February 2022

ಮಂಗಳೂರು: ತಿಮಿಂಗಿಲದ ವಾಂತಿ ಮಾರಾಟಕ್ಕೆ ಯತ್ನ – ನಾಲ್ವರ ಬಂಧನ

ಮಂಗಳೂರು: ಅಂಬರ್ ಗ್ರೀಸ್ (ತಿಮಿಂಗಿಲದ ವಾಂತಿ) ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಲ್ಕು ಮಂದಿ ಆರೋಪಿಗಳನ್ನು ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜಪ್ಪಿನಮೊಗರು ಎಂಬಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಕೊಡಗು ಜಿಲ್ಲೆಯ ಭಾಗಮಂಡಲ ನಿವಾಸಿ ಜಾಬಿರ್ ಎಂ.ಎ. (35) ಮತ್ತು ಶಬಾದ್ ಎಲ್.ಕೆ. (27) ಹಾಗೂ ಕಾಂಞಂಗಾಡಿನ ಅಸೀರ್ (36) ಮತ್ತು ಶರೀಫ್ ಎನ್.(32) ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳಿಂದ 2.20 ಕೋಟಿ ರೂ. ಮೌಲ್ಯದ ಅಂಬರ್ ಗ್ರೀಸ್, 5 ಮೊಬೈಲ್, 1 ಸ್ವಿಫ್ಟ್ ಕಾರು […]

ಮಂಗಳೂರು: ತಿಮಿಂಗಿಲದ ವಾಂತಿ ಮಾರಾಟಕ್ಕೆ ಯತ್ನ – ನಾಲ್ವರ ಬಂಧನ Read More »

ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಲ್ಲಿರುವ ಉರ್ಫಿ ಜಾವೆದ್ – ಪದೇ ಪದೇ ಮೈ ಕಾಣುವ ಬಟ್ಟೆ ಧರಿಸುವ ಉರ್ಫಿ

ಮುಂಬೈ: ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಲ್ಲಿರುವ ಉರ್ಫಿ ಜಾವೆದ್ ತಮ್ಮ ಉಡುಪುಗಳ ಮೂಲಕವಾಗಿ ಆಗಾಗ ಪಡ್ಡೆ ಹುಡುಗರ ನಿದ್ದೆಗೆ ಕಿಚ್ಚು ಹಚ್ಚಿಸುತ್ತಾರೆ. ಇದೀಗ ಅವರು ತೊಟ್ಟಿರುವ ಬಟ್ಟೆಯನ್ನು ನೋಡಿದ ನೆಟ್ಟಿಗರು, ಉರ್ಫಿದು ಇದ್ಯಾವ ಸ್ಟೈಲ್ ಎಂದು ತಲೆಗೆ ಹುಳ ಬಿಟ್ಟುಕೊಂಡಿದ್ದಾರೆ. 2016ರಲ್ಲಿ ಹಿಂದಿ ಕಿರುತೆರೆಗೆ ಕಾಲಿಟ್ಟ ನಟಿ ಉರ್ಫಿ ಬಿಗ್‍ಬಾಸ್ ಓಟಿಟಿಯಲ್ಲಿ ಕಾಣಿಸಿಕೊಂಡ ನಂತರ ಸೆನ್ಸೇಷನ್ ಕ್ರಿಯೇಟ್ ಮಾಡುವ ಮೂಲಕವಾಗಿ ಸೋಶಿಯಲ್‍ಮೀಡಿಯಾ ಸ್ಟಾರ್ ಆಗಿದ್ದಾರೆ. ದಿನಕ್ಕೊಂದು ವಿಭಿನ್ನ ಡ್ರೆಸ್ ಧರಿಸಿ, ಕ್ಯಾಮೆರಾ ಎದುರು ಕಾಣಿಸಿಕೊಳ್ಳುವ ಉರ್ಫಿ ಏನ್

ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಲ್ಲಿರುವ ಉರ್ಫಿ ಜಾವೆದ್ – ಪದೇ ಪದೇ ಮೈ ಕಾಣುವ ಬಟ್ಟೆ ಧರಿಸುವ ಉರ್ಫಿ Read More »

