ಮಂಗಳೂರು: ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯರು ಗೇಮ್ಸ್ ಆಡುತ್ತಿದ್ದು, ರೋಗಿಗಳ ಜೀವದ ಜೊತೆ ಚೆಲ್ಲಾಟವಾಡುವ ಕುರಿತು ಆರೋಪ ಕೇಳಿಬಂದಿದೆ. ಇದಕ್ಕೆ ಪೂರಕ ಎಂಬಂತ ವಿಡಿಯೋ ಕೂಡ ವೈರಲ್ ಆಗಿದೆ.
ವೆನ್ಲಾಕ್ ನ ತೀವ್ರ ನಿಘಾ ಘಟಕ(ICU)ನಲ್ಲಿ ವೈದ್ಯರು ಕಂಪ್ಯೂಟರ್ ನಲ್ಲಿ ಗೇಮ್ ಗಳು ಆಡುತ್ತಿರುವುದು ಕಂಡು ಬಂದಿದೆ.
ವೆನ್ಲಾಕ್ ಆಸ್ಪತ್ರೆಗೆ ವಗ್ಗ ಮೂಲದ ವಿಜಯ್ (40) ಗಂಭೀರ ಸ್ಥಿತಿಯಲ್ಲಿ ತೆರಳಿದ್ದರು. ಈ ವೇಳೆ ವೈದ್ಯರು ಚಿಕಿತ್ಸೆ ನೀಡುವ ಬದಲು ಕಂಪ್ಯೂಟರ್ ನಲ್ಲಿ ಗೇಮ್ ಆಡುತ್ತಿದ್ದರು. ರೋಗಿ ಬಂದಿರುವ ಬಗ್ಗೆ ನರ್ಸ್ ಗಳು ವೈದ್ಯರ ಗಮನಕ್ಕೆ ತಂದಿದ್ದಾರೆ. ಆದರೆ ವೈದ್ಯರು ಆಟ ಮುಂದುವರಿಸಿದ್ದಾರೆ.
ಈ ಬಗ್ಗೆ ರೋಗಿಯ ಕುಟುಂಬಸ್ಥರು ಬೇಸರ ವ್ಯಕ್ತಪಡಿಸಿದ್ದು, ವೈದ್ಯರು ವಿಜಯ್ ಗೆ ಚಿಕಿತ್ಸೆ ಕೊಡಲು ನಿರಾಕರಿಸಿದ್ದು, ಪ್ರೈವೆಟ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ತನಿಖೆ ಕೈಗೊಂಡು ವೈದ್ಯರಿಗೆ ಸರಿಯಾದ ಕ್ರಮ ಕೈಗೊಳ್ಳಬೇಕಾಗಿದೆ.