January 2022

ಬೆಳಗಾವಿ: ವಿಮ್ಸ್ ನಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದ 3 ಹಸುಗೂಸುಗಳು ನಿಗೂಢ ಸಾವು|

ಬೆಳಗಾವಿ: ಜಿಲ್ಲೆಯ ವಿಮ್ಸ್ ನಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಂತ 3 ಹಸುಗೂಸುಗಳು ನಿಗೂಢವಾಗಿ ಸಾವನ್ನಪ್ಪಿವೆ. ಈ ಮೂಲಕ ರಾಜ್ಯದ ಜನತೆಯೇ ಬೆಚ್ಚಿ ಬೀಳುವಂತೆ ಘಟನೆ ನಡೆದಿದೆ. ಬೆಳಗಾವಿಯ ರಾಮದುರ್ಗ ತಾಲೂಕಿನ 13 ತಿಂಗಳ ಪವಿತ್ರಾ ಹುಲಗುರ್, ಒಂದು ವರ್ಷ ಎರಡು ತಿಂಗಳ ಮಧು ಉಮೇಶ್ ಕುರಗಂದಿ ಹಾಗೂ ಒಂದೂವರೆ ವರ್ಷದ ಚೇತನಾ ಪೂಜಾರಿ ಎಂಬ ಹಸುಗೂಸುಗಳು ಬಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಈ ಮೂವರು ಮಕ್ಕಳು ಐಸಿಯುನಲ್ಲಿ ಆಮ್ಲಜನಕದ ಸಪೋರ್ಟ್ ನಲ್ಲಿ ಚಿಕಿತ್ಸೆ ಮುಂದುವರೆಸಲಾಗಿತ್ತು. ಆದ್ರೇ, ಚಿಕಿತ್ಸೆ ಪಡೆದು […]

ಬೆಳಗಾವಿ: ವಿಮ್ಸ್ ನಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದ 3 ಹಸುಗೂಸುಗಳು ನಿಗೂಢ ಸಾವು| Read More »

ಕಾಸರಗೋಡು: ವಿದ್ಯಾರ್ಥಿನಿ ಜೊತೆ 2 ವರ್ಷದ ಮಗುವಿನ ತಾಯಿ ನಿಗೂಢ ನಾಪತ್ತೆ

ಕಾಸರಗೋಡು: ಇಲ್ಲಿನ ಪೆಟ್ರೋಲ್ ಬಂಕ್ ಸಮೀಪದ ನಿವಾಸಿಗಳಾದ ಇಬ್ಬರು ಮಹಿಳೆಯರು ನಿಗೂಢವಾಗಿ ನಾಪತ್ತೆಯಾದ ಘಟನೆ ನಡೆದಿದೆ. ಸಂಶೀನಾ(21) ಮತ್ತು ಈಕೆಯ ಸಂಬಂಧಿಯಾಗಿರುವ ಕಂಪ್ಯೂಟರ್ ವಿದ್ಯಾರ್ಥಿನಿ ಜಾಸ್ಮಿನ್ (19) ನಾಪತ್ತೆಯಾದವರು. ಸಂಶೀನಾ ವಿವಾಹಿತೆಯಾಗಿದ್ದು , 2 ವರ್ಷದ ಮಗುವಿನ ತಾಯಿಯಾಗಿದ್ದಾಳೆ. ಈಕೆಯ ಪತಿ ಕೊಲ್ಲಿಯಲ್ಲಿದ್ದಾರೆ. ಸಂಶೀನಾಳ ಪತಿಯ ತಂದೆ ಅಶ್ರಫ್ ನೀಡಿದ ದೂರಿನಂತೆ ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಾಸರಗೋಡು: ವಿದ್ಯಾರ್ಥಿನಿ ಜೊತೆ 2 ವರ್ಷದ ಮಗುವಿನ ತಾಯಿ ನಿಗೂಢ ನಾಪತ್ತೆ Read More »

