January 2022

ಗುಡ್ಡಕೊರೆದು ಜಲಧಾರೆ ಹರಿಸಿದ ಅಮೈ ಮಹಾಲಿಂಗ ನಾಯ್ಕರಿಗೆ ಒಲಿದ “ಪದ್ಮಶ್ರೀ”

ಮಂಗಳೂರು: ಗುಡ್ಡಕ್ಕೆ ಸುರಂಗ ಕೊರೆದು ಜೀವಜಲ ಪಡೆದು ಬೋಳುಗುಡ್ಡೆಯಲ್ಲಿ ಹಸಿರೆಬ್ಬಿಸಿದ ಅಪರೂಪದ ಸಾಹಸಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಗತಿಪರ ಕೃಷಿಕ ಅಮೈ ಮಹಾಲಿಂಗ ನಾಯ್ಕ ಅವರಿಗೆ ಈ ಸಾಲಿನ ಪದ್ಮಶ್ರೀ ಪ್ರಶಸ್ತಿ ಒಲಿದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ಅಡ್ಯನಡ್ಕ ಸಮೀಪದ ಅಮೈ ನಿವಾಸಿ 77 ವರ್ಷದ ಮಹಾಲಿಂಗ ನಾಯ್ಕ ಕೃಷಿಗೆ ಏಕಾಂಗಿಯಾಗಿ ಏಳು ಸುರಂಗಗಳನ್ನು ಕೊರೆದು ನೀರು ಪಡೆದು, ಅದನ್ನು ಕೆರೆಯಲ್ಲಿ ಸಂಗ್ರಹಿಸಿ ಅದನ್ನು ಗುರುತ್ವ ಬಲದ ಮೂಲಕ ತುಂತುರು ನೀರಾವರಿಯಾಗಿ ಕೃಷಿಗೆ ಹರಿಸಿ […]

ಗುಡ್ಡಕೊರೆದು ಜಲಧಾರೆ ಹರಿಸಿದ ಅಮೈ ಮಹಾಲಿಂಗ ನಾಯ್ಕರಿಗೆ ಒಲಿದ “ಪದ್ಮಶ್ರೀ” Read More »

ಕಳ್ಳತನ ಮಾಡಬೇಡ ಎಂದ ತಂದೆಯನ್ನೇ ಕೊಲೆ ಮಾಡಿದ ಮಗ

ಚಳ್ಳಕೆರೆ: ಕಳ್ಳತನ ಮಾಡಬೇಡ ಎಂದದ್ದಕ್ಕೆ ತಂದೆಯನ್ನೇ ಮಗ ಕೊಲೆ ಮಾಡಿದ ಘಟನೆ ತಾಲೂಕಿನ ನಾಯಕನಹಟ್ಟಿ ಹೋಬಳಿಯ ನಾಯಕನಹಟ್ಟಿ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ಮಲ್ಲೂರಹಳ್ಳಿ ಗ್ರಾಮದ ಬರಮಸಾಗರ ಕೊಪ್ಲೆಯ ಗುಡ್ಲು ಮಲ್ಲಯ್ಯ(65) ಎಂಬವರು ತನ್ನ ಪುತ್ರ ಲೋಕೇಶ್(35) ಎಂಬಾತನನ್ನು ಕೊಲೆ ಮಾಡಿರುವುದು. ಇವರು ಕಳ್ಳತನ, ಜಗಳ ಮಾಡಬೇಡ. ಬರೀ ನಿನ್ನ ಮೇಲೆ ಆರೋಪಗಳು ಬರುತ್ತಿವೆ ಎಂದು ಬುದ್ದಿ ಮಾತು ಹೇಳಿದ್ದರು. ಇದರಿಂದ ಕೋಪಗೊಂಡ ಮಗ ರಾತ್ರಿ 12 ಗಂಟೆ ವೇಳೆಗೆ ಹೊಡೆದು ತಂದೆಯನ್ನು ಕೊಲೆ ಮಾಡಿದ್ದಾನೆ. ಲೋಕೇಶ್ ಮೇಲೆ

ಕಳ್ಳತನ ಮಾಡಬೇಡ ಎಂದ ತಂದೆಯನ್ನೇ ಕೊಲೆ ಮಾಡಿದ ಮಗ Read More »

ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟ| ವಿಷಯವಾರು ವೇಳಾಪಟ್ಟಿ ಇಲ್ಲಿದೆ

