December 2021

ಕಾರಿನಲ್ಲೇ ಸಹೋದ್ಯೋಗಿ ಜೊತೆ ಸೆಕ್ಸ್| ಗಂಡನ ವಿರುದ್ದ ದೂರು ನೀಡಿದ ಮಹಿಳೆ|

ಬೆಂಗಳೂರು: ‘ಸಹೋದ್ಯೋಗಿ ಯುವತಿ ಜೊತೆ ಸಲುಗೆ ಬೆಳೆಸಿದ್ದ ಪತಿಯು, ಆ ಯುವತಿ ಜೊತೆ ಕಾರಿನಲ್ಲೇ ಲೈಂಗಿಕ ಕ್ರಿಯೆ ನಡೆಸಿ ಸಿಕ್ಕಿಬಿದ್ದಿದ್ದಾರೆ’ ಎಂದು ಮಹಿಳೆಯೊಬ್ಬರು ವಿಧಾನಸೌಧ ಠಾಣೆಗೆ ದೂರು ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ಯುವತಿ ಸಹ ದೂರು ಕೊಟ್ಟಿದ್ದಾರೆ. ‘ಕೌಟುಂಬಿಕ ಹಾಗೂ ಅಕ್ರಮ ಸಂಬಂಧದ ವಿಚಾರವಾಗಿ ರಾಜಭವನ ರಸ್ತೆಯಲ್ಲಿ ಮಹಿಳೆ, ಆಕೆಯ ಪತಿ ಹಾಗೂ ಯುವತಿ ನಡುವೆ ಡಿ. 6ರಂದು ರಾತ್ರಿ ಗಲಾಟೆ ನಡೆದಿದೆ. ಈ ಬಗ್ಗೆ ಎರಡು ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಎರಡೂ ಕಡೆಯ ದೂರುದಾರರಿಂದ ಹೇಳಿಕೆ ಪಡೆಯಲಾಗಿದೆ. […]

ಕಾರಿನಲ್ಲೇ ಸಹೋದ್ಯೋಗಿ ಜೊತೆ ಸೆಕ್ಸ್| ಗಂಡನ ವಿರುದ್ದ ದೂರು ನೀಡಿದ ಮಹಿಳೆ| Read More »

‘ರಾಜ್ಯದಲ್ಲಿ ಲವ್ ಜಿಹಾದ್ ಕಾಯ್ದೆ ಜಾರಿಗೆ ಚಿಂತನೆ’ ಸಚಿವ ಸುನಿಲ್ ಕುಮಾರ್

ಬೆಳಗಾವಿ : ರಾಜ್ಯದಲ್ಲಿ ಲವ್ ಜಿಹಾದ್ ನಿಷೇಧ ಕಾಯ್ದೆ ಜಾರಿಗೆ ತರುತ್ತೇವೆ ಎಂದು ಇಂಧನ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ. ಬೆಳಗಾವಿಯ ಸುವರ್ಣಸೌಧದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಲವ್ ಜಿಹಾದ್ ವಿರುದ್ಧ ಕಾಯ್ದೆ ಜಾರಿಗೆ ತರುತ್ತೇವೆ. ಗೋಹತ್ಯೆ ನಿಷೇಧ ತರುವುದಾಗಿ ಹೇಳಿದ್ದೇವು. ತಂದಿದ್ದೇವೆ. ಅದೇ ರೀತಿ ಮತಾಂತರ ನಿಷೇಧ ಕಾಯ್ದೆ ತರುತ್ತೇವೆ ಎಂದು ಹೇಳಿದ್ದೇವೆ. ಅದನ್ನು ಜಾರಿಗೆ ತರುತ್ತಿದ್ದೇವೆ. ಇದೀಗ ಲವ್ ಜಿಹಾದ್ ವಿರುದ್ಧ ಕಾಯ್ದೆ ಜಾರಿಗೆ ತರುತ್ತೇವೆ ಎಂದರು. ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆಗೆ ಕಾಂಗ್ರೆಸ್

‘ರಾಜ್ಯದಲ್ಲಿ ಲವ್ ಜಿಹಾದ್ ಕಾಯ್ದೆ ಜಾರಿಗೆ ಚಿಂತನೆ’ ಸಚಿವ ಸುನಿಲ್ ಕುಮಾರ್ Read More »