ರೈತರು ವಿದ್ಯುತ್ ಬಿಲ್ ಪಾವತಿಸುವ ಅಗತ್ಯವಿಲ್ಲ: ಗೃಹಸಚಿವ ಅಮಿತ್ ಶಾ ಭರವಸೆ

ಲಕ್ನೋ: ಬಿಜೆಪಿ ಪುನಃ ಅಧಿಕಾರಕ್ಕೆ ಬಂದರೆ ಮುಂದಿನ 5 ವರ್ಷಗಳ ಕಾಲ ರೈತರು ವಿದ್ಯುತ್ ಬಿಲ್‌ನ್ನು ಪಾವತಿಸುವ ಅವಶ್ಯಕತೆಯಿಲ್ಲ ಎಂದು ಗೃಹಸಚಿವ ಅಮಿತ್ ಶಾ ಭರವಸೆ ನೀಡಿದರು. ಉತ್ತರಪ್ರದೇಶದ ದಿಬಿಯಾಪುರದ ರ‍್ಯಾಲಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತನ್ನಿ, ಮಾರ್ಚ್ 18ರಂದು ಉಚಿತ ಗ್ಯಾಸ್ ಸಿಲಿಂಡರ್‌ಗಳು ನಿಮ್ಮ ಮನೆಗೆ ತಲುಪುತ್ತವೆ. ಇಲ್ಲದಿದ್ದರೆ ಮುಂದಿನ ಐದು ವರ್ಷಗಳವರೆಗೆ ರೈತರು ವಿದ್ಯುತ್ ಬಿಲ್ ಪಾವತಿಸಬೇಕಾಗುತ್ತದೆ ಎಂದರು. ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುವ ಬಗ್ಗೆ ವಿಶ್ವಾಸವನ್ನು

ರೈತರು ವಿದ್ಯುತ್ ಬಿಲ್ ಪಾವತಿಸುವ ಅಗತ್ಯವಿಲ್ಲ: ಗೃಹಸಚಿವ ಅಮಿತ್ ಶಾ ಭರವಸೆ Read More »

ಸುಳ್ಯ : ರಬ್ಬರ್ ಸಾಗಾಟದ ಲಾರಿ ಪಲ್ಟಿ

ಸುಳ್ಯ : ತಾಲೂಕಿನ ಬೆಳ್ಳಾರೆ ಸಮೀಪದ ಪಂಜಿಗಾರು ಎಂಬಲ್ಲಿ ಲಾರಿ ಪಲ್ಟಿಯಾಗಿ ಚಾಲಕ ಗಂಭೀರ ಗಾಯಗೊಂಡ ಘಟನೆ ಇಂದು ಸಂಜೆ ನಡೆದಿದೆ. ಬೆಳ್ಳಾರೆಯಿಂದ ಪಂಜ ಕಡೆ ರಬ್ಬರ್ ಲೋಡ್ ಮಾಡಿಕೊಂಡು ಹೋಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಲಾರಿ ಎಂಬಲ್ಲಿ ಪಲ್ಟಿಯಾಗಿದೆ.ಪಲ್ಟಿಯಾದ ರಭಸಕ್ಕೆ ಲಾರಿ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಲಾರಿಯಲ್ಲಿದ್ದ ರಬ್ಬರ್ ಶೀಟ್ ಗಳು ಎಲ್ಲಾ ಕಡೆ ಚದುರಿ ಹೋಗಿದೆ. ಚಾಲಕ ಗಂಭೀರ ಗಾಯಗೊಂಡಿದ್ದು ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿದೆ. ಘಟನಾ ಸ್ಥಳಕ್ಕೆ ಬೆಳ್ಳಾರೆ ಠಾಣಾ ಎಸ್.ಐ ಆಂಜನೇಯ ರೆಡ್ಡಿ ಹಾಗೂ

ಸುಳ್ಯ : ರಬ್ಬರ್ ಸಾಗಾಟದ ಲಾರಿ ಪಲ್ಟಿ Read More »

ಹಿಜಾಬ್ ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ| ಸುದೀರ್ಘ ವಾದ-ಪ್ರತಿವಾದದ ನಿರೀಕ್ಷೆ