ಬೆಂಗಳೂರು: ಕೊರೋನಾ ಸೋಂಕಿನ ನಡುವೆಯೂ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯನ್ನು ನಡೆಸೋದಕ್ಕೆ ಈಗಾಗಲೇ ತಾತ್ಕಾಲಿಕ ವೇಳಾಪಟ್ಟಿಯನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪ್ರಕಟಿಸಿತ್ತು. ಇದೀಗ ಮುಖ್ಯ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ಪಟ್ಟಿಯಂತೆ ಮಾ. 28ರಿಂದ ಪರೀಕ್ಷೆ ಆರಂಭಗೊಂಡು, ಏಪ್ರಿಲ್ 11ರಂದು ಮುಕ್ತಾಯಗೊಳ್ಳಲಿದೆ. ಹೀಗಿದೆ ಎಸ್ ಎಸ್ ಎಲ್ ಸಿ ಮುಖ್ಯ ಪರೀಕ್ಷೆಯ ವಿಷಯವಾರು ವೇಳಾಪಟ್ಟಿ ದಿನಾಂಕ 28-03-2022ರ ಸೋಮವಾರ – ಪ್ರಥಮ ಭಾಷೆ – ಕನ್ನಡ, ತೆಲುಗು, ಹಿಂದಿ, ಮರಾಠಿ,

ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟ| ವಿಷಯವಾರು ವೇಳಾಪಟ್ಟಿ ಇಲ್ಲಿದೆ Read More »

ಮಂಗಳೂರು: ಅಪಘಾತದಲ್ಲಿ ಗಾಯಗೊಂಡ ಯುವತಿ ಚಿಕಿತ್ಸೆ ಫಲಿಸದೆ ಸಾವು

ಮಂಗಳೂರು: ಮಂಗಳೂರು ನಗರ ಹೊರವಲಯದ ಅಡ್ಡೂರು ಸಮೀಪದ ಕಾಜಿಲ ಎಂಬಲ್ಲಿ ನಿನ್ನೆ ನಡೆದ ರಿಕ್ಷಾ ಮತ್ತು ಟಿಪ್ಪರ್ ನಡುವಿನ ಭೀಕರ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಾಗೊಂಡಿದ್ದ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾಳೆ ಮೃತಪಟ್ಟ ಯುವತಿಯನ್ನು ಕರಿಯಂಗಳ ಗ್ರಾಮದ ಪಳ್ಳಿಪಾಡಿಯ ಆಸ್ನಾ (18) ಎಂದು ಗುರುತಿಸಲಾಗಿದೆ. ಈಕೆ ನಿನ್ನೆ ತನ್ನ ತಾಯಿ ರೆಹನಾರೊಂದಿಗೆ ರಿಕ್ಷಾದಲ್ಲಿ ಗುರುಪುರ ಕೈಕಂಬದತ್ತದಲ್ಲಿ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಹೋಗುತ್ತಿದ್ದ ವೇಳೆ ಪೊಳಲಿ ದ್ವಾರದಿಂದ ಅಡ್ಡೂರಿನತ್ತ ಅತಿ ವೇಗದಿಂದ ಚಲಿಸುತ್ತಿದ್ದ ಲಾರಿ ಢಿಕ್ಕಿ ಹೊಡೆದಿದೆ.

ಮಂಗಳೂರು: ಅಪಘಾತದಲ್ಲಿ ಗಾಯಗೊಂಡ ಯುವತಿ ಚಿಕಿತ್ಸೆ ಫಲಿಸದೆ ಸಾವು Read More »

ಕಿಕ್-ಸ್ಟಾರ್ಟಿಂಗ್ ಜೀಪ್ ತಯಾರಿಸಿದ ವ್ಯಕ್ತಿ |ಪ್ರತಿಭೆಗೆ ಮೆಚ್ಚಿ ಬೊಲೆರೋ ಗಿಫ್ಟ್ ನೀಡಿದ ಆನಂದ್ ಮಹೀಂದ್ರಾ

