November 2021

ಅಕ್ಷರ ಸಂತ ಹರೇಕಳ ಹಾಜಬ್ಬರಿಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ|

ನವದೆಹಲಿ: ಭಾರತ ಸರ್ಕಾರವು ನೀಡುವ ನಾಲ್ಕನೇ ಅತೀ ದೊಡ್ಡ ನಾಗರಿಕ ಪ್ರಶಸ್ತಿ ‘ಪದ್ಮ ಶ್ರೀ’ ಪ್ರಶಸ್ತಿಯನ್ನು ಅಕ್ಷರ ಸಂತ ಹರೇಕಳ ಹಾಜಬ್ಬ ಅವರಿಗೆ ರಾಷ್ಟ್ರಪತಿ ಭವನದಲ್ಲಿ ಸೋಮವಾರದಂದು ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಅವರು ಪ್ರದಾನ ಮಾಡಿದರು. ಸಾಂಪ್ರದಾಯಿಕ ಬಿಳಿ ಪಂಚೆ ಹಾಗೂ ಬಿಳಿ ಅಂಗಿ ಧರಿಸಿದ್ದ ಹಾಜಬ್ಬ ಅವರು ರಾಷ್ಟ್ರಪತಿಯವರಿಂದ ಪ್ರಶಸ್ತಿ ಸ್ವೀಕರಿಸಿದರು. ಕಿತ್ತಳೆ ಹಣ್ಣು ವ್ಯಾಪಾರದಿಂದ ಬಂದ ಹಣವನ್ನು ಕೂಡಿಟ್ಟು ಬಡ ಮಕ್ಕಳಿಗಾಗಿ ಶಾಲೆಯೊಂದನ್ನು ನಿರ್ಮಿಸಿದ ಇವರಿಗೆ ಈಗಾಗಲೇ ಹಲವು ಪ್ರಶಸ್ತಿ ಲಭಿಸಿವೆ. […]

ಅಕ್ಷರ ಸಂತ ಹರೇಕಳ ಹಾಜಬ್ಬರಿಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ| Read More »

ಪುನೀತ್ ರೀತಿಯಲ್ಲೇ ಸಾವನ್ನಪ್ಪಿದ ಒಲಿಂಪಿಯಾ ದಂತಕಥೆ ಶಾನ್ ರೋಡೆನ್| 46ರ‌ ವಯಸ್ಸಲ್ಲಿ ಕಣ್ಮುಚ್ಚಿದ ಬಾಡಿ ಬಿಲ್ಡರ್|

ಡಿಜಿಟಲ್ ಡೆಸ್ಕ್: ಮಾಜಿ ಮಿಸ್ಟರ್ ಒಲಂಪಿಯಾ ಚಾಂಪಿಯನ್ ಶಾನ್ ರೋಡೆನ್ ಅವರು 46 ನೇ ವಯಸ್ಸಿನಲ್ಲಿ ಶನಿವಾರ ನಿಧನರಾದರು. ರೋಡೆನ್ ಹೃದಯಾಘಾತದಿಂದ ಸಾವನ್ನಪ್ಪಿದ್ದು, ಇದೆ ಅವರ ನಿಧನಕ್ಕೆ ಕಾರಣವಾಗಿದೆ.ಅವರ ತರಬೇತುದಾರರು ಹೃದಯಾಘಾತದಿಂದ ಸಾವನ್ನಪಿರುವುದಾಗಿ ದೃಢಪಡಿಸಿದರು. 43 ನೇ ವಯಸ್ಸಿನಲ್ಲಿ ಒಲಿಂಪಿಯಾವನ್ನು ಗೆದ್ದ ರೋಡೆನ್ ಕ್ರೀಡಾ ದಂತಕಥೆ ಎಂದರೆ ತಪ್ಪಾಗಲಾರದು. ಶಾನ್ ರೋಡೆನ್ ಅವರ ಮರಣವು ಈಗ ಹಲವಾರು ಕ್ರೀಡಾಪಟುಗಳು ಮತ್ತು ದೇಹದಾರ್ಢ್ಯ ಪಟುಗಳನ್ನು ಚಿಂತೆಗೆ ದೂಡಿದ್ದು ದಿವಂಗತ ಬಾಡಿಬಿಲ್ಡರ್‌ಗೆ ಸಂತಾಪ ಸೂಚಿಸಲು ಎಲ್ಲರೂ ಮುಂದಾಗಿದ್ದರೂ ಸಹ ಇದೀಗ

ಪುನೀತ್ ರೀತಿಯಲ್ಲೇ ಸಾವನ್ನಪ್ಪಿದ ಒಲಿಂಪಿಯಾ ದಂತಕಥೆ ಶಾನ್ ರೋಡೆನ್| 46ರ‌ ವಯಸ್ಸಲ್ಲಿ ಕಣ್ಮುಚ್ಚಿದ ಬಾಡಿ ಬಿಲ್ಡರ್| Read More »

