Ad Widget .

ಪಕ್ಷ ಅಧಿಕಾರದಲ್ಲಿದ್ದರೂ ಹಿಂದೂ ಕಗ್ಗೊಲೆಗಳು ನಡೆಯುತ್ತಿವೆ

ಸಮಗ್ರ ವಿಶೇಷ: ಭಾನುವಾರ ರಾತ್ರಿವರೆಗೂ ಶಿವಮೊಗ್ಗ ತಣ್ಣಗಾಗಿದ್ದ ಮಲೆನಾಡು ಅಕ್ಷರಶಃ ಬೂದಿ ಮುಚ್ಚಿದ ಕೆಂಡದಂತಾಗಿದೆ. ಹಚ್ಚಹಸಿರಿನ ಮಲೆನಾಡಿನಲ್ಲಿ ಕೆಂಪು ರಕ್ತ ಚೆಲ್ಲಿದೆ. ಹಿಂದೂ ಕಾರ್ಯಕರ್ತನೆಂದು ಗುರುತಿಸಿಕೊಂಡಿದ್ದ ವ್ಯಕ್ತಿಯೊಬ್ಬ ಶಿವಮೊಗ್ಗದ ರಸ್ತೆ ಬದಿಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡಿ ಉಸಿರು ಚೆಲ್ಲಿದ್ದಾನೆ. ಇದು ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸೀಗೆ ಹಳ್ಳಿಯಲ್ಲಿ ನಡೆದ ಭೀಕರ ಘಟನೆ. ಭಜರಂಗ ದಳ ಕಾರ್ಯಕರ್ತ ಹರ್ಷ ಎಂಬಾತನನ್ನು ರಾತ್ರಿ 9 ಗಂಟೆಗೆ ಶಿವಮೊಗ್ಗದ ರಸ್ತೆ ಬದಿಯಲ್ಲಿ ದುಷ್ಕರ್ಮಿಗಳ ತಂಡವೊಂದು ಇರಿದು ಕೊಲೆ ಮಾಡಿ ಎಸ್ಕೇಪ್ ಆಗಿದ್ದು ಮಾತ್ರವಲ್ಲದೆ ಕೊಲೆಯಾಗಿರುವ ವ್ಯಕ್ತಿ ರಸ್ತೆಯಲ್ಲಿ ಬಿದ್ದು ಜೀವ ಉಳಿಸಿಕೊಳ್ಳುವುದಕ್ಕೆ ಅಂಗಾಲಾಚುವ ದೃಶ್ಯವನ್ನು ವಾಟ್ಸಪ್ ನಲ್ಲಿ ಸ್ಟೇಟಸ್ ಹಾಕಿ ಅಮಾನವೀಯತೆ ಮೆರೆದಿರುವುದು ಕಂಡರೆ ರಕ್ತ ಮತ್ತಷ್ಟು ಕುದಿಯಲಾರಂಭಿಸುತ್ತದೆ. ಗಾಯಗೊಂಡ ಹರ್ಷ ಸ್ಥಳದಲ್ಲೆ ಕುಸಿದು ಬಿದ್ದು ಜೀವನ್ಮರಣ ಹೋರಾಟದಲ್ಲಿ ರಕ್ತದ ಓಕೋಳಿಯಲ್ಲಿ ಒದ್ದಾಡಿ ಉಸಿರು ಚೆಲ್ಲುವಾಗ ಖುಷಿ ಪಡುವವರೆಲ್ಲ ರಕ್ತ ಪಿಶಾಚಿಗಳೇ ಸರಿ.

Ad Widget . Ad Widget .

ಊಟ ಮಾಡಿ ಬರುವೆ ಎಂದು ಮನೆಯಿಂದ ಹೊರಗೆ ಹೋದ ಮಗ ಮತ್ತೆ ಬಂದಿದ್ದು ಹೆಣವಾಗಿ. ಈ ಕೊಲೆಯಾಗಿರುವುದು ಎಲ್ಲೊ ಒಂದು ನಿರ್ಜನ ಪ್ರದೇಶದಲ್ಲಿ ಅಲ್ಲ, ಊರು ಮದ್ಯದಲ್ಲಿ ಆಗಿರುವ ಭೀಕರ ಕೊಲೆ, ಗೃಹ ಸಚಿವರ ಜಿಲ್ಲೆಯಲ್ಲೇ ನಡೆದ ಬರ್ಭರ ಹತ್ಯೆ ಇದಾಗಿದ್ದು ಮಾಜಿ ಮುಖ್ಯ ಮಂತ್ರಿಗಳ ಊರಿನಲ್ಲಿ ಕಿರಾತಕರ ರಕ್ತದಾಹಕ್ಕೆ ಭಜರಂಗದಳ ಕಾರ್ಯಕರ್ತನೊಬ್ಬನ ಬಲಿಯಾಗಿದೆ ಎಂದರೆ ಕಾನೂನು ಸುವ್ಯವಸ್ಥೆ ಇಷ್ಟೊಂದು ಹದಗೆಟ್ಟಿದೆಯೇ?. ಕಾಂಗ್ರೆಸ್ ಸರಕಾರವಿದ್ದರೆ ಹಿಂದು ಕಾರ್ಯಕರ್ತರ ಹತ್ಯೆಯಾಗುತ್ತದೆ ಅದಕ್ಕಾಗಿ ಬಿಜೆಪಿಯನ್ನು ಅಧಿಕಾರಕ್ಕೆ ತನ್ನಿ ಎಂದವರು ಅಧಿಕಾರ ಸಿಕ್ಕಿದ ಮೇಲೆ ನಿದ್ದೆ ಮಂಪರಿನಲ್ಲಿದ್ದಾರೆ.

