February 2022

ಪ್ರತ್ಯೇಕ ಅಡುಗೆ ಕೋಣೆಗಳು ಸಮಸ್ಯೆಯಾಗಿದೆ| ಲೋಕಸಭೆಯಲ್ಲಿ ಅಂಗನವಾಡಿ ಸಮಸ್ಯೆಗಳ ಬಗ್ಗೆ ದನಿ ಎತ್ತಿದ ಸುಮಲತಾ

ಸಮಗ್ರ ನ್ಯೂಸ್ ಡೆಸ್ಕ್: ಲೋಕಸಭೆ ಕಲಾಪದ ವೇಳೆ ಅಂಗನವಾಡಿ ಕೇಂದ್ರಗಳ ಸಮಸ್ಯೆಗಳ ಬಗ್ಗೆ ಮಂಡ್ಯ ಲೋಕಸಭೆ ಸಂಸದೆ ಸುಮಲತಾ ಅಂಬರೀಶ್ ದನಿ ಎತ್ತಿದ್ದಾರೆ. ಅಂಗನವಾಡಿ ಕೇಂದ್ರಗಳಲ್ಲಿ ಪ್ರತ್ಯೇಕ ಅಡುಗೆ ಕೋಣೆಗಳು ಸಮಸ್ಯೆಯಾಗಿದೆ. ಸಾಮಗ್ರಿಗಳ ದಾಸ್ತಾನಿಗೆ ತೊಂದರೆಯಾಗುತ್ತಿದೆ. ಗುಣಮಟ್ಟದ ಆಹಾರದ ಸಮಸ್ಯೆಯೂ ಇದೆ. ಹೀಗಾಗಿ ಅಂಗನವಾಡಿ ಮೂಲ ಸೌಕರ್ಯಗಳ ಸಮಸ್ಯೆಯನ್ನು ಪರಿಹರಿಸಲು ಕೇಂದ್ರ ಸರ್ಕಾರ ಏನು ಕ್ರಮ ತೆಗೆದುಕೊಂಡಿದೆ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಕೇಂದ್ರ ಮಹಿಳಾ ಮತ್ತು ಮಕ್ಕಳ ಖಾತೆ ಸಚಿವೆ ಸ್ಮೃತಿ ಇರಾನಿ, ಅಂಗನವಾಡಿಯಲ್ಲಿ ಮೂಲ […]

ಪ್ರತ್ಯೇಕ ಅಡುಗೆ ಕೋಣೆಗಳು ಸಮಸ್ಯೆಯಾಗಿದೆ| ಲೋಕಸಭೆಯಲ್ಲಿ ಅಂಗನವಾಡಿ ಸಮಸ್ಯೆಗಳ ಬಗ್ಗೆ ದನಿ ಎತ್ತಿದ ಸುಮಲತಾ Read More »

ವರ ತಾಳಿಕಟ್ಟುವ ವೇಳೆ ಬಂತು ವಧುವಿನ‌ ಸೆಕ್ಸ್ ವಿಡಿಯೋ! ಮುಂದೆ..?

ಸಮಗ್ರ ಡಿಜಿಟಲ್ ಡೆಸ್ಕ್: ಮದುವೆಯಾಗಲು ಇನ್ನೇನು ಕೆಲವೇ ಸಮಯ ಬಾಕಿ, ವಧು ವರ ಇಬ್ಬರೂ ಮುಂದಿನ ಜೀವನದ ಕನಸನ್ನು ಕಾಣುತ್ತಾ ತಮ್ಮದೇ ಲೋಕದಲ್ಲಿ ತಲ್ಲೀನರಾಗಿದ್ದರು. ಮನೆಯಲ್ಲಿ ಸಂಭ್ರಮ ಮನೆ ಮಾಡಿತ್ತು, ಎಲ್ಲಾ ರೀತಿಯ ತಯಾರಿ ನಡೆಯುತ್ತಿತ್ತು. ವರ ದಿಬ್ಬಣದೊಂದಿಗೆ ತನ್ನ ಬಾಳ ಸಂಗಾತಿಯಾಗಲಿದ್ದ ಯುವತಿಯ ಮನೆಗೆ ತೆರಳಲು 24 ಗಂಟೆಯಷ್ಟೇ ಬಾಕಿ ಇತ್ತು. ಆದರೆ ಅಷ್ಟರಲ್ಲೇ ವರನ ವಾಟ್ಸಾಪ್‌ಗೆ ಬಂದ ಅಶ್ಲೀಲ ವಿಡಿಯೋ ಒಂದು ಇಡೀ ವಾತಾವರಣವನ್ನೇ ಬದಲಾಯಿಸಿದೆ. ವಿಡಿಯೋ ನೋಡಿದ ವರ ಮದುವೆಗೆ ನಿರಾಕರಿಸಿದ್ದಾನೆ. ಅತ್ತ

