November 2021

ಕಡಬ: ಆರೋಪಿಯಿಂದ ಹಣ ಪೀಕಿಸುವ ನೆಪದಲ್ಲಿ ಬೆದರಿಕೆ ಆರೋಪ| ಪತ್ರಕರ್ತ ಗಣೇಶ್ ಇಡಾಳ ವಿರುದ್ದ ಎಫ್ಐಆರ್

ಮಂಗಳೂರು: ಮಾನಭಂಗ ಯತ್ನ ಪ್ರಕರಣದ ಆರೋಪಿಯಿಂದ ಹಣ ವಸೂಲಿ ಮಾಡಲು ಬೆದರಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದಲ್ಲಿ ಕಡಬದ ಸ್ಥಳೀಯ ಪತ್ರಕರ್ತನೊಬ್ಬನ ಮೇಲೆ ಪ್ರಕರಣ ದಾಖಲಾಗಿದೆ. ಪತ್ರಕರ್ತ ಗಣೇಶ ಇಡಾಳ ಎಂಬಾತನ ವಿರುದ್ಧ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ‘ಸೊಬಗು ಟಿವಿ’ ಹಾಗೂ ಅದರ ಮಾಲಿಕರ ಹೆಸರಿನಲ್ಲಿ ಹಣ ವಸೂಲಿ ಮಾಡಲು ಯತ್ನಿಸಿದಲ್ಲದೇ , ಅವರನ್ನು ಅವಾಚ್ಯ ಶಬ್ದಗಳಿಂದ ನಿಂಧಿಸಿ ಕೊಲೆ ಬೆದರಿಕೆ ಹಾಕಿರುವ ದೂರಿಗೆ ಸಂಬಂಧಪಟ್ಟಂತೆ ಪುತ್ತೂರು ಜೆ.ಎಮ್.ಎಫ್.ಸಿ ನ್ಯಾಯಾಲಯದ ಆದೇಶದಂತೆ , ಗಣೇಶ ಇಡಾಳ […]

ಕಡಬ: ಆರೋಪಿಯಿಂದ ಹಣ ಪೀಕಿಸುವ ನೆಪದಲ್ಲಿ ಬೆದರಿಕೆ ಆರೋಪ| ಪತ್ರಕರ್ತ ಗಣೇಶ್ ಇಡಾಳ ವಿರುದ್ದ ಎಫ್ಐಆರ್ Read More »

ಅಪ್ಪುವಿನ ತದ್ರೂಪ ಈ ಯುವಕ – ತಕ್ಷಣಕ್ಕೆ ನೋಡಿದರೆ ಥೇಟ್ ಪುನೀತ್ ರಾಜ್ ಕುಮಾರ್!

ಕುಂದಾಪುರ: ಕನ್ನಡ ಚಿತ್ರರಂಗದಲ್ಲಿ ಜೂನಿಯರ್ ರಾಜ್ ಕುಮಾರ್, ಜೂನಿಯರ್ ವಿಷ್ಣುವರ್ಧನ್, ಜೂನಿಯರ್ ಶಂಕರ್ನಾಗ್, ಜೂನಿಯರ್ ಅಂಬರೀಷ್, ಜೂನಿಯರ್ ಉಪೇಂದ್ರ..ಹೀಗೆ ಸ್ಯಾಂಡಲ್ ವುಡ್ ದೊಡ್ಡದೊಡ್ಡ ನಟರನ್ನೇ ಹೋಲುವಂಥ, ತಕ್ಷಣಕ್ಕೆ ನೋಡಿದರೆ ಅವರೇ ಅನಿಸುವಂಥವರಿದ್ದಾರೆ. ಅದೇ ರೀತಿ ಪುನೀತ್ ರಾಜ್ ಕುಮಾರ್ ರನ್ನು ಹೋಲುವ ಯುವಕನೊಬ್ಬ ಈಗ ಜನರ ಗಮನ ಸೆಳೆಯಲಾರಂಭಿಸಿದ್ದಾನೆ. ಹೌದು.. ಈಗ ಎಲ್ಲೆಡೆ ಪುನೀತ್ ರಾಜಕುಮಾರ್ ಅವರ ವಿಚಾರವೇ ಚರ್ಚೆಯಲ್ಲಿ ಇರುವ ಈ ಸಂದರ್ಭದಲ್ಲಿ ಇಲ್ಲೊಬ್ಬ ಜೂನಿಯರ್ ಪುನೀತ್ ರಾಜಕುಮಾರ್ ಎಂದೇ ಗುರುತಿಸಿಕೊಳ್ಳುತ್ತಿರುವ ಯುವಕನೊಬ್ಬ ಜನರ ಗಮನವನ್ನು