ಮನೆ ಬಾಗಿಲು ಮುರಿದು 18.35 ಲಕ್ಷ ನಗದು ದೋಚಿದ ಕಳ್ಳರು

ಉಡುಪಿ: ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಕಳ್ಳರು ಮನೆಯೊಳಗೆ ನುಗ್ಗಿ ಕಳ್ಳತನ ಮಾಡಿ ಸುಮಾರು ನಗದು, ಚಿನ್ನಾಭರಣ ಸಹಿತ ಸುಮಾರು 18.35 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಎಗರಿಸಿದ ಘಟನೆ ಅಂಬಲ್ಪಾಡಿ ಗ್ರಾಮದ ಸಿಪಿಸಿ ಲೇಔಟ್‌ನ ಜಯಗಣೇಶ ಬೀಡು ಎಂಬವರ ಮನೆಯಲ್ಲಿ ನಡೆದಿದೆ. ನ.6 ರಂದು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಯಾರೋ ಕಳ್ಳರು ಮನೆಯ ಹಿಂಬಾಗಿಲಿನ ಕಿರು ಬಾಗಿಲನ್ನು ಯಾವುದೋ ಆಯುಧದಿಂದ ಮೀಟಿ ಮುರಿದು ಒಳ ಪ್ರವೇಶಿಸಿ, ಒಳಗಿನ ಬಾಗಿಲಿನ ಚಿಲಕದ ಬದಿ ಮುರಿದು ಮಾಸ್ಟರ್‌

ಮನೆ ಬಾಗಿಲು ಮುರಿದು 18.35 ಲಕ್ಷ ನಗದು ದೋಚಿದ ಕಳ್ಳರು Read More »

ಬಂಟ್ವಾಳ: ತೆಂಗಿನ ಮರ ಮೈಮೇಲೆ ಬಿದ್ದು ವ್ಯಕ್ತಿ ಮೃತ್ಯು

ಬಂಟ್ವಾಳ: ತೆಂಗಿನ ಮರ ಮೈಮೇಲೆ ಬಿದ್ದು ವ್ಯಕ್ತಿಯೋರ್ವ ಮೃತಪಟ್ಟ ಘಟನೆ ತಾಲೂಕಿನ ಪೆರ್ಲಾಪು ಎಂಬಲ್ಲಿ ನಡೆದಿದೆ. ಪೆರ್ಲಾಪು ನಿವಾಸಿ ಸುರೇಶ್(38) ಮೃತಪಟ್ಟ ವ್ಯಕ್ತಿ.ಸುರೇಶ್ ಎಂಬಾತ ನೆರೆ ಮನೆಯ ಬೆಂಗದಡಿ ಭುಜಂಗ ಶೆಟ್ಟಿ ಅವರ ಮನೆಯ ತೋಟದಲ್ಲಿದ್ದ ತೆಂಗಿನ ಮರವನ್ನು ಕಡಿಯಲು ಲಕ್ಷಣ ಅವರ ಜೊತೆ ಹೋಗಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಮಧ್ಯಾಹ್ನ ತೆಂಗಿನ ಮರ ಕಡಿದು ನೆಲಕ್ಕೆ ಬಿದ್ದಾಗ, ಅದರ ಪಕ್ಕದಲ್ಲೆ ಇದ್ದ ಸತ್ತ ಒಣಗಿದ ತೆಂಗಿನ ಮರ ಆಕಸ್ಮಿಕವಾಗಿ ಸುರೇಶ್ ಅವರ ಮೈಮೇಲೆ ಬಿದ್ದು

ಬಂಟ್ವಾಳ: ತೆಂಗಿನ ಮರ ಮೈಮೇಲೆ ಬಿದ್ದು ವ್ಯಕ್ತಿ ಮೃತ್ಯು Read More »

