December 2021

ಪ್ರಧಾನಿ ಮೋದಿಗೆ ಭೂತಾನ್ ನಿಂದ ಅತ್ಯುನ್ನತ ನಾಗರಿಕ ಪ್ರಶಸ್ತಿಯ ಗೌರವ

ನವದೆಹಲಿ: ಭೂತಾನ್ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ನ್ಗಡಗ್ ಪೆಲ್ ಗಿ ಖೋರ್ಲೋ ಪ್ರಶಸ್ತಿಯನ್ನು ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಪ್ರದಾನ ಮಾಡಲಾಗುವುದು ಅಂತ ತಿಳಿಸಿದೆ.

ಪ್ರಧಾನಿ ಮೋದಿಗೆ ಭೂತಾನ್ ನಿಂದ ಅತ್ಯುನ್ನತ ನಾಗರಿಕ ಪ್ರಶಸ್ತಿಯ ಗೌರವ Read More »

ಅಬ್ಬಬ್ಬಾ..! ಆತನ ಕಿಡ್ನಿಯಲ್ಲಿತ್ತು 156 ಕಿಡ್ನಿಕಲ್ಲು!| ಹುಬ್ಬಳ್ಳಿ ಮೂಲದ ವ್ಯಕ್ತಿಯ ಕೀಹೋಲ್ ಶಸ್ತ್ರಚಿಕಿತ್ಸೆ ಮಾಡಿ ಕಲ್ಲು ಹೊರತೆಗೆದ ವೈದ್ಯರು‌|

ಹೈದರಾಬಾದ್:ನಗರದ ಪ್ರತಿಷ್ಠಿತ ಆಸ್ಪತ್ರೆಯೊಂದರ ವೈದ್ಯರು 50 ವರ್ಷ ವಯಸ್ಸಿನ ರೋಗಿಯೊಬ್ಬರಿಗೆ ಕೀಹೋಲ್ ಶಸ್ತ್ರಚಿಕಿತ್ಸೆ ನಡೆಸಿ 156 ಕಿಡ್ನಿ ಕಲ್ಲುಗಳನ್ನು ಹೊರತೆಗೆದ ಅಪರೂಪದ ಪ್ರಕರಣ ವರದಿಯಾಗಿದೆ. ದೊಡ್ಡ ಶಸ್ತ್ರಚಿಕಿತ್ಸೆ ಬದಲಾಗಿ ಲ್ಯಾಪ್ರೊಸ್ಕೋಪಿ ಮತ್ತು ಎಂಡೋಸ್ಕೋಪಿ ಬಳಸಿ ವೈದ್ಯರು ಈ ದಾಖಲೆ ಸಂಖ್ಯೆಯ ಕಿಡ್ನಿ ಕಲ್ಲುಗಳನ್ನು ಹೊರತೆಗೆದಿದ್ದಾರೆ. ಇದು ಈ ವಿಧಾನದ ಮೂಲಕ ಗರಿಷ್ಠ ಸಂಖ್ಯೆಯ ಕಿಡ್ನಿಕಲ್ಲುಗಳನ್ನು ಹೊರತೆಗೆದ ಪ್ರಕರಣ ಎನಿಸಿಕೊಂಡಿದೆ. ಈ ಶಸ್ತ್ರಚಿಕಿತ್ಸೆಗೆ ವೈದ್ಯರು ಸುಮಾರು 3 ಗಂಟೆ ಕಾಲ ತೆಗೆದುಕೊಂಡರು. ಹುಬ್ಬಳ್ಳಿ ಮೂಲದ ರೋಗಿ ಇದೀಗ ಚೇತರಿಸಿಕೊಂಡಿದ್ದು,

ಅಬ್ಬಬ್ಬಾ..! ಆತನ ಕಿಡ್ನಿಯಲ್ಲಿತ್ತು 156 ಕಿಡ್ನಿಕಲ್ಲು!| ಹುಬ್ಬಳ್ಳಿ ಮೂಲದ ವ್ಯಕ್ತಿಯ ಕೀಹೋಲ್ ಶಸ್ತ್ರಚಿಕಿತ್ಸೆ ಮಾಡಿ ಕಲ್ಲು ಹೊರತೆಗೆದ ವೈದ್ಯರು‌| Read More »

‘ರೇಪ್ ಆಗೋದನ್ನು ತಡೆಯಲಾಗ್ತಿಲ್ಲ ಅಂದ್ರೆ ಮಲಗಿ ಎಂಜಾಯ್ ಮಾಡ್ಬೇಕು!’ – ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ ರಮೇಶ್ ಕುಮಾರ್| ಖಂಡಿಸದೇ ನಕ್ಕ ಸ್ಪೀಕರ್ ಕಾಗೇರಿ|

