December 2021

ಕರ್ನಾಟಕ ವಿಧಾನಸಭೆ ಅಧಿವೇಶನ ನೇರಪ್ರಸಾರ

ಕರ್ನಾಟಕ ವಿಧಾನ ಸಭಾ ಅಧಿವೇಶನವು ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿದ್ದು, ಸದನ ಸಭೆಯ ನೇರಪ್ರಸಾರಕ್ಕಾಗಿ ಇಲ್ಲಿ ಕ್ಲಿಕ್ಕಿಸಿ… ಕೃಪೆ: ಡಿಡಿ ಚಂದನ

ಕರ್ನಾಟಕ ವಿಧಾನಸಭೆ ಅಧಿವೇಶನ ನೇರಪ್ರಸಾರ Read More »

ಡ್ಯಾನ್ಸ್ ಬಾರ್ ಮೇಲೆ ದಾಳಿ, 17 ಮಂದಿ ಯುವತಿಯರು ವಶ| ಅಂಡರ್ ಗ್ರೌಂಡ್ ನಲ್ಲಿ ಕುಳಿತಿದ್ದ ಮಾದಕಕನ್ಯೆಯರು!

ಮುಂಬೈ: ಮಹಾನಗರಿಯಲ್ಲಿನ ಡ್ಯಾನ್ಸ್ ಬಾರ್ ವೊಂದಕ್ಕೆ ಪೋಲಿಸರು ದಾಳಿ ನಡೆಸಿದ್ದು, 17 ಯುವತಿಯರನ್ನು ವಶಕ್ಕೆ ಪಡೆದಿದ್ದಾರೆ. ದಾಳಿ ಮಾಡಿದ ಅಂಧೇರಿಯ ಡ್ಯಾನ್ಸ್ ಬಾರ್ ವೊಂದರ ಅಂಡರ್ ಗ್ರೌಂಡ್ ನಲ್ಲಿ ಅಡಗಿ ಕುಳಿತಿದ್ದ ಯುವತಿಯರು ಹೊರಬರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೇಕಪ್ ಕೊಠಡಿಯ ಹಿಂದೆ ಎಸಿ, ಬೆಡ್‌ಗಳು ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಹೊಂದಿದ್ದು, ಅದರಲ್ಲಿ 17 ಮಹಿಳೆಯರು, ಬಾರ್ ಮ್ಯಾನೇಜರ್, ಕ್ಯಾಷಿಯರ್ ಸೇರಿದಂತೆ 3 ಸಿಬ್ಬಂದಿಯನ್ನು ವಶಕ್ಕೆ ಪಡೆದಿದ್ದಾರೆ. ಮ್ಯಾನೇಜರ್ ವಿರುದ್ಧ ಅಂಧೇರಿ ಪೊಲೀಸ್ ಠಾಣೆಯಲ್ಲಿ

ಡ್ಯಾನ್ಸ್ ಬಾರ್ ಮೇಲೆ ದಾಳಿ, 17 ಮಂದಿ ಯುವತಿಯರು ವಶ| ಅಂಡರ್ ಗ್ರೌಂಡ್ ನಲ್ಲಿ ಕುಳಿತಿದ್ದ ಮಾದಕಕನ್ಯೆಯರು! Read More »

ಚಲಿಸುತ್ತಿದ್ದ ಬಸ್ಸ್ ನಲ್ಲಿ ಬೆಂಕಿ| ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ಅವಘಡ|

ಯಲ್ಲಾಪುರ: ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡು ಪ್ರಯಾಣಿಕರು ಆತಂಕಗೊoಡ ಘಟನೆ ತಾಲೂಕಿನ ಜೋಡಕೆರೆ ಬಳಿ ಮುಂಜಾನೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ವೇಳೆ ಬಸ್ ನಲ್ಲಿ ತಾಂತ್ರಿಕ ದೋಷದಿಂದಾಗಿ ಬೆಂಕಿ ಕಾಣಿಸಿಕೊಂಡಿದ್ದು, ಚಾಲಕನ ಸಮಯ ಪ್ರಜ್ಞೆಯಿಂದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಚಲಿಸುತ್ತಿದ್ದ ಖಾಸಗಿ ಬಸ್ ಗೆ ಬೆಂಕಿ ತಗುಲಿ ಸಂಪೂರ್ಣ ಭಸ್ಮವಾಗಿದೆ. ಮುಂಬೈ ನಿಂದ ಮಂಗಳೂರು ಕಡೆ ರಾಷ್ಟ್ರೀಯ ಹೆದ್ದಾರಿ 63 ರ ಮೂಲಕ ಬಸ್ ಸಂಚರಿಸುತ್ತಿರುವಾಗ ಈ ದುರ್ಘಟನೆ ನಡೆದಿದ್ದು, ಬಸ್ ನಲ್ಲಿ 22 ಪ್ರಯಾಣಿಕರು

