November 2021

ಉಪ್ಪಿನಂಗಡಿ: ನವವಿವಾಹಿತ ಆತ್ಮಹತ್ಯೆ| ಅನುಮಾನ ಹುಟ್ಟಿಸುತ್ತಿದೆ ದುರಂತ|

ಉಪ್ಪಿನಂಗಡಿ: ನವವಿವಾಹಿತ ವ್ಯಕ್ತಿಯೊಬ್ಬರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಉಪ್ಪಿನಂಗಡಿ ಸಮೀಪದ ಕುದ್ರಡ್ಕ ಎಂಬಲ್ಲಿ ನಡೆದಿದೆ. ಕುದ್ರಡ್ಕ ಕಲ್ಲಿನ ಕೋರೆ ಬಳಿ ಮೃತ ದೇಹ ಪತ್ತೆಯಾಗಿದ್ದು, ಮೃತ ವ್ಯಕ್ತಿಯನ್ನು ನಾಸಿರ್(27) ಎಂದು ಗುರುತಿಸಲಾಗಿದೆ. ಕಳೆದ ಆದಿತ್ಯವಾರವಷ್ಟೇ ಮೃತ ನಾಸಿರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಒಂದು ವಾರಗಳು ಆಗುವ ಮೊದಲೇ ಆತ್ಮಹತ್ಯೆಗೈದ ರೀತಿಯಲ್ಲಿ ಮೃತದೇಹ ಪತ್ತೆಯಾಗಿರುವುದು ಅನುಮಾನಕ್ಕೆ ಕಾರಣವಾಗಿದೆ. ಘಟನಾ ಸ್ಥಳಕ್ಕೆ ಪುಂಜಾಲಕಟ್ಟೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.ಒಂದು ಕಡೆ […]

ಉಪ್ಪಿನಂಗಡಿ: ನವವಿವಾಹಿತ ಆತ್ಮಹತ್ಯೆ| ಅನುಮಾನ ಹುಟ್ಟಿಸುತ್ತಿದೆ ದುರಂತ| Read More »

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ನಳಿನ್ ಕುಮಾರ್ ಕಟೀಲ್ ಎತ್ತಂಗಡಿ..?

ಬೆಂಗಳೂರು: ಪಕ್ಷ ಸಂಘಟನೆಯಲ್ಲಿ ವಿಫಲ, ಉಪಚುನಾವಣೆ ಹಿನ್ನಡೆ, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಸೋತಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಅವರ ಸ್ಥಾನ ಬದಲಾಗಿದೆ ಎಂಬ ವದಂತಿ ಹಬ್ಬಿದೆ. ಇದೇ 9ರಂದು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಬೆಂಗಳೂರಿಗೆ ಆಗಮಿಸಲಿದ್ದು, ಅಂದು ಪಕ್ಷದ ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಖಜಾಂಚಿ, ಜಿಲ್ಲಾ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಕೋರ್ ಕಮಿಟಿ ಮುಖಂಡರ ಜೊತೆ ಸಭೆ ನಡೆಸಲಿದ್ದಾರೆ. ಇತ್ತೀಚೆಗೆ ನಡೆದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿಗೆ ಹಾನಗಲ್‍ನಲ್ಲಿ ಹಿನ್ನೆಡೆಯಾಗಿರುವ ಬಗ್ಗೆ ಸಭೆಯಲ್ಲಿ

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ನಳಿನ್ ಕುಮಾರ್ ಕಟೀಲ್ ಎತ್ತಂಗಡಿ..? Read More »