ಡಿಜಿಟಲ್ ವ್ಯವಹಾರ|ಎಚ್ಚರಿಕೆ ಅಗತ್ಯ

ನವದೆಹಲಿ: ನೋಟ್​​ ಬ್ಯಾನ್ ಆಗಿ ಐದು ವರ್ಷ ಪೂರ್ಣಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ದೇಶದ ಆರ್ಥಿಕತೆ, ಹಣಕಾಸು ವ್ಯವಸ್ಥೆಯಲ್ಲಿ ಅನೇಕ ಬದಲಾವಣೆಗಳಾಗಿವೆ.ನೋಟ್​ ಬ್ಯಾನ್ ನಂತರದ ಕೆಲವು ದಿನಗಳಲ್ಲಿ ನಗದು ವಹಿವಾಟಿನಲ್ಲಿ ಸಾಕಷ್ಟು ಅವ್ಯವಸ್ಥೆ ಕಂಡುಬಂದಿದ್ದು, ಪ್ರಸ್ತುತ ನಗದು ವಹಿವಾಟು ಹೆಚ್ಚಾಗುತ್ತಿದೆ. ಇದರ ಜೊತೆಗೆ ಡಿಜಿಟಲ್ ಪೇಮೆಂಟ್​ ಕೂಡಾ ತೀವ್ರಗತಿಯಲ್ಲಿ ಏರಿಕೆಯಾಗಿದೆ.ಅಂದಹಾಗೆ, ನೋಟ್ ಬ್ಯಾನ್ ಮಾಡಿದ ಉದ್ದೇಶ ಡಿಜಿಟಲ್ ಪೇಮೆಂಟ್ ಅನ್ನು ಹೆಚ್ಚಿಸುವುದು ಮತ್ತು ಕಪ್ಪು ಹಣವನ್ನು ಹೊರಕ್ಕೆ ತರುವುದೇ ಆಗಿತ್ತು. ಈಗ ಡಿಜಿಟಲ್ ಪಾವತಿ ಎಲ್ಲೆಡೆಯೂ ವ್ಯಾಪಿಸಿಕೊಂಡಿದ್ದು, ಎರಡೂ

ಡಿಜಿಟಲ್ ವ್ಯವಹಾರ|ಎಚ್ಚರಿಕೆ ಅಗತ್ಯ Read More »

ಸುಳ್ಯ| ಶಾಂತಿನಗರ ತಿರುವಲ್ಲೊಂದು ಆಟಕ್ಕುಂಟು ಲೆಕ್ಕಕ್ಕಿಲ್ಲದ ಹೈಮಾಸ್ಟ್ ಲ್ಯಾಂಪ್|

ಸುಳ್ಯ: ಬೆಳೆಯುತ್ತಿರುವ ಸುಳ್ಯದಲ್ಲಿ ಕೊರತೆಗಳು ಹಲವಾರಿವೆ. ಕೆಲವೊಂದು ಜನಪ್ರತಿನಿಧಿಗಳ ಗಮನಕ್ಕೆ ಬಂದು ನಿವಾರಣೆಯಾಗುತ್ತವೆ. ಇನ್ನೂ ಹಲವು ಸಮಸ್ಯೆಗಳು ಅರಿವಿದ್ದರೂ ನಮಗೂ ಅದಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಅಧಿಕಾರಿಗಳು, ಜನಪ್ರತಿನಿಧಿಗಳು‌ ಸುಮ್ಮನಿದ್ದಾರೆ. ಅದಕ್ಕೆ ಮತ್ತೊಂದು ಉದಾಹರಣೆ ಶಾಂತಿನಗರ ಜಂಕ್ಷನ್ ನಲ್ಲಿರುವ ಹೈಮಾಸ್ಟ್ ದೀಪಸ್ಥಂಭ. ಹೌದು, ಕಳೆದೊಂದು ವರ್ಷದಿಂದ ಈ ಹೈಮಾಸ್ಟ್ ದೀಪ ತಟಸ್ಥವಾಗಿದೆ. ನಗರ ಪಂಚಾಯತ್ ನ ಸದಸ್ಯರಿಗೆ ಈ ಸಮಸ್ಯೆಯ ಅರಿವಿದ್ದರೂ ಯಾವುದೇ ಕ್ರಮ ಕೈಗೊಳ್ಳದೇ ಸುಮ್ಮನಿದ್ದಾರೆ. ದೀಪಸ್ತಂಭವೇನೋ ಐದು ದೀಪಗಳನ್ನು ಹೊಂದಿ ಬೃಹತ್ತಾಗಿ ನಿರ್ಮಾಣಗೊಂಡಿದೆ.

ಸುಳ್ಯ| ಶಾಂತಿನಗರ ತಿರುವಲ್ಲೊಂದು ಆಟಕ್ಕುಂಟು ಲೆಕ್ಕಕ್ಕಿಲ್ಲದ ಹೈಮಾಸ್ಟ್ ಲ್ಯಾಂಪ್| Read More »

ದ್ವಾದಶ ರಾಶಿಗಳ ವಾರಭವಿಷ್ಯ

ಸಮಯಕ್ಕೆ ತಕ್ಕಂತೆ ನಾವು ನಮ್ಮನ್ನು ಬದಲಿಸಿಕೊಳ್ಳುವ ಕೌಶಲ್ಯವನ್ನು ಕಲಿತಿರಬೇಕು. ಇಲ್ಲವಾದರೆ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ. ಬದಲಾವಣೆ ಎನ್ನುವುದು ನಿರಂತರವಾಗಿ ಹರಿಯುವ ನದಿಯಂತೆ ಅದು ಹೇಗೆ ಬರುತ್ತದೆಯೋ ಹಾಗೆ ನಾವು ಸ್ವೀಕರಿಸಬೇಕಾಗುವುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ವಾರ ಸಾಕಷ್ಟು ಗ್ರಹಗಳ ಬದಲಾವಣೆಗಳು ಉಂಟಾಗುವುದು ಅವುಗಳ ಪ್ರಭಾವ ರಾಶಿಚಕ್ರಗಳ ಮೇಲೆ ಗಣನೀಯವಾಗಿರುತ್ತವೆ. ಆ ಬದಲಾವಣೆಗಳು ನಿಮ್ಮ ಜೀವನದಲ್ಲಿ ಹೇಗಿರುತ್ತದೆ. ಈ ವಾರದ ನಿಮ್ಮ ರಾಶಿ ಭವಿಷ್ಯ ಹೇಗಿದೆ? ನೋಡೋಣ ಬನ್ನಿ… ಮೇಷ ರಾಶಿ ದೈನಂದಿನ ಚಟುವಟಿಕೆಯಲ್ಲಿ ಬಹಳ ಉತ್ಸಾಹ

ದ್ವಾದಶ ರಾಶಿಗಳ ವಾರಭವಿಷ್ಯ Read More »

ಇಂದಿನಿಂದ ರಾಜ್ಯದಲ್ಲಿ ಕೆಜಿ ತರಗತಿ, ಅಂಗನವಾಡಿ, ಪ್ಲೇ ಹೋಂ ಆರಂಭ| ಸೂಕ್ತ ನಿಯಮಗಳನ್ನು ಪಾಲಿಸಲು ಸೂಚನೆ|

ಬೆಂಗಳೂರು : ಕೊರೋನಾ ಭೀತಿಯ ನಡುವೆಯೂ ರಾಜ್ಯಾದ್ಯಂತ 1 ರಿಂದ 12 ನೇ ತರಗತಿಗಳನ್ನು ಆರಂಭಿಸಲಾಗಿದೆ. ರಾಜ್ಯಾದ್ಯಂತ ಇಂದಿನಿಂದ ಅಂಗನವಾಡಿ ಕೇಂದ್ರಗಳು ಹಾಗೂ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ ಎಲ್ ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಆರ್ಧ ದಿನ ಭೌತಿಕ ತರಗತಿಗಳನ್ನು ಆರಂಭಿಸಲು ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಅಂಗನವಾಡಿ ಕೇಂದ್ರ ಆರಂಭದ ಕುರಿತಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದು, ಕೋವಿಡ್-19 ಹಿನ್ನಲೆಯಲ್ಲಿ ಅಂಗನವಾಡಿ ಕೇಂದ್ರಗಳಿಗೆ

ಇಂದಿನಿಂದ ರಾಜ್ಯದಲ್ಲಿ ಕೆಜಿ ತರಗತಿ, ಅಂಗನವಾಡಿ, ಪ್ಲೇ ಹೋಂ ಆರಂಭ| ಸೂಕ್ತ ನಿಯಮಗಳನ್ನು ಪಾಲಿಸಲು ಸೂಚನೆ| Read More »

ನೋಟು ಅಮಾನ್ಯೀಕರಣಕ್ಕೆ ಐದು ವರ್ಷ| ಏರಿಕೆಯಾದ ಡಿಜಿಟಲ್ ವ್ಯವಹಾರ

ನವದೆಹಲಿ: ದೇಶಾದ್ಯಂತ 500 ರೂ. ಮತ್ತು 1000 ರೂಪಾಯಿ ಮುಖಬೆಲೆಯ ನೋಟುಗಳ ಅಮಾನ್ಯೀಕರಣ ಮಾಡಿ ಇಂದಿಗೆ 5 ವರ್ಷವಾಗಿದೆ. ಪ್ರಧಾನಿ ನರೇಂದ್ರ ಮೋದಿ ನೋಟ್ ಬ್ಯಾನ್ ಘೋಷಣೆ ಮಾಡಿದ ನಂತರ ದೇಶದಲ್ಲಿ ಹೊಸದಾಗಿ 2000 ರೂ. ಮತ್ತು 500 ರೂಪಾಯಿ ಹಾಗೂ 200 ರೂ.ಹೊಸ ಸರಣಿ ನೋಟು ಚಲಾವಣೆಗೆ ಬಂದಿವೆ. ನಗದು ವಹಿವಾಟಿನ ಜೊತೆಗೆ