ಸಮಗ್ರ ನ್ಯೂಸ್ ಡೆಸ್ಕ್: ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ತ್ರಿಸದಸ್ಯಪೀಠ ಮತ್ತೆ ಮುಂದೂಡಿದೆ. ಅರ್ಜಿದಾರರ ಪರ ವಕೀಲ ದೇವದತ್ ಕಾಮತ್ ಅವರ ಸುದೀರ್ಘ ವಾದ ಮಂಡನೆ ಆಲಿಸಿದ ಸಿಜೆ ರಿತುರಾಜ್ ಅವಸ್ತಿ, ನ್ಯಾ.ಕೃಷ್ಣ ದೀಕ್ಷಿತ್ ಹಾಗೂ ನ್ಯಾ.ಖಾಜಿ ಜೈಬುನ್ನೀಸಾ ಮೊಹಿದ್ದೀನ್ ನೇತೃತ್ವದ ತ್ರಿಸದಸ್ಯ ಪೀಠ, ವಿಚಾರಣೆಯನ್ನು ನಾಳೆ ಮಧ್ಯಾಹ್ನ 2:30ಕ್ಕೆ ಮುಂದೂಡಿದೆ. ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಹಲವು ವಕೀಲರು ವಾದ ಮಂಡನೆಗೆ ಹಕ್ಕು ಮಂಡಿಸಿದ್ದಾರೆ. ಯುವತಿಯ ಎರಡನೇ ಅರ್ಜಿ ಸಂಬಂಧ ಹಿರಿಯ ವಕೀಲ ರವಿವರ್ಮಕುಮಾರ್

ಹಿಜಾಬ್ ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ| ಸುದೀರ್ಘ ವಾದ-ಪ್ರತಿವಾದದ ನಿರೀಕ್ಷೆ Read More »

ದೇವಸ್ಥಾನಗಳಲ್ಲಿ ಗಂಟೆ ಹೊಡೆಯುವಂತಿಲ್ಲ| ಸರ್ಕಾರದಿಂದ ಘಂಟಾನಾದಕ್ಕೆ ಬ್ರೇಕ್|

ಸಮಗ್ರ ನ್ಯೂಸ್ ಡೆಸ್ಕ್: ಮಸೀದಿಗಳ ಧ್ವನಿ ವರ್ಧಕ ಬಳಕೆಗೆ ಸುಪ್ರೀಂ ಕೋರ್ಟ್ ಸೂಚನೆ ಹಿನ್ನಲೆಯಲ್ಲಿ ಅನೇಕ ಕಡೆಗಳಲ್ಲಿ ಬ್ರೇಕ್ ಹಾಕಲಾಗಿದ್ದು, ಅದರ ಮುಂದುವರಿದ ಭಾಗವಾಗಿ ರಾಜ್ಯ ಸರ್ಕಾರ ವಿವಿಧ ದೇವಸ್ಥಾನಗಳಲ್ಲಿನ ಗಂಟೆ, ಜಾಗಟೆ, ಧ್ವನಿ ವರ್ಧಕ ಬಳಸದಂತೆ ನಿರ್ಬಂಧ ವಿಧಿಸಿದೆ. ಈ ಕುರಿತಂತೆ ಧಾರ್ಮಿಕ ದತ್ತಿ ಇಲಾಖೆ ಬೆಂಗಳೂರಿನ ಹಲವು ದೇವಸ್ಥಾನಗಳಿಗೆ ನೋಟಿಸ್ ಜಾರಿ ಮಾಡಿದ್ದು, ದೇವಸ್ಥಾನಗಳಲ್ಲಿ ನಿಗಧಿತ ಡೆಸಿಬಲ್ ಶಬ್ದಕ್ಕಿಂತ, ಹೆಚ್ಚಿನ ಶಬ್ದ ಹೊರಸೂಸುವಂತ ಗಂಟೆ, ಜಾಗಟೆ, ಧ್ವನಿವರ್ಧಕ ಬಳಸದಂತೆ ಸೂಚಿಸಿದೆ. ದೇವಸ್ಥಾನಗಳಲ್ಲಿನ ಮಂಗಳಾರತಿ ಸಂದರ್ಭದಲ್ಲಿ

