Ad Widget .

ಮೈಸೂರು: ಕೊಟ್ಟ ಕಾಣಿಕೆಯನ್ನು ಹಿಂಪಡೆಯಲಾರೆ- ಸಚಿವ ನಿರಾಣಿ

Ad Widget . Ad Widget .

ಮೈಸೂರು : ಕೊಟ್ಟ ವ್ಯಕ್ತಿಯೂ ಶಾಶ್ವತವಲ್ಲ, ಪೀಠ ಮಾತ್ರ ಶಾಶ್ವತ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್.ನಿರಾಣಿ ಅವರು ಅಭಿಪ್ರಾಯಪಟ್ಟಿದ್ದಾರೆ.

Ad Widget . Ad Widget .

ನಗರದಲ್ಲಿ ಕೂಡಲಸಂಗಮ ಮಠದ ಶ್ರೀಗಳು ಮಠಕ್ಕೆ ನೀಡಿರುವ ದಾನದ ಕಾಣಿಕೆಗಳನ್ನು ಹಿಂತಿರುಗಿಸಲಾಗುವುದು ಎಂದು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ನಿರಾಣಿ, ನಾನು ಪೀಠಕ್ಕೆ ಕೊಟ್ಟಿದ್ದೇನೆ ಹೊರತು ಯಾವುದೇ ಒಬ್ಬ ವ್ಯಕ್ತಿಗೆ ಕೊಟ್ಟಿಲ್ಲ. ಕೊಟ್ಟಿರುವ ವ್ಯಕ್ತಿಯೂ ಶಾಶ್ವತವಾಗಿರುವುದಿಲ್ಲ, ಆದರೆ ಮಠ ಮಾತ್ರ ಶಾಶ್ವತವಾಗಿರುತ್ತದೆ ಎಂದರು.

ನಮ್ಮಂಥವರು ನೂರಾರು ವ್ಯಕ್ತಿಗಳು ಬರುತ್ತಾರೆ, ಹೋಗುತ್ತಾರೆ. ನಾನು ಮಠದ ಮೇಲಿನ ಗೌರವದಿಂದ ಕಾಣಿಕೆಗಳನ್ನು ಭಕ್ತಿ ರೂಪದಲ್ಲಿ ಕೊಟ್ಟಿದ್ದೇನೆ. ಇದು ನನಗೆ ನಮ್ಮ ಹಿರಿಯರು ಹೇಳಿಕೊಟ್ಟಿದ್ದು. ಭಕ್ತಿಭಾವದಿಂದ ಕೊಟ್ಟ ಕಾಣಿಕೆಯನ್ನು ಪ್ರಚಾರಕ್ಕಾಗಿ ಪಡೆಯುವ ವ್ಯಕ್ತಿ ನಾನಲ್ಲ ಎಂದು ಸ್ಪಷ್ಟಪಡಿಸಿದರು.

ನಮ್ಮ ಇಡೀ ಕುಟುಂಬವೇ ಸಮಾಜದಲ್ಲಿರುವ ಎಲ್ಲ ಮಠಗಳನ್ನು ಅತ್ಯಂತ ಪೂಜ್ಯ ಭಾವನೆಯಿಂದ ಕಾಣುತ್ತಾ ಬಂದಿದ್ದೇವೆ. ಎಂಥ ಸಂದರ್ಭದಲ್ಲೂ ಕೂಡ ಯಾರನ್ನು ಅಗೌರವದಿಂದ ಕಂಡಿಲ್ಲ ಎಂದು ಸ್ಪಷ್ಟಪಡಿಸಿದರು.

Leave a Comment

Your email address will not be published. Required fields are marked *