ಚಲಿಸುತ್ತಿದ್ದ ಬಸ್ಸ್ ನಲ್ಲಿ ಬೆಂಕಿ| ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ಅವಘಡ| Read More »

ಕರಾವಳಿಯಲ್ಲಿ ಶಾಂತಿ ಸ್ಥಾಪನೆಗೆ ಸರ್ವ ಧರ್ಮೀಯರು ಸಹಕರಿಸಬೇಕು – ಸಚಿವ ಅರಗ ಜ್ಞಾನೇಂದ್ರ

ಬೆಳಗಾವಿ: ಕರ್ನಾಟಕದ ಕರಾವಳಿಯಲ್ಲಿ ಭುಗಿಲೆದ್ದಿರುವ ಹಿಂಸಾಚಾರ ನಿಯಂತ್ರಣಕ್ಕೆ ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದ್ದು, ಕರಾವಳಿಯಲ್ಲಿ ಶಾಂತಿ ಕಾಪಾಡಲು ಸರ್ವ ಧರ್ಮೀಯರ ಸಹಕಾರ ಅಗತ್ಯ ಎಂದು ರಾಜ್ಯ ಸರ್ಕಾರ ಹೇಳಿದೆ. ಬುಧವಾರ ವಿಧಾನಸಭೆಯ ಶೂನ್ಯವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಯು.ಟಿ.ಖಾದರ್, ಉಪ್ಪಿನಂಗಡಿಯಲ್ಲಿ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಸಂಭವಿಸಿದ ಘಟನೆಗಳ ಬಗ್ಗೆ ಪ್ರಸ್ತಾಪಿಸಿದ ವಿಷಯಕ್ಕೆ ಅವರು ಉತ್ತರಿಸಿದ ಅವರು, ‘ರಾಜ್ಯದಲ್ಲಿ ಶಾಂತಿ, ಸೌಹಾರ್ದತೆ, ಕೋಮುಸೌಹಾರ್ದತೆ ಕಾಪಾಡುವುದು ನಮ್ಮ ಪಾಲಿಗೆ ಮುಖ್ಯ. ಕರಾವಳಿಯಲ್ಲಿ ಶಾಂತಿಯನ್ನು ಕಾಪಾಡಲು ಎಲ್ಲ ಧರ್ಮೀಯರು ಸರ್ಕಾರಕ್ಕೆ ಸಹಕಾರ ನೀಡಬೇಕು.

ಕರಾವಳಿಯಲ್ಲಿ ಶಾಂತಿ ಸ್ಥಾಪನೆಗೆ ಸರ್ವ ಧರ್ಮೀಯರು ಸಹಕರಿಸಬೇಕು – ಸಚಿವ ಅರಗ ಜ್ಞಾನೇಂದ್ರ Read More »

“ಪ್ರತಿಭಟನೆ ಉದ್ರೇಕಕಾರಿಯಾಗಿ ಪರಿವರ್ತನೆಗೊಂಡಿತ್ತು, ಠಾಣೆಗೆ ಮುತ್ತಿಗೆ ಹಾಕಿ ಹಾನಿ‌ ಮಾಡಿದ ಕಾರಣ ಲಾಠಿ ಕೈಗೆತ್ತಿಕೊಂಡಿದ್ದೇವೆ”- ಎಸ್ಪಿ ಸೋ‌ನಾವಣೆ

