March 2022

ಮಂಗಳೂರು : ಜಿಲ್ಲೆಯಲ್ಲಿ ತಂಪೆರೆದ ಬೇಸಿಗೆ ಮಳೆ| ಮುಂದಿನ 5 ದಿನ ಮಳೆ ಮುಂದುವರೆಯುವ ಸಾಧ್ಯತೆ|

ಸಮಗ್ರ ನ್ಯೂಸ್: ಮಂಗಳೂರು ನಗರ ಸೇರಿದಂತೆ ದ.ಕ. ಜಿಲ್ಲೆಯ ವಿವಿಧ ಕಡೆಗಳಲ್ಲಿ ಮಂಗಳವಾರ ಸಂಜೆಯಿಂದ ಗುಡುಗು ಮಿಂಚಿನ ಸಹಿತ ಸಾಧಾರಣ ಮಳೆಯಾಗಿದೆ. ಬಂಗಾಳ ಕೊಲ್ಲಿಯಲ್ಲಿ ತೀವ್ರ ವಾಯುಭಾರ‌ ಕುಸಿತ ಆಗಿರುವ ಕಾರಣ ಮುಂದಿನ ಒಂದೆರಡು ದಿನಗಳಲ್ಲಿ ವಿವಿಧೆಡೆ ಮಳೆಯಾಗುವ ಸಾದ್ಯತೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಅದರಂತೆ ನಿನ್ನೆ ಸಂಜೆಯಿಂದಲೇ ಜಿಲ್ಲೆಯ ವಿವಿಧೆಡೆ ಮಳೆ ಸುರಿದಿತ್ತು. ಇಂದು ಮಂಗಳೂರು ನಗರ ಸೇರಿದಂತೆ ಹಲವೆಡೆ ಬೆಳಗ್ಗೆ 6 ಗಂಟೆಯಿಂದಲೇ ಮತ್ತೆ ಗುಡುಗು ಮಿಂಚಿನ ಸಹಿತ […]

ಮಂಗಳೂರು : ಜಿಲ್ಲೆಯಲ್ಲಿ ತಂಪೆರೆದ ಬೇಸಿಗೆ ಮಳೆ| ಮುಂದಿನ 5 ದಿನ ಮಳೆ ಮುಂದುವರೆಯುವ ಸಾಧ್ಯತೆ| Read More »

ಮಂಗಳೂರು: ಕಾಲೇಜು ವಿದ್ಯಾರ್ಥಿನಿಯರನ್ನು ಬಳಸಿ ಹೈಟೆಕ್ ಮಾಂಸದಂಧೆ| ಸಿಕ್ಕಿಬಿದ್ದ ಖದೀಮರಲ್ಲಿ ಮೂವರು ವೃದ್ಧರು!; ಆಘಾತಕಾರಿ ಮಾಹಿತಿ ಬಹಿರಂಗಗೊಳಿಸಿದ ಕಮಿಷನರ್|

ಸಮಗ್ರ ನ್ಯೂಸ್: ಕರಾವಳಿ ಜಿಲ್ಲೆಯಲ್ಲಿ ಅಪ್ರಾಪ್ತ ಕಾಲೇಜು ವಿದ್ಯಾರ್ಥಿನಿಯರನ್ನು ಬಳಸಿಕೊಂಡು ನಡೆಸುತ್ತಿದ್ದ ಹೈಟೆಕ್ ವೇಶ್ಯಾವಾಟಿಕೆ ದಂಧೆಯ ಮತ್ತೊಂದು ಕರಾಳಮುಖ ಬಯಲಾಗಿದೆ. ಮತ್ತೊಬ್ಬ ಅಪ್ರಾಪ್ತ ವಿದ್ಯಾರ್ಥಿನಿಯನ್ನು ಬಳಸಿಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಈ ಹಿಂದೆ ವೇಶ್ಯಾವಾಟಿಕೆ ದಂಧೆಯಲ್ಲಿ ಓರ್ವ ಅಪ್ರಾಪ್ತ ವಿದ್ಯಾರ್ಥಿನಿ ಸೇರಿದಂತೆ ನಾಲ್ವರು ಸಂತ್ರಸ್ಥರನ್ನು ಮಂಗಳೂರು ಪೊಲೀಸರು ರಕ್ಷಿಸಿದ್ದರು. ಇದೀಗ ಮತ್ತೊಬ್ಬ ವಿದ್ಯಾರ್ಥಿನಿಯನ್ನು ರಕ್ಷಣೆ ಮಾಡಿದ್ದಾರೆ. ಮಂಗಳೂರು ಪೊಲೀಸರು ಮತ್ತೆ ಪ್ರತ್ಯೇಕ 4 ಪೋಕ್ಸೋ ಪ್ರಕರಣ ಸೇರಿದಂತೆ ಒಟ್ಟು ಐದು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.