ಸುಳ್ಯ| ಮೀನು ಹಿಡಿಯಲು ತೆರಳಿದ್ದ ವ್ಯಕ್ತಿ ಶಾಕ್ ತಗುಲಿ ಸಾವು

ಸುಳ್ಯ| ತಾಲೂಕಿನ ದೇವಚಳ್ಳ ಗ್ರಾಮದ ಕರಂಗಲ್ಲು ಎಂಬಲ್ಲಿ ನದಿಗೆ ಮೀನು ಹಿಡಿಯಲು ತೆರಳಿದ್ದ ವ್ಯಕ್ತಿಯೋರ್ವರು ಕರೆಂಟ್ ಶಾಕ್ ತಗುಲಿ ಸಾವನ್ನಪ್ಪಿದ ಘಟನೆ ನಡೆದಿದೆ. ಮೃತ ಪಟ್ಟವರನ್ನು ಕರಂಗಲ್ಲಿನ ಪ್ರಕಾಶ್(37) ಎಂದು ಗುರುತಿಸಲಾಗಿದೆ. ಪ್ರಕಾಶ್ ನ.5 ರ ತಡರಾತ್ರಿ ಸಮೀಪದ ಕೊಲ್ಲಮೊಗ್ರು ಬಳಿಯ ಮಾಡಬಾಕಿಲು ಭಾಗದಲ್ಲಿ ನದಿಗೆ ಗೆಳೆಯನೊಂದಿಗೆ ಮೀನು ಹಿಡಿಯಲು ತೆರಳಿದ್ದರು. ಬ್ಯಾಟರಿ ಬಳಸಿ ಮೀನು ಹಿಡಿಯುತ್ತಿರುವ ಸಂದರ್ಭದಲ್ಲಿ ಇನ್ವರ್ಟರ್ ಬ್ಯಾಟರಿಯ ವಿದ್ಯುತ್ ಪ್ರವಹಿಸಿ ಪ್ರಕಾಶ್ ಮೃತರಾಗಿರುವುದಾಗಿ ತಿಳಿದು ಬಂದಿದೆ. ಸುಬ್ರಹ್ಮಣ್ಯ ಠಾಣಾ ಎಸ್ ಐ ಜಂಬೂರಾಜ್

ಸುಳ್ಯ| ಮೀನು ಹಿಡಿಯಲು ತೆರಳಿದ್ದ ವ್ಯಕ್ತಿ ಶಾಕ್ ತಗುಲಿ ಸಾವು Read More »

ಹಾಸನಾಂಬೆ ದೇವಿ ದರ್ಶನಕ್ಕೆ ತೆರೆ| ಲಕ್ಷಾಂತರ ಜನರಿಂದ ನಡೆಯಿತು ದೇವಿ ದರ್ಶನ|

ಹಾಸನ: ಇಲ್ಲಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಹಾಸನಾಂಬೆ ದೇವಿಯ ದರ್ಶನಕ್ಕೆ ಇಂದು (ನವೆಂಬರ್ 6) 1 ಗಂಟೆ 4 ನಿಮಿಷಕ್ಕೆ ತೆರೆಬಿದ್ದಿದೆ. ಮಧ್ಯಾಹ್ನ ಗರ್ಭಗುಡಿಯ ಬಾಗಿಲು ಮುಚ್ಚಲಾಗಿದೆ. ಹಾಸನಾಂಬೆ ದೇಗುಲದ ಒಳಗೆ ಪೂಜಾ ಕೈಂಕರ್ಯ ನಡೆಸಲಾಗಿದೆ. ಹಾಸನ ಜಿಲ್ಲಾ ಉಸ್ತುವಾರಿ ಸಚಿವರು, ಹಾಸನದ ಜಿಲ್ಲಾಧಿಕಾರಿ, ಎಸ್​ಪಿ, ಆಡಳಿತಾಧಿಕಾರಿ ಸಮ್ಮುಖದಲ್ಲಿ ದೇಗುಲ ಮುಚ್ಚಲಾಗಿದೆ. ಮುಂದಿನ 1 ವರ್ಷದವರೆಗೆ ಹಾಸನಾಂಬೆ ದೇಗುಲದ ಬಾಗಿಲು ಮುಚ್ಚಿರಲಿದೆ. ಕಳೆದ 10 ದಿನಗಳಿಂದ ಲಕ್ಷಾಂತರ ಭಕ್ತರಿಂದ ಹಾಸನಾಂಬೆ ದರ್ಶನ ಪಡೆಯಲಾಗಿತ್ತು. 10ನೇ ದಿನವಾದ ಇಂದು