ಪುತ್ತೂರು: ಉಪ್ಪಿನಂಗಡಿ ನಡೆದ ಲಾಠಿಚಾರ್ಜ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಖುಷಿಕೇಶ್ ಸೋನಾವಣೆ ಮಾಹಿತಿ ನೀಡಿದ್ದು, ಉದ್ರೇಕಕಾರಿಯಾಗಿ ವರ್ತಿಸುತ್ತಿದ್ದ ಪ್ರತಿಭಟನಾಕಾರರನ್ನು ಚದುರಿಸಲು ಲಾಠಿ ಪ್ರಹಾರ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಪುತ್ತೂರಿನಲ್ಲಿ ಮಾತನಾಡಿದ ಅವರು, ‘ಯುವಕರ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ಡಿಸೆಂಬರ್ 13 ರಂದು ಸಿನಾನ್ ಆರೋಪಿಯನ್ನು ಬಂಧಿಸಲಾಗಿತ್ತು. ಸಿನಾನ್ ನೀಡಿದ ಮಾಹಿತಿ ಪ್ರಕಾರ ಮತ್ತೆ ಮೂವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿತ್ತು. ಮುಸ್ತಫಾ,ಹಮೀದ್,ಝಕಾರಿಯಾ ವಶಕ್ಕೆ‌ ಪಡೆದ ಮೂವರು ಆರೋಪಿಗಳು ಈ ಆರೋಪಿಗಳನ್ನು ಬಿಡುಗಡೆಗೊಳಿಸುವಂತೆ ಪಿಎಫ್‌ಐ ಸಂಘಟನೆ ಕಾರ್ಯಕರ್ತರಿಂದ

“ಪ್ರತಿಭಟನೆ ಉದ್ರೇಕಕಾರಿಯಾಗಿ ಪರಿವರ್ತನೆಗೊಂಡಿತ್ತು, ಠಾಣೆಗೆ ಮುತ್ತಿಗೆ ಹಾಕಿ ಹಾನಿ‌ ಮಾಡಿದ ಕಾರಣ ಲಾಠಿ ಕೈಗೆತ್ತಿಕೊಂಡಿದ್ದೇವೆ”- ಎಸ್ಪಿ ಸೋ‌ನಾವಣೆ Read More »

“ಅಶಾಂತಿ ಸೃಷ್ಟಿಸುವುದೇ ಪೊಲೀಸರ ಉದ್ದೇಶವಾಗಿತ್ತು, ಪರಿಚಯದ ಪೊಲೀಸರೇ ಹೊಡೆದಿದ್ದಾರೆ” ಲಾಠಿ ಏಟು ತಿಂದವರಿಂದ ಪೊಲೀಸರ ಮೇಲೆ ಆರೋಪ

ಮಂಗಳೂರು: ”ಪ್ರತಿಭಟನಾನಿರತ ಕಾರ್ಯಕರ್ತರನ್ನು ಚದುರಿಸುವ ಉದ್ದೇಶ ಪೊಲೀಸರಿಗೆ ಇದ್ದಂತಿರಲಿಲ್ಲ. ನಮಗೆ ಹೊಡೆದು ಅಶಾಂತಿ ಸೃಷ್ಟಿಸುವುದೇ ಅವರ ಉದ್ದೇಶವಾಗಿತ್ತು. ಲಾಠಿ ಬೀಸಿ ಚದುರಿಸುವ ಬದಲು ತಲೆಯನ್ನೇ ಗುರಿಯಾಗಿಸಿಕೊಂಡು ಹೊಡೆದಿದ್ದಾರೆ. ಮೊಳೆ ಜೋಡಿಸಿಟ್ಟಿದ್ದ ಯಾವುದೋ ವಸ್ತುವಿನಿಂದ ಮತ್ತು ರೀಪುವಿನಿಂದಲೂ ಹಲ್ಲೆ ನಡೆಸಿದ್ದಾರೆ. ಬೂಟುಗಾಲಿನಿಂದಲೂ ತುಳಿದಿದ್ದಾರೆ. ಬ್ಯಾರಿಗಳಿಗೆ ಭಾರೀ ಅಹಂಕಾರ ಎಂದು ನಿಂದಿಸುತ್ತಿದ್ದರು. ನಿಮ್ಮನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಬೆದರಿಸುತ್ತಿದ್ದರು. ಪರಿಚಿತ ಪೊಲೀಸರೇ ಈ ಕೆಲಸ ಮಾಡಿದ್ದಾರೆ” ಎಂದು ಉಪ್ಪಿನಂಗಡಿ ಪೊಲೀಸ್ ಠಾಣೆಯೆದುರು ಮಂಗಳವಾರ ನಡೆದ ಪೊಲೀಸ್ ಲಾಠಿಚಾರ್ಜ್ ವೇಳೆ ಗಾಯಗೊಂಡು

“ಅಶಾಂತಿ ಸೃಷ್ಟಿಸುವುದೇ ಪೊಲೀಸರ ಉದ್ದೇಶವಾಗಿತ್ತು, ಪರಿಚಯದ ಪೊಲೀಸರೇ ಹೊಡೆದಿದ್ದಾರೆ” ಲಾಠಿ ಏಟು ತಿಂದವರಿಂದ ಪೊಲೀಸರ ಮೇಲೆ ಆರೋಪ Read More »

