವಿವಾದ; ಕಾಲೇಜು ನಿಮ್ಮಪ್ಪಂದಾ? ಎಂದಳಾ ವಿದ್ಯಾರ್ಥಿನಿ

ಸಮಗ್ರ ನ್ಯೂಸ್: ಹಿಜಾಬ್ ವಿವಾದ ಮತ್ತೆ ಭುಗಿಲೆದ್ದಿದೆ. ಇದೀಗ ಕರಾವಳಿಯ ಹೃದಯ ಭಾಗದಲ್ಲಿರುವ ಕಾರ್‌ಸ್ಟ್ರೀಟ್‌ನಲ್ಲಿರುವ ಡಾ.ಪಿ.ದಯಾನಂದ ಪೈ – ಪಿ. ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜಿನಲ್ಲಿ ಹಿಜಾಬ್, ಕೇಸರಿ ಶಾಲು ವಿವಾದ ಇದೀಗ ಮತ್ತೆ ಭುಗಿಲೆದ್ದಿದೆ. ಕಾಲೇಜಿಗೆ ದುಪ್ಪಟ್ಟಾವನ್ನು ಹಾಕಿಕೊಂಡು ಬಂದ ಮುಸ್ಲಿಂ ವಿದ್ಯಾರ್ಥಿನಿಯರನ್ನು ತಡೆದ ಹಿಂದೂ ವಿದ್ಯಾರ್ಥಿಗೆ ‘ಕಾಲೇಜಿಗೆ ನಾವು ಫೀಸ್ ಕಟ್ಟುತ್ತೇವೆ. ಕಾಲೇಜು ನಿಮ್ಮಪ್ಪಂದಾ?’ ಎಂದು ಮುಸ್ಲಿಂ ವಿದ್ಯಾರ್ಥಿನಿಯೋರ್ವಳು ಪ್ರಶ್ನಿಸಿದ್ದು, ಕೆಲಕಾಲ ಬಿಗುವಿನ ವಾತಾವರಣ ಸೃಷ್ಟಿಸಿತ್ತು. ಎರಡು ವಿದ್ಯಾರ್ಥಿ ಗುಂಪುಗಳ

ಮಂಗಳೂರು : ಮತ್ತೆ ಭುಗಿಲೆದ್ದ ಹಿಜಾಬ್ ವಿವಾದ; ಕಾಲೇಜು ನಿಮ್ಮಪ್ಪಂದಾ? ಎಂದಳಾ ವಿದ್ಯಾರ್ಥಿನಿ Read More »

ರಾಜ್ಯ ಬಜೆಟ್; ಯಾವ ಕ್ಷೇತ್ರಕ್ಕೆ ಸಿಕ್ಕಿದ್ದೆಷ್ಟು? ಇಲ್ಲಿದೆ ಬಜೆಟ್ ಕಂಪ್ಲೀಟ್ ಹೈಲೈಟ್ಸ್…

ಸಮಗ್ರ ನ್ಯೂಸ್: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಇಂದು ಚೊಚ್ಚಲ ಬಜೆಟ್ ಮಂಡನೆ ಮಾಡಿದರು. ಬಜೆಟ್​ ಮಂಡನೆ ಪ್ರಾರಂಭಿಸುವ ಮುನ್ನ ಸಿಎಂ ಬೊಮ್ಮಾಯಿ ಸರ್ಕಾರದ ಹಾಗೂ ಸರ್ಕಾರದ ಆಡಳಿತದ ಕುರಿತು ಮಾತನಾಡಿ, ಸ್ಥಿರ, ದಕ್ಷ ಆಡಳಿತದಿಂದ ಸರ್ಕಾರ ಯಶಸ್ವಿಯಾಗಿ ನಡೆಯುತ್ತಿದೆ.ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಾಯಕತ್ವದಿಂದ ಕೋವಿಡ್​-19 ನಿರ್ವಹಣೆಗೊಂಡಿದ್ದು, ರಾಜ್ಯದಲ್ಲಿ ಮಾಡಿದ ಎಲ್ಲಾ ಪ್ರಯೋಗಗಳು ಯಶಸ್ಸು ಕಂಡಿದೆ ಎಂದಿದ್ದಾರೆ. 2022-23ರಲ್ಲಿ ರಾಜ್ಯದ ಆರ್ಥಿಕತೆಯಲ್ಲಿ ಎಲ್ಲಾ ಸ್ಥರದ ಜನರು ಭಾಗಿ ಹಾಗೂ ದುರ್ಬಲ ವರ್ಗದ ಅಭಿವೃದ್ಧಿಗೆ, ಶಿಕ್ಷಣ, ಉದ್ಯೋಗ,