ಹಾಸನಾಂಬೆ ದೇವಿ ದರ್ಶನಕ್ಕೆ ತೆರೆ| ಲಕ್ಷಾಂತರ ಜನರಿಂದ ನಡೆಯಿತು ದೇವಿ ದರ್ಶನ| Read More »

ಕೆರೆಗೆ ಉರುಳಿದ ರಾಜ್ಯ ಸಾರಿಗೆ ಬಸ್| ತಪ್ಪಿದ ಮಹಾದುರಂತ

ಚಿಕ್ಕಬಳ್ಳಾಪುರ: ಚಾಲಕನ ನಿಯಂತ್ರಣ ತಪ್ಪಿ 25 ಜನ ಪ್ರಯಾನಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಕೆರೆಗೆ ಉರುಳಿಬಿದ್ದಿರೋ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಬಳಿ ನಡೆದಿದೆ. ಬಾಗೇಪಲ್ಲಿಯಿಂದ ಚಿಂತಾಮಣಿಗೆ ತೆರಳುತ್ತಿದ್ದ ಕೆಎ 40 ಎಫ್ 701 ನಂಬರಿನ ಕೆಎಸ್‌ಆರ್‌ಟಿಸಿ ಬಸ್ ಎದುರುಗಡೆಯಿಂದ ಬಂದ ಬೈಕ್ ತಪ್ಪಿಸಲು ಹೋಗಿ ನಿಯಂತ್ರಣ ಕಳೆದುಕೊಂಡು ಕೆರೆಗೆ ಜಾರಿಬಿದ್ದಿದೆ. ಆದರೆ ಅದೃಷ್ಟವಶಾತ್ ಯಾರಿಗೂ ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸಿಲ್ಲ. ಬಸ್ಸಿನಲ್ಲಿ 25 ಜನರು ಪ್ರಯಾಣಿಕರಿದ್ದು, ಸಣ್ಣ ಪುಟ್ಟ ಗಾಯಗಳಾಗಿದೆ. ಪ್ರಯಾಣಿಕರನ್ನ ಸ್ಥಳೀಯ ಗ್ರಾಮಸ್ಥರು ಹಾಗೂ

ಕೆರೆಗೆ ಉರುಳಿದ ರಾಜ್ಯ ಸಾರಿಗೆ ಬಸ್| ತಪ್ಪಿದ ಮಹಾದುರಂತ Read More »

ಸಮುದ್ರದಲ್ಲೆ ಹೊತ್ತಿ ಉರಿದ ಮಲ್ಪೆ ಮೂಲದ ಬೋಟ್

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಸನಿಹ ಅರಬ್ಬಿ ಸಮುದ್ರದಲ್ಲಿ ಬೋಟ್ ಗೆ ಆಕಸ್ಮಿಕ ಬೆಂಕಿ ತಗುಲಿ ಹೊತ್ತಿ ಉರಿದಿದ್ದು, ಬೋಟ್ ನಲ್ಲಿದ್ದ 7 ಮಂದಿ ಮೀನುಗಾರರನ್ನು ಭಾರತೀಯ ಕರಾವಳಿ ಪಡೆ ರಕ್ಷಿಸಿದೆ. ಅರಬ್ಬಿ ಸಮುದ್ರದಲ್ಲಿ ಮಲ್ಪೆ ಮೂಲದ “ವರದ ವಿನಾಯಕ ” ಎಂಬ ಹೆಸರಿನ ಬೋಟ್ ಮೀನುಗಾರಿಕೆ ನಡೆಸುತಿತ್ತು. ಈ ವೇಳೆ ಬೋಟ್ ನ ಇಂಜಿನ್ ರೂಮ್ ನಲ್ಲಾದ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ. ಮಾಹಿತಿ ಪಡೆದ ಭಾರತೀಯ ಕರಾವಳಿ ಪಡೆ

ಸಮುದ್ರದಲ್ಲೆ ಹೊತ್ತಿ ಉರಿದ ಮಲ್ಪೆ ಮೂಲದ ಬೋಟ್ Read More »