ಉಪ್ಪಿನಂಗಡಿ ಲಾಠಿಚಾರ್ಜ್ ಪ್ರಕರಣ| ಕ್ಯಾಂಪಸ್ ಪ್ರಂಟ್ ನಿಂದ ಪ್ರತಿಭಟನೆ|

ಮಂಗಳೂರು: ಮೂವರು ಪಿಎಫ್ ಐ ಮುಖಂಡರನ್ನು ಬಂಧಿಸಿರುವುದನ್ನು ಖಂಡಿಸಿ ಉಪ್ಪಿನಂಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರ ಮೇಲೆ ಪೊಲೀಸರು ನಡೆಸಿದ ಲಾಠಿಚಾರ್ಜ್ ಖಂಡಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಮಂಗಳೂರು ಜಿಲ್ಲಾ ಸಮಿತಿಯ ವತಿಯಿಂದ ನಗರದ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಯಿತು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕ್ಯಾಂಪಸ್ ಫ್ರಂಟ್ ಕರ್ನಾಟಕ ರಾಜ್ಯ ಸಮಿತಿ ಸದಸ್ಯ ಸಿರಾಜ್ ಮಂಗಳೂರು, ಉಪ್ಪಿನಂಗಡಿಯಲ್ಲಿ ಪ್ರತಿಭಟನಾಕಾರರ ಮೇಲೆ ಪೊಲೀಸರು ನಡೆಸಿದ ಭೀಕರ ಲಾಠಿ ಪ್ರಹಾರ ಪೊಲೀಸರ ತಾರತಮ್ಯ ನೀತಿ, ಕೋಮುವಾದಿ ಮನಸ್ಥಿತಿಯು ಕರ್ನಾಟಕದ ಸೌಹಾರ್ದತೆಯ

ಉಪ್ಪಿನಂಗಡಿ ಲಾಠಿಚಾರ್ಜ್ ಪ್ರಕರಣ| ಕ್ಯಾಂಪಸ್ ಪ್ರಂಟ್ ನಿಂದ ಪ್ರತಿಭಟನೆ| Read More »

ಉಪ್ಪಿನಂಗಡಿ ಲಾಠಿ ಚಾರ್ಜ್ ಪ್ರಕರಣಕ್ಕೆ ಪಿಎಫ್ಐ ಖಂಡನೆ| ಡಿ.17ಕ್ಕೆ ‘ಎಸ್.ಪಿ. ಆಫೀಸ್ ಮಾರ್ಚ್’ ಗೆ ನಿರ್ಧಾರ|

ಮಂಗಳೂರು : ಉಪ್ಪಿನಂಗಡಿ ಪೋಲೀಸರ ಲಾಠಿ ಚಾರ್ಜ್ ಘಟನೆಯನ್ನು ಪಾಪ್ಯುಲರ್ ಫ್ರಂಟ್ ಬಲವಾಗಿ ಖಂಡಿಸಿದೆ. ಸಂಘಟನೆಯ ಪ್ರಮುಖರಾದ ಅವರು ಎ.ಕೆ.ಅಶ್ರಫ್, ಇಜಾಜ್ ಅಹ್ಮದ್, ಖಾದರ್ ಕುಳಾಯಿ ಮತ್ತು ಜಾಬೀರ್ ಅರಿಯಡ್ಕ ಅವರು ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಅಕ್ರಮವಾಗಿ ಬಂಧಿಸಿದ ಮೂವರು ಕಾರ್ಯಕರತರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ನಾವು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದೆವು. ಈ ವೇಳೆ ಪೊಲೀಸರು ಯದ್ವಾ ತದ್ವಾ ಲಾಠಿ ಬೀಸಿದ್ದಾರೆ. ನಮ್ಮ ಧಾರ್ಮಿಕ ಗುರುವಿಗೂ ಗಂಭೀರ ಗಾಯವಾಗಿದ್ದು, ಓರ್ವ ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದ.