ದೇವಸ್ಥಾನಗಳಲ್ಲಿ ಗಂಟೆ ಹೊಡೆಯುವಂತಿಲ್ಲ| ಸರ್ಕಾರದಿಂದ ಘಂಟಾನಾದಕ್ಕೆ ಬ್ರೇಕ್| Read More »

ಕಾಸರಗೋಡು: ಕೊಲೆ ಪ್ರಕರಣದ ಆರೋಪಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಕೊಲೆ ಸೇರಿದಂತೆ ಹಲವು ಪ್ರಕರಣದ ಆರೋಪಿ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕಾಸರಗೋಡಿನಲ್ಲಿ ನಡೆದಿದೆ. ಅಣ೦ಗೂರು ಜೆ. ಪಿ ಕಾಲನಿಯ ಜ್ಯೋತಿಷ್ (35) ಮೃತಪಟ್ಟವನು. ಫೆ.15ರ ಇಂದು ಬೆಳಿಗ್ಗೆ ತನ್ನ ಮನೆ ಸಮೀಪದ ಮರವೊಂದರ ರೆಂಬೆಯಲ್ಲಿ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ನಿನ್ನೆ ರಾತ್ರಿ ಮನೆಯಲ್ಲಿ ಮಲಗಿದ್ದ ಜ್ಯೋತಿಷ್ ಇಂದು ಬೆಳಿಗ್ಗೆ ಮನೆಯವರು ಗಮನಿಸಿದಾಗ ನಾಪತ್ತೆಯಾಗಿದ್ದು, ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಜ್ಯೋತಿಷ್ ಮೇಲೆ ಬಂಗ್ರಗುಡ್ಡೆ ಯ ಸಿನಾನ್, ಸೂರ್ಲು ವಿನ

ಕಾಸರಗೋಡು: ಕೊಲೆ ಪ್ರಕರಣದ ಆರೋಪಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ Read More »

ಹುಟ್ಟುಹಬ್ಬದಂದೇ ಬಿಸಿ ಸಾಂಬಾರ್ ಪಾತ್ರೆಗೆ ಬಿದ್ದು ಬಾಲಕಿ ಸಾವು

ಹೈದರಾಬಾದ್: ಹುಟ್ಟುಹಬ್ಬದ ದಿನ ಬಿಸಿ ಸಾಂಬಾರಿನ ಪಾತ್ರೆಗೆ ಬಿದ್ದು ಎರಡು ವರ್ಷದ ಬಾಲಕಿ ಸಾವನ್ನಪ್ಪಿರುವ ದುರಂತ ಘಟನೆ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಕಲಗಾರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಶಿವ ಮತ್ತು ಭಾನುಮತ್ ಅವರ ಪುತ್ರಿ ತೇಜಸ್ವಿ ತನ್ನ ಹುಟ್ಟುಹಬ್ಬದ ವೇಳೆ ಮನೆಯ ಮುಂದೆ ಆಟವಾಡುತ್ತಿದ್ದಳು. ಆಕೆಯ ಪೋಷಕರು ಅತಿಥಿಗಳನ್ನು ಭೇಟಿ ಮಾಡಲು ಮತ್ತು ಊಟ ಬಡಿಸಲು ಹೋದಾಗ, ತೇಜಸ್ವಿ ಅಡುಗೆಮನೆಗೆ ಹೋಗಿ ಕುರ್ಚಿ ಮೇಲೆ ಹತ್ತಿ ಆಟವಾಡುತ್ತಿದ್ದ ವೇಳೆ ಬಿಸಿ ಸಾಂಬಾರ್ ತುಂಬಿದ ಪಾತ್ರೆಯಲ್ಲಿ ಬಿದ್ದಿದ್ದಾಳೆ.