ಅಪ್ಪುವಿನ ತದ್ರೂಪ ಈ ಯುವಕ – ತಕ್ಷಣಕ್ಕೆ ನೋಡಿದರೆ ಥೇಟ್ ಪುನೀತ್ ರಾಜ್ ಕುಮಾರ್! Read More »

ಆತ್ಮಹತ್ಯೆ ಮಾಡಿಕೊಂಡು ಪುನೀತ್ ಆತ್ಮಕ್ಕೆ ಅಗೌರವ ತೋರಬೇಡಿ – ಅಭಿಮಾನಿಗಳಿಗೆ ರಾಜ್ ಕುಟುಂಬಸ್ಥರ ಮನವಿ

ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ ಅಗಲಿಕೆಯಿಂದ ಅವರ ಅಭಿಮಾನಿಗಳು ತೀವ್ರ ನೋವಿನಲ್ಲಿ ಮುಳುಗಿದ್ದು, ಅಭಿಮಾನಿಗಳು ಆತ್ಮಹತ್ಯೆಗೆ ಶರಣಾಗುತ್ತಿರುವ ಪ್ರಕರಣಗಳು ಮುಂದುವರೆದಿವೆ. ಈ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡು ಪುನೀತ್ ಗೆ ಅಗೌರವ ತೋರಿಸದಂತೆ ಕುಟುಂಬಸ್ಥರು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ನಿನ್ನೆ ವೆಂಕಟೇಶ್ ಎಂಬ 25 ವರ್ಷದ ಪುನೀತ್ ಅವರ ಅಭಿಮಾನಿ ತಮ್ಮ ಮನೆಯಲ್ಲಿ ನೇಣಿ ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಪುನೀತ್ ಅವರ ಅಂತಿಮ ಸಂಸ್ಕಾರದ ವಿಡಿಯೋಗಳು, ಸಿನಿಮಾಗಳು ಹಾಗೂ ಹಾಡುಗಳನ್ನು ಸುದೀರ್ಘವಾಗಿ ನೋಡುತ್ತಿದ್ದ ಅತ

ಆತ್ಮಹತ್ಯೆ ಮಾಡಿಕೊಂಡು ಪುನೀತ್ ಆತ್ಮಕ್ಕೆ ಅಗೌರವ ತೋರಬೇಡಿ – ಅಭಿಮಾನಿಗಳಿಗೆ ರಾಜ್ ಕುಟುಂಬಸ್ಥರ ಮನವಿ Read More »

ಕೊರೊನಾ ಇಳಿಕೆ ಹಿನ್ನೆಲೆ| ರಾಜ್ಯದಲ್ಲಿ ನೈಟ್ ಕರ್ಪ್ಯೂ ತೆರವು|

ಬೆಂಗಳೂರು: ರಾಜ್ಯದಲ್ಲಿ ಜಾರಿಗೊಳಿಸಲಾಗಿದ್ದ ನೈಟ್ ಕರ್ಫ್ಯೂ ಹಿಂಪಡೆಯಲಾಗಿದೆ. ಕೊರೋನಾ ಕಡಿಮೆಯಾದ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ನೈಟ್ ಕರ್ಫ್ಯೂ ವಾಪಸ್ ಪಡೆದುಕೊಂಡಿದೆ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ನೈಟ್ ಕರ್ಫ್ಯೂ ಜಾರಿಗೊಳಿಸಲಾಗಿತ್ತು. ಕೊರೋನಾ ಕಾರಣದಿಂದ ರಾಜ್ಯದಲ್ಲಿ ನೈಟ್ ಕರ್ಫ್ಯೂ ಅವಧಿಯನ್ನು ಆಗಾಗ ಬದಲಾವಣೆ ಮಾಡಲಾಗಿತ್ತು. ಈಗ 18 ತಿಂಗಳ ನಂತರ ನೈಟ್ ಕರ್ಫ್ಯೂ ಹಿಂಪಡೆಯಲಾಗಿದೆ. ಕೊರೋನಾ ಸೋಂಕು ಇಳಿಮುಖವಾದ ಹಿನ್ನೆಲೆಯಲ್ಲಿ ನೈಟ್ ಕರ್ಫ್ಯೂವನ್ನು ರಾಜ್ಯ ಸರ್ಕಾರ ವಾಪಸ್ ಪಡೆದುಕೊಂಡಿದೆ. ಕೋವಿಡ್ ನಿಯಮಗಳನ್ನು ಪಾಲಿಸಿ ಕುದುರೆ ರೇಸ್