ರಾಜ್ಯ ಬಜೆಟ್; ಯಾವ ಕ್ಷೇತ್ರಕ್ಕೆ ಸಿಕ್ಕಿದ್ದೆಷ್ಟು? ಇಲ್ಲಿದೆ ಬಜೆಟ್ ಕಂಪ್ಲೀಟ್ ಹೈಲೈಟ್ಸ್… Read More »

ರಷ್ಯಾ- ಉಕ್ರೇನ್ ಮಹಾಯುದ್ಧ| ಪುಟಿನ್ ಹತ್ಯೆಗೆ ಅಮೇರಿಕಾದ ಹಿರಿಯ ಸೆನೆಟರ್ ಕರೆ|

ಸಮಗ್ರ ನ್ಯೂಸ್: ಉಕ್ರೇನ್ʼನಲ್ಲಿ ರಷ್ಯಾದ ಪಡೆಗಳ ದಾಳಿ ಮುಂದುವರಿಯುತ್ತಿದ್ದು ಅಮೆರಿಕದ ಹಿರಿಯ ಸೆನೆಟರ್ ಲಿಂಡ್ಸೆ ಗ್ರಹಾಂ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹತ್ಯೆಗೆ ನೇರ ದೂರದರ್ಶನದಲ್ಲಿ ಕರೆ ನೀಡಿದ್ದಾರೆ. ‘ರಷ್ಯಾದಲ್ಲಿ ಯಾರಾದರೂ ಪ್ಲೇಟ್ʼಗೆ ಹೆಜ್ಜೆ ಹಾಕಿ ಈ ವ್ಯಕ್ತಿಯನ್ನ ಹೊರಗೆ ಕರೆದೊಯ್ಯಬೇಕು’ ಎಂದು ಸೆನೆಟರ್ ಹೇಳಿದ್ದಾರೆ. ನಂತರ ಅವರು ಸರಣಿ ಟ್ವೀಟ್ʼಗಳಲ್ಲಿ ಕರೆಯನ್ನು ಪುನರಾವರ್ತಿಸಿದ್ದಾರೆ. ‘ಇದನ್ನ ಸರಿಪಡಿಸಬಲ್ಲವರು ರಷ್ಯನ್ ಜನರು ಮಾತ್ರ. ಹೇಳುವುದು ಸುಲಭ, ಮಾಡಲು ಕಷ್ಟ. ನೀವು ಜೀವನಪರ್ಯಂತ ಕತ್ತಲೆಯಲ್ಲಿ ಬದುಕಲು ಬಯಸದ ಹೊರತು, ಕಡು

ರಷ್ಯಾ- ಉಕ್ರೇನ್ ಮಹಾಯುದ್ಧ| ಪುಟಿನ್ ಹತ್ಯೆಗೆ ಅಮೇರಿಕಾದ ಹಿರಿಯ ಸೆನೆಟರ್ ಕರೆ| Read More »