ಬೆಳಗಾವಿ: ಅತ್ಯಾಚಾರ ಆಗುವಾಗ ತಡೆಯಲು ಸಾಧ್ಯವಾಗದಿದ್ದರೆ ಮಲಗಿ ಎಂಜಾಯ್ ಮಾಡಿಬಿಡಬೇಕು ಎಂದು ಕಾಂಗ್ರೆಸ್ ಶಾಸಕ ಕೆ.ಆರ್.ರಮೇಶ್​ ಕುಮಾರ್ ಹೇಳಿದರು. ಈ ಹೇಳಿಕೆಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನಕ್ಕರು. ಸದನದಲ್ಲಿದ್ದ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರು ಈ ಹೇಳಿಕೆ ಸಹಜ ವಿದ್ಯಮಾನ ಎನ್ನುವಂತೆ ವರ್ತಿಸಿದರು. ಸದನದಲ್ಲಿ ಅತಿವೃಷ್ಟಿ ಕುರಿತು ನಿಯಮ 69ರ ಅಡಿಯಲ್ಲಿ ಚರ್ಚೆ ನಡೆಯುತ್ತಿದ್ದಾಗ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಜೆ 5ರ ವೇಳೆ ಚರ್ಚೆಗೆ ಹೆಚ್ಚಿನ ಸಮಯಬೇಕು ಎಂದು ಸದಸ್ಯರು ವಿನಂತಿಸಿದ್ದರು. ಆಗ ಸಂಜೆ

‘ರೇಪ್ ಆಗೋದನ್ನು ತಡೆಯಲಾಗ್ತಿಲ್ಲ ಅಂದ್ರೆ ಮಲಗಿ ಎಂಜಾಯ್ ಮಾಡ್ಬೇಕು!’ – ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ ರಮೇಶ್ ಕುಮಾರ್| ಖಂಡಿಸದೇ ನಕ್ಕ ಸ್ಪೀಕರ್ ಕಾಗೇರಿ| Read More »

ಉಪ್ಪಿನಂಗಡಿ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ| ಪ್ರತಿಭಟನೆ ನೆಪದಲ್ಲಿ ಪುಂಡಾಟ ನಡೆಸಿದ 10 ಮಂದಿ‌ ಅಂದರ್|

ಉಪ್ಪಿನಂಗಡಿ : ಡಿಸೆಂಬರ್ 14ರ ರಾತ್ರಿ ಉಪ್ಪಿನಂಗಡಿಯಲ್ಲಿ ಠಾಣೆ ಮುಂಭಾಗ ನಡೆದ ಪ್ರತಿಭಟನೆಯ ವೇಳೆ 10 ಮಂದಿ ಪಿಎಫೈ ಕಾರ್ಯಕರ್ತರು ಪೊಲೀಸರ ಮೇಲೆ ನಡೆಸಿದ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳನ್ನು ಮೊಹಮ್ಮದ್ ತಾಹೀರ್, ಸ್ನಾಧಿಕ್, ಅಬ್ದುಲ್ ಮುಬಾರಕ್, ಅಬ್ದುಲ್ ಶರೀನ್, ಮೊಹಮ್ಮದ್ ಜಾಹಿರ್, ಸುಜೀರ್ ಮಹಮ್ಮದ್‌ ಪೈಜಲ್, ಮೊಹಮ್ಮದ್ ಹನೀಫ್, ಎನ್ ಕಾಸಿಂ .ಮೊಹಮ್ಮದ್ ಆಸಿಫ್ ಹಾಗೂ ತುಪೈಲ್ ಮಹಮ್ಮದ್ ಕೆ ಎಂದು ಗುರುತಿಸಲಾಗಿದೆ. ಉಳಿದ ಆರೋಪಿಗಳ ಪತ್ತೆಗೆ ಪೊಲೀಸರು

ಉಪ್ಪಿನಂಗಡಿ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ| ಪ್ರತಿಭಟನೆ ನೆಪದಲ್ಲಿ ಪುಂಡಾಟ ನಡೆಸಿದ 10 ಮಂದಿ‌ ಅಂದರ್| Read More »

