December 2021

ಕೇರಳದಲ್ಲಿ ದಿನ ಬೆಳಗಾಗುವುದರೊಳಗೆ ಇಬ್ಬರು ರಾಜಕೀಯ ನಾಯಕರ ಹತ್ಯೆ| ಎಸ್.ಡಿ.ಪಿ.ಐ ಹಾಗೂ ಬಿಜೆಪಿ ನಾಯಕರು ಬಲಿ

ಆಲಪ್ಪುಝ: ಬಿಜೆಪಿ ಕೇರಳ ರಾಜ್ಯ ಸಮಿತಿ ಸದಸ್ಯನನ್ನು ಮನೆಗೆ ನುಗ್ಗಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ರಂಜಿತ್ ಶ್ರೀನಿವಾಸನ್ ಹತ್ಯೆ ಗೊಳಗಾದವರು. ಇವರು ಬಿಜೆಪಿಯ ರಾಜ್ಯ ಒಬಿಸಿ ಮೋರ್ಚಾದ ನಾಯಕ ಮತ್ತು ಆರೆಸ್ಸೆಸ್ ನಾಯಕನಾಗಿದ್ದರು. ಇವರ ವಾಸದ ಮನೆಗೆ ನುಗ್ಗಿದ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ರಾತ್ರಿ ಎಸ್ ಡಿಪಿಐ ಕೇರಳ ರಾಜ್ಯ ಸಮಿತಿ ಸದಸ್ಯನನ್ನು ಸಂಘ ಪರಿವಾರದ ಕಾರ್ಯಕರ್ತರು ಎನ್ನಲಾದ ವ್ಯಕ್ತಿಗಳು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಕೆ.ಎಸ್ ಶಾನ್ ನಿನ್ನೆ ರಾತ್ರಿ ಬೈಕ್ ನಲ್ಲಿ […]

ಕೇರಳದಲ್ಲಿ ದಿನ ಬೆಳಗಾಗುವುದರೊಳಗೆ ಇಬ್ಬರು ರಾಜಕೀಯ ನಾಯಕರ ಹತ್ಯೆ| ಎಸ್.ಡಿ.ಪಿ.ಐ ಹಾಗೂ ಬಿಜೆಪಿ ನಾಯಕರು ಬಲಿ Read More »

ಚಾರ್ಮಾಡಿ ಘಾಟ್ ನಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಿದ ದ.ಕ ಡಿಸಿ ಡಾ. ರಾಜೇಂದ್ರ ಕೆ.ವಿ

ಮಂಗಳೂರು: ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಭಾರಿ ವಾಹನಗಳ ಸಂಚಾರಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ನಿರ್ಬಂಧ ವಿಧಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ 73 ಮಂಗಳೂರು -ತುಮಕೂರು ರಸ್ತೆಯ 75 ಕಿಲೋಮೀಟರ್ ಚಾರ್ಮಾಡಿ ಗ್ರಾಮದಿಂದ ದಕ್ಷಿಣಕನ್ನಡ ಜಿಲ್ಲೆ ಗಡಿವರೆಗಿನ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಡಿಸೆಂಬರ್ 18 ರಿಂದ ಮುಂದಿನ ಆದೇಶದವರೆಗೆ ದಿನದ 24 ಗಂಟೆಗಳ ಕಾಲ ಲಘು, ಘನ ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗಿದ್ದು, ಭಾರಿ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.

ಚಾರ್ಮಾಡಿ ಘಾಟ್ ನಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಿದ ದ.ಕ ಡಿಸಿ ಡಾ. ರಾಜೇಂದ್ರ ಕೆ.ವಿ Read More »

ಭೀಕರ ಅಪಘಾತಕ್ಕೆ ಯುವ ನಟಿಯರು ಬಲಿ| ಅಪಘಾತದಲ್ಲಿ ಎರಡು ಹೋಳಾದ ಕಾರು|

ಹೈದರಾಬಾದ್: ಅತೀ ವೇಗವಾಗಿ ಬಂದ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರು ಎರಡು ತುಂಡಾಗಿದ್ದು ಕಿರಿಯ ಕಲಾವಿದೆಯರು ಸೇರಿದಂತೆ ಮೂವರು ಮೃತಪಟ್ಟಿದ್ದಾರೆ. ಗಾಚಿಬೌಲಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಕಲಾವಿದೆಯರಾದ 21 ವರ್ಷದ ಮಾನಸ ಎಂ, 23 ವರ್ಷದ ಮಾನಸ ಎನ್ ಮತ್ತು ಬ್ಯಾಂಕ್ ಉದ್ಯೋಗಿ ಅಬ್ದುಲ್ ರಹೀಮ್ ಸ್ಥಳದಲ್ಲೇ ಸಾವನ್ನಪ್ಪಿದ್ದು ಮತ್ತೊಬ್ಬ ಕಲಾವಿದ ಸಾಯಿ ಸಿಂಧು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತ ಕಲಾವಿದೆಯರಿಬ್ಬರು ಅಮರಪೇಟೆಯ ಹಾಸ್ಟೆಲ್ ನಲ್ಲಿ ವಾಸವಿದ್ದು ಇಬ್ಬರು ಟಿವಿ ಸೀರಿಯಲ್ ನಲ್ಲಿ ಕೆಲಸ

ಭೀಕರ ಅಪಘಾತಕ್ಕೆ ಯುವ ನಟಿಯರು ಬಲಿ| ಅಪಘಾತದಲ್ಲಿ ಎರಡು ಹೋಳಾದ ಕಾರು| Read More »

ಜಿಲ್ಲೆಗೊಂದು ಗೋಶಾಲೆ ಇನ್ನೂ ಪ್ರಾರಂಭವಾಗಿಲ್ಲ| ಹಾಲಿನ ಪ್ರೋತ್ಸಾಹ ಧನ ನೀಡಿಲ್ಲ| ಗೋಮಾಂಸ ರಪ್ತು ಕಂಪನಿಗಳ ಪರವಾನಗಿ ‌ರದ್ದು‌ ಮಾಡಿಲ್ಲ| ಸದನದಲ್ಲಿ ಸರ್ಕಾರವನ್ನು ತರಾಟೆಗೆತ್ತಿಕೊಂಡ ಯು.ಟಿ‌ ಖಾದರ್

ಬೆಳಗಾವಿ:‌ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಕರ್ನಾಟಕ – ಗೋವಾ ಗಡಿಯಲ್ಲಿ ಇರುವ ಗೋಮಾಂಸ ರಫ್ತು ಕಂಪನಿಗಳ ಪರವಾನಗಿ ರದ್ದು ಯಾಕಿಲ್ಲ? ಎಂದು ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಯು.ಟಿ. ಖಾದರ್ ಪ್ರಶ್ನಿಸಿದರು. ವಿಧಾನಸಭೆಯಲ್ಲಿ ನಿಯಮ 69ರ ಅಡಿಯಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡಿದ ಅವರು, ಗೋ ಸಂತತಿ ಜಾಸ್ತಿ ಮಾಡಲು ಸರ್ಕಾರ ಏನು ಮಾಡುತ್ತಿದೆ? ಎಂದು ಪ್ರಶ್ನೆ ಎತ್ತಿದರು. ಹೈನುಗಾರಿಕೆಗೆ, ಹಾಲಿಗೆ ಸಂಬಂಧಿಸಿದ ಪ್ರೋತ್ಸಾಹ ಧನ‌ ಜಾಸ್ತಿ ನೀಡಿದರೆ ರೈತರು ಜಾಸ್ತಿ ಗೋವುಗಳನ್ನು ಸಾಕುತ್ತಾರೆ. ಆದರೆ

ಜಿಲ್ಲೆಗೊಂದು ಗೋಶಾಲೆ ಇನ್ನೂ ಪ್ರಾರಂಭವಾಗಿಲ್ಲ| ಹಾಲಿನ ಪ್ರೋತ್ಸಾಹ ಧನ ನೀಡಿಲ್ಲ| ಗೋಮಾಂಸ ರಪ್ತು ಕಂಪನಿಗಳ ಪರವಾನಗಿ ‌ರದ್ದು‌ ಮಾಡಿಲ್ಲ| ಸದನದಲ್ಲಿ ಸರ್ಕಾರವನ್ನು ತರಾಟೆಗೆತ್ತಿಕೊಂಡ ಯು.ಟಿ‌ ಖಾದರ್ Read More »