ವರ ತಾಳಿಕಟ್ಟುವ ವೇಳೆ ಬಂತು ವಧುವಿನ‌ ಸೆಕ್ಸ್ ವಿಡಿಯೋ! ಮುಂದೆ..? Read More »

NEET ಪರೀಕ್ಷೆಗೆ ಡೇಟ್ ಫಿಕ್ಸ್

ಸಮಗ್ರ ನ್ಯೂಸ್ ಡೆಸ್ಕ್: ಪೋಸ್ಟ್ ಗ್ರಾಜ್ಯುಯೇಟ್ ಮೆಡಿಕಲ್ ಕೋರ್ಸ್ ಗಾಗಿ ನಡೆಯಬೇಕಿದ್ದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ಕೇಂದ್ರ ಸರ್ಕಾರ ಬೆಳಗ್ಗೆ ಮುಂದೂಡಿತ್ತು. ಇದೀಗ ಮುಂದಿನ ಪರೀಕ್ಷಾ ದಿನಾಂಕವನ್ನು ಘೋಷಿಸಿದೆ. ಮೇ. 21 ರಂದು ದೇಶಾದ್ಯಂತ ನೀಟ್ ಪರೀಕ್ಷೆ ನಡೆಯಲಿದೆ. ಈ ಮೊದಲು ಮಾರ್ಚ್ 12ರಂದು ನಿಗದಿಯಂತೆ ಪಿಜಿ ನೀಟ್ ಪರೀಕ್ಷೆ ನಡೆಯಬೇಕಿತ್ತು. ಆದರೆ ಇದನ್ನು ಆರೆಂಟು ವಾರಗಳ ಮಟ್ಟಿಗೆ ಮುಂದೂಡಲು ಕೇಂದ್ರ ಆರೋಗ್ಯ ಸಚಿವಾಲಯ ತೀರ್ಮಾನಿಸಿತ್ತು. 2021ರ ನೀಟ್ ಪಿಜಿ ಕೌನ್ಸಿಲಿಂಗ್ ಪ್ರಕ್ರಿಯೆ ನೀಡುತ್ತಿರುವ

NEET ಪರೀಕ್ಷೆಗೆ ಡೇಟ್ ಫಿಕ್ಸ್ Read More »

ಆಸ್ತಿಗಾಗಿ ಬದುಕಿರುವ ವೃದ್ಧೆಯನ್ನು ದಾಖಲೆಗಳಲ್ಲಿ ಸಾಯಿಸಿದ ಸಂಬಂಧಿಕರು| ಕೃತ್ಯಕ್ಕೆ ಸಾಥ್ ನೀಡಿದ ಅಧಿಕಾರಿಗಳು