ಸೇನಾ ಮುಖ್ಯಸ್ಥರಾಗಿ‌ ಎಂ.ಎಂ ನರವಾಣೆ ಅಧಿಕಾರ ಸ್ವೀಕಾರ

ನವದೆಹಲಿ: ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಾಣೆ ಮೂವರು ಸೇನಾ ಮುಖ್ಯಸ್ಥರನ್ನು ಒಳಗೊಂಡಿರುವ ಸಿಬ್ಬಂದಿ ಮುಖ್ಯಸ್ಥರ ಸಮಿತಿಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ. ಡಿ. 8ರಂದು ವಾಯುಪಡೆಯ ಹೆಲಿಕಾಪ್ಟರ್ ಅಪಘಾತದಲ್ಲಿ ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ನಿಧನರಾದ ನಂತರ ಈ ಹುದ್ದೆಯು ತೆರವಾಗಿತ್ತು. ಮೂರು ಸೇನಾ ಮುಖ್ಯಸ್ಥರ ಪೈಕಿ ಸೇವಾವಧಿಯಲ್ಲಿ ಅತ್ಯಂತ ಹಿರಿಯರಾಗಿರುವ ಜನರಲ್ ನರವಾಣೆ ಅವರಿಗೆ ಈ ಸಮಿತಿಯ ಅಧ್ಯಕ್ಷರ ಜವಾಬ್ದಾರಿ ನೀಡಲಾಗಿದೆ. ಐಎಎಫ್ ಚೀಫ್

ಸೇನಾ ಮುಖ್ಯಸ್ಥರಾಗಿ‌ ಎಂ.ಎಂ ನರವಾಣೆ ಅಧಿಕಾರ ಸ್ವೀಕಾರ Read More »

ಸ್ಕೂಟಿಗೆ ಢಿಕ್ಕಿ ಹೊಡೆದ ಕಾರು| ಮೆಡಿಕಲ್ ವಿದ್ಯಾರ್ಥಿನಿ ಸಾವು

ದಾವಣಗೆರೆ: ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಚಲಾಯಿಸುತ್ತಿದ್ದ ಮೆಡಿಕಲ್ ವಿದ್ಯಾರ್ಥಿನಿ ಮೃತಪಟ್ಟ ಘಟನೆ ದಾವಣಗೆರೆಯಲ್ಲಿ ಸಂಭವಿಸಿದೆ. ದಾವಣಗೆರೆ ನಗರದ ಜೆಜೆಎಂ ಮೆಡಿಕಲ್ ಕಾಲೇಜ್‌ನಲ್ಲಿ ವಿದ್ಯಾರ್ಥಿನಿ ಗುಜರಾತ್ ಮೂಲದ ಪ್ರಿಯಾಂಕಾ (26) ಮೃತ ವಿದ್ಯಾರ್ಥಿನಿ. ಸ್ಕೂಟಿಯಲ್ಲಿ ಕಾಲೇಜಿಗೆ ತೆರಳುವಾಗ ಅನಿರೀಕ್ಷಿತವಾಗಿ ಕಾರು ಡಿಕ್ಕಿ ಹೊಡೆದಿದ್ದರಿಂದ ಸ್ಕೂಟಿಯಿಂದ ಕೆಳಗೆ ಬಿದ್ದ ಪ್ರಿಯಾಂಕಾ ತಲೆಗೆ ಪೆಟ್ಟು ಬಿದ್ದಿದೆ. ತೀವ್ರ ರಕ್ತ ಸ್ರಾವದಿಂದ ಬಳಲುತ್ತಿದ್ದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸುವಾಗ ದಾರಿಯಲ್ಲೆ ಸಾವನ್ನಪ್ಪಿದ್ದಾರೆ. ದಾವಣಗೆರೆ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ

ಸ್ಕೂಟಿಗೆ ಢಿಕ್ಕಿ ಹೊಡೆದ ಕಾರು| ಮೆಡಿಕಲ್ ವಿದ್ಯಾರ್ಥಿನಿ ಸಾವು Read More »

”ಪುತ್ತೂರು ಕಾಲೇಜಿನ ವಿದ್ಯಾರ್ಥಿನಿಯರೇ ಎಚ್ಚರಿಕೆ” ”ಬ್ಯಾರಿಗಳ ಜೊತೆ ಪೆರ್ಚಿ ಕಟ್ಟುವುದು ಗಮನಿಸುತ್ತಿದ್ದೇವೆ”.. ಕಾಲೇಜು ವಿದ್ಯಾರ್ಥಿಗಳ ಗುರಿಯಾಗಿಸಿ ವಾರ್ನಿಂಗ್ |

