ಲೋನ್ ಆ್ಯಪ್ ಗಳ ಮೂಲಕ ಸಾಲ ಪಡೆಯಲು ಇಚ್ಛಿಸಿದ್ದೀರಾ? ಹಾಗಾದ್ರೆ ಮಂಗಳೂರು ಕಮಿಷನರ್ ನೀಡಿದ ಮಾಹಿತಿ ತಿಳಿದುಕೊಳ್ಳಿ
ಮಂಗಳೂರು: ಲೋನ್ ಆಯಪ್ ಮೂಲಕ ಸಾಲ ಪಡೆದು ಕಿರುಕುಳ ತಡೆಯಲಾರದೆ ಎರಡು ದಿನಗಳ ಹಿಂದೆ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ. ಹೀಗಾಗಿ, ಸಾರ್ವಜನಿಕರು ಲೋನ್ ಆ್ಯಪ್ ಇನ್ಸ್ಟಾಲ್ ಮಾಡುವಾಗ ಜಾಗ್ರತೆಯಿಂದ ಇರುವಂತೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಸಲಹೆ ನೀಡಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಅವರು, ಎರಡು ದಿನಗಳ ಹಿಂದೆ ಸುರತ್ಕಲ್ನ ಕುಳಾಯಿಯಲ್ಲಿ ಯುವಕನೋರ್ವ ತನ್ನ ಕಚೇರಿಯಲ್ಲಿ ಬಾತ್ ಟವೆಲ್ ಮೂಲಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದ ಬಗ್ಗೆ ವಿವರಿಸಿದರು. ಯುವಕ […]