ಸಮಗ್ರ ನ್ಯೂಸ್ ಡೆಸ್ಕ್: ಒಂದು ಎಕರೆ ಹದಿನಾರು ಗುಂಟೆ ಜಮೀನಿಗಾಗಿ ಬದುಕಿರುವ ಅಜ್ಜಿಯನ್ನು ಸಂಬಂಧಿಕರೇ ದಾಖಲೆಗಳಲ್ಲಿ ಸಾಯಿಸಿದ್ದು, ಇದಕ್ಕೆ ಅಧಿಕಾರಿಗಳು ಕೈಜೋಡಿಸಿರುವ ಘಟನೆ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಕೊಪ್ಪ ಗ್ರಾಮದಲ್ಲಿ ನಡೆದಿದೆ. 76 ವರ್ಷದ ಸಾರಮ್ಮ ದೈಹಿಕವಾಗಿ ಜೀವಂತವಾಗಿದ್ದರೂ ಸಂಬಂಧಿಕರು ಹಾಗೂ ಅಧಿಕಾರಿಗಳ ಎಡವಟ್ಟಿನಿಂದ ದಾಖಲೆಗಳಲ್ಲಿ ಸತ್ತ ನತದೃಷ್ಟ ಅಜ್ಜಿ. ಸಾರಮ್ಮರಿಗೆ ಬಾಳೆಕೊಪ್ಪ ಗ್ರಾಮದ ಸರ್ವೇ ನಂಬರ್ 26ರಲ್ಲಿ ಒಂದು ಎಕರೆ 16 ಗುಂಟೆ ಜಮೀನಿದೆ. ಅದರಲ್ಲಿ ರಬ್ಬರ್ ಹಾಗೂ ಬಾಳೆಗಿಡಗಳನ್ನು ಬೆಳೆದಿದ್ದರು. ಕೊರೊನಾ ಪಾಸಿಟಿವ್ ಬಂದಿದ್ದರಿಂದ

ಆಸ್ತಿಗಾಗಿ ಬದುಕಿರುವ ವೃದ್ಧೆಯನ್ನು ದಾಖಲೆಗಳಲ್ಲಿ ಸಾಯಿಸಿದ ಸಂಬಂಧಿಕರು| ಕೃತ್ಯಕ್ಕೆ ಸಾಥ್ ನೀಡಿದ ಅಧಿಕಾರಿಗಳು Read More »

ಕನ್ನಡ ಕಬೀರ, ಭಾವೈಕ್ಯತೆಯ ಸಂತ, ಪದ್ಮಶ್ರೀ ಇಬ್ರಾಹಿಂ ಸುತಾರ ಇನ್ನಿಲ್ಲ

ಸಮಗ್ರ ನ್ಯೂಸ್ ಡೆಸ್ಕ್: ಭಾವೈಕ್ಯತೆ ಸಂದೇಶ ಸಾರುತ್ತಿದ್ದ ಸಂತ, ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ(82) ಅವರು ಇಂದು (ಫೆ.5) ಬೆಳಗ್ಗೆ ಹೃದಯಾಘಾತದಿಂದ ನಿಧನರಾದರು. ರಬಕವಿ-ಬನಹಟ್ಟಿ ತಾಲೂಕಿನ ಮಹಾಲಿಂಗಪುರ ಪಟ್ಟಣದ ನಿವಾಸದಲ್ಲಿ ಇಂದು ಕೊನೆಯುಸಿರೆಳೆದಿದ್ದಾರೆ. ತಾವು ಹೋದ ಕಡೆಯಲೆಲ್ಲ ಭಾವೈಕ್ಯತೆಯ ಸಂದೇಶವನ್ನು ಸಾರುತ್ತಿದ್ದ ಸುತಾರ‌ ಕನ್ನಡ ಕಬೀರ ಎಂದೇ ಹೆಸರಾಗಿದ್ದರು. ಕುರಾನ್, ಬೈಬಲ್, ಭಗವದ್ಗೀತೆ ಹಾಗೂ ಶರಣರ ತತ್ವಗಳ ಅಧ್ಯಯನ ಮಾಡಿದ್ದರು. ಪ್ರವಚನ, ಗೀತೆಗಳ ಮೂಲಕ ಜನರಲ್ಲಿ ಸಮಾನತೆ, ಧರ್ಮ ಸಹಿಷ್ಠುತೆ ಪಾಠವನ್ನು ಮಾಡುತ್ತಿದ್ದರು. ಇವರ ಸೇವೆಯನ್ನು ಮೆಚ್ಚಿ

ಕನ್ನಡ ಕಬೀರ, ಭಾವೈಕ್ಯತೆಯ ಸಂತ, ಪದ್ಮಶ್ರೀ ಇಬ್ರಾಹಿಂ ಸುತಾರ ಇನ್ನಿಲ್ಲ Read More »

ಪುತ್ತೂರು: ಹಿರಿಯ ಪತ್ರಕರ್ತ ಬಿ.ಟಿ ರಂಜನ್ ನಿಧನ

ಸಮಗ್ರ ನ್ಯೂಸ್ ಡೆಸ್ಕ್: ಪುತ್ತೂರಿನ ಹಿರಿಯ ಪತ್ರಕರ್ತ ಬಿ.ಟಿ.ರಂಜನ್ ಇಂದು (ಫೆ.5) ಬೆಳಿಗ್ಗೆ ನಿಧನರಾಗಿದ್ದಾರೆ. ಉಪ್ಪಿನಂಗಡಿ ರಥಬೀದಿ ನಿವಾಸಿ ಬಿ.ಟಿ.ರಂಜನ್ ಮುಂಗಾರು, ಹೊಸದಿಗಂತ, ಉದಯವಾಣಿ ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಿಸಿದ್ದು ಪ್ರಸ್ತುತ ಹೊಸದಿಗಂತದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದ ರಂಜನ್ ಅವರನ್ನು ಅನಾರೋಗ್ಯದ ಹಿನ್ನೆಲೆಯಲ್ಲಿ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಪತ್ನಿ ಗೀತಾ ಶೆಣೈ ಮತ್ತು ಪುತ್ರಿ ಸೌಮ್ಯ ಶೆಣೈಯವರನ್ನು ಅಗಲಿದ್ದಾರೆ.

ಪುತ್ತೂರು: ಹಿರಿಯ ಪತ್ರಕರ್ತ ಬಿ.ಟಿ ರಂಜನ್ ನಿಧನ Read More »

ಹಿಜಾಬ್ ಬಗ್ಗೆ ಹೊಸ ನಿಯಮ ಮಾಡಬೇಕಾಗಿದೆ| ಲೋಕಸಭೆ ಕಲಾಪದಲ್ಲಿ ಹಿಜಬ್ ಚರ್ಚೆ

ಸಮಗ್ರ ನ್ಯೂಸ್ ಡೆಸ್ಕ್: ಕರ್ನಾಟಕದಲ್ಲಿ ತೀವ್ರ ಚರ್ಚೆಯಾಗುತ್ತಿರುವ ಹಿಜಾಬ್ ಬಗ್ಗೆ ಲೋಕಸಭೆಯಲ್ಲೂ ಪ್ರಸ್ತಾಪಿಸಲಾಗಿದೆ. ಇಂದು ನಡೆದ ಲೋಕಸಭೆ ಕಲಾಪದ ವೇಳೆ ತಮಿಳುನಾಡಿನ ಡಿಎಂಕೆ ಸಂಸದ ಸೆಂಥಿಲ್ ಕುಮಾರ್ ಹಿಜಾಬ್ ವಿಷಯ ಪ್ರಸ್ತಾಪಿಸಿದ್ದಾರೆ. ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ಅವಕಾಶ ನೀಡುತ್ತಿಲ್ಲ, ತರಗತಿಗಳಿಗೆ ಪ್ರವೇಶ ಕೂಡ ನೀಡುತ್ತಿಲ್ಲ, ಇದು ಸರಿಯಾದ ಕ್ರಮವಲ್ಲ, ಹಿಜಾಬ್ ಬಗ್ಗೆ ಹೊಸ ನಿಯಮ ಮಾಡಬೇಕಾಗಿದೆ ಇದು ಸರಿಯಾದ ಕ್ರಮವಲ್ಲ ಎಂದು ಅಭಿಪ್ರಾಯಪಟ್ಟರು. ಕರ್ನಾಟಕದಲ್ಲಿ ಎದ್ದಿರುವ ಹಿಜಾಬ್ ವಿವಾದದಲ್ಲಿ ಕೇಂದ್ರ ಸರ್ಕಾರ ಕೂಡಲೇ