ದ್ವಾದಶ ರಾಶಿಗಳ ವಾರ ಭವಿಷ್ಯ

ಸಮಯ ಎನ್ನುವುದು ನಮ್ಮ ಬದುಕಿನ ಪಾಠವನ್ನು ಕಲಿಸುತ್ತದೆ. ಸಮಯಕ್ಕೆ ತಕ್ಕಂತೆ ನಾವು ನಮ್ಮನ್ನು ಬದಲಿಸಿಕೊಳ್ಳುವ ಕೌಶಲ್ಯವನ್ನು ಕಲಿತಿರಬೇಕು. ಇಲ್ಲವಾದರೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುವುದು. ಬದಲಾವಣೆ ಎನ್ನುವುದು ನಿರಂತರವಾಗಿ ಹರಿಯುವ ನದಿಯಂತೆ ಅದು ಹೇಗೆ ಬರುತ್ತದೆಯೋ ಹಾಗೆ ನಾವು ಸ್ವೀಕರಿಸಬೇಕಾಗುವುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ವಾರ ಸಾಕಷ್ಟು ಗ್ರಹಗಳ ಬದಲಾವಣೆಗಳು ಉಂಟಾಗುವುದು ಅವುಗಳ ಪ್ರಭಾವ ರಾಶಿಚಕ್ರಗಳ ಮೇಲೆ ಗಣನೀಯವಾಗಿರುತ್ತವೆ. ಆ ಬದಲಾವಣೆಗಳು ನಿಮ್ಮ ಜೀವನದಲ್ಲಿ ಹೇಗಿರುತ್ತದೆ ಎಂದು ಇಲ್ಲಿ ತಿಳಿಸಲಾಗಿದೆ. ಮೇಷ ರಾಶಿ( ಅಶ್ವಿನಿ ಭರಣಿ ಕೃತಿಕ

ದ್ವಾದಶ ರಾಶಿಗಳ ವಾರ ಭವಿಷ್ಯ Read More »

ರಾಜ್ಯ ಪೊಲೀಸ್ ‌ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ| ಇಲ್ಲಿದೆ ಸಂಪೂರ್ಣ ಮಾಹಿತಿ|

ಕರ್ನಾಟಕ ಪೊಲೀಸ್​ ಇಲಾಖೆಯಲ್ಲಿ ಹಲವು ಹುದ್ದೆಗಳು ಖಾಲಿ ಇದ್ದು, ಉದ್ಯೋಗಾಂಕ್ಷಿಗಳಿಗೆ ಇದೊಂದು ಸುವರ್ಣಾವಕಾಶವಾಗಿದೆ. ನ್ಯಾಯ ವಿಜ್ಞಾನ ಪ್ರಯೋಗಾಲಯ ಮತ್ತು ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯ ಹಲವು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 206 ಸೀನ್​ ಆಫ್​ ಕ್ರೈಂ ಆಫೀಸರ್ ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಡಿಸೆಂಬರ್ 17ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಜನವರಿ 15,

ರಾಜ್ಯ ಪೊಲೀಸ್ ‌ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ| ಇಲ್ಲಿದೆ ಸಂಪೂರ್ಣ ಮಾಹಿತಿ| Read More »

ಮಂಗಳೂರಿಗೂ ಕಾಲಿಟ್ಟ ಓಮಿಕ್ರಾನ್| ಐದು ಮಂದಿಯಲ್ಲಿ ಒಂದೇ ದಿನ ಪತ್ತೆಯಾಯ್ತು ರೂಪಾಂತರಿ ವೈರಸ್|

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಐದು ಮಂದಿಗೆ ಒಂದೇ ದಿನದಲ್ಲಿ ಕೊರೊನಾ ರೂಪಾಂತರಿ ಓಮಿಕ್ರಾನ್ ವೈರಸ್ ಪತ್ತೆಯಾಗಿದ್ದು, ಕರಾವಳಿಯಲ್ಲಿ ಭೀತಿ ಆವರಿಸಿದೆ. ಇದರೊಂದಿಗೆ ರಾಜ್ಯದಲ್ಲಿ ಓಮಿಕ್ರಾನ್ ಪೀಡಿತರ ಸಂಖ್ಯೆ 13ಕ್ಕೇರಿದೆ. ಮಂಗಳೂರು ಹೊರವಲಯದ ವಸತಿ ಶಾಲೆಯ ನಾಲ್ವರು ಮಕ್ಕಳಲ್ಲಿ ಓಮಿಕ್ರಾನ್ ವೈರಸ್ ಪತ್ತೆಯಾಗಿರುವ ಬಗ್ಗೆ ಆರೋಗ್ಯ ಅಧಿಕಾರಿಗಳು ದೃಢಪಡಿಸಿದ್ದಾರೆ. ಇನ್ನೊಬ್ಬ ಕೇರಳ ಮೂಲದ ಮೆಡಿಕಲ್ ವಿದ್ಯಾರ್ಥಿನಿಯಲ್ಲಿ ಓಮಿಕ್ರಾನ್ ವೈರಸ್ ಪತ್ತೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಆದವರನ್ನು ಪ್ರತಿ ದಿನವೂ ಓಮಿಕ್ರಾನ್ ವೈರಸ್ ಪತ್ತೆಗಾಗಿ