ಪುತ್ತೂರು : ಇತ್ತೀಚಿನ ದಿನಗಳಲ್ಲಿ ಹಿಂದೂ ವಿದ್ಯಾರ್ಥಿನಿಯರು ಮುಸ್ಲಿಂ ಯುವಕರ ಜೊತೆ ಸುತ್ತಾಡಲು, ಮಾತನಾಡಲು ಹೋಗಿ ಸಿಕ್ಕಿ ಹಾಕಿಕೊಂಡು ಹಿಂದೂ ಸಂಘಟಕರಿಂದ ಹೊಡೆಸಿಕೊಂಡ ಘಟನೆಗಳು ನಡೆದಿವೆ. ಇಂಥಹ ಪರಿಸ್ಥಿತಿಗಳು ಬಾರದಿರಲು ಹಿಂದೂ ಸಂಘಟನೆಯೊಂದರ ಇನ್ಸ್ಟಾಗ್ರಾಂ ಪೇಜ್ ನಲ್ಲಿ ವಿದ್ಯಾರ್ಥಿನಿಯರಿಗೆ ಎಚ್ಚರಿಕೆಯ ವಿಡಿಯೋ ಒಂದನ್ನು ಹರಿಬಿಟ್ಟಿದ್ದಾರೆ. “ಪುತ್ತೂರು ಕಾಲೇಜಿನ ಹಿಂದೂ ವಿದ್ಯಾರ್ಥಿನಿಯರ ಬಸ್ ಸ್ಟಾಂಡ್ ನಲ್ಲಿ ಬ್ಯಾರಿಗಳ ಅಂಗಡಿಯಲ್ಲಿ ಅವರ ಜೊತೆ ಮಾತಾಡುವುದು, ಪೆರ್ಚಿ ಕಟ್ಟುವುದು ಗಮನಿಸುತಿದ್ದೇವೆ. ನೀವಾಗಿಯೆ ಬದಲಾಗುತ್ತೀರಾ ? ಅಥವಾ ನಾವೇ ನಿಮ್ಮನ್ನು ಬದಲಾಯಿಸಬೇಕಾ ..?

”ಪುತ್ತೂರು ಕಾಲೇಜಿನ ವಿದ್ಯಾರ್ಥಿನಿಯರೇ ಎಚ್ಚರಿಕೆ” ”ಬ್ಯಾರಿಗಳ ಜೊತೆ ಪೆರ್ಚಿ ಕಟ್ಟುವುದು ಗಮನಿಸುತ್ತಿದ್ದೇವೆ”.. ಕಾಲೇಜು ವಿದ್ಯಾರ್ಥಿಗಳ ಗುರಿಯಾಗಿಸಿ ವಾರ್ನಿಂಗ್ | Read More »

ಉಪ್ಪಿನಂಗಡಿ ಗಲಬೆ ಪ್ರಕರಣ| ಪಿಎಫ್ಐ ಕಾರ್ಯಕರ್ತರ ಮೇಲೆ ಕೇಸ್ ಜಡಿದ ಪೊಲೀಸರು|

ಉಪ್ಪಿನಂಗಡಿ: ಇಲ್ಲಿನ ಠಾಣೆಯ ಮುಂಭಾಗ ನಡೆದ ಪ್ರತಿಭಟನೆಯ ವೇಳೆ ಮಹಿಳಾ ಪೊಲೀಸರ ಮೇಲೆ ಹಲ್ಲೆ ನಡೆಸಿ ಮಾನಭಂಗಕ್ಕೆ ಯತ್ನಿಸಿದ್ದಾರೆ ಎಂದು 10 ಮಂದಿ ಪಿಎಫ್ಐ ಕಾರ್ಯಕರ್ತರ ಮೇಲೆ ದೂರನ್ನು ಪೊಲೀಸರು ಸ್ವಯಂ ದಾಖಲಿಸಿಕೊಂಡಿದ್ದಾರೆ. ತಾಹಿರ್, ಸಾದಿಕ್, ಅಬ್ದುಲ್ ಮುಬಾರಕ್, ಶರೀನ್, ಮೊಹಮ್ಮದ್ ಜಾಹೀರ್, ಪೈಝಲ್, ಹನೀಫ್, ಕಾಸಿಂ , ಆಸಿಫ್, ತುಪೈಲ್ ಮೇಲೆ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ. ಇವರ ವಿರುದ್ಧ ಐಪಿಸಿಯ ವಿವಿಧ ಕಲಂ ಮತ್ತು ಆಸ್ತಿ ನಷ್ಠ ಕಾಯ್ದೆಯಡಿಯಲ್ಲೂ ಕೇಸ್ ದಾಖಲಾಗಿದೆ. ಇವರು ಅಕ್ರಮವಾಗಿ ಠಾಣೆ