Ad Widget . Ad Widget .

ಬಿಜೆಪಿ ಸರಕಾರವಿದ್ದರೂ ಹಿಂದು ಕಾರ್ಯಕರ್ತರ ಕೊಲೆ ಪ್ರಕರಣ ತುಂಬಿಕೊಂಡು ರಾಜ್ಯದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣ ಮಾಡಿದೆ. ಸಂಘ ಪರಿವಾರದವರ ಕೊಲೆ ನಡೆದಾಗಲೆಲ್ಲ ಕಾಂಗ್ರೆಸ್ ಸರಕಾರವನ್ನು ಬೊಟ್ಟು ಮಾಡಿ ತೋರಿಸುತ್ತಿದ್ದ ಬಿಜೆಪಿಗರು ಹಿಂದುಗಳ ರಕ್ಷಣೆಗೆ ನಿಲ್ಲುವ ಶಕ್ತಿಯನ್ನು ಕಳೆದುಕೊಂಡಿದ್ದಾರೆ. ಹರ್ಷ ಕೊಲೆ ಖಂಡಿಸಿ ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧೆಡೆ ಪ್ರತಿಭಟನೆಗಳು ಭುಗಿಲೆದ್ದಿದೆ. ಹಿಂದೂ ಕಾರ್ಯಕರ್ತನ ಹತ್ಯೆಗೆ ಆಕ್ರೋಶದ ಕಟ್ಟೆ ಒಡೆದಿದೆ.

ರಾಜ್ಯದಲ್ಲಿ ಬಿಜೆಪಿ ಸರಕಾರವಿದೆ. ಕೇಂದ್ರದಲ್ಲಿಯೂ ಆಡಳಿತ ಚುಕ್ಕಾಣಿ ಹಿಡಿದಿದೆ, ರಾಜ್ಯದಲ್ಲಿ ಸಾಲು ಸಾಲು ಹಿಂದೂ ಕಾರ್ಯಕರ್ತರ ಹತ್ಯೆಗಳು ನಡೆಯುತ್ತಿವೆ. ಅಧಿಕಾರದಲ್ಲಿರುವ ರಾಜಕೀಯ ನಾಯಕರು ಸಾವಿನಲ್ಲೂ ರಾಜಕೀಯ ಲಾಭ ಪಡೆದುಕೊಳ್ಳುವುದರಲ್ಲೆ ಬ್ಯುಸಿಯಾಗಿ ಬಿಟ್ಟಿದ್ದಾರೆ. ಪ್ರತಿಯೊಂದು ವಿಚಾರದಲ್ಲೂ ರಾಜಕೀಯ ಲೆಕ್ಕಹಾಕುವ ನಿಮ್ಮಂತ ನಾಯಕರು ಅಧಿಕಾರದ ಗದ್ದುಗೆ ಏರಿದರೇನು ಪ್ರಯೋಜನ?. ಹಿಂದೂ ಸಮುದಾಯಕ್ಕೇನಾದರೂ ನಿಮ್ಮಿಂದ ಒಳಿತಾಗಿದೆಯೆ..!?

ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆಗಳು ನಡೆದಾಗ ಕಾಂಗ್ರೆಸ್ ಸರಕಾರದತ್ತ ಕೈತೋರಿಸುತ್ತಿದ್ದ ಬಿಜೆಪಿ ನಾಯಕರು ರಾಜೀನಾಮೆ ಕೊಟ್ಟು ಮನೆಯಲ್ಲಿ ಕೂರುವುದೇ ಒಳಿತು. ಕೈಲಾಗದವನು ಮೈ ಪರಚಿಕೊಂಡ ಎಂಬಂತೆ ವರ್ತಿಸುವವರು ಅಧಿಕಾರದಲ್ಲಿದ್ದು ಏನು ಪ್ರಯೋಜನ?.