ಚಾಮರಾಜನಗರ: ಕಲ್ಲು ಕ್ವಾರೆಯಲ್ಲಿ ಬಂಡೆ ಕುಸಿತ; 10 ಕ್ಕೂ ಹೆಚ್ಚು ಸಾವಿನ ಶಂಕೆ

ಸಮಗ್ರ ನ್ಯೂಸ್: ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿಯ ಬಿಳಿಕಲ್ಲು ಕ್ವಾರಿಯಲ್ಲಿ ಗುರುವಾರ ಬಂಡೆ ಕುಸಿದಿದ್ದು, 10ಕ್ಕೂ ಹೆಚ್ಚು ಕಾರ್ಮಿಕರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಬೊಮ್ಮಲಾಪುರ ಗ್ರಾಮದ ಮಹೇಂದ್ರಪ್ಪ ಎಂಬುವವರ ಜಾಗದಲ್ಲಿ ಕೇರಳ ಮೂಲದ ಉದ್ಯಮಿ ಹಕೀಮ್​ ಎಂಬಾತ ಗುತ್ತಿಗೆ ಪಡೆದು ಬಿಳಿಕಲ್ಲು ಗಣಿಗಾರಿಕೆ ನಡೆಸುತ್ತಿದ್ದರು ಎಂದು ಹೇಳಲಾಗಿದೆ. ಗಣಿಗಾರಿಕೆ ವೇಳೆ ಬಂಡೆಯೊಂದು ಜೆಸಿಬಿ ಮತ್ತು ಟಿಪ್ಪರ್​ ಮೇಲೆ ಬಿದ್ದಿದ್ದು, 10ಕ್ಕೂ ಮಂದಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಗುಂಡ್ಲುಪೇಟೆ ಪೊಲೀಸರು ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಕಾರ್ಮಿಕರು ರಾಜಸ್ಥಾನ, ಉತ್ತರ

ಚಾಮರಾಜನಗರ: ಕಲ್ಲು ಕ್ವಾರೆಯಲ್ಲಿ ಬಂಡೆ ಕುಸಿತ; 10 ಕ್ಕೂ ಹೆಚ್ಚು ಸಾವಿನ ಶಂಕೆ Read More »

ಅತಿ ದೊಡ್ಡ ಪರಮಾಣು ಸ್ಥಾವರಕ್ಕೆ ಬೆಂಕಿ| ಮತ್ತೆ ಚರ್ನೋಬಿಲ್ ದುರಂತ ಮತ್ತೆ ಮರುಕಳಿಸುವ ಸಾಧ್ಯತೆ

ಸಮಗ್ರ ನ್ಯೂಸ್: ಉಕ್ರೇನ್‌ನ ಮಹಾ ನಗರಗಳನ್ನು ವಶಪಡಿಸಿಕೊಳ್ಳುವ ರಷ್ಯಾದ ಹರಸಾಹಸ ಯುದ್ಧದ ಮುಂದುವರೆದಿದ್ದು ಈಗ ಪ್ರಮುಖ ಕರಾವಳಿ ನಗರಗಳಿಗೆ ರಷ್ಯಾ ಸೇನೆ ಲಗ್ಗೆ ಇಟ್ಟಿದೆ. ಈ ಮಧ್ಯೆ “ಯುರೋಪಿನ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರವಾದ ಜಪೋರಿಝಿಯಾ ಎನ್‌ಪಿಪಿ ಮೇಲೆ ರಷ್ಯಾದ ಸೈನ್ಯವು ಎಲ್ಲಾ ಕಡೆಯಿಂದ ಗುಂಡು ಹಾರಿಸುತ್ತಿದೆ. ಬೆಂಕಿ ಈಗಾಗಲೇ ಭುಗಿಲೆದ್ದಿದೆ. ಅದು ಸ್ಫೋಟಗೊಂಡರೆ, ಅದು ಚೆರ್ನೋಬಿಲ್‌ಗಿಂತ 10 ಪಟ್ಟು ದೊಡ್ಡದಾಗಿರುತ್ತದೆ!” ಎಂದು ಉಕ್ರೇನ್ ವಿದೇಶಾಂಗ ವ್ಯವಹಾರಗಳ ಸಚಿವ ಡಿಮಿಟ್ರೋ ಕುಲೆಬಾ ಹೇಳಿದ್ದಾರೆ. ಈ ಬಗ್ಗೆ ಟ್ವೀಟ್‌