ಸರಣಿ ಅಪಘಾತಕ್ಕೆ ನಾಲ್ಕು ಬಲಿ| ಲಾರಿ ಟಯರ್ ಸ್ಫೋಟದಿಂದ ನಡೆದ ದುರ್ಘಟನೆ

ಚಿತ್ರದುರ್ಗ: ಇಲ್ಲಿನ ಹಿರಿಯೂರು ತಾಲ್ಲೂಕಿನ ಆಲೂರು ಬಳಿ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಭೀಕರ ಅಪಘಾತ ಸಂಭವಿಸಿ, ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಗದಗ ಮೂಲದ ಹನುಮಪ್ಪ(30), ಪ್ರಶಾಂತ(28), ಗುರಪ್ಪ(30), ರಮೇಶ(30) ಮೃತಪಟ್ಟವರು ಎಂದು ಹೇಳಲಾಗಿದೆ. ಸರಣಿ ಅಪಘಾತದಲ್ಲಿ 10 ಜನರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ 4ರ ಆಲೂರು ಬಳಿ ಟೈಯರ್ ಸ್ಪೋಟಗೊಂಡ ಲಾರಿ ಪಲ್ಟಿಯಾಗಿ ನಾಲ್ವರು ಸಾವನ್ನಪ್ಪಿದ್ದಾರೆ. ಲಾರಿ ಪಲ್ಟಿ ಆಗಿದ್ದರಿಂದ ಒಂದು ಕಾರು ಮತ್ತು 6 ಲಾರಿ ನಡುವೆ ಡಿಕ್ಕಿಯಾಗಿ

ಸರಣಿ ಅಪಘಾತಕ್ಕೆ ನಾಲ್ಕು ಬಲಿ| ಲಾರಿ ಟಯರ್ ಸ್ಫೋಟದಿಂದ ನಡೆದ ದುರ್ಘಟನೆ Read More »

ಭಾರತದ ಬೆಡಗಿ “ಹರ್ನಾಜ್ ಸಂಧು” ಗೆ ವಿಶ್ವ ಸುಂದರಿ ಪಟ್ಟ| 21 ವರ್ಷಗಳ ಬಳಿಕ ಒಲಿದ ಸೌಂದರ್ಯ ಕಿರೀಟ|

ನವದೆಹಲಿ: ಯಾವ ಹುಡುಗಿ ತೆಳ್ಳಗಿದ್ದಾಳೆ ಎನ್ನುವ ಕಾರಣಕ್ಕೆ ಖಿನ್ನತೆಗೆ ಒಳಗಾಗಿದ್ದಳೂ ಅದೆ ಹುಡುಗಿ ಎಲ್ಲವನ್ನೂ ಮೆಟ್ಟಿನಿಂತು ವಿಶ್ವಸುಂದರಿ ಪಟ್ಟವನ್ನ ಅಲಂಕರಿಸಿ ಭಾರತಕ್ಕೆ ಅರ್ಪಿಸಿದ್ದಾಳೆ. ಭಾರತದ ಹರ್ನಾಜ್ ಸಂಧು 70 ನೇ ವಿಶ್ವ ಸುಂದರಿಯಾಗಿ ಆಯ್ಕೆಯಾಗಿದ್ದಾರೆ. 21 ವರ್ಷಗಳ ನಂತರ ಭಾರತೀಯ ಸುಂದರಿಯೊಬ್ಬರಿಗೆ ಈ ಪಟ್ಟ ಸಿಕ್ಕಿದೆ. ಲಾರಾ ದತ್ತಾ 2000 ರಲ್ಲಿ ವಿಶ್ವ ಸುಂದರಿ ಆದರು. ಅಂದಿನಿಂದ ಭಾರತ ಈ ಪ್ರಶಸ್ತಿಗಾಗಿ ಕಾಯುತ್ತಿತ್ತು. ಡಿಸೆಂಬರ್ 12 ರಂದು ಇಸ್ರೇಲ್‌ನಲ್ಲಿ ನಡೆದ 70ನೇ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಹರ್ನಾಜ್

ಭಾರತದ ಬೆಡಗಿ “ಹರ್ನಾಜ್ ಸಂಧು” ಗೆ ವಿಶ್ವ ಸುಂದರಿ ಪಟ್ಟ| 21 ವರ್ಷಗಳ ಬಳಿಕ ಒಲಿದ ಸೌಂದರ್ಯ ಕಿರೀಟ| Read More »

“ನಳೀನ್ ಕುಮಾರ್ ಕಟೀಲ್ ರ ತಾಕತ್ತಿಗೆ ಸವಾಲ್ ಹಾಕಿದ ಭಜರಂಗಿಗಳು”| “ಬಿಜೆಪಿಗೆ ವಿರೋಧ ಪಕ್ಷದಲ್ಲಿ ಇದ್ದರೆ ಮಾತ್ರ ಹಿಂದುತ್ವದ ನೆನಪು”| “ಯು. ಟಿ. ಖಾದರ್ ಐವನ್ ಡಿ’ಸೋಜರಿಗೆ ಶ್ರದ್ದಾಂಜಲಿ!! |ಸಂಘಟನೆಯವರೇ ಈ ಅಧಿಕಾರ ನಿಮಗಿದೆಯಾ?