ಕಾಪು: ಗದ್ದೆಗೆ ದೀಪದ ಬೆಳಕು ತೋರಿಸಲು ಹೋದ ಯುವಕ ವಿಷಜಂತು ಕಡಿದು ಸಾವು

ಕಾಪು: ದೀಪಾವಳಿ ಹಬ್ಬಕ್ಕಾಗಿ ಗದ್ದೆಗೆ ದೀಪದ ಬೆಳಕು ತೋರಿಸಲು ಗದ್ದೆಗೆ ಹೋಗಿದ್ದ ಯುವಕನಿಗೆ ವಿಷ ಜಂತು ಕಡಿದು ಮೃತಪಟ್ಟ ಘಟನೆ ಕಾಪುವಿನಲ್ಲಿ ನ. 11 ರ ಶುಕ್ರವಾರ ನಡೆದಿದೆ. ಮೃತ ಯುವಕನನ್ನು ಕಾಪು ಕಲ್ಯ ನಿವಾಸಿ ರೋಹಿತ್ ಕುಮಾರ್ (26) ಎಂದು ಗುರುತಿಸಲಗಿದೆ. ಲೀಂದ್ರ ಪೂಜೆಯ ಪ್ರಯುಕ್ತ ಗುರುವಾರ ರಾತ್ರಿ ರೋಹಿತ್ ಕುಮಾರ್ ಮತ್ತು ಸಹೋದರರು ಗದ್ದೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ಅವರಿಗೆ ವಿಷ ಜಂತು ಕಡಿದಿತ್ತು. ಕುಟುಂಬಸ್ಥರು ನಾಟಿ ವೈದ್ಯರ ಬಳಿಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರು.

ಕಾಪು: ಗದ್ದೆಗೆ ದೀಪದ ಬೆಳಕು ತೋರಿಸಲು ಹೋದ ಯುವಕ ವಿಷಜಂತು ಕಡಿದು ಸಾವು Read More »

“ಐಡಿಯಲ್ ಐಸ್ ಕ್ರೀಂ” ಸಂಸ್ಥಾಪಕ ಪ್ರಭಾಕರ ಕಾಮತ್ ವಿಧಿವಶ

ಮಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ನಗರದ ಖ್ಯಾತ ಐಡಿಯಲ್ ಐಸ್ ಕ್ರೀಮ್ ನ ಸಂಸ್ಥಾಪಕ ಪ್ರಭಾಕರ್ ಕಾಮತ್ ಅವರು ಶನಿವಾರ ಬೆಳಗ್ಗೆ ನಿಧನರಾಗಿದ್ದಾರೆ. ನಗರದಲ್ಲಿ ‘ಪಬ್ಬ ಮಾಮ್’ ಎಂದೇ ಕರೆಯಲ್ಪಡುತ್ತಿದ್ದ ಪ್ರಭಾಕರ್ ಕಾಮತ್ ಅವರು ಮೊದಲ ಐಡಿಯಲ್ ಐಸ್ ಕ್ರೀಮ್ ಮಳಿಗೆಯನ್ನು 1975ರಲ್ಲಿ ಮಂಗಳೂರಿನಲ್ಲಿ ಆರಂಭಿಸಿದ್ದರು. 14 ಫ್ಲೇವರ್ ಗಳೊಂದಿಗೆ ಮೊದಲ ಬಾರಿಗೆ ಐಡಿಯಲ್ ಐಸ್ ಕ್ರೀಮ್ ಮಳಿಗೆಯನ್ನು ಪ್ರಾರಂಭಿಸಿದ್ದ ಪ್ರಭಾಕರ್ ಕಾಮತ್ ಅವರು ಸ್ವತಃ ಐಸ್ ಕ್ರೀಮ್ ತಯಾರಿ ನಡೆಸುತ್ತಿದ್ದರು. ಐಡಿಯಲ್ ಐಸ್ ಕ್ರೀಮ್ ಕರಾವಳಿ ಭಾಗದಲ್ಲಿ

“ಐಡಿಯಲ್ ಐಸ್ ಕ್ರೀಂ” ಸಂಸ್ಥಾಪಕ ಪ್ರಭಾಕರ ಕಾಮತ್ ವಿಧಿವಶ Read More »