ಮಂಗಳೂರು: ಕಾಲೇಜು ವಿದ್ಯಾರ್ಥಿನಿಯರನ್ನು ಬಳಸಿ ಹೈಟೆಕ್ ಮಾಂಸದಂಧೆ| ಸಿಕ್ಕಿಬಿದ್ದ ಖದೀಮರಲ್ಲಿ ಮೂವರು ವೃದ್ಧರು!; ಆಘಾತಕಾರಿ ಮಾಹಿತಿ ಬಹಿರಂಗಗೊಳಿಸಿದ ಕಮಿಷನರ್| Read More »

ಕೊನೆಗೂ‌ ಕೂಡಿ ಬಂತು ಕಾಲ| ಅಂತರಾಷ್ಟ್ರೀಯ ವಿಮಾನ ಹಾರಾಟಕ್ಕೆ ಬರೋಬ್ಬರಿ ಎರಡು ವರ್ಷಗಳ ಬಳಿಕ ಅನುಮತಿ| ಮಾ.27ರಿಂದ ಸೇವೆಗಳು ಪುನರಾರಂಭ|

ಸಮಗ್ರ ನ್ಯೂಸ್: ಕೊರೋನಾ ಕಾರಣ ಕಳೆದೆರಡು ವರ್ಷದಿಂದ ಅಂತಾರಾಷ್ಟ್ರೀಯ ವಿಮಾನ ಸಂಚಾರ ಬಂದ್ ಆಗಿದ್ದು, ಇದೀಗ ಮತ್ತೆ ಸಂಚಾರವನ್ನು ಪುನರಾರಂಭಿಸಲು ಕೇಂದ್ರ ಸರ್ಕಾರ ಅನುಮತಿಸಿದೆ. ಕೋವಿಡ್ ವೈರಸ್ ಹಾವು ಏಣಿ ಆಟವಾಡುತ್ತಿದ್ದ ಕಾರಣ ಭಾರತ ವಿಮಾನಯಾನ ಸಚಿವಾಲಯ ನಿರ್ಬಂಧ ವಿಧಿಸುತ್ತಲೇ ಬಂದಿತ್ತು. ಮಾರ್ಚ್ 27 ರಿಂದ ವಾಣಿಜ್ಯ ಹಾಗೂ ಎಲ್ಲಾ ಅಂತಾರಾಷ್ಟ್ರೀಯ ವಿಮಾನ ಸೇವೆ ಆರಂಭಗೊಳ್ಳಲಿದೆ ಎಂದು ವಿಮಾನಯಾನ ಸಚಿವಾಲಯ ಪ್ರಕಟಣೆ ಹೊರಡಿಸಿದೆ. ಫೆಬ್ರವರಿ 28 ರಂದು ವಿಮಾನಯಾನ ಸಚಿವಾಲಯ ಕೊರೋನಾ ಕಾರಣ ವಿಧಿಸಿದ್ದ ನಿರ್ಬಂಧವನ್ನು ಮತ್ತೆ

ಕೊನೆಗೂ‌ ಕೂಡಿ ಬಂತು ಕಾಲ| ಅಂತರಾಷ್ಟ್ರೀಯ ವಿಮಾನ ಹಾರಾಟಕ್ಕೆ ಬರೋಬ್ಬರಿ ಎರಡು ವರ್ಷಗಳ ಬಳಿಕ ಅನುಮತಿ| ಮಾ.27ರಿಂದ ಸೇವೆಗಳು ಪುನರಾರಂಭ| Read More »

ಚೆನ್ನೈ: ಉಕ್ರೇನ್ ಸೇನೆಯಲ್ಲಿ ರಷ್ಯಾ ವಿರುದ್ಧ ಯುದ್ಧ ಮಾಡುತ್ತಿರುವ ಸಾಯಿನಿಕೇಶ್!; ಭಾರತೀಯ ಸೇನಾ ನೇಮಕಾತಿಯಿಂದ ತಿರಸ್ಕೃತನಾದವ ಉಕ್ರೇನ್ ಸೈನ್ಯ ಸೇರಿದ್ಹೇಗೆ?