ಮಂಗಳೂರು: ಕಳೆದು ಎರಡು ದಿನಗಳ ಹಿಂದೆ ಖಾಸಗಿ ಬಸ್ಸಿನ ಜೋಡಿಯೊಂದಕ್ಕೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಬಂಧಿಸಿದ ಹಿನ್ನೆಲೆ ಹಿಂದೂ ಕಾರ್ಯಕರ್ತರು ಬಿಜೆಪಿ ಮತ್ತು ನಳಿನ್ ಕುಮಾರ್ ಕಟೀಲ್ ವಿರುದ್ಧ ಭಾರಿ ಆಕ್ರೋಶ ವ್ಯಕ್ತಪಡಿಸಿದ್ದು ಜಾಲತಾಣಗಲ್ಲಿ ವೈರಲ್ ಆಗುತ್ತಿದೆ. ಘಟನೆ ವಿವರ :ಮಂಗಳೂರಿನಿಂದ ಉಡುಪಿ ಗೆ ಪ್ರಯಾಣಿಸುವ ಬಸ್ಸಿನಲ್ಲಿ ಹಿಂದೂ ಯುವತಿಯ ಮತ್ತು ಮುಸ್ಲಿಂ ಯುವಕನ ಸರಸ ಸಲ್ಲಾಪದಲ್ಲಿ ತೊಡಗಿದ್ದರು. ಇದನ್ನು ಕಂಡು ಹಿಂದೂ ಕಾರ್ಯಕರ್ತರು ಅವರನ್ನು ಪ್ರಶ್ನಿಸಿದಲ್ಲದೇ ಹಲ್ಲೆ ಕೂಡ ನಡೆಸಿದ್ದಾರೆ. ಇದು ಜಾಲತಾಣಗಳಲ್ಲಿ

“ನಳೀನ್ ಕುಮಾರ್ ಕಟೀಲ್ ರ ತಾಕತ್ತಿಗೆ ಸವಾಲ್ ಹಾಕಿದ ಭಜರಂಗಿಗಳು”| “ಬಿಜೆಪಿಗೆ ವಿರೋಧ ಪಕ್ಷದಲ್ಲಿ ಇದ್ದರೆ ಮಾತ್ರ ಹಿಂದುತ್ವದ ನೆನಪು”| “ಯು. ಟಿ. ಖಾದರ್ ಐವನ್ ಡಿ’ಸೋಜರಿಗೆ ಶ್ರದ್ದಾಂಜಲಿ!! |ಸಂಘಟನೆಯವರೇ ಈ ಅಧಿಕಾರ ನಿಮಗಿದೆಯಾ? Read More »

ಸುಳ್ಯ: ಹೋರಿ ತಿವಿದು ವ್ಯಕ್ತಿ ಸಾವು

ಸುಳ್ಯ: ಹೋರಿಯೊಂದು ತಿವಿದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಸುಳ್ಯ ತಾಲೂಕಿನ ಮುರುಳ್ಯದ ಕೋಡಿಯಡ್ಕದಲ್ಲಿ ನಡೆದಿದೆ.ಮುರುಳ್ಯ ಗ್ರಾಮದ ಪೂದೆಯ ಕಿಟ್ಟಣ್ಣ ಗೌಡ ಕೋಡಿಯಡ್ಕ ಎಂಬವರು ಮೃತಪಟ್ಟ ವ್ಯಕ್ತಿ. ತಾನು ಸಾಕಿರುವ ಹೋರಿಯನ್ನು ತೋಟದಲ್ಲಿ ಮೇಯಲು ಕಟ್ಟಿದ್ದು ಸಂಜೆ ವೇಳೆಗೆ ಹೋರಿಯನ್ನು ಹಟ್ಟಿಗೆ ತರಲು ಕಿಟ್ಟಣ್ಣ ಗೌಡರು ತೆರಳಿದ್ದರು ಎನ್ನಲಾಗಿದೆ. ಅಲ್ಲಿ ಹೋರಿ ತಿವಿದು ಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಂದು ಆ ದಾರಿಯಲ್ಲಿ ಬಂದ ವ್ಯಕ್ತಿಯೋರ್ವರಿಗೆ ಕಿಟ್ಟಣ್ಣ ಗೌಡರು ಬಿದ್ದುಕೊಂಡಿರುವುದು ಕಂಡುಬಂದಿದ್ದು, ಅಲ್ಲೇ ಪಕ್ಕದಲ್ಲಿ ಹೋರಿ ಕಟ್ಟಿ ಹಾಕಿರುವುದನ್ನು ನೋಡಿದ್ದಾರೆ.