ಹಿಜಾಬ್ ಬಗ್ಗೆ ಹೊಸ ನಿಯಮ ಮಾಡಬೇಕಾಗಿದೆ| ಲೋಕಸಭೆ ಕಲಾಪದಲ್ಲಿ ಹಿಜಬ್ ಚರ್ಚೆ Read More »

ಹಿಜಾಬ್ ವಿವಾದ ಉದ್ವಿಗ್ನ: ಕುಂದಾಪುರ ಪಿ.ಯು ಕಾಲೇಜಿಗೆ ನಾಳೆ ರಜೆ

ಸಮಗ್ರ ನ್ಯೂಸ್ ಡೆಸ್ಕ್: ಕುಂದಾಪುರ ಪದವಿ ಪೂರ್ವ ಕಾಲೇಜಿನಲ್ಲಿ ಹಿಜಬ್‌ ಮತ್ತು ಕೇಸರಿ ಶಲ್ಯ ವಿವಾದ ತಾರಕಕ್ಕೇರಿದ್ದು, ಕಾಲೇಜಿಗೆ ಶನಿವಾರ ರಜೆ ಘೋಷಿಸಲಾಗಿದೆ. ಆಡಳಿತ ಮಂಡಳಿಯು ವಿದ್ಯಾರ್ಥಿಗಳನ್ನು ಕಾಲೇಜಿನ ಮೈದಾನದವರೆಗೆ ಬಿಟ್ಟುಕೊಂಡಿದೆ. ತರಗತಿಯಲ್ಲಿ ಕುಳಿತುಕೊಳ್ಳಲು ಅವಕಾಶ ಕೊಡುವಂತೆ ಪ್ರಾಂಶುಪಾಲರನ್ನು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ. ವಿದ್ಯಾರ್ಥಿನಿಯರ ಪೋಷಕರು ಸಹ ಕಾಲೇಜಿಗೆ ಬಂದು ಪ್ರತಿಭಟನೆ ನಡೆಸಿದ್ದರು. ತರಗತಿಗೆ ಬಿಡುವಂತೆ ಒತ್ತಾಯಿಸಿದ್ದರೂ, ತರಗತಿಗೆ ಅವಕಾಶ ಕೊಟ್ಟಿಲ್ಲ. ಇದರಿಂದ ಪೋಷಕರು ಕಾಲೇಜು ಬಳಿ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಕುಂದಾಪುರ ಠಾಣಾ ಸರ್ಕಲ್ ಇನ್‌ಸ್ಪೆಕ್ಟರ್‌

ಹಿಜಾಬ್ ವಿವಾದ ಉದ್ವಿಗ್ನ: ಕುಂದಾಪುರ ಪಿ.ಯು ಕಾಲೇಜಿಗೆ ನಾಳೆ ರಜೆ Read More »

