Ad Widget .

ಮಂಗಳೂರು: ಪ್ರಿಯಕರನ ಜೊತೆ ಮೊಬೈಲ್ ಸಂಭಾಷಣೆ ನಡೆಸುತ್ತಲೇ ಯುವತಿ ಆತ್ಮಹತ್ಯೆಗೆ ಶರಣು

Ad Widget . Ad Widget .

ಸಮಗ್ರ ನ್ಯೂಸ್: ಮೊಬೈಲ್ ಸಂಭಾಷಣೆ ನಡೆಸುತ್ತಾ ಯುವತಿಯೋರ್ವಳು ನೇಣುಬಿಗಿದು ಸಾವನ್ನಪ್ಪಿರುವ ಘಟನೆ ಮಂಗಳೂರು ಕುಂಪಲ ಸಮೀಪದ ಬಲ್ಯ ಎಂಬಲ್ಲಿ ಸಂಭವಿಸಿದೆ.

Ad Widget . Ad Widget .

ನೇಣುಬಿಗಿದು ಸಾವನ್ನಪ್ಪಿರುವ ಯುವತಿಯನ್ನು ಕುಂಪಲ ಬಲ್ಯ ನಿವಾಸಿ ಹರ್ಷಿತಾ(21) ಎಂದು ಗುರುತಿಸಲಾಗಿದೆ. ಮನೆಯ ಕೊಠಡಿಯಲ್ಲಿ ಫ್ಯಾನಿಗೆ ನೇಣುಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಹರ್ಷಿತಾ ಇಂದು ಬೆಳಿಗ್ಗೆ ಪತ್ತೆಯಾಗಿದ್ದಾಳೆ.

ಪ್ರಿಯಕರನೊಂದಿಗೆ ವಿರಸಗೊಂಡು ಮೊಬೈಲ್ ಸಂಭಾಷಣೆಯಲ್ಲಿದ್ದ ನಡುವೆ ನೇಣುಹಾಕಿಕೊಂಡಿದ್ದು, ತಕ್ಷಣ ಸ್ಥಳಕ್ಕಾಗಮಿಸಿದ ಸ್ಥಳೀಯ ನಿವಾಸಿ ಪ್ರಿಯಕರ ಆಕೆಯನ್ನು ನೇಣಿನ ಕುಣಿಕೆಯಿಂದ ಕೆಳಗಿಳಿಸಿ ದೇರಳಕಟ್ಟೆ ಆಸ್ಪತ್ರೆಗೆ ದಾಖಲಿಸಿದ್ದಾನೆ. ಆದರೆ ಇಂದು ಬೆಳಿಗ್ಗೆ ಹರ್ಷಿತಾ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.

ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *