Ad Widget .

ರಾಜ್ಯದಲ್ಲಿ ಜೋರಾಗ್ತಿದೆ ಒಮೆಕ್ರಾನ್ ಹವಾ| ಕ್ರಿಸ್ಮಸ್‌, ಹೊಸವರ್ಷ ಸಂಭ್ರಮಾಚರಣೆಗೆ ಬ್ರೇಕ್ ಸಾಧ್ಯತೆ| ಮತ್ತೆ ಟೈಟ್ ರೂಲ್ಸ್ ಗೆ ಚಿಂತನೆ?

Ad Widget . Ad Widget .

ಬೆಂಗಳೂರು: ರಾಜ್ಯದಲ್ಲಿ ಒಮಿಕ್ರಾನ್ ವೈರಸ್ ಆರ್ಭಟ ಮುಂದುವರೆದಿದೆ. ನಿನ್ನೆ ಹೊಸದಾಗಿ ಐವರಿಗೆ ಓಮಿಕ್ರಾನ್ ವೈರಸ್ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಈ ಹಿನ್ನಲೆಯಲ್ಲಿ ರಾಜ್ಯದಲ್ಲಿ ಕೊರೋನಾದಂತೆ ಒಮಿಕ್ರಾನ್ ವೈರಸ್ ಸೋಂಕು ಕಂಟಕವಾಗುವ ಆತಂಕ ಶುರುವಾಗಿದೆ.

Ad Widget . Ad Widget .

ನಿನ್ನೆ ಯುಕೆ ಸೇರಿದಂತೆ ವಿವಿಧ ದೇಶಗಳಲ್ಲಿ ಕರ್ನಾಟಕಕ್ಕೆ ಆಗಮಿಸಿದ್ದಂತ ಐವರು ವಿದೇಶಿಗರಿಗೆ ಓಮಿಕ್ರಾನ್ ವೈರಸ್ ಸೋಂಕು ಇರುವುದು ದೃಢಪಟ್ಟಿತ್ತು.

ಒಮೆಕ್ರಾನ್ ನಿಂದಾಗಿ ಸಾರ್ವಜನಿಕ ಪ್ರದೇಶಗಳ ಪ್ರವೇಶಕ್ಕೆ ಸರ್ಕಾರ ಪಾಸ್ ವಿತರಣೆ ಮಾಡುವ ಚಿಂತನೆ ನಡೆಸಿದೆ ಎನ್ನಲಾಗಿದೆ. ಕೋವಿಡ್ ಲಸಿಕೆ ಪಡೆದವರಿಗೆ ಮಾತ್ರವೇ ಮಾಲ್, ಥಿಯೇಟರ್ ಸೇರಿದಂತೆ ಇತರೆ ಸಾರ್ವನಿಕ ಸ್ಥಳಗಳಲ್ಲಿ ಪಾಸ್ ಇದ್ದವರಿಗೆ ಮಾತ್ರ ಎಂಟ್ರಿ ಕೊಡುವ ಅವಕಾಶ ಮಾಡಿಕೊಡುವಂತ ಕಠಿಣ ಕ್ರಮ ಕೈಗೊಳ್ಳಲಿದೆ ಎನ್ನಲಾಗುತ್ತಿದೆ.

ಇ-ಪಾಸ್ ವ್ಯವಸ್ಥೆ ಜಾರಿಗೊಳಿಸೋದಕ್ಕೆ ತಾಂತ್ರಿಕ ತಜ್ಞರ ಸಲಹಾ ಸಮಿತಿಯು ಬಿಬಿಎಂಪಿ, ರಾಜ್ಯ ಸರ್ಕಾರ ಸಲಹೆ ಮಾಡಿದೆ ಎನ್ನಲಾಗಿದೆ. ಒಮಿಕ್ರಾನ್ ವೈರಸ್ ಸೋಂಕು ಮತ್ತಷ್ಟು ಜನರಿಗೆ ಹರಡದಂತೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳೋದಕ್ಕೆ ಈ ಪಾಸ್ ವ್ಯವಸ್ಥೆಯನ್ನು ಜಾರಿಗೆ ಮಾಡುವಂತೆ ಸೂಚಿಸಿದೆ ಎಂದು ತಿಳಿದು ಬಂದಿದೆ.

Leave a Comment

Your email address will not be published. Required fields are marked *