ಮಂಗಳೂರು: ಉದ್ಯಮಿಗೆ ಹಣ ಬೇಡಿಕೆ ಇಟ್ಟು ಜೀವ ಬೆದರಿಕೆ| ಇಬ್ಬರು ರೌಡಿಶೀಟರ್ ಗಳು ಅಂದರ್

ಮಂಗಳೂರು: ಉದ್ಯಮಿಗೆ ಕರೆ ಮಾಡಿ ಹಣದ ಬೇಡಿಕೆ ಇಟ್ಟು, ಬೆದರಿಕೆ ಹಾಕಿ, ಹಣ ವಸೂಲಿ ಮಾಡಿದ ಇಬ್ಬರು ರೌಡಿ ಶೀಟರ್ ಗಳನ್ನು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಕಲಂದರ್ ಶರೀಫ್ ಮತ್ತು ಹಸನಬ್ಬ ಎಂದು ಗುರುತಿಸಲಾಗಿದೆ. ಶರೀಫ್ ಮತ್ತು ಹಸನಬ್ಬ ಪುತ್ತೂರಿನ ಉದ್ಯಮಿಗೆ ಕರೆ ಮಾಡಿ ಯಾರೋ ಒಬ್ಬ ವ್ಯಕ್ತಿ ಜೈಲಿನಲ್ಲಿದ್ದಾನೆ ಅವನನ್ನು ಬಿಡಿಸಲು 13,00,000 ತಗಲುತ್ತದೆ. ಅವನನ್ನು ಬಿಡಿಸಲು ನೀನು ಹಣ ಕೊಡಬೇಕು. ಎರಡು ದಿನಗಳೊಳಗೆ 3,50,000 ಹಣ ರೆಡಿ ಮಾಡಬೇಕು.

ಮಂಗಳೂರು: ಉದ್ಯಮಿಗೆ ಹಣ ಬೇಡಿಕೆ ಇಟ್ಟು ಜೀವ ಬೆದರಿಕೆ| ಇಬ್ಬರು ರೌಡಿಶೀಟರ್ ಗಳು ಅಂದರ್ Read More »

ಮಂಗಳೂರು: ಪಿಕಪ್ ಢಿಕ್ಕಿಯಾಗಿ ವೃದ್ದ ಸಾವು

ಮಂಗಳೂರು: ನಗರದ ಶಕ್ತಿನಗರದ ಕಕ್ಕೆಬೆಟ್ಟು ಎಂಬಲ್ಲಿ ಶನಿವಾರ ಪಿಕಪ್ ಲಾರಿಯೊಂದು ಢಿಕ್ಕಿಯಾಗಿ ವೃದ್ಧರೊಬ್ಬರು ಮೃತಪಟ್ಟಿದ್ದಾರೆ.ಮೃತರನ್ನು ಕಕ್ಕೆಬೆಟ್ಟು ಕಾರ್ಮಿಕ ಕಾಲೋನಿ ನಿವಾಸಿ ಕೊರಗಪ್ಪ (85) ಎಂದು ಗುರುತಿಸಲಾಗಿದೆ. ನೆಲದ ಹೆಂಚುಗಳನ್ನು ತುಂಬಿದ್ದ ಪಿಕಪ್ ಹಿಮ್ಮುಖ ತಿರುವು ತೆಗೆದುಕೊಳ್ಳುತ್ತಿದ್ದಾಗ ಟ್ರಕ್‌ನ ಹಿಂದೆ ನಿಂತಿದ್ದ ಕೊರಗಪ್ಪ ಅವರಿಗೆ ಢಿಕ್ಕಿ ಹೊಡೆದಿದೆ. ಕೊರಗಪ್ಪನವರ ತಲೆಯ ಭಾಗಕ್ಕೆ ಗಾಯಗವಾಗಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ, ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಚಾಲಕನ ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಆರೋಪಿಸಲಾಗಿದೆ. ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಮಂಗಳೂರು: ಪಿಕಪ್ ಢಿಕ್ಕಿಯಾಗಿ ವೃದ್ದ ಸಾವು Read More »