ಸುಳ್ಯ: ಹೋರಿ ತಿವಿದು ವ್ಯಕ್ತಿ ಸಾವು Read More »

ಮಂಗಳೂರು; ಚಪ್ಪಲಿ‌ ಅಂಗಡಿ ಮಾಲೀಕನಿಂದ ಗ್ರಾಹಕಿ ಜೊತೆ ಅಸಭ್ಯ ವರ್ತನೆ| ಆರೋಪಿಯ ಬಂಧನ|

ಮಂಗಳೂರು: ಚಪ್ಪಲಿ ಖರೀದಿಗೆ ಅಂಗಡಿಗೆ ಬಂದ ಮಹಿಳೆಯ ಮೈಮೇಲೆ ಕೈ ಹಾಕಿ‌ ಅಸಭ್ಯವಾಗಿ ವರ್ತಿಸಿದ ಆರೋಪದ ಮೇರೆಗೆ ಅಂಗಡಿಯ ಮಾಲೀಕನನ್ನು ಬಂಧಿಸಿರುವ ಘಟನೆ ಮಂಗಳೂರು ಹೊರವಲಯದ ಮುಲ್ಕಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇಂದು ಮಧ್ಯಾಹ್ನ ಮುಲ್ಕಿ ಠಾಣಾ ವ್ಯಾಪ್ತಿಯ ತಾಳಿಪಾಡಿ ಗ್ರಾಮದ ಕಿನ್ನಿಗೋಳಿ ಎಂಬಲ್ಲಿರುವ ಚಪ್ಪಲಿ ಅಂಗಡಿಯೊಂದಕ್ಕೆ ಗ್ರಾಹಕಿಯೊಬ್ಬರು ಚಪ್ಪಲಿ ಖರೀದಿಗಾಗಿ ತೆರಳಿದ್ದರು. ಈ ವೇಳೆ ಅಂಗಡಿಯಲ್ಲಿದ್ದ ಅಂಗಡಿ ಮಾಲಿಕ ಗ್ರಾಹಕಿಗೆ ವಿವಿಧ ಚಪ್ಪಲಿಗಳನ್ನು ತೋರಿಸಿದ್ದು, ಗ್ರಾಹಕಿಗೆ ಆತ ತೋರಿಸಿದ ಚಪ್ಪಲಿ ಇಷ್ಟವಾಗಿರಲಿಲ್ಲ‌. ಆದರೆ ಅಂಗಡಿ ಮಾಲಕ

ಮಂಗಳೂರು; ಚಪ್ಪಲಿ‌ ಅಂಗಡಿ ಮಾಲೀಕನಿಂದ ಗ್ರಾಹಕಿ ಜೊತೆ ಅಸಭ್ಯ ವರ್ತನೆ| ಆರೋಪಿಯ ಬಂಧನ| Read More »

ವಾಯುಭಾರ ಕುಸಿತ| ರಾಜ್ಯದಲ್ಲಿ ಮತ್ತೆ ಮಳೆ ಸಾಧ್ಯತೆ|

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಡಿ.15ರವರೆಗೆ ಮಳೆ ಸುರಿಯಲಿದೆ. ಕರ್ನಾಟಕದ ಹಾಸನ, ಚಾಮರಾಜನಗರ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಮೈಸೂರು, ಮಂಡ್ಯ, ಚಿಕ್ಕಮಗಳೂರು, ತುಮಕೂರು, ರಾಮನಗರ, ಬಳ್ಳಾರಿ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ಜಿಲ್ಲೆಗಳು, ಉತ್ತರ ಒಳನಾಡಿನಲ್ಲಿ ಸಾಧಾರಣ ಮಳೆ, ಒಣ ಹವೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ವಾಯುಭಾರ ಕುಸಿತ| ರಾಜ್ಯದಲ್ಲಿ ಮತ್ತೆ ಮಳೆ ಸಾಧ್ಯತೆ| Read More »