ಹುಟ್ಟುಹಬ್ಬದಂದೇ ಬಿಸಿ ಸಾಂಬಾರ್ ಪಾತ್ರೆಗೆ ಬಿದ್ದು ಬಾಲಕಿ ಸಾವು Read More »

ಶಿಕ್ಷಣಕ್ಕಿಂತ ಧರ್ಮವೇ ಮುಖ್ಯ -ಇಂದು ಕೂಡ ಪರೀಕ್ಷೆ ಬಹಿಷ್ಕರಿಸಿದ ವಿದ್ಯಾರ್ಥಿನಿಯರು

ಶಿವಮೊಗ್ಗ: ನಿನ್ನೆ ಕೆಲ ವಿದ್ಯಾರ್ಥಿನಿಯರು ನಮಗೆ ಪರೀಕ್ಷೆ ಮುಖ್ಯವಲ್ಲ, ಹಿಜಬ್ ಮುಖ್ಯ ಎಂದು ಹೇಳಿ ತರಗತಿಯಿಂದ ಹೋರಟಿದ್ದ ಹಿಜಬ್ ವಿವಾದ ಇಂದು ಸಹ ಮುಂದುವರಿದಿದ್ದು, ಇಬ್ಬರು ವಿದ್ಯಾರ್ಥಿನಿಯರು ತರಗತಿಯನ್ನು ಬಹಿಷ್ಕರಿಸಿದ್ದಾರೆ. ಶಿವಮೊಗ್ಗದ ಬಿ.ಎಚ್.ರಸ್ತೆಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಇಂದು ಸಹ 10 ನೇ ತರಗತಿಗೆ ತಾಲೂಕು ಮಟ್ಟದ ಪೂರ್ವಭಾವಿ ಸಿದ್ಧತಾ ಪರೀಕ್ಷೆ ಇತ್ತು. ವಿಜ್ಞಾನ ಪರೀಕ್ಷೆ ನಡೆಯುತ್ತಿದೆ. ಹಿಜಬ್, ಬುರ್ಖಾ ಧರಿಸಿ 9 ಹಾಗೂ 10ನೇ ತರಗತಿ ವಿದ್ಯಾರ್ಥಿನಿ ಬಂದಿದ್ದರು. ಆದರೆ ಹಿಜಬ್, ಬುರ್ಖಾ ಧರಿಸಿ ತರಗತಿಯಲ್ಲಿ

ಶಿಕ್ಷಣಕ್ಕಿಂತ ಧರ್ಮವೇ ಮುಖ್ಯ -ಇಂದು ಕೂಡ ಪರೀಕ್ಷೆ ಬಹಿಷ್ಕರಿಸಿದ ವಿದ್ಯಾರ್ಥಿನಿಯರು Read More »

ನಾಡೋಜ ಚೆನ್ನವೀರ ಕಣವಿ ಆರೋಗ್ಯ ಸ್ಥಿತಿ ಗಂಭೀರ

ಸಮಗ್ರ ನ್ಯೂಸ್ ಡೆಸ್ಕ್: ಕನ್ನಡದ ಹಿರಿಯ ಕವಿ , ನಾಡೋಜ ಚೆನ್ನವೀರ ಕಣವಿ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಧಾರವಾಡದ ಎಸ್ ​ ಡಿಎಂ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ​ ಬಿಡುಗಡೆ ಮಾಡಲಾಗಿದೆ . ಕಣವಿಯವರು ಇನ್ನೂ ಕೂಡ ನಿದ್ರಾಮಂಪರಿನಲ್ಲಿಯೇ ಇದ್ದು, ರಕ್ತದೊತ್ತಡ ಹೆಚ್ಚಾಗಿದೆ ಎಂದು ಎಸ್​ಡಿಎಂ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್​ ಬಿಡುಗಡೆ ಮಾಡಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಧಾರವಾಡದ ಸತ್ತೂರಿನ‌ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವೈದ್ಯಕೀಯ ಮಹಾವಿದ್ಯಾಲಯದ ಆಸ್ಪತ್ರೆಗೆ ಭೇಟಿ ನೀಡಿ, ಅಲ್ಲಿ ಚಿಕಿತ್ಸೆ

ನಾಡೋಜ ಚೆನ್ನವೀರ ಕಣವಿ ಆರೋಗ್ಯ ಸ್ಥಿತಿ ಗಂಭೀರ Read More »