ಉಪ್ಪಿನಂಗಡಿ ಲಾಠಿ ಚಾರ್ಜ್ ಪ್ರಕರಣಕ್ಕೆ ಪಿಎಫ್ಐ ಖಂಡನೆ| ಡಿ.17ಕ್ಕೆ ‘ಎಸ್.ಪಿ. ಆಫೀಸ್ ಮಾರ್ಚ್’ ಗೆ ನಿರ್ಧಾರ| Read More »

ಸುಳ್ಯಲಿ ನಡ್ತ್ ವಿಶ್ವ ಅರೆಭಾಷೆ ದಿನಾಚರಣೆ| ‘ದೇಶದ ಮೌಖಿಕ ಜಾನಪದ ಸಂಗತಿಗಳ ಬರ್ದ್ ಇಸೊಕು’ – ಡಾ.ಕರುಣಾಕರ ನಿಡಿಂಜಿ

ಸುಳ್ಯ: ಭಾರತಲಿ ಸುಮಾರ್9500 ಭಾಸೆಗ ಒಳ. ಅಷ್ಟೇ ಸಂಸ್ಕೃತಿಗ ಕೂಡಾ ಉಟ್ಟು. ಹೀಂಗೆ ವೈವಿಧ್ಯ ಸಂಸ್ಕೃತಿ ಇರುವ ಭಾರತ ಪ್ರಪಂಚಕ್ಕೆ ಗುರುಸ್ಥಾನಲಿ ಉಟ್ಟು. ನಮ್ಮ ದೇಶಲಿ ಇರುವ ವೈವಿಧ್ಯಮಯ ಮೌಖಿಕ ಜಾನಪದ ಸಂಸ್ಕೃತಿ ಸಾಹಿತ್ಯನ ಬರ್ದ್ ಇಸಿಕಣಕು, ಇದರ ಉಳ್ಸಕಂಬ ಕೆಲ್ಸ ಆಕು,’ ಅಂತ ಮಡಿಕೇರಿನ ಎಫ್. ಎಂ. ಕಾರ್ಯಪ್ಪ ಕಾಲೇಜಿನ ಪ್ರಾಧ್ಯಾಪಕ ಡಾ. ಕರುಣಾಕರ ನಿಡಿಂಜಿ ಹೇಳ್ಯೊಳ. ಅವ್ ಅರೆಭಾಷೆ ಅಕಾಡೆಮಿ ಲೆಕ್ಕಲಿ ಸುಳ್ಯ ಕನ್ನಡ ಭವನದಲ್ಲಿ ಬುಧವಾರ ನಡ್ದ ಅರೆಭಾಷೆ ದಿನಾಚರಣೆಲಿ ಮುಖ್ಯ ಭಾಷಣಗಾರ‌ನಾಗಿಮಾತಾಡ್ದೊ.

ಸುಳ್ಯಲಿ ನಡ್ತ್ ವಿಶ್ವ ಅರೆಭಾಷೆ ದಿನಾಚರಣೆ| ‘ದೇಶದ ಮೌಖಿಕ ಜಾನಪದ ಸಂಗತಿಗಳ ಬರ್ದ್ ಇಸೊಕು’ – ಡಾ.ಕರುಣಾಕರ ನಿಡಿಂಜಿ Read More »

ಸುಳ್ಯ: ವಿದ್ಯುತ್ ಸ್ಪರ್ಶಿಸಿ ಕೃಷಿಕ ಸಾವು

ಸುಳ್ಯ: ತಮ್ಮ ತೋಟದಲ್ಲಿನ ಕಾಳುಮೆಣಸು ಬಳ್ಳಿಯಿಂದ ಕಾಳುಮೆಣಸು ಕೊಯ್ಯುತ್ತಿದ್ದ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ಕೃಷಿಕರೋರ್ವರು ಮೃತಪಟ್ಟ ಘಟನೆ ಮಡಿಕೇರಿ ತಾಲೂಕಿನ ಚೆಂಬು ಗ್ರಾಮದಲ್ಲಿ ನಡೆದಿದೆ. ಮೃತಪಟ್ಟವರನ್ನು ಗ್ರಾಮದ ದಾಸಪ್ಪ ಎಂದು ಗುರುತಿಸಲಾಗಿದೆ. ಇವರು ಕಾಳುಮೆಣಸು ಕೊಯ್ಯಲು ಅಲ್ಯುಮಿನಿಯಮ್ ಏಣಿ ಬಳಸಿದ್ದು ಏಣಿಯು ಪಕ್ಕದಲ್ಲಿ ಹಾದು ಹೋಗುತ್ತಿದ್ದ ವಿದ್ಯುತ್ ತಂತಿಗೆ ಸ್ಪರ್ಶಿಸಿದೆ. ಈ ವೇಳೆ ದಾಸಪ್ಪರಿಗೆ ವಿದ್ಯುತ್ ಆಘಾತ ಉಂಟಾಗಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಸುಳ್ಯ: ವಿದ್ಯುತ್ ಸ್ಪರ್ಶಿಸಿ ಕೃಷಿಕ ಸಾವು Read More »