ಕೇರಳದಲ್ಲೂ ಪತ್ತೆಯಾಯ್ತು ಮೊದಲ ‘ಓಮಿಕ್ರಾನ್’| 37 ಕ್ಕೆ ಏರಿಕೆಯಾದ ಪ್ರಕರಣ

ಕೊಚ್ಚಿ: ಕೇರಳವು ಕೊಚ್ಚಿಯಿಂದ ಒಮಿಕ್ರಾನ್ ಕೋವಿಡ್ -19 ರೂಪಾಂತರದ ಮೊದಲ ಪ್ರಕರಣವನ್ನು ವರದಿ ಮಾಡಿದೆ. ಸೋಂಕಿತ ರೋಗಿಯು ಯುಕೆಯಿಂದ ಡಿಸೆಂಬರ್ 6 ರಂದು ಕೇರಳಕ್ಕೆ ಹಿಂದಿರುಗಿದ್ದಾರೆ. ಅವರಿಗೆ ಡಿಸೆಂಬರ್ 8 ರಂದು ಕೋವಿಡ್ -19 ಟೆಸ್ಟ್‌ ಮಾಡಿಸಲಾಗಿದ್ದು, ಅದರ ವರದಿ ಇಂದು,ಕೇರಳದ ಆರೋಗ್ಯ ಸಚಿವ ವೀಣಾ ಜಾರ್ಜ್ ಹೇಳಿದ್ದಾರೆ. ದೇಶದಲ್ಲಿ ಕೊರೊನಾ ಸೋಂಕಿನ ಹೊಸ ರೂಪಾಂತರಿ ಒಮಿಕ್ರಾನ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕರ್ನಾಟಕದಲ್ಲಿ ಮತ್ತೊಂದು ಒಮಿಕ್ರಾನ್ ಸೋಂಕು ದೃಢಪಟ್ಟಿದೆ. ಕರ್ನಾಟಕದಲ್ಲಿ ಮತ್ತೊಂದು ಒಮಿಕ್ರಾನ್ ಪ್ರಕರಣ

ಕೇರಳದಲ್ಲೂ ಪತ್ತೆಯಾಯ್ತು ಮೊದಲ ‘ಓಮಿಕ್ರಾನ್’| 37 ಕ್ಕೆ ಏರಿಕೆಯಾದ ಪ್ರಕರಣ Read More »

’70 ವರ್ಷದ ಕಥೆ ಬಿಟ್ಟುಬಿಡಿ, ಏಳು ವರ್ಷದ ಸಾಧನೆ ಹೇಳಿ’ ಕೇಂದ್ರದ ವಿರುದ್ದ ಪ್ರಿಯಾಂಕ ಕಿಡಿ

ಜೈಪುರ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಹಣದುಬ್ಬರ ಏರಿಕೆಯ ಬಗ್ಗೆ ಕೇಂದ್ರ ಸರ್ಕಾರವನ್ನು ಭಾನುವಾರ ಗುರಿಯಾಗಿಸಿದ್ದಾರೆ, ಕೇಂದ್ರ ಸರ್ಕಾರವು ಸಾರ್ವಜನಿಕ ಕಲ್ಯಾಣವನ್ನು ಬಯಸುವುದಿಲ್ಲ ಅದು ಕೇವಲ ಕೆಲ ಉದ್ಯಮಿಗಳಿಗಾಗಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು. ಜೈಪುರದ ವಿದ್ಯಾಧರ್ ನಗರ ಕ್ರೀಡಾಂಗಣದಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ಮಹಂಗಾಯಿ ಹಠಾವೋ ಬೆಲೆ ಏರಿಕೆ ನಿಲ್ಲಿಸಿ ಸಮಾವೇಶ ಉದ್ದೇಶಿಸಿ ಮಾತನಾಡಿದ ಪ್ರಿಯಾಂಕಾ ಗಾಂಧಿ ವಾದ್ರಾ, ‘ಎರಡು ರೀತಿಯ ಸರ್ಕಾರಗಳಿವೆ. ಜನರ ಸೇವೆ, ಸಮರ್ಪಣೆ ಮತ್ತು ಸತ್ಯದ ಬಗ್ಗೆ ಮಾತನಾಡುವುದು

’70 ವರ್ಷದ ಕಥೆ ಬಿಟ್ಟುಬಿಡಿ, ಏಳು ವರ್ಷದ ಸಾಧನೆ ಹೇಳಿ’ ಕೇಂದ್ರದ ವಿರುದ್ದ ಪ್ರಿಯಾಂಕ ಕಿಡಿ Read More »