ರಾಜ್ಯದ ಮುಜರಾಯಿ ದೇವಾಲಯಗಳಲ್ಲಿ ಗೋಶಾಲೆ ಆರಂಭಕ್ಕೆ ಚಿಂತನೆ – ಸಚಿವೆ ಜೊಲ್ಲೆ

ಬೆಳಗಾವಿ : ಮುಜರಾಯಿ ಇಲಾಖೆಯ ‘ಎ’ ಮತ್ತು ‘ಬಿ’ ಗ್ರೇಡ್ ದೇವಸ್ಥಾನದಲ್ಲಿ ಮುಜರಾಯಿ ಇಲಾಖೆಯ ವತಿಯಿಂದ ಗೋಶಾಲೆಗಳನ್ನು ಆರಂಭಿಸುವ ಚಿಂತನೆ ನಡೆಸಲಾಗಿದೆ ಎಂದು ಮುಜರಾಯಿ ಇಲಾಖೆಯ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು. ಸುದ್ದಿಗಾರರ ಜೊತೆ ಮಾತನಾಡಿದ ಅವ, ರಾಜ್ಯದ 35 ಸಾವಿರಕ್ಕೂ ಅಧಿಕ ಅಧಿಸೂಚಿತ ದೇವಸ್ಥಾನಗಳಲ್ಲಿ ಗೋಪೂಜೆ ನಡೆಸಲಾಗುತ್ತಿದೆ. ಭಾರತ ಕೃಷಿ ಪ್ರಧಾನ ದೇಶವಾಗಿರುವುದರಿಂದ ಗೋರಕ್ಷಣೆ ಮಹತ್ವದ್ದಾಗಿದೆ. ಮುಜರಾಯಿ ಇಲಾಖೆಯ ‘ಎ’ ಮತ್ತು ‘ಬಿ’ ಗ್ರೇಡ್ ದೇವಸ್ಥಾನದಲ್ಲಿ ಮುಜರಾಯಿ ಇಲಾಖೆಯ ವತಿಯಿಂದ ಗೋಶಾಲೆಗಳನ್ನು ಆರಂಭಿಸುವ ಚಿಂತನೆ ನಡೆಸಲಾಗಿದೆ

ರಾಜ್ಯದ ಮುಜರಾಯಿ ದೇವಾಲಯಗಳಲ್ಲಿ ಗೋಶಾಲೆ ಆರಂಭಕ್ಕೆ ಚಿಂತನೆ – ಸಚಿವೆ ಜೊಲ್ಲೆ Read More »

ಟಿ.20 ವಿಶ್ವಕಪ್| ಸ್ಕಾಟ್ಲೆಂಡ್ ‌ವಿರುದ್ದ 8 ವಿಕೆಟ್ ಭರ್ಜರಿ ಜಯ|

ಅಬುದಾಬಿ: ಯುಎಇಯಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ 37ನೇ ಪಂದ್ಯದಲ್ಲಿ ಭಾರತ ಮತ್ತು ಸ್ಕಾಟ್ಲೆಂಡ್ ತಂಡಗಳು ಇಂದು ( ನವೆಂಬರ್‌ 5 ) ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮುಖಾಮುಖಿಯಾದವು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಸ್ಕಾಟ್ಲೆಂಡ್ ವಿರುದ್ಧ 8 ವಿಕೆಟ್‍ಗಳ ಅಮೋಘ ಗೆಲುವನ್ನು ಸಾಧಿಸುವುದರ ಮೂಲಕ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ತನ್ನ ದ್ವಿತೀಯ ಗೆಲುವನ್ನು ದಾಖಲಿಸಿತು. ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬೌಲಿಂಗ್ ಆಯ್ಕೆ

ಟಿ.20 ವಿಶ್ವಕಪ್| ಸ್ಕಾಟ್ಲೆಂಡ್ ‌ವಿರುದ್ದ 8 ವಿಕೆಟ್ ಭರ್ಜರಿ ಜಯ| Read More »