ನಾನು ಸ್ವಲ್ಪ ಸೈಕೊ- ರಶ್ಮಿಕಾ ಮಂದಣ್ಣ| ನೀವು ಸಖತ್ ಕ್ಯೂಟ್: ಅಭಿಮಾನಿ

ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ರಶ್ಮಿಕಾ ಮಂದಣ್ಣ ಅವರು ಒಂದಲ್ಲಾ ಒಂದು ವಿಚಾರವಾಗಿ ಸಖತ್ ಸುದ್ದಿಯಲ್ಲಿರುತ್ತಾರೆ. ಇದೀಗ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಫೋಟೋಗೆ ನೀಡಿರುವ ಕ್ಯಾಪ್ಷನ್‌ ಅಭಿಮಾನಿಗಳ ತಲೆಯಲ್ಲಿ ಹುಳು ಬಿಟ್ಟಂತಾಗಿದೆ. ನಾನು ಜಿಮ್‍ನಲ್ಲಿಯೇ ಜೀವಿಸುವ ಸೈಕೊ ಅಂತ ಸಾಬೀತಾಯ್ತು ಎಂದು ಅವರು ಕ್ಯಾಪ್ಷನ್ ನೀಡಿದ್ದು, ಜಿಮ್‍ನಲ್ಲಿ ನಿಂತು ಕ್ಲಿಕ್ಕಿಸಿಕೊಂಡಿರುವ ಫೋಟೋವನ್ನ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಭಿಮಾನಿಗಳು ರಶ್ಮಿಕಾ ಅವರ ಫೋಟೋಕ್ಕಿಂತ ಅವರು ನೀಡಿರುವ ಕ್ಯಾಪ್ಷನ್ ಮೇಲೆ ಹೆಚ್ಚು ಗಮನ ಹರಿಸಿದ್ದಾರೆ. ನೀವು ಸಖತ್ ಕ್ಯೂಟ್ ಆಗಿದ್ದೀರ

ನಾನು ಸ್ವಲ್ಪ ಸೈಕೊ- ರಶ್ಮಿಕಾ ಮಂದಣ್ಣ| ನೀವು ಸಖತ್ ಕ್ಯೂಟ್: ಅಭಿಮಾನಿ Read More »

ದ್ವಾದಶ ರಾಶಿಗಳ ವಾರಭವಿಷ್ಯ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ವಾರದಲ್ಲಿ ಸಾಕಷ್ಟು ಗ್ರಹಗಳ ಬದಲಾವಣೆಗಳು ಉಂಟಾಗುವುದು ಅವುಗಳ ಪ್ರಭಾವ ರಾಶಿಚಕ್ರಗಳ ಮೇಲೆ ಗಣನೀಯವಾಗಿರುತ್ತವೆ. ಆ ಬದಲಾವಣೆಗಳು ನಿಮ್ಮ ಜೀವನದಲ್ಲಿ ಹೇಗಿರುತ್ತದೆ ಎನ್ನುವುದನ್ನು ತಿಳಿಯುವುದು ಅವಶ್ಯ. ಹೀಗಾಗಿ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ.. ಯಾವ ರಾಶಿಯವರಿಗೆ ಹೆಚ್ಚಿನ ಅದೃಷ್ಟವಿದೆ ಯಾವ ರಾಶಿಯವರಿಗೆ ದುರಾದೃಷ್ಟವಿದೆ ಎಂದು ತಿಳಿದುಕೊಳ್ಳೋಣ. ಹೀಗಾಗಿ ಜನವರಿ 16ರಿಂದ ಜನವರಿ 22ರ ವರೆಗೆ ದ್ವಾದಶ ರಾಶಿಗಳ ವಾರ ಭವಿಷ್ಯ ಇಲ್ಲಿದೆ… 1)ಮೇಷರಾಶಿ: ಮೇಷ ರಾಶಿಯವರಿಗೆ ಈ ವಾರ ಮಿಶ್ರ ಫಲದಾಯಕವಾಗಿರುತ್ತದೆ. ವಾರದ

ದ್ವಾದಶ ರಾಶಿಗಳ ವಾರಭವಿಷ್ಯ Read More »