ಹೇಳಿಕೆ ಕೊಟ್ಟು ಕೊಂಡೆ ಕಾಲ ಕಳೆಯುವ ಸರಕಾರ ನಿಮ್ಮದು. ದೇಶಕ್ಕಾಗಿ ಹೋರಾಡುತ್ತಿದ್ದಾರೆ, ಧರ್ಮಕ್ಕಾಗಿ ಪ್ರಾಣತ್ಯಾಗ ಮಾಡುತ್ತಾರೆ ಎಂದರೆ ಅದಕ್ಕಾಗಿ ಮೊದಲ ಸಾಲಿನಲ್ಲಿ ಬಂದು ನಿಲ್ಲುವವರು ಹಿಂದೂ ಸಮುದಾಯದ ಬಡವರ ಮನೆ ಮಕ್ಕಳು, ಮನೆಗೆ ಆಧಾರವಾಗಿದ್ದವರು ಮಾತ್ರ. ಅಂತವರೆ ಹಂತಕರ ಏಟಿಗೆ ಬಲಿಯಾಗುತ್ತಾರೆ. ಅವರ ಸಾವಿಗೆ ನ್ಯಾಯ ಒದಗಿಸಿಕೊಡುವ ಕೆಲಸವನ್ನು ಮಂತ್ರಿಮಹನೀಯರು ನೀವು ಮಾಡುತ್ತಿಲ್ಲ ಎಂದರೆ ಇದಕ್ಕಿಂತ ಬೇಸರದ ಸಂಗತಿಗಳು ಬೇರೆ ಇದೆಯೆ?.

ಬಂಟ್ವಾಳದ ಶರತ್ ಮಡಿವಾಳ ಹತ್ಯೆ, ರುದ್ರೇಶ್ ಹತ್ಯೆ ಪ್ರಕರಣ, ಪರೇಶ್ ಮೇಸ್ತ ಹತ್ಯೆ ಪ್ರಕರಣ ಹೀಗೆ ಕೆಲವು ಹಿಂದು ಕಾರ್ಯಕರ್ತರ ಹತ್ಯೆ ಪ್ರಕರಣದಲ್ಲಿ ಭಾಗಿಯಾದ ಹಂತಕರಿಗೆ ಸರಿಯಾದ ಶಿಕ್ಷೆಯಾಗುತ್ತಿದ್ದರೆ ಇದೀಗ ಇಂತಹ ರೀತಿಯಲ್ಲಿ ರಕ್ತ ಹೀರುವ ಕೃತ್ಯಗಳು ನಡೆಯದಂತೆ ತಡೆಯಬಹುದಿತ್ತು. ಅಂದು ಹಂತಕರಿಗೆ ಸರಿಯಾದ ಶಿಕ್ಷೆಯಾಗುತ್ತಿದ್ದರೆ ಮತ್ತೆ ಮತ್ತೆ ಬಾಲ ಬಿಚ್ಚುತ್ತಿರಲಿಲ್ಲ. ಶಿವಮೊಗ್ಗದಲ್ಲಿ ಸಂಘ ಪರಿವಾರದ ಕಾರ್ಯಕರ್ತನ ಹತ್ಯೆಯಾಗುತ್ತಿರಲಿಲ್ಲ. ಶಾಂತವಾಗಿದ್ದ ಶಿವಮೊಗ್ಗದಲ್ಲಿ ರಕ್ತ ಹರಿಯುತ್ತಿರಲಿಲ್ಲ. ಓಟಿಗಾಗಿ ಹಿಂದುಗಳ ಓಲೈಕೆ ಮಾಡುವ ಸರಕಾರ, ಅಧಿಕಾರ ಸಿಕ್ಕ ಮೇಲೆ ಹಿಂದುಗಳನ್ನೆ ಮರೆತುಬಿಡುವ ಯೋಜನೆಗಳು ನಿಮ್ಮ ಸರಕಾರದಲ್ಲಿರುವುದು ಎಂದು ನೇರವಾಗಿ ತೋರಿಸಿಕೊಡುತ್ತೀರಲ್ಲವೆ?.