ಮಂಗಳೂರಿಗೂ ಕಾಲಿಟ್ಟ ಓಮಿಕ್ರಾನ್| ಐದು ಮಂದಿಯಲ್ಲಿ ಒಂದೇ ದಿನ ಪತ್ತೆಯಾಯ್ತು ರೂಪಾಂತರಿ ವೈರಸ್| Read More »

ಪಾಕಿಸ್ತಾನದಲ್ಲಿ ಭಾರೀ ಸ್ಫೋಟ, 12 ಸಾವು, ಹಲವು‌ ಮಂದಿ ಗಂಭೀರ

ಕರಾಚಿ: ಪಾಕಿಸ್ತಾನದ ಕರಾಚಿಯ ಶೇರ್ಷಾ ಪರಾಚಾ ಚೌಕ್ ಪ್ರದೇಶದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಹಲವು ಜನರು ಸಾವನ್ನಪ್ಪಿದ್ದಾರೆ. ಶನಿವಾರ ಮಧ್ಯಾಹ್ನ ಈ ಪ್ರದೇಶದ ಕಟ್ಟಡವೊಂದರಲ್ಲಿ ಸಂಭವಿಸಿದ ಸ್ಫೋಟದಲ್ಲಿ 12 ಮಂದಿ ಸಾವನ್ನಪ್ಪಿದ್ದಾರೆ. ಸ್ಫೋಟದಲ್ಲಿ ಹಲವರು ಗಾಯಗೊಂಡಿದ್ದು, ಖಾಸಗಿ ಬ್ಯಾಂಕ್ ಬಳಿಯ ಸೈಟ್ ಪ್ರದೇಶದಲ್ಲಿ ಈ ಸ್ಫೋಟ ಸಂಭವಿಸಿದೆ ಎಂದು ಹೇಳಲಾಗುತ್ತಿದೆ, ಇದರಿಂದಾಗಿ ಆ ಪ್ರದೇಶದಲ್ಲಿ ಇರುವ ಇತರ ಕಟ್ಟಡಗಳು ಸಹ ಹಾನಿಗೊಳಗಾಗಿವೆ. ಪೊಲೀಸರು ಮತ್ತು ರಕ್ಷಣಾ ಅಧಿಕಾರಿಗಳು ಸ್ಫೋಟ ಸಂಭವಿಸಿರುವ ಸ್ಥಳಕ್ಕೆ ತಲುಪಿದ್ದಾರೆ. ಬ್ಯಾಂಕ್ ಅಡಿಯಲ್ಲಿರುವ ಚರಂಡಿಯಲ್ಲಿ ಸ್ಫೋಟ

ಪಾಕಿಸ್ತಾನದಲ್ಲಿ ಭಾರೀ ಸ್ಫೋಟ, 12 ಸಾವು, ಹಲವು‌ ಮಂದಿ ಗಂಭೀರ Read More »

