Ad Widget .

ನಟ ಸೋನು ಸೂದ್ ಮತ್ತೆ ರಿಯಲ್ ಹೀರೋ| ಉಕ್ರೇನ್ ಸಂಕಷ್ಟದ ವಿದ್ಯಾರ್ಥಿಗಳಿಗೆ ನೆರವು

Ad Widget . Ad Widget .

ಸಮಗ್ರ ನ್ಯೂಸ್: ಉಕ್ರೇನ್​ನಲ್ಲಿ ಸಿಲುಕಿರುವ ಸಾವಿರಾರು ಭಾರತೀಯರು ವಾಪಸ್​ ಬರಲು ಹರಸಾಹಸ ಪಡುತ್ತಿದ್ದು, ಅಂಥವರಿಗೆ ಸೋನು ಸೂದ್​ ನೆರವು ನೀಡುತ್ತಾ ರಿಯಲ್ ಹೀರೋ ಎನಿಸಿದ್ದಾರೆ.

Ad Widget . Ad Widget .

ಈ ಹಿಂದೆ ಲಾಕ್​ಡೌನ್​ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದವರಿಗೆ ಸೋನು ಸೂದ್​ ಅವರು ಸಾಕಷ್ಟು ಸಹಾಯ ಮಾಡಿದ್ದರು. ಆ ನಂತರವೂ ಅವರ ಸಮಾಜಮುಖಿ ಕಾರ್ಯ ಮುಂದುವರಿದಿತ್ತು. ಈಗ ಉಕ್ರೇನ್​ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳಿಗೆ ಸೋನು ಸೂದ್​ ಸಹಾಯ ಮಾಡಿದ್ದಾರೆ. ಅವರಿಂದ ಸಹಾಯ ಪಡೆದ ಅನೇಕರು ವಿಡಿಯೋ ಮೂಲಕ ಧನ್ಯವಾದ ತಿಳಿಸುತ್ತಿದ್ದಾರೆ. ಈ ವಿಡಿಯೋಗಳು ಸಖತ್​ ವೈರಲ್​ ಆಗುತ್ತಿವೆ. ಸದ್ಯ ರಷ್ಯಾ ಮತ್ತು ಉಕ್ರೇನ್​ ನಡುವಿನ ಯುದ್ಧ ತೀವ್ರಗೊಂಡಿದೆ. ‘ಸೋನು ಸೂದ್​ ಅವರ ತಂಡದವರು ನಮಗೆ ಸಹಾಯ ಮಾಡಿದರು. ಎಲ್ಲ ಸಂದರ್ಭದಲ್ಲೂ ಸೂಕ್ತವಾಗಿ ಮಾರ್ಗದರ್ಶನ ನೀಡಿದರು. ಈ ರೈಲಿನಲ್ಲಿರುವ ಎಲ್ಲರೂ ಭಾರತೀಯರು. ಸೋನು ಸೂದ್​ ಅವರಿಗೆ ನಾವು ಧನ್ಯವಾದ ಅರ್ಪಿಸುತ್ತೇವೆ’ ಎಂದು ಯುವತಿಯೊಬ್ಬರು ಈ ವಿಡಿಯೋದಲ್ಲಿ ಹೇಳಿದ್ದಾರೆ.

Leave a Comment

Your email address will not be published. Required fields are marked *