ಕೊರೊನಾ ಇಳಿಕೆ ಹಿನ್ನೆಲೆ| ರಾಜ್ಯದಲ್ಲಿ ನೈಟ್ ಕರ್ಪ್ಯೂ ತೆರವು| Read More »

ಸುಳ್ಯ| ಅಡಿಕೆ ಕದ್ದ ಬಾಲಕನಿಗೆ ಮಾರಣಾಂತಿಕ ಹಲ್ಲೆ| 10 ಮಂದಿ ಮೇಲೆ ಎಫ್ಐಆರ್| ತಲೆಮರೆಸಿಕೊಂಡ ಆರೋಪಿಗಳು

ಸುಳ್ಯ: ತಾಲೂಕಿನ ಗುತ್ತಿಗಾರು ಗ್ರಾಮದ ವಳಲಂಬೆಯ ಪುರ್ಲುಮಕ್ಕಿ ಎಂಬಲ್ಲಿ ಕಳೆದ ವಾರ ಹಣ್ಣು ಅಡಿಕೆ ಕದ್ದಿದ್ದಾನೆ ಎಂಬ ಆರೋಪದಲ್ಲಿ ಬಾಲಕನಿಗೆ ಹಲ್ಲೆ ನಡೆಸಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಹಲ್ಲೆಗೊಳಗಾದ ಬಾಲಕ ಮಕ್ಕಳ ಕಲ್ಯಾಣ ಸಮಿತಿಗೆ ದೂರು ನೀಡಿದ್ದು ಹಲ್ಲೆ ನಡೆಸಿದ 10 ಮಂದಿ ಮೇಲೆ ಎಫ್ ಐ ಆರ್ ದಾಖಲಾಗಿದೆ. ಗುತ್ತಿಗಾರಿನ 16 ವರ್ಷದ ಬಾಲಕನಿಗೆ ಅಡಿಕೆ ಕದ್ದ ಆರೋಪದಲ್ಲಿ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಮಾತ್ರವಲ್ಲದೆ ಹಲ್ಲೆ ನಡೆಸಿದ ವಿಡಿಯೋ ಕೂಡ ಗ್ರೂಪ್‌ಗಳಲ್ಲಿ ಹರಿಯಬಿಡಲಾಗಿದೆ. ಇದರ

ಸುಳ್ಯ| ಅಡಿಕೆ ಕದ್ದ ಬಾಲಕನಿಗೆ ಮಾರಣಾಂತಿಕ ಹಲ್ಲೆ| 10 ಮಂದಿ ಮೇಲೆ ಎಫ್ಐಆರ್| ತಲೆಮರೆಸಿಕೊಂಡ ಆರೋಪಿಗಳು Read More »

ಸುಳ್ಯ| ಹಳೆ ಕಬ್ಬಿಣ ಸಾಮಾಗ್ರಿ ತೆರವು ವೇಳೆ ಕುಸಿದ ಗೋಡೆ| ಗುಜರಿ ವ್ಯಾಪಾರಿ ದುರ್ಮರಣ

ಸುಳ್ಯ: ಇಲ್ಲಿನ ಗಾಂಧಿನಗರ ಬಳಿಯ ಮಲ್ನಾಡು ಕ್ಯಾಶ್ಯೂ ಫ್ಯಾಕ್ಟರಿಯ ಹಳೆ ಕಟ್ಟಡದ ಕಬ್ಬಿಣ ಸಮಾಗ್ರಿಗಳನ್ನು ತೆಗೆಯುತ್ತಿದ್ದ ವೇಳೆ ಗೋಡೆ ಕುಸಿದ ಪರಿಣಾಮ ಗುಜರಿ ವ್ಯಾಪಾರಿಯೊಬ್ಬರು ಮೃತಪಟ್ಟ ಘಟನೆ ಇಂದು ನಡೆದಿದೆ. ಮೃತ ವ್ಯಕ್ತಿಯನ್ನು ಸುಳ್ಯದ ಎಪಿಎಂಸಿ ಬಳಿ ಗುಜಿರಿ ವ್ಯಾಪಾರ ನಡೆಸುತ್ತಿದ್ದ ಅಬ್ದುಲ್ ಖಾದರ್ (ಅಂದುಕಾರ್)ಎಂದು ಗುರುತಿಸಲಾಗಿದೆ. 48 ವರ್ಷ ವಯಸ್ಸಿನ ಅಬ್ದುಲ್ ಖಾದರ್ ಹಲವಾರು ವರ್ಷಗಳಿಂದ ಸುಳ್ಯದಲ್ಲಿ ಗುಜರಿ ವ್ಯಾಪಾರ ನಡೆಸುತ್ತಿದ್ದು, ಹಳೆ ಕಟ್ಟಡದ ಕಬ್ಬಿಣ ಸಾಮಾಗ್ರಿಗಳನ್ನು ತೆಗೆಯುವ ವ್ಯಾಪಾರ ನಡೆಸುತ್ತಿದ್ದರು. ಮಲ್ನಾಡು ಕ್ಯಾಶ್ಯೂ ಫ್ಯಾಕ್ಟರಿ