ಒಂದೊಂದು ಘಟನೆ ನಡೆದಾಗಲೂ ಒಂದೊಂದು ರೀತಿಯ ಹೇಳಿಕೆಗಳು ನಿಮ್ಮಿಂದ ಕೇಳುತ್ತಿದ್ದೇವೆ. ದುಷ್ಕರ್ಮಿಗಳು ಸಂಘ ಪರಿವಾರದವರನ್ನು ಕೊಚ್ಚಿ ಕೊಲ್ಲುತ್ತಲೇ ಇದ್ದಾರೆ. ಈ ಬಗ್ಗೆ ಪ್ರಶ್ನೆ ಮಾಡಿದರೆ ಎನ್ ಐ ಎ ತನಿಖೆಗೆ ಕೊಡುವ ಭರವಸೆ ನೀಡಿ ಸುಮ್ಮನಾಗುತ್ತೀರಿ. ಎರಡು ಕಡೆನೂ ಒಂದೇ ಪಕ್ಷದ ಸರಕಾರವಿದೆ. ಹಾಗಾದರೆ ಮತ್ಯಾಕೆ ತಡ.! ಇಲ್ಲಿ ವರೆಗೆ ನಡೆದ ಒಂದೇ ಒಂದು ಹಿಂದೂ ಕಾರ್ಯಕರ್ತನ ಸಾವಿಗೆ ಸರಿಯಾದ ನ್ಯಾಯ ಒದಗಿಸಿಕೊಟ್ಟಿದ್ದೀರಾ. ಇಲ್ಲ. ಯಾಕೆಂದರೆ ಇದು ಓಟಿಗಾಗಿ ಮಾಡುವ ನಾಟಕ ರೀತಿಯ ಭರವಸೆಯ ಮಾತುಗಳು ಅಷ್ಟೇ ವಿನಃ ಕಾರ್ಯರೂಪಕ್ಕೆ ತರುವ ಖಡಕ್ ನಿರ್ಧಾರವಲ್ಲ ಅನ್ನೋದು ಪ್ರತಿಯೊಬ್ಬ ಹಿಂದೂವಿಗೂ ಈಗ ಅರಿವಾಗಿದೆ. ಸರಕಾರ ಯಾವುದೇ ಇರಲಿ, ನ್ಯಾಯಾಂಗದ ಪಾರದರ್ಶಕದ ಮೇಲೆ, ಪೋಲಿಸ್ ತನಿಖೆಯ ಮೇಲೆ ಜನ ನಂಬಿಕೆ ಕಳೆದುಕೊಳ್ಳುವ ಮಟ್ಟಕೆ ಹೋಗಿದ್ದಾನೆ. ಇದಕ್ಕೆ ಕಾರಣ ಅಧಿಕಾರಕ್ಕಾಗಿ ಸುಳ್ಳು ಭರವಸೆ ಕೊಡುವ ನಿಮ್ಮಂತ ನಾಯಕರು.

ಈ ಹಿಂದೆ ಹಿಂದೂ ಕಾರ್ಯಕರ್ತರ ಕೊಲೆ ನಡೆದಾಗಲೂ ರಾಷ್ಟೀಯ ತನಿಖಾದಳತ್ತ ಕೈತೋರಿಸಿ ಪುಂಗಿಯ ಶಬ್ದವನ್ನು ಕೇಳಿ ಕೇಳಿ ಕಿವಿಯಲ್ಲಿ ರಕ್ತ ಬರುತ್ತಿದೆ. ಚುಣಾವಣೆಗಳು ಹತ್ತಿರವಾಗುತ್ತಿದ್ದಂತೆ ಅಮಾಯಕರ ಕಗ್ಗೊಲೆಗಳು ನಡೆಯುತ್ತನೆ ಇರುತ್ತವೆ. ದುಷ್ಕರ್ಮಿಗಳ ದುಷ್ಕೃತ್ಯಕ್ಕೆ ಅಮಾಯಕರು ಬಲಿಯಾಗುತ್ತಿರುವಾಗ ಕ್ಯಾಮರ ಮುಂದೆ ನಿಂತು ಮೊಸಳೆ ಕಣ್ಣೀರು ಹಾಕಿ ಟೊಳ್ಳು ಭರವಸೆ ನೀಡಿ ಸುಮ್ಮನಿರುವುದು ಸಮಂಜಸವಲ್ಲ‌.
ಈಗ ನಡೆದ ಹರ್ಷನ ಸಾವಿನಿಂದ ನೊಂದಿರುವ ಪ್ರತಿಯೊಂದು ಜೀವಕ್ಕೂ ನೆಮ್ಮದಿ ಸಿಗಬೇಕೆಂದರೆ ಈ ಸಾವಿಗೆ ಸರಿಯಾದ ನ್ಯಾಯ ಒದಗಿಸಿಕೊಡುವುದರ ಮೂಲಕ ಮಾತ್ರ ಸಾಧ್ಯ.

ಹರೀಶ್ ಪುತ್ತೂರು
ಯುವ ಬರಹಗಾರರು

Leave a Comment

Your email address will not be published. Required fields are marked *