ಸಮಗ್ರ ನ್ಯೂಸ್: ತಮಿಳುನಾಡಿನ ವಿದ್ಯಾರ್ಥಿಯೋರ್ವ ಇದೀಗ ಉಕ್ರೇನ್ ಸೇರಿ ರಷ್ಯಾ ವಿರುದ್ಧ ಹೋರಾಡುತ್ತಿರುವ ವಿಚಾರ ಇದೀಗ ಬೆಳಕಿಗೆ ಬಂದಿದೆ. ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ 21 ವರ್ಷದ ಸಾಯಿನಿಕೇಶ್ ರವಿಚಂದ್ರನ್ ಎಂಬ ವಿದ್ಯಾರ್ಥಿ ರಷ್ಯಾದ ವಿರುದ್ಧ ಹೋರಾಡಲು ಉಕ್ರೇನ್‌ನಲ್ಲಿ ಅರೆಸೈನಿಕ ಪಡೆಗಳನ್ನು ಸೇರಿಕೊಂಡಿದ್ದಾನೆ. ಅಧಿಕಾರಿಗಳು ಅವರ ನಿವಾಸಕ್ಕೆ ಭೇಟಿ ನೀಡಿ ಪೋಷಕರನ್ನು ವಿಚಾರಿಸಿದ್ದು, ಈ ವೇಳೆ ಸಾಯಿನಿಕೇಶ್ ಭಾರತೀಯ ಸೇನೆಗೆ ಸೇರಲು ಅರ್ಜಿ ಸಲ್ಲಿಸಿದ್ದರು ಆದರೆ ಅವರನ್ನು 2 ಬಾರಿ ತಿರಸ್ಕರಿಸಲಾಗಿತ್ತು ಎಂಬ ವಿಚಾರ ತಿಳಿದುಬಂದಿದೆ. 2018 ರಲ್ಲಿ,

ಚೆನ್ನೈ: ಉಕ್ರೇನ್ ಸೇನೆಯಲ್ಲಿ ರಷ್ಯಾ ವಿರುದ್ಧ ಯುದ್ಧ ಮಾಡುತ್ತಿರುವ ಸಾಯಿನಿಕೇಶ್!; ಭಾರತೀಯ ಸೇನಾ ನೇಮಕಾತಿಯಿಂದ ತಿರಸ್ಕೃತನಾದವ ಉಕ್ರೇನ್ ಸೈನ್ಯ ಸೇರಿದ್ಹೇಗೆ? Read More »

ಉಕ್ರೇನ್ ನಲ್ಲಿ ನವೀನ್ ಮೃತದೇಹ‌ ಪತ್ತೆ| ತಾಯ್ನಾಡಿಗೆ ಕರೆತರುವ ಪ್ರಯತ್ನದಲ್ಲಿ ಸಿಎಂ ಬೊಮ್ಮಾಯಿ|