ಕೇಂದ್ರ ಸರ್ಕಾರದ ಉದ್ಯೋಗ ಅರಸುತ್ತಿರುವವರಿಗೆ ಸಿಹಿಸುದ್ದಿ

SSLC ಪಾಸಾದವರಿಗೆ ಭಾರತೀಯ ಸೇನೆಯಲ್ಲಿ ಉದ್ಯೋಗಾವಕಾಶ ಫೆ. 28 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವದೆಹಲಿ: ಗಡಿ ಭದ್ರತಾ ಪಡೆ(Border Security Force)ಯು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಬಿಎಸ್​ಎಫ್(BSF)​ನಲ್ಲಿ 2788 ಕಾನ್ಸ್​ಟೇಬಲ್(ಟ್ರೇಡ್ಸ್​ಮ್ಯಾನ್) ಹುದ್ದೆಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿದೆ. ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ

ಕೇಂದ್ರ ಸರ್ಕಾರದ ಉದ್ಯೋಗ ಅರಸುತ್ತಿರುವವರಿಗೆ ಸಿಹಿಸುದ್ದಿ Read More »

ಕೊಟ್ಟ ಸಾಲ ಕೇಳಿದ್ದಕ್ಕೆ ಅನೈತಿಕ ಸಂಬಂಧದ ಅಪಪ್ರಚಾರ| ಮಕ್ಕಳೊಂದಿಗೆ ಮಹಿಳೆ ಆತ್ಮಹತ್ಯೆ

ಶಿವಮೊಗ್ಗ: ಕೊಟ್ಟ ಸಾಲವನ್ನು ಕೇಳಿದಾಗ ಅನೈತಿಕ ಸಂಬಂಧದ ಅಪಪ್ರಚಾರ ಮಾಡಿದ್ದಕ್ಕೆ ಮನನೊಂದು ಮಹಿಳೆಯೊಬ್ಬರು ತನ್ನ ಮಕ್ಕಳೊಂದಿಗೆ ಭದ್ರಾ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಭದ್ರಾವತಿ ತಾಲೂಕಿನ ಯಡೇಹಳ್ಳಿಯ ನಿವಾಸಿ ವೀಣಾ ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡವರು. ಇವರು ಮತ್ತು ಇವರ ಪತಿ ಭದ್ರಾವತಿ ತಾಲೂಕಿನ ಅರಹತೋಳಲು ಗ್ರಾಮದ ಸಂತೋಷ್ ಹಾಗೂ ಆಶಾ ಎಂಬುವರಿಗೆ 8 ಲಕ್ಷ ರೂ. ಸಾಲ ನೀಡಿದ್ದರು. ಈ ಸಾಲ ವಾಪಸ್ ನೀಡುವಂತೆ ಕೇಳಿದ್ದಕ್ಕೆ ಆಶಾ ಹಾಗೂ ಸಂತೋಷ್ ದಂಪತಿಯು ವೀಣಾ ಅಕ್ರಮ

ಕೊಟ್ಟ ಸಾಲ ಕೇಳಿದ್ದಕ್ಕೆ ಅನೈತಿಕ ಸಂಬಂಧದ ಅಪಪ್ರಚಾರ| ಮಕ್ಕಳೊಂದಿಗೆ ಮಹಿಳೆ ಆತ್ಮಹತ್ಯೆ Read More »