ಸುಳ್ಯ| ಹಳೆ ಕಬ್ಬಿಣ ಸಾಮಾಗ್ರಿ ತೆರವು ವೇಳೆ ಕುಸಿದ ಗೋಡೆ| ಗುಜರಿ ವ್ಯಾಪಾರಿ ದುರ್ಮರಣ Read More »

ಗೃಹ ಸಚಿವರ ಹೆಸರಲ್ಲಿ ವಂಚನೆ| ಆರೋಪಿ ಅಂದರ್

ಬೆಂಗಳೂರು: ಗೃಹ ಸಚಿವ ಆರಗ ಜ್ಞಾನೇಂದ್ರ ಹೆಸರಿನಲ್ಲಿ ಕೋಟ್ಯಂತರ ರೂ. ವಂಚನೆ ಮಾಡಿದ್ದ ಬಿಜೆಪಿ ಮುಖಂಡನನ್ನು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಮತ್ತು ಕಬ್ಬನ್‌ಪಾರ್ಕ್ ಠಾಣೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಶಿವಮೊಗ್ಗ ಮೂಲದ ಭವಾನಿ ರಾವ್‌ ಮೋರೆ(37) ಬಂಧಿತ ಆರೋಪಿಯಾಗಿದ್ದು, ಈತ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಪಕ್ಷದ ವಿಸ್ತಾರಕ ಕೂಡ ಆಗಿದ್ದ.

ಗೃಹ ಸಚಿವರ ಹೆಸರಲ್ಲಿ ವಂಚನೆ| ಆರೋಪಿ ಅಂದರ್ Read More »

ಪಾಕಿಸ್ತಾನದಲ್ಲಿ ಕಹಿಯಾದ ಸಕ್ಕರೆ| ಲೀಟರ್ ಪೆಟ್ರೋಲ್ ಗಿಂತಲೂ ತುಟ್ಟಿಯಾದ ಬಿಳಿಹರಳು|

ಇಸ್ಲಮಾಬಾದ್: ಪಾಕಿಸ್ತಾನದಲ್ಲಿ ಸಕ್ಕರೆ ಬೆಲೆಗಳು ಗುರುವಾರ ಪೆಟ್ರೋಲ್ ಬೆಲೆಯನ್ನು ಮೀರಿವೆ. ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆಯನ್ನು ನಿಗ್ರಹಿಸಲು ಕೆಲಸ ಮಾಡುವುದಾಗಿ ಸರ್ಕಾರ ಭರವಸೆ ನೀಡಿದ್ದರೂ, ವಿವಿಧ ನಗರಗಳಲ್ಲಿ ಸಕ್ಕರೆ ಕೆಜಿಗೆ 150 ರೂ.ಗೆ ಮಾರಾಟವಾಗುತ್ತಿದ್ದು, ಪ್ರಸ್ತುತ ದೇಶದಲ್ಲಿ ಪೆಟ್ರೋಲ್ ಲೀಟರ್ಗೆ 138.30 ರೂ.ಗೆ ಮಾರಾಟವಾಗುತ್ತಿದೆ. ಪೇಶಾವರದ ಸಗಟು ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ.ಗೆ ಸಕ್ಕರೆ ದರ 8 ರೂಪಾಯಿ ಏರಿಕೆಯಾಗಿದೆ. ಸಕ್ಕರೆ ವಿತರಕರ ಸಂಘದ ಅಧ್ಯಕ್ಷರು ಮಾತನಾಡಿ, ‘ಸಕ್ಕರೆಯನ್ನು ಕೆಜಿಗೆ 140 ರೂ.ಗೆ ಸಗಟು ದರದಲ್ಲಿ ಮಾರಾಟ ಮಾಡಲಾಗುತ್ತಿದ್ದು,

ಪಾಕಿಸ್ತಾನದಲ್ಲಿ ಕಹಿಯಾದ ಸಕ್ಕರೆ| ಲೀಟರ್ ಪೆಟ್ರೋಲ್ ಗಿಂತಲೂ ತುಟ್ಟಿಯಾದ ಬಿಳಿಹರಳು| Read More »