ಮುಂಬೈ: ಕಿಕ್-ಸ್ಟಾರ್ಟಿಂಗ್ ಜೀಪ್ ತಯಾರಿಸಿದ ಬಡ ಪ್ರತಿಭೆಗೆ ಆನಂದ್ ಮಹೀಂದ್ರಾ ಬೊಲೆರೋ ಗಿಫ್ಟ್ ನೀಡುವ ಮೂಲಕವಾಗಿ ಮೆಚ್ಚುಗೆಗೆ ಪಾತ್ರವಾಗಿದೆ. ಮಹಾರಾಷ್ಟ್ರದ ವ್ಯಕ್ತಿಯೊಬ್ಬರು ತಯಾರಿಸಿದ ಕಿಕ್-ಸ್ಟಾರ್ಟಿಂಗ್ ಜೀಪ್‍ನ ವೀಡಿಯೋ ಹಂಚಿಕೊಂಡು, ಅವರಿಗೆ ಬೊಲೆರೋ ಕಾರು ಗಿಫ್ಟ್ ನೀಡುವುದಾಗಿ ಭರವಸೆ ನೀಡಿದ್ದ ಆನಂದ್ ಮಹೀಂದ್ರಾ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ. ಮಹಾರಾಷ್ಟ್ರ ಮೂಲದ ದತ್ತಾತ್ರೇಯ ಲೋಹರ್ ಹಳೆಯ ವಾಹನದ ಬಿಡಿ ಭಾಗಗಳನ್ನ ಬಳಸಿ, ದ್ವಿ-ಚಕ್ರ ವಾಹನ ಸಿದ್ಧಪಡಿಸಿದ್ದರು. ಇದಕ್ಕಾಗಿ 60 ಸಾವಿರ ರೂ. ಖರ್ಚು ಮಾಡಿದ್ದರು. ಇದರ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ

ಕಿಕ್-ಸ್ಟಾರ್ಟಿಂಗ್ ಜೀಪ್ ತಯಾರಿಸಿದ ವ್ಯಕ್ತಿ |ಪ್ರತಿಭೆಗೆ ಮೆಚ್ಚಿ ಬೊಲೆರೋ ಗಿಫ್ಟ್ ನೀಡಿದ ಆನಂದ್ ಮಹೀಂದ್ರಾ Read More »

ಕೊರೊನಾ ಹಿನ್ನಲೆ: ಪ್ರೋ ಕಬಡ್ಡಿಯಲ್ಲಿ ಇಂದಿನಿಂದ ಜ.28ರ ವರೆಗೆ ಪ್ರತಿದಿನ ಒಂದೇ ಪಂದ್ಯ|

ಬೆಂಗಳೂರು: ನಗರದಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಪಂದ್ಯಾಟಕ್ಕೆ ಕೊರೊನಾ ಅಡ್ಡಿಯಾಗಿದ್ದು 2 ತಂಡದ ಆಟಗಾರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಮಶಾಲ್ ಸ್ಪೋರ್ಟ್ಸ್ ಆಯೋಜಕತ್ವದಲ್ಲಿ ವಿವೋ ಪ್ರೊ ಕಬಡ್ಡಿ 8ನೇ ಆವೃತ್ತಿ ಬೆಂಗಳೂರಿನ ವೈಟ್‍ಫೀಲ್ಡ್‌ನಲ್ಲಿರುವ ಶೆರಟಾನ್ ಗ್ರ್ಯಾಂಡ್ ಹೋಟೆಲ್ ಹಾಗೂ ಕನ್ವೆನ್ಷನ್ ಸೆಂಟರ್‌ನಲ್ಲಿ ಕಠಿಣ ಬಯೋ ಬಬಲ್ ಮೂಲಕ ಟೂರ್ನಿ ನಡೆಯುತ್ತಿದೆ. ಆದರೆ ಇದೀಗ ಪಾಟ್ನಾ ಪೈರೇಟ್ಸ್ ಮತ್ತು ಗುಜರಾತ್ ಜೈಂಟ್ಸ್ ತಂಡದ ಕೆಲ ಆಟಗಾರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಹಾಗಾಗಿ 2 ತಂಡಗಳ ಕೆಲ ಪಂದ್ಯಗಳನ್ನು ಮುಂದೂಡಲಾಗಿದೆ.