ಚಾಲಕನಿಗೆ ದಿಡೀರ್ ಅನಾರೋಗ್ಯ – ಬಸ್ ಚಲಾಯಿಸಿ ಆಸ್ಪತ್ರೆಗೆ ಸೇರಿಸಿದ ಸಹಪ್ರಯಾಣಿಕ ಮಹಿಳೆ

ಪುಣೆ: ಬಸ್ ಚಲಾಯಿಸುತ್ತಿದ್ದ ವೇಳೆ ಡ್ರೈವರ್ ಅನಾರೋಗ್ಯಕ್ಕೀಡಾಗಿದ್ದು, ತಕ್ಷಣ ಪ್ರಯಾಣಿಕ ಮಹಿಳೆ ಬಸ್ ಚಲಾಯಿಸಿ 10 ಕಿ.ಮೀ ದೂರ ತೆರಳಿ ಆಸ್ಪತ್ರೆಗೆ ದಾಖಲಿಸಿದ್ದು ಮಹಿಳೆಯ ವಿಡಿಯೋ ಇದೀಗ ವ್ಯಾಪಕವಾಗಿ ವೈರಲ್ ಆಗಿದೆ. ಯೋಗಿತಾ ಧರ್ಮೇಂದ್ರ ಸತವ್ ಎಂಬ ಮಹಿಳೆ ಈ ಸಾಹಸ ತೋರಿದ್ದಾರೆ. ಪುಣೆಯ ವಾಘೋಲಿಯಿಂದ 22ರಿಂದ 23 ಮಹಿಳೆಯರ ತಂಡ ಶಿರೂರು ತಾಲೂಕಿನ ಮೊರಚಿ ಚಿಂಚೋಳಿಗೆ ಟ್ರಿಪ್ ಹೋಗಿದ್ದರು.ಮೊರಚಿ ಚಿಂಚೋಳಿಯಿಂದ ವಾಪಸ್ ಬರುವಾಗ ಚಾಲಕನ ಆರೋಗ್ಯ ಹದಗೆಟ್ಟಿದೆ. ಈ ಸಂದರ್ಭದಲ್ಲಿ ಯೋಗಿತಾ ಬಸ್‌ ನ್ನು ಚಲಾಯಿಸುವ

ಚಾಲಕನಿಗೆ ದಿಡೀರ್ ಅನಾರೋಗ್ಯ – ಬಸ್ ಚಲಾಯಿಸಿ ಆಸ್ಪತ್ರೆಗೆ ಸೇರಿಸಿದ ಸಹಪ್ರಯಾಣಿಕ ಮಹಿಳೆ Read More »

ಅತಿಥಿ ಉಪನ್ಯಾಸಕರಿಗೆ ಸಂಕ್ರಾಂತಿ ಸಿಹಿಯಲ್ಲ, ಮೂಗಿಗೆ ಸವರಿದ ತುಪ್ಪ| ಆಕ್ರೋಶ ವ್ಯಕ್ತಪಡಿಸಿದ ಉಪನ್ಯಾಸಕರು|

ಬೆಂಗಳೂರು: ಅತಿಥಿ ಉಪನ್ಯಾಸಕರಿಗೆ ಸಂಕ್ರಾಂತಿ ಹಬ್ಬಕ್ಕೆ ಸಿಹಿ ಸುದ್ದಿ ಕೊಟ್ಟಿದ್ದೇವೆ ಎಂದು ಹೇಳಿರುವ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಅವರ ಹೇಳಿಕೆ ಶುದ್ಧ ಸುಳ್ಳು, ಇದು ಮೂಗಿಗೆ ತುಪ್ಪ ಸವರುವ ತಂತ್ರವಾಗಿದೆ ಎಂದು ಅತಿಥಿ ಉಪನ್ಯಾಸಕರು ಆಕ್ರೋಶ ಹೊರಹಾಕಿದ್ದಾರೆ. ಹಲವಾರು ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ನಡೆಸುತ್ತಿರುವ ಅತಿಥಿ ಉಪನ್ಯಾಸಕರು, ರಾಜ್ಯದ ಇತಿಹಾಸದಲ್ಲೇ ಅತೀ ಹೆಚ್ಚು ಸಹಾಯ ಧನವನ್ನ ಅತಿಥಿ ಉಪನ್ಯಾಸಕರಿಗೆ ನೀಡ್ತಿದ್ದೇವೆ ಎಂದು ಸರ್ಕಾರ ಹೇಳಿರುವುದು ಶುದ್ಧ ಸುಳ್ಳು. ಟೆಕ್ನಿಕಲಿ ಯೋಚನೆ ಮಾಡಿದರೆ ಒಬ್ಬರಿಗೆ 3 ಸಾವಿರ

ಅತಿಥಿ ಉಪನ್ಯಾಸಕರಿಗೆ ಸಂಕ್ರಾಂತಿ ಸಿಹಿಯಲ್ಲ, ಮೂಗಿಗೆ ಸವರಿದ ತುಪ್ಪ| ಆಕ್ರೋಶ ವ್ಯಕ್ತಪಡಿಸಿದ ಉಪನ್ಯಾಸಕರು| Read More »