ದತ್ತ ಜಯಂತಿ ಹಿನ್ನೆಲೆ: ಚಿಕ್ಕಮಗಳೂರಲ್ಲಿ ಕೇಸರಿ ಕಲರವ

ಚಿಕ್ಕಮಗಳೂರು: ದತ್ತ ಜಯಂತಿ ಅಂಗವಾಗಿ ಶುಕ್ರವಾರ ಜರುಗಿದ ಅನಸೂಯಾ ದೇವಿ ಪೂಜಾ ಕಾರ್ಯದಲ್ಲಿ ನಾಡಿನ ವಿವಿಧೆಡೆ ಮಹಿಳೆಯರು ಪಾಲ್ಗೊಂಡಿದ್ದರು. ಶ್ರೀಗುರು ದತ್ತಾತ್ರೇಯ ಬಾಬಾಬುಡನ್‌ ಸ್ವಾಮಿ ದರ್ಗಾದಲ್ಲಿ ದತ್ತಪಾದುಕೆ ದರ್ಶನ ಮಾಡಿ ಪುನೀತಭಾವ ಮೆರೆದರು. ಭಕ್ತೆಯರು ಬೆಳಿಗ್ಗೆ ನಗರದಲ್ಲಿ ಸಂಕೀರ್ತನಾ ಯಾತ್ರೆ ಮುಗಿಸಿ ವಾಹನಗಳಲ್ಲಿ ಗಿರಿಗೆ ತೆರಳಿದರು. ಗಿರಿಯಲ್ಲಿ ಸಾಲಾಗಿ ಗುಹೆಯೊಳಗೆ ತೆರಳಿ ದರ್ಶನ ಮಾಡಿ ಭಕ್ತಿ ಸಮರ್ಪಿಸಿದರು. ಗಿರಿಯಲ್ಲಿ ಸಭಾಮಂಟಪದಲ್ಲಿ ಅನಸೂಯಾ ದೇವಿ, ಅತ್ರಿ ಮಹರ್ಷಿ, ಶ್ರೀಗುರುದತ್ತಾತ್ರೇಯರ ಮೂರ್ತಿಗಳಿಗೆ ವಿವಿಧ ಪೂಜೆಗಳು ನೆರವೇರಿದವು. ಗಣಪತಿ ಹೋಮ, ದುರ್ಗಾ

ದತ್ತ ಜಯಂತಿ ಹಿನ್ನೆಲೆ: ಚಿಕ್ಕಮಗಳೂರಲ್ಲಿ ಕೇಸರಿ ಕಲರವ Read More »

ಬೆಳಗಾವಿಯಲ್ಲಿ ಸಂಘಟನೆ ಕಾರ್ಯಕರ್ತರಿಂದ ಕಲ್ಲು ತೂರಾಟ|ತಪ್ಪಿತಸ್ಥರನ್ನು ಬೆಂಡೆತ್ತದೆ ಬಿಡಲ್ಲವೆಂದ ಗೃಹ ಸಚಿವ

ಬೆಳಗಾವಿ : ನಗರದ ಸಂಭಾಜಿ ವೃತ್ತದಲ್ಲಿ ಶುಕ್ರವಾರ ಕೆಲ‌ ಸಂಘಟನೆಗಳ ಕಾರ್ಯಕರ್ತರು ರಾತ್ರೋರಾತ್ರಿ ದಿಢೀರ್ ಪ್ರತಿಭಟನೆ ನಡೆಸಿ ಕಲ್ಲು ತೂರಾಟ ಮಾಡಿದ ಬಗ್ಗೆ ಗೃಹ ಸಚಿವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಪ್ಪಿತಸ್ಥರನ್ನು ಸರ್ಕಾರ ಸುಮ್ಮನೆ ಬಿಡಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಪುಂಡರ ಮೇಲೆ ಕ್ರಮ ಕೈಗೊಳ್ಳುತ್ತೇವೆ. ತಪ್ಪಿತಸ್ಥರನ್ನು ಸರ್ಕಾರ ಸುಮ್ಮನೆ ಬಿಡಲ್ಲ. ಇಂತಹ ಪುಂಡರನ್ನು ಹತ್ತಿಕ್ಕುತ್ತೇವೆ. ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಈಗಾಗಲೇ ಪೊಲೀಸರಿಗೆ ಸೂಚನೆ ನೀಡಿದ್ದೇವೆ. ಪೊಲೀಸರು ತೆಗೆದುಕೊಳ್ಳುವ ಕ್ರಮವನ್ನು ನೋಡಿ ಎಂದಿದ್ದಾರೆ. ಇದು ಬೆರಳೆಣಿಕೆಯಷ್ಟು ಪುಂಡರು ಮಾಡುತ್ತಿರುವ

ಬೆಳಗಾವಿಯಲ್ಲಿ ಸಂಘಟನೆ ಕಾರ್ಯಕರ್ತರಿಂದ ಕಲ್ಲು ತೂರಾಟ|ತಪ್ಪಿತಸ್ಥರನ್ನು ಬೆಂಡೆತ್ತದೆ ಬಿಡಲ್ಲವೆಂದ ಗೃಹ ಸಚಿವ Read More »