ಕೊರೊನಾ ಹಿನ್ನಲೆ: ಪ್ರೋ ಕಬಡ್ಡಿಯಲ್ಲಿ ಇಂದಿನಿಂದ ಜ.28ರ ವರೆಗೆ ಪ್ರತಿದಿನ ಒಂದೇ ಪಂದ್ಯ| Read More »

ಹನಿಮೂನ್ ಫೋಟೋ ಶೇರ್ ಮಾಡಿಕೊಂಡ ಕತ್ರಿನಾ ಕೈಫ್

ಮುಂಬೈ: ಬಾಲಿವುಡ್ ನಟಿ ಕತ್ರಿನಾ ಕೈಫ್, ವಿಕ್ಕಿ ಕೌಶಲ್ ಅದ್ದೂರಿಯಾಗಿ ಮದುವೆಯಾಗುವ ಮೂಲಕವಾಗಿ ಸಖತ್ ಸುದ್ದಿಯಲ್ಲಿದ್ದರು. ಇದೀಗ ಹನಿಮೂನ್ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರ ಮದುವೆ ಡಿ.9ರಂದು ಅದ್ದೂರಿಯಾಗಿ ನಡೆಯಿತು. ಇದಾದ ಮರುದಿನವೇ ಅವರು ಹನಿಮೂನ್‍ಗೆ ಮಾಲ್ಡೀವ್ಸ್‌ಗೆ ಹೋಗಿದ್ದರು ಎನ್ನಲಾಗಿತ್ತು. ನಾಲ್ಕು ದಿನ ಮಾಲ್ಡೀವ್ಸ್‌ನಲ್ಲಿ ಸಮಯ ಕಳೆದು ಭಾರತಕ್ಕೆ ವಾಪಸ್ ಬಂದಿತ್ತು. ಮಾಲ್ಡೀವ್ಸ್ ಡೈರಿಯ ಫೋಟೋ ಹಂಚಿಕೊಂಡಿರಲಿಲ್ಲ. ಈಗ ಕತ್ರಿನಾ ಅವರು ಹನಿಮೂನ್ ಫೋಟೋ ಹಂಚಿಕೊಂಡಿದ್ದಾರೆ ಮಾಲ್ಡೀವ್ಸ್ ಸಮುದ್ರ

ಹನಿಮೂನ್ ಫೋಟೋ ಶೇರ್ ಮಾಡಿಕೊಂಡ ಕತ್ರಿನಾ ಕೈಫ್ Read More »

ಸ್ಮೃತಿ ಮಂಧಾನಗೆ ಐಸಿಸಿ ವಾರ್ಷಿಕ ಅತ್ಯುತ್ತಮ ಮಹಿಳಾ ಕ್ರಿಕೆಟರ್ ಪ್ರಶಸ್ತಿ

ನವದೆಹಲಿ: ಭಾರತದ ಮಹಿಳಾ ಕ್ರಿಕೆಟ್ ತಂಡದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಅವರು 2021ರ ಐಸಿಸಿ ವರ್ಷದ ಮಹಿಳಾ ಕ್ರಿಕೆಟಿಗರಿಗೆ ನೀಡುವ ರಾಚೆಲ್ ಹೇಹೋ ಫ್ಲಿಂಟ್ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ. ಈ ವಿಷಯವನ್ನು ಐಸಿಸಿಯ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಿಸಿದೆ. ಸ್ಮೃತಿ ಮಂಧಾನ ಕಳೆದ ವರ್ಷ ಒಟ್ಟು 22 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಇಷ್ಟು ಪಂದ್ಯಗಳಲ್ಲಿ ಸ್ಮೃತಿ 38.86 ಸರಾಸರಿಯಲ್ಲಿ 855 ರನ್ ಗಳಿಸಿದ್ದರು. ಈ ಅವಧಿಯಲ್ಲಿ ಅವರು ಒಂದು ಶತಕ ಮತ್ತು ಐದು ಅರ್ಧ ಶತಕಗಳನ್ನು

ಸ್ಮೃತಿ ಮಂಧಾನಗೆ ಐಸಿಸಿ ವಾರ್ಷಿಕ ಅತ್ಯುತ್ತಮ ಮಹಿಳಾ ಕ್ರಿಕೆಟರ್ ಪ್ರಶಸ್ತಿ Read More »

ವಿದ್ಯಾರ್ಥಿನಿ ಜೊತೆಗೆ ಶಾಲಾ ಕೊಠಡಿಯಲ್ಲೇ ಮುಖ್ಯಶಿಕ್ಷಕನ ಸರಸ| ಮೊಬೈಲ್ ನಲ್ಲಿ ಚಿತ್ರೀಕರಿಸಿ ವೈರಲ್ ಮಾಡಿದ ವಿದ್ಯಾರ್ಥಿಗಳು