ಸಮಗ್ರ ನ್ಯೂಸ್: ಉಕ್ರೇನ್ ಮೇಲೆ ರಷ್ಯಾ ನಡೆಸಿದ ಭೀಕರ ದಾಳಿಯಲ್ಲಿ ಮೃತಪಟ್ಟಿದ್ದ ಕನ್ನಡಿಗ ವೈದ್ಯಕೀಯ ವಿದ್ಯಾರ್ಥಿ ನವೀನ್ ಮೃತದೇಹವನ್ನು ತಾಯ್ನಾಡಿಗೆ ತರುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ, ನವೀನ್ ಮೃತದೇಹ ತರುವ ವಿಚಾರವಾಗಿ, ಕೇಂದ್ರ ಸಚಿವ ಜೈಶಂಕರ್ ಜತೆ ಮಾತನಾಡಿದ್ದೇನೆ. ನವೀನ್ ಮೃತದೇಹ ಉಕ್ರೇನ್ ಶವಾಗಾರದಲ್ಲಿ ಇರಿಸಲಾಗಿದೆ. ಯುದ್ಧ ಇನ್ನೂ ನಡೆಯುತ್ತಿರುವುದರಿಂದ ತಕ್ಷಣ ಮೃತದೇಹ ತರಲು ಸಾಧ್ಯವಾಗಿಲ್ಲ. ಆದರೆ ಮೃತದೇಹ ತರಲು ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ಉಕ್ರೇನ್ ನಲ್ಲಿ ನವೀನ್ ಮೃತದೇಹ‌ ಪತ್ತೆ| ತಾಯ್ನಾಡಿಗೆ ಕರೆತರುವ ಪ್ರಯತ್ನದಲ್ಲಿ ಸಿಎಂ ಬೊಮ್ಮಾಯಿ| Read More »

ರಷ್ಯಾ ಮಿಲಿಟರಿ ಪಡೆ ಜನರಲ್ ನ ಹತ್ಯೆಗೈದ ಉಕ್ರೇನ್

ಸಮಗ್ರ ನ್ಯೂಸ್: ಸೋಮವಾರ ದಂದು ಖಾರ್ಕಿವ್ ಯುದ್ಧದಲ್ಲಿ ರಷ್ಯಾದ ಇನ್ನೊಬ್ಬ ಜನರಲ್ ವಿಟಾಲಿ ಗೆರಾಸಿಮೊವ್ ಕೊಲ್ಲಲ್ಪಟ್ಟರು ಎಂದು ಉಕ್ರೇನಿಯನ್ ರಕ್ಷಣಾ ವರದಿ ಮಾಡಿದೆ. ‘ಆಕ್ರಮಿತ ಸೇನೆಯ ಹಿರಿಯ ಕಮಾಂಡ್ ಸಿಬ್ಬಂದಿಯಲ್ಲಿ ಮತ್ತೊಂದು ನಷ್ಟ’ ಎಂದು ಉಕ್ರೇನಿಯನ್ ರಕ್ಷಣಾ ಸಚಿವಾಲಯ ಹೇಳಿದೆ. ಮೇಜರ್ ಜನರಲ್ ವಿಟಾಲಿ ಗೆರಾಸಿಮೊವ್ ರಷ್ಯಾದ ಕೇಂದ್ರ ಮಿಲಿಟರಿ ಜಿಲ್ಲೆಯ 41 ನೇ ಸೈನ್ಯದ ಮೊದಲ ಉಪ ಕಮಾಂಡರ್ ಆಗಿದ್ದರು. ಉಕ್ರೇನಿಯನ್ ರಕ್ಷಣಾ ಸಚಿವಾಲಯದ ಪ್ರಕಾರ, ಎರಡನೇ ಚೆಚೆನ್ ಯುದ್ಧ ಮತ್ತು ಸಿರಿಯಾದಲ್ಲಿ ನಡೆದ ರಷ್ಯಾದ

ರಷ್ಯಾ ಮಿಲಿಟರಿ ಪಡೆ ಜನರಲ್ ನ ಹತ್ಯೆಗೈದ ಉಕ್ರೇನ್ Read More »