ಅತಿ ದೊಡ್ಡ ಪರಮಾಣು ಸ್ಥಾವರಕ್ಕೆ ಬೆಂಕಿ| ಮತ್ತೆ ಚರ್ನೋಬಿಲ್ ದುರಂತ ಮತ್ತೆ ಮರುಕಳಿಸುವ ಸಾಧ್ಯತೆ Read More »

ನಟ ಸೋನು ಸೂದ್ ಮತ್ತೆ ರಿಯಲ್ ಹೀರೋ| ಉಕ್ರೇನ್ ಸಂಕಷ್ಟದ ವಿದ್ಯಾರ್ಥಿಗಳಿಗೆ ನೆರವು

ಸಮಗ್ರ ನ್ಯೂಸ್: ಉಕ್ರೇನ್​ನಲ್ಲಿ ಸಿಲುಕಿರುವ ಸಾವಿರಾರು ಭಾರತೀಯರು ವಾಪಸ್​ ಬರಲು ಹರಸಾಹಸ ಪಡುತ್ತಿದ್ದು, ಅಂಥವರಿಗೆ ಸೋನು ಸೂದ್​ ನೆರವು ನೀಡುತ್ತಾ ರಿಯಲ್ ಹೀರೋ ಎನಿಸಿದ್ದಾರೆ. ಈ ಹಿಂದೆ ಲಾಕ್​ಡೌನ್​ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದವರಿಗೆ ಸೋನು ಸೂದ್​ ಅವರು ಸಾಕಷ್ಟು ಸಹಾಯ ಮಾಡಿದ್ದರು. ಆ ನಂತರವೂ ಅವರ ಸಮಾಜಮುಖಿ ಕಾರ್ಯ ಮುಂದುವರಿದಿತ್ತು. ಈಗ ಉಕ್ರೇನ್​ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳಿಗೆ ಸೋನು ಸೂದ್​ ಸಹಾಯ ಮಾಡಿದ್ದಾರೆ. ಅವರಿಂದ ಸಹಾಯ ಪಡೆದ ಅನೇಕರು ವಿಡಿಯೋ ಮೂಲಕ ಧನ್ಯವಾದ ತಿಳಿಸುತ್ತಿದ್ದಾರೆ. ಈ ವಿಡಿಯೋಗಳು ಸಖತ್​

ನಟ ಸೋನು ಸೂದ್ ಮತ್ತೆ ರಿಯಲ್ ಹೀರೋ| ಉಕ್ರೇನ್ ಸಂಕಷ್ಟದ ವಿದ್ಯಾರ್ಥಿಗಳಿಗೆ ನೆರವು Read More »

ಕಡಬ : ಬುದ್ಧಿಮಾಂದ್ಯ ಯುವತಿಯನ್ನು ಗುಡ್ಡಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ

ಸಮಗ್ರ ನ್ಯೂಸ್: ಬುದ್ಧಿಮಾಂದ್ಯ ಯುವತಿಯ ಮೇಲೆ ಅತ್ಯಾಚಾರ ಎಸಗಿದ ಘಟನೆ ಕಡಬ‌ ಠಾಣಾ ವ್ಯಾಪ್ತಿಯ ಕಾಣಿಯೂರಿನಲ್ಲಿ ನಡೆದಿದೆ. ಆರೋಪಿಯನ್ನು ಪೋಲಿಸರು ಬಂಧಿಸಿದ್ದು, ಬಂಧಿತ ಆರೋಪಿಯನ್ನು ಬಂಡಾಜೆ ನಿವಾಸಿ ಚಂದ್ರಶೇಖರ (57) ಎಂದು ಗುರುತಿಸಲಾಗಿದೆ. ಸಂತ್ರಸ್ತ ಯುವತಿಯ ಸಹೋದರ ಚಾರ್ವಾಕದಲ್ಲಿರುವ ತನ್ನ ಜಮೀನಿನಲ್ಲಿ ಕೃಷಿ ಕೆಲಸದ ಬಗ್ಗೆ ತಂದೆ, ತಾಯಿಯವರನ್ನು ಬಿಟ್ಟು ಬರಲು ಹೋದ ಸಂದರ್ಭ, ಬುದ್ಧಿಮಾಂದ್ಯಳಾದ ಅಕ್ಕ ಮನೆಯಲ್ಲಿ ಒಬ್ಬಳೇ ಇದ್ದರು ಎನ್ನಲಾಗಿದೆ.ಚಾರ್ವಾಕದಿಂದ ಮರಳಿ ಮನೆಗೆ ಬಂದಾಗ ಮನೆಯಲ್ಲಿದ್ದ ಅಕ್ಕ ಕಾಣದೇ ಇದ್ದಾಗ ಆಕೆಯನ್ನು ಹುಡುಕುತ್ತಿದ್ದ ವೇಳೆ

ಕಡಬ : ಬುದ್ಧಿಮಾಂದ್ಯ ಯುವತಿಯನ್ನು ಗುಡ್ಡಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ Read More »

ಇಂದು ರಾಜ್ಯ‌ ಬಜೆಟ್ ಅಧಿವೇಶನ| ಆರ್ಥಿಕ ಪುನಶ್ಚೇತನಕ್ಕೆ ಹೊಸ ಸೂತ್ರ ತರುತ್ತಾರಾ ಸಿಎಂ?

ಸಮಗ್ರ ನ್ಯೂಸ್: ಮಹಾಮಾರಿ ಕೊರೋನಾ ಸಾಂಕ್ರಾಮಿಕ ರೋಗದಿಂದಾಗಿ ಎದುರಾಗಿರುವ ಆರ್ಥಿಕ ಸಂಕಷ್ಟದ ನಡುವೆಯೇ ರಾಜ್ಯ ಸರ್ಕಾರ ಶುಕ್ರವಾರ 2022-23ನೇ ಸಾಲಿನ ಬಜೆಟ್ ಮಂಡನೆ ಮಾಡುತ್ತಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಚೊಚ್ಚಲ ಬಜೆಟ್ ಮೇಲೆ ಸಹಜವಾಗಿಯೇ ರಾಜ್ಯದ ಜನತೆಯಲ್ಲಿ ಕುತೂಹಲ ಮೂಡಿಸಿದೆ. ಮಧ್ಯಾಹ್ನ 12.30ಕ್ಕೆ ಸಿಎಂ ಬೊಮ್ಮಾಯಿಯವರು ಬಜೆಟ್ ಮಂಡಿಸಲಿದ್ದು, ಈ ಹಿನ್ನೆಲೆಯಲ್ಲಿ ಗುರುವಾರ ರಾತ್ರಿಯವರೆಗೂ ಅಧಿಕಾರಿಗಳೊಂದಿಗೆ ಕೊನೆಯ ಕ್ಷಣದ ಕಸರತ್ತು ನಡೆಸಿದರು. ಈ ಬಾರಿ ಸಿಎಂ ಬೊಮ್ಮಾಯಿಯವರು ಚಿಕ್ಕದಾದ, ಚೊಕ್ಕವಾದ ಜನಪರ ಬಜೆಟ್​​ ನೀಡಲು ಮುಂದಾಗಿದ್ದಾರೆ. 2023ರ

ಇಂದು ರಾಜ್ಯ‌ ಬಜೆಟ್ ಅಧಿವೇಶನ| ಆರ್ಥಿಕ ಪುನಶ್ಚೇತನಕ್ಕೆ ಹೊಸ ಸೂತ್ರ ತರುತ್ತಾರಾ ಸಿಎಂ? Read More »