Ad Widget .

ಚಂದ್ರನ ಅಂಗಳದಲ್ಲಿ ಗುಡಿಸಲು ಪತ್ತೆ!! | ವಿಜ್ಞಾನಿಗಳು ರಿವೀಲ್ ಮಾಡಿದ ನಿಗೂಢ ಆಕೃತಿ ಏನದು?

Ad Widget . Ad Widget .

ಬೀಜಿಂಗ್: ವಿಜ್ಞಾನಿಗಳು ಚಂದ್ರನ ಮೇಲೆ ಗುಡಿಸಲಿನಂತೆ ಕಂಡು ಬಂದ ಫೋಟೋವನ್ನು ಶೇರ್ ಮಾಡಿದ್ದು, ಅದನ್ನು ನೋಡಿ ಎಲ್ಲರೂ ದಿಗ್ಭ್ರಮೆಗೊಳಗಾಗಿದ್ದಾರೆ.

Ad Widget . Ad Widget .

ಏನಿದು ಚಂದ್ರನ ಮೇಲೆ ಜನರು ವಾಸಿಸುತ್ತಿದ್ದರಾ ಎಂಬ ಪ್ರಶ್ನೆ ಈ ಚಿತ್ರ ನೋಡಿದ ಪ್ರತಿಯೊಬ್ಬರಿಗೂ ಕಾಡುತ್ತೆ. ಈ ಫೋಟೋ ವಿಜ್ಞಾನಿಗಳನ್ನು ದಿಗ್ಭ್ರಮೆಗೊಳಿಸಿದೆ. ಚೀನಾದ ಯುಟು-2 ರೋವರ್(ಯುಟು 2 ರೋವರ್)ನ ವಿಜ್ಞಾನಿಗಳು ಚಂದ್ರನ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾಗ, ಚಂದ್ರನ ಮೇಲೆ ಗುಡಿಸಲು ಆಕಾರದ ವಸ್ತುವನ್ನು ಪತ್ತೆ ಮಾಡಿದಂತಿದೆ. ಈ ವಸ್ತುವು ಚಂದ್ರನ ದೂರದ ಪ್ರದೇಶವಾದ ವಾನ್ ಕರ್ಮನ್ ಕ್ರೇಟರ್ ಬಳಿ ಗೋಚರಿಸಿದೆ ಎಂದು ವಿಜ್ಞಾನಿಗಳು ತಿಳಿಸಿದರು. ಚೀನೀ ವಿಜ್ಞಾನಿಗಳು ಗುಡಿಸಲು ಆಕಾರದಲ್ಲಿ ಕಂಡ ಆ ವಸ್ತುವನ್ನು ‘ಮಿಸ್ಟರಿ ಹಟ್’ ಎಂದು ಹೆಸರಿಸಿದ್ದಾರೆ.

ಹಾಗಾದರೆ ಗುಡಿಯಾಕಾರದ ಈ ವಸ್ತು ಯಾವುದು? ಈ ನಿಗೂಢ ಆಕೃತಿಯು ಒಂದು ದೊಡ್ಡ ಕಲ್ಲಿನ ತುಂಡಾಗಿರಬಹುದು ಎಂದು ಅನೇಕ ತಜ್ಞರು ಹೇಳುತ್ತಾರೆ. ರೋವರ್ ಆ ಸ್ಥಳವನ್ನು ಸಮೀಪಿಸಿದ ನಂತರವೇ ಈ ರಹಸ್ಯವನ್ನು ಪೂರ್ತಿಯಾಗಿ ತಿಳಿದುಕೊಳ್ಳಲು ಸಾಧ್ಯ ಎಂದು ವಿಜ್ಞಾನಿಗಳು ತಿಳಿಸಿದರು. ವಿಜ್ಞಾನಿಗಳು ಸ್ವಾಭಾವಿಕವಾಗಿ ಈ ವಸ್ತುವಿನ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ವ್ಯಕ್ತಪಡಿಸಿದ್ದಾರೆ.

2019 ರ ಜನವರಿ 3 ರಂದು ಸೌರಶಕ್ತಿ ಚಾಲಿತ ಯುಟು 2 ಮತ್ತು Chang’e 4 ಲ್ಯಾಂಡರ್ ಚಂದ್ರನ ಅಂತ್ಯಂತ ದೂರ ಪ್ರದೇಶದ ಮೇಲೆ ಲ್ಯಾಂಡ್ ಮಾಡಿತು. ಈ ವೇಳೆ ಯುಟು-2 ಚಂದ್ರನ ಮೇಲೆ 186 ಕಿಲೋಮೀಟರ್‍ಗಳಷ್ಟು ಹರಡಿ ವಾನ್ ಕರ್ಮನ್ ಕ್ರೇಟರ್ ಅನ್ನು ತನಿಖೆ ಮಾಡುತ್ತಿದೆ.

ಚಂದ್ರನ ಮೇಲೆ ಗುಡಿಸಲು? – ಫೋಟೋ ಶೇರ್ ಮಾಡಿದ ವಿಜ್ಞಾನಿಗಳು
‘ಯುಟು’ ಎಂದ ಪದದಲ್ಲಿ ಕುತೂಹಲಕಾರಿಯಾದ ವಿಷಯವು ಸಹ ಚೈನೀಸ್ ಭಾಷೆ ಇದೆ. ಈ ಪದಕ್ಕೆ ಚೈನೀಸ್ ಭಾಷೆಯಲ್ಲಿ ಮಹತ್ವವಿದೆ. ಪೂರ್ವ ಏಷ್ಯಾದ ಜಾನಪದದಲ್ಲಿ ಯುಟು ಚಂದ್ರನ ಮೇಲೆ ವಾಸಿಸುವ ಮೊಲವಾಗಿದೆ. ಚೀನೀ ಪುರಾಣದಲ್ಲಿ, ಯುಡು ಅಥವಾ ಯುಟು ಭೂಗತ ಜಗತ್ತಿನ ರಾಜಧಾನಿಯಾಗಿದೆ.

Leave a Comment

Your email address will not be published. Required fields are marked *