ಮೈಸೂರು: ಕೊಟ್ಟ ಕಾಣಿಕೆಯನ್ನು ಹಿಂಪಡೆಯಲಾರೆ- ಸಚಿವ ನಿರಾಣಿ

ಮೈಸೂರು : ಕೊಟ್ಟ ವ್ಯಕ್ತಿಯೂ ಶಾಶ್ವತವಲ್ಲ, ಪೀಠ ಮಾತ್ರ ಶಾಶ್ವತ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್.ನಿರಾಣಿ ಅವರು ಅಭಿಪ್ರಾಯಪಟ್ಟಿದ್ದಾರೆ. ನಗರದಲ್ಲಿ ಕೂಡಲಸಂಗಮ ಮಠದ ಶ್ರೀಗಳು ಮಠಕ್ಕೆ ನೀಡಿರುವ ದಾನದ ಕಾಣಿಕೆಗಳನ್ನು ಹಿಂತಿರುಗಿಸಲಾಗುವುದು ಎಂದು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ನಿರಾಣಿ, ನಾನು ಪೀಠಕ್ಕೆ ಕೊಟ್ಟಿದ್ದೇನೆ ಹೊರತು ಯಾವುದೇ ಒಬ್ಬ ವ್ಯಕ್ತಿಗೆ ಕೊಟ್ಟಿಲ್ಲ. ಕೊಟ್ಟಿರುವ ವ್ಯಕ್ತಿಯೂ ಶಾಶ್ವತವಾಗಿರುವುದಿಲ್ಲ, ಆದರೆ ಮಠ ಮಾತ್ರ ಶಾಶ್ವತವಾಗಿರುತ್ತದೆ ಎಂದರು. ನಮ್ಮಂಥವರು ನೂರಾರು ವ್ಯಕ್ತಿಗಳು ಬರುತ್ತಾರೆ, ಹೋಗುತ್ತಾರೆ. ನಾನು

ಮೈಸೂರು: ಕೊಟ್ಟ ಕಾಣಿಕೆಯನ್ನು ಹಿಂಪಡೆಯಲಾರೆ- ಸಚಿವ ನಿರಾಣಿ Read More »

ಮಂಗಳೂರು: ಬ್ರೇಕ್ ಪೆಡಲ್ ಗೆ ಸಿಕ್ಕಿಹಾಕಿಕೊಂಡ ನೀರಿನ ಬಾಟಲ್| ನಿಯಂತ್ರಣ ತಪ್ಪಿದ‌ ಕಾರಿನಿಂದಾಗಿ ಸರಣಿ ಅಪಘಾತ

ಸಮಗ್ರ ನ್ಯೂಸ್ ಡೆಸ್ಕ್: ಕಾರಿನ ಬ್ರೇಕ್ ಪೆಡಲ್ ಗೆ ನೀರಿನ ಬಾಟಲ್ ಸಿಕ್ಕಿ ಹಾಕಿಕೊಂಡ ಕಾರಣ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ದ್ವಿಚಕ್ರ ವಾಹನ ಹಾಗೂ ಎರಡು ಕಾರುಗಳಿಗೆ ಡಿಕ್ಕಿ ಹೊಡೆದ ಘಟನೆ ಮಂಗಳೂರಿನ ಉರ್ವಾದ ಚಿಲಿಂಬಿ- ಮಠದಕಣಿ ಕ್ರಾಸ್ ರೋಡ್ ನಲ್ಲಿ ನಡೆದಿದೆ. ವಿವೇಕಾನಂದ ಶೆಣೈ (63) ಎಂಬವರು ಈ ಕಾರನ್ನು ಚಲಾಯಿಸುತ್ತಿದ್ದು, ಕೋಟೆಕಣಿಯಿಂದ ಇಳಿಜಾರಿನ ರಸ್ತೆಯಲ್ಲಿ ತೆರಳುತ್ತಿರುವ ವೇಳೆ, ಲೇಡಿಹಿಲ್‌ನಿಂದ ಉರ್ವಾ ಸ್ಟೋರ್ಸ್ ಕಡೆಗೆ ಹೋಗುತ್ತಿದ್ದ ಹೋಂಡಾ ಆಕ್ಟಿವಾಕ್ಕೆ ಢಿಕ್ಕಿ ಹೊಡೆದ ಪರಿಣಾಮ, ಆಕ್ಟಿವಾದಲ್ಲಿದ್ದ

ಮಂಗಳೂರು: ಬ್ರೇಕ್ ಪೆಡಲ್ ಗೆ ಸಿಕ್ಕಿಹಾಕಿಕೊಂಡ ನೀರಿನ ಬಾಟಲ್| ನಿಯಂತ್ರಣ ತಪ್ಪಿದ‌ ಕಾರಿನಿಂದಾಗಿ ಸರಣಿ ಅಪಘಾತ Read More »