ಉಪ್ಪಿನಂಗಡಿ ಗಲಬೆ ಪ್ರಕರಣ| ಪಿಎಫ್ಐ ಕಾರ್ಯಕರ್ತರ ಮೇಲೆ ಕೇಸ್ ಜಡಿದ ಪೊಲೀಸರು| Read More »

ಸಮಾಜಘಾತುಕ ಶಕ್ತಿಯ ಮಣಿಸಲು ಪೊಲೀಸರಿಗೆ ಪರಮಾಧಿಕಾರ – ಸಚಿವ ಅಂಗಾರ

ಸುಳ್ಯ: ಉಪ್ಪಿನಂಗಡಿ ಪರಿಸರದಲ್ಲಿ ಶಾಂತಿ ಕದಡಲು ಯತ್ನಿಸುತ್ತಿರುವ ಸಮಾಜಘಾತುಕ ಶಕ್ತಿಯ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಅವರು ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದಾರೆ. ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ ನಡೆಸಲು ಯತ್ನಿಸಿದ ಘಟನೆಯನ್ನು ಸಹಿಸಲು ಸಾಧ್ಯವಿಲ್ಲ. ಘಟನೆಗೆ ಕಾರಣರಾದವರನ್ನು ಮಟ್ಟ ಹಾಕಲು ಪೊಲೀಸ್ ಇಲಾಖೆ ಸಮರ್ಥವಾಗಿದೆ. ಗಲಭೆಗೆ ಯತ್ನಿಸುವ ಸಂಘಟನೆಗಳ ವಿರುದ್ದ ಸರಕಾರ ಕಠಿಣ ಕ್ರಮ ಕೈಗೊಳ್ಳಲಿದೆ, ಈ ಕುರಿತು ‌ಗೃಹಸಚಿವರೂ ಸೂಚನೆ ನೀಡಿದ್ದಾರೆ ಎಂದವರು ತಿಳಿಸಿದ್ದಾರೆ.

ಸಮಾಜಘಾತುಕ ಶಕ್ತಿಯ ಮಣಿಸಲು ಪೊಲೀಸರಿಗೆ ಪರಮಾಧಿಕಾರ – ಸಚಿವ ಅಂಗಾರ Read More »

18ರ ವಯಸ್ಸಲ್ಲೇ‌ ಮಗಳಿಗೆ ಮದುವೆ ಮಾಡ್ತಿದೀರಾ? ಹಾಗಾದ್ರೆ ಈ ಸುದ್ದಿ ಓದ್ಲೇಬೇಕು

ನವದೆಹಲಿ: ಸದ್ಯ ಕಾನೂನಿನ ಅನ್ವಯ ಯುವತಿಯರು ಮದುವೆಯಾಗುವುದಿದ್ದರೆ ವಯಸ್ಸು ಕನಿಷ್ಠ 18 ಆಗಬೇಕಿತ್ತು. ಆದರೆ ಇದನ್ನೀಗ 21ಕ್ಕೆ ಏರಿಸಲಾಗಿದೆ. ವಯಸ್ಸನ್ನು ಹೆಚ್ಚಳ ಮಾಡಿರುವ ಪ್ರಸ್ತಾವಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದು ಶೀಘ್ರದಲ್ಲಿ ಕಾನೂನು ರೂಪದಲ್ಲಿ ಜಾರಿಗೆ ಬರಲಿದ್ದು, ಯುವತಿಯರ ಮದುವೆಯ ವಯಸ್ಸು ಕನಿಷ್ಠ 21 ಆಗಲಿದೆ. ಮದುವೆಯ ವಯಸ್ಸನ್ನು 21 ವರ್ಷ ಮಾಡಿದರೆ, ಅದರಿಂದ ಆಗುವ ಸಾಧಕ ಬಾಧಕಗಳ ಕುರಿತು ಚರ್ಚೆಗೆ ಕೇಂದ್ರ ಸರ್ಕಾರ ಒಂದು ಕಾರ್ಯಪಡೆ (ಟಾಸ್ಕ್​ಫೋರ್ಸ್) ರಚಿಸಿತ್ತು. ಸಮತಾ ಪಕ್ಷದ ಮಾಜಿ

18ರ ವಯಸ್ಸಲ್ಲೇ‌ ಮಗಳಿಗೆ ಮದುವೆ ಮಾಡ್ತಿದೀರಾ? ಹಾಗಾದ್ರೆ ಈ ಸುದ್ದಿ ಓದ್ಲೇಬೇಕು Read More »