‘ಬಲಿ ಚಕ್ರವರ್ತಿ’ ಬಂದ ದಾರಿ ಬಿಡಿ|

ಸಮಗ್ರ ವರದಿ: ಅಂಧಕಾರವನ್ನು ಕಳೆಯುವ ಕಾರ್ತಿಕ ಮಾಸ ಆರಂಭವಾಗುವುದೇ ಪಾಡ್ಯದಂದು ಬೆಳಗುವ ದೀಪದ ಬೆಳಕಿನಿಂದ. ಕರ್ನಾಟಕದಲ್ಲಿ ದೀಪಾವಳಿಯನ್ನು ಸಾಮಾನ್ಯವಾಗಿ ಮೂರು ದಿನ ಆಚರಿಸುತ್ತಾರೆ, ನರಕಚತುರ್ದಶಿ, ಅಮಾವಾಸ್ಯೆ ಹಾಗೂ ಮೂರನೇ ದಿನವೇ ಬಲಿಪಾಡ್ಯಮಿ, ಈ ಬಲಿಪಾಡ್ಯಮಿಯಿಂದ ಆರಂಭಗೊಳ್ಳುವ ಕಾರ್ತಿಕ ಮಾಸ ಲಕ್ಷದೀಪೋತ್ಸವ ಕೊನೆಗೊಳ್ಳುವವರೆಗೂ ಬೆಳಗುವಂತಹ ಮಾಸವಾಗಿದೆ. ದೀಪಾವಳಿಯ ಮೂರನೆಯ ದಿನ ಆಚರಿಸುವ ಹಬ್ಬವಾದ ಬಲಿ ಪಾಡ್ಯಮಿಯಂದು ದಾನವ ಅರಸನಾದ ಬಲೀಂದ್ರನ ಪೂಜೆಯನ್ನು ಮಾಡುತ್ತಾರೆ. ಹಾಗಾಗಿ ಈ ದಿನವನ್ನು ಬಲಿಪಾಡ್ಯಮಿ ಎಂದೇ ಕರೆಯುತ್ತಾರೆ. ಹಿರಣ್ಯ ಕಶ್ಯಪುವಿನ ವಂಶಸ್ಥನಾದ ಇವನು ದಾನವನಾದರೂ

‘ಬಲಿ ಚಕ್ರವರ್ತಿ’ ಬಂದ ದಾರಿ ಬಿಡಿ| Read More »

ದಿ.ಪುನೀತ್ ರಾಜ್ ಕುಮಾರ್ ಗೆ ಪ್ರತಿಷ್ಟಿತ ‘ಬಸವಶ್ರೀ’ ಘೋಷಣೆ

ಚಿತ್ರದುರ್ಗ: ಇತ್ತೀಚೆಗೆ ಹೃದಯಾಘಾತದಿಂದ ನಿಧನರಾದ ಕನ್ನಡದ ಪವರ್​​ ಸ್ಟಾರ್​​​ ಪುನೀತ್​​ ರಾಜಕುಮಾರ್​​ ಅವರಿಗೆ ಬಸವಶ್ರೀ ಪ್ರಶಸ್ತಿ ಘೋಷಿಸಲಾಗಿದೆ. 2022ನೇ‌ ಸಾಲಿನ ಬಸವಶ್ರೀ ಪ್ರಶಸ್ತಿಯನ್ನ ಮುರುಘಾ ಮಠದ ಪೀಠಾಧಿಪತಿ ಡಾ. ಶಿವಮೂರ್ತಿಯವರು ಪುನೀತ್​​​ ಅವರಿಗೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಮುಂದಿನ ಬಸವ ಜಯಂತಿ ದಿನ ಬಸವಶ್ರೀ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಚಿತ್ರದುರ್ಗದ ಮುರುಘಾಮಠ ಪ್ರತಿಷ್ಠಿತ ಪ್ರಶಸ್ತಿ ಇದಾಗಿದೆ. ಮುರುಘಾಮಠದ ಅನುಭವ ಮಂಟಪದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಪುನೀತ್ ಪತ್ನಿ ಅಶ್ವಿನಿ ಅವರಿಗೆ ಬಸವಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ದಿ.ಪುನೀತ್ ರಾಜ್ ಕುಮಾರ್ ಗೆ ಪ್ರತಿಷ್ಟಿತ ‘ಬಸವಶ್ರೀ’ ಘೋಷಣೆ Read More »