Ad Widget .

ಸುಳ್ಯ: ಹೋರಿ ತಿವಿದು ವ್ಯಕ್ತಿ ಸಾವು

Ad Widget . Ad Widget .

ಸುಳ್ಯ: ಹೋರಿಯೊಂದು ತಿವಿದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಸುಳ್ಯ ತಾಲೂಕಿನ ಮುರುಳ್ಯದ ಕೋಡಿಯಡ್ಕದಲ್ಲಿ ನಡೆದಿದೆ.
ಮುರುಳ್ಯ ಗ್ರಾಮದ ಪೂದೆಯ ಕಿಟ್ಟಣ್ಣ ಗೌಡ ಕೋಡಿಯಡ್ಕ ಎಂಬವರು ಮೃತಪಟ್ಟ ವ್ಯಕ್ತಿ.

Ad Widget . Ad Widget .

ತಾನು ಸಾಕಿರುವ ಹೋರಿಯನ್ನು ತೋಟದಲ್ಲಿ ಮೇಯಲು ಕಟ್ಟಿದ್ದು ಸಂಜೆ ವೇಳೆಗೆ ಹೋರಿಯನ್ನು ಹಟ್ಟಿಗೆ ತರಲು ಕಿಟ್ಟಣ್ಣ ಗೌಡರು ತೆರಳಿದ್ದರು ಎನ್ನಲಾಗಿದೆ. ಅಲ್ಲಿ ಹೋರಿ ತಿವಿದು ಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಇಂದು ಆ ದಾರಿಯಲ್ಲಿ ಬಂದ ವ್ಯಕ್ತಿಯೋರ್ವರಿಗೆ ಕಿಟ್ಟಣ್ಣ ಗೌಡರು ಬಿದ್ದುಕೊಂಡಿರುವುದು ಕಂಡುಬಂದಿದ್ದು, ಅಲ್ಲೇ ಪಕ್ಕದಲ್ಲಿ ಹೋರಿ ಕಟ್ಟಿ ಹಾಕಿರುವುದನ್ನು ನೋಡಿದ್ದಾರೆ. ಈ ವ್ಯಕ್ತಿ ಹತ್ತಿರ ಹೋಗಿ ನೋಡುವಾಗ ಕಿಟ್ಟಣ್ಣ ಗೌಡರು ಮೃತಪಟ್ಟಿರುವುದು ತಿಳಿದು ಬಂದಿದೆ.

ಈ ಬಗ್ಗೆ ಬೆಳ್ಳಾರೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು ಬೆಳ್ಳಾರೆ ಪೊಲೀಸರು ಸ್ಥಳಕ್ಕೆ ಬಂದು ತನಿಖೆ ನಡೆಸಿದ್ದಾರೆ.
ಮೃತ ಶರೀರವನ್ನು ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಮಹಜರು ನಡೆಸಲಾಗಿದೆ. ಮೃತರಿಗೆ 55ವರ್ಷ ವಯಸ್ಸಾಗಿತ್ತು.

Leave a Comment

Your email address will not be published. Required fields are marked *