ಮೈಸೂರು: ಜಿಲ್ಲೆಯ ಹೆಚ್.ಡಿ ಕೋಟೆ ತಾಲೂಕಿನ ಶಾಲೆಯೊಂದರಲ್ಲಿ ವಿದ್ಯಾರ್ಥಿನಿ ಜೊತೆ ಮುಖ್ಯ ಶಿಕ್ಷಕ ರೊಮ್ಯಾನ್ಸ್ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಮುಖ್ಯ ಶಿಕ್ಷಕ ಶಾಲಾ ಕೊಠಡಿಯಲ್ಲೇ ವಿದ್ಯಾರ್ಥಿನಿ ಜೊತೆ ರೊಮ್ಯಾನ್ಸ್ ಮಾಡಿದ್ದು, ಶಾಲೆಯ ಇತರ ವಿದ್ಯಾರ್ಥಿಗಳು ಈ ದೃಶ್ಯವನ್ನು ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ. ಸದ್ಯ ವಿಡಿಯೋ ವೈರಲ್​ ಆಗಿದ್ದು, ವಿಡಿಯೋ ಆಧರಿಸಿ ಮುಖ್ಯ ಶಿಕ್ಷಕರ ವಿರುದ್ಧ ಕ್ಷೇತ್ರ ಶಿಕ್ಷಣಾಧಿಕಾರಿಗೆ ದೂರು ನೀಡಲಾಗಿದೆ. ದೂರು ಸ್ವೀಕರಿಸಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಗೆ ಭೇಟಿ ನೀಡಿ ಪರಿಶೀಲಿಸುವ ಭರವಸೆ ನೀಡಿದ್ದಾರೆ.

ವಿದ್ಯಾರ್ಥಿನಿ ಜೊತೆಗೆ ಶಾಲಾ ಕೊಠಡಿಯಲ್ಲೇ ಮುಖ್ಯಶಿಕ್ಷಕನ ಸರಸ| ಮೊಬೈಲ್ ನಲ್ಲಿ ಚಿತ್ರೀಕರಿಸಿ ವೈರಲ್ ಮಾಡಿದ ವಿದ್ಯಾರ್ಥಿಗಳು Read More »

ಕಾರಿಗೆ ಹಂದಿ ಡಿಕ್ಕಿ – ಬಿಜೆಪಿ ಶಾಸಕನ ಪುತ್ರ ಸೇರಿ 7 ವೈದ್ಯಕೀಯ ವಿದ್ಯಾರ್ಥಿಗಳ ದುರ್ಮರಣ!

ಮುಂಬೈ: ಕಾರು ಅಪಘಾತದಲ್ಲಿ ಬಿಜೆಪಿ ಶಾಸಕನ ಪುತ್ರ ಸೇರಿದಂತೆ 7 ವೈದ್ಯಕೀಯ ವಿದ್ಯಾರ್ಥಿಗಳು ದುರ್ಮರಣವನ್ನಪ್ಪಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮೃತ ವಿದ್ಯಾರ್ಥಿಗಳಲ್ಲಿ ಒಬ್ಬ ಗೊಂಡಿಯಾ ಜಿಲ್ಲೆಯ ತಿರೋರಾ ಕ್ಷೇತ್ರದ ಶಾಸಕ ವಿಜಯ್ ರಹಾಂಗದಲೆ ಅವರ ಪುತ್ರ ಆವಿಷ್ಕಾರ್ ಎಂದು ಗುರುತಿಸಲಾಗಿದೆ. ನೀರಜ್ ಚೌಹಾಣ್ (ಪ್ರಥಮ ವರ್ಷದ ಎಂಬಿಬಿಎಸ್), ನಿತೇಶ್ ಸಿಂಗ್ (2015 ಇಂಟರ್ನ್ ಎಂಬಿಬಿಎಸ್), ವಿವೇಕ್ ನಂದನ್ (2018, ಎಂಬಿಬಿಎಸ್ ಫೈನಲ್), ಪ್ರತ್ಯುಷ್ ಸಿಂಗ್ (2017 ಎಂಬಿಬಿಎಸ್), ಶುಭಂ ಜೈಸ್ವಾಲ್ (2017 ಎಂಬಿಬಿಎಸ್) ಮತ್ತು ಪವನ್ ಶಕ್ತಿ

ಕಾರಿಗೆ ಹಂದಿ ಡಿಕ್ಕಿ – ಬಿಜೆಪಿ ಶಾಸಕನ ಪುತ್ರ ಸೇರಿ 7 ವೈದ್ಯಕೀಯ ವಿದ್ಯಾರ್ಥಿಗಳ ದುರ್ಮರಣ! Read More »