ಒಂದೇ ಮರದಲ್ಲಿ ನೇಣು ಬಿಗಿದು ಅಪ್ರಾಪ್ತೆಯ ಜೊತೆ ಯುವಕ ಆತ್ಮಹತ್ಯೆ

ಸಮಗ್ರ ನ್ಯೂಸ್: ಯುವಕನೋರ್ವ ತನ್ನ ಅಪ್ರಾಪ್ತ ಪ್ರೇಯಸಿ ಜೊತೆಗೆ ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ‌ ಮಾಡಿಕೊಂಡಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕು ಯಲವಳ್ಳಿ ಗ್ರಾಮದ ಹೊರವಲಯದಲ್ಲಿ ಘಟನೆ ನಡೆದಿದೆ. ಗಂಗಾಧರ್ ಹಾಗೂ ನಿಕಿತಾ ಆತ್ಮಹತ್ಯೆಗೆ ಶರಣಾದವರು. ಆತ್ಮಹತ್ಯೆಗೆ ನಿಖರ ಮಾಹಿತಿ ಇನ್ನು ತಿಳಿದು ಬಂದಿಲ್ಲ. ಇವರಿಬ್ಬರು ಶ್ರೀನಿವಾಸಪುರ ಪಟ್ಟಣದ ಜಗಜೀವನ ಪಾಳ್ಯದವರೆಂದು ತಿಳಿದುಬಂದಿದೆ. ನಿಕಿತಾ 10ನೇ ತರಗತಿ ವಿದ್ಯಾರ್ಥಿ ಶಾಲಾ ಸಮವಸ್ತ್ರದಲ್ಲಿ ನೇಣಿಗೆ ಶರಣಾಗಿದ್ದಾಳೆ. ಸ್ಥಳಕ್ಕೆ ಶ್ರೀನಿವಾಸಪುರ ಪೊಲೀಸರ ಬೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಒಂದೇ ಮರದಲ್ಲಿ ನೇಣು ಬಿಗಿದು ಅಪ್ರಾಪ್ತೆಯ ಜೊತೆ ಯುವಕ ಆತ್ಮಹತ್ಯೆ Read More »

ದ್ವಿತೀಯ ಪಿಯುಸಿ ಅಂತಿಮ ವೇಳಾಪಟ್ಟಿ ಪ್ರಕಟ| ಇದೇ ಫೈನಲ್ ಅಂತಿದೆ ಪಿಯು ಬೋರ್ಡ್|

ಸಮಗ್ರ ನ್ಯೂಸ್: ಜೆಇಇ ಪರೀಕ್ಷೆಯಂದೇ ರಾಜ್ಯದಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ದಿನಾಂಕ ಘೋಷಣೆಯಿಂದಾಗಿ, ಮತ್ತೆ ಪಿಯು ಬೋರ್ಡ್ ನಿಂದ ವಾರ್ಷಿಕ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿ, ತಾತ್ಕಾಲಿಕ ವಾರ್ಷಿಕ ವೇಳಾಪಟ್ಟಿ ಪ್ರಕಟಿಸಲಾಗಿತ್ತು. ಈ ಕುರಿತಂತೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, 2021-22ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ದಿನಾಂಕ 22-04-2022ರಿಂದ 11-05-2022ರವರೆಗೆ ನಿಗದಿಪಡಿಸಲಾಗಿದ್ದು, ಆಕ್ಷೇಪಣೆಗಳನ್ನು ಸಲ್ಲಿಸಲು ದಿನಾಂಕ 05-03-2022ರ ಸಂಜೆ 5 ಗಂಟೆಯವರೆಗೆ ಸಮಯ ನೀಡಲಾಗಿತ್ತು.

ದ್ವಿತೀಯ ಪಿಯುಸಿ ಅಂತಿಮ ವೇಳಾಪಟ್ಟಿ ಪ್ರಕಟ| ಇದೇ ಫೈನಲ್ ಅಂತಿದೆ ಪಿಯು ಬೋರ್ಡ್| Read More »

ಸುಳ್ಯ:ಹಿಜಾಬ್ ವಿವಾದ ಕುರಿತು ತಾಲೂಕು ಮುಸ್ಲಿಂ ಒಕ್ಕೂಟದಿಂದ ವಿದ್ಯಾರ್ಥಿಗಳು ಮತ್ತು ಪೋಷಕರ ಸಭೆ

ಸಮಗ್ರ ನ್ಯೂಸ್: ರಾಜ್ಯದಾದ್ಯಂತ ಕಳೆದ ಹಲವಾರು ದಿನಗಳಿಂದ ನಡೆಯುತ್ತಿರುವ ಹಿಜಾಬ್ ವಿವಾದ ವಿಷಯಕ್ಕೆ ಸಂಬಂಧಿಸಿದಂತೆ ಸುಳ್ಯದ ಎನ್ ಎಂ ಸಿ ಪದವಿ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿನಿಯರ ತರಗತಿಗೆ ಪ್ರವೇಶ ನಿರಾಕರಣೆ ಸಂಬಂಧಿಸಿ ಮುಸ್ಲಿಂ ವಿದ್ಯಾರ್ಥಿಗಳ ಮತ್ತು ಪೋಷಕರ ಸಭೆ ಸುಳ್ಯದ ಅನ್ಸಾರಿಯ ಸಭಾಭವನದಲ್ಲಿ ತಾಲ್ಲೂಕು ಮುಸ್ಲಿಂ ಒಕ್ಕೂಟದ ನೇತೃತ್ವದಲ್ಲಿ ನಡೆಯಿತು. ಸಭೆಯಲ್ಲಿ ಎನ್ ಎಂ ಸಿ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿ-ವಿದ್ಯಾರ್ಥಿನಿ ಗಳು, ಪೋಷಕರು, ಸುಳ್ಯ ತಾಲೂಕು ಮುಸ್ಲಿಂ ಒಕ್ಕೂಟದ ಮುಖಂಡರು ಭಾಗವಹಿಸಿದ್ದರು. ಸಭೆಯಲ್ಲಿ ಮಾತನಾಡಿದ ವಿದ್ಯಾರ್ಥಿನಿಯರು ಹಿಜಾಬ್

ಸುಳ್ಯ:ಹಿಜಾಬ್ ವಿವಾದ ಕುರಿತು ತಾಲೂಕು ಮುಸ್ಲಿಂ ಒಕ್ಕೂಟದಿಂದ ವಿದ್ಯಾರ್ಥಿಗಳು ಮತ್ತು ಪೋಷಕರ ಸಭೆ Read More »

ಮುಗಿದ ಚುನಾವಣೆ| ಇಂದು ಮಧ್ಯರಾತ್ರಿಯಿಂದ ತೈಲ‌ ಬೆಲೆಯಲ್ಲಿ ಭಾರೀ ಏರಿಕೆ!?

ಸಮಗ್ರ ನ್ಯೂಸ್: ಪಂಚರಾಜ್ಯಗಳ ಚುನಾವಣೆಗಳು ಪೂರ್ಣಗೊಂಡಿದ್ದು, ಇಂದು ಮಧ್ಯರಾತ್ರಿಯಿಂದಲೇ ತೈಲ ಬೆಲೆ ಏರಿಸಲು ಸರ್ಕಾರಿ ಸ್ವಾಮ್ಯದ ತೈಲ‌ಕಂಪೆನಿಗಳು ನಿರ್ಧರಿಸಿವೆ ಎನ್ನಲಾಗಿದೆ. ಉಕ್ರೇನ್ ವಿರುದ್ಧ ರಷ್ಯಾದ ಯುದ್ಧದಿಂದಾಗಿ ಅಂತಾರಾಷ್ಟ್ರೀಯ ತೈಲ ಬೆಲೆಗಳು 2008 ರ ಆರ್ಥಿಕ ಬಿಕ್ಕಟ್ಟಿನ ನಂತರ ಕಂಡುಬರದ ಹಂತವನ್ನು ತಲುಪಿದೆ. ಕಚ್ಚಾ ತೈಲ ಬೆಲೆಯಲ್ಲಿ ಜಾಗತಿಕ ದಾಖಲೆಯ ಏರಿಕೆಯಿಂದಾಗಿ, ಡಾಲರ್ ಮೌಲ್ಯದ ಎದುರು ರೂಪಾಯಿ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ತಲುಪಿದೆ. ಇದರೊಂದಿಗೆ ತೈಲ ಬೆಲೆಯೂ ಏರಿಕೆಯಾಗಿದೆ. ಇಂಡಿಯನ್ ಆಯಿಲ್‌ನ ಮಾಜಿ ಕಾರ್ಯನಿರ್ವಾಹಕ ಪ್ರೊಫೆಸರ್ ಸುಧೀರ್ ಬಿಶ್ಟ್

ಮುಗಿದ ಚುನಾವಣೆ| ಇಂದು ಮಧ್ಯರಾತ್ರಿಯಿಂದ ತೈಲ‌ ಬೆಲೆಯಲ್ಲಿ ಭಾರೀ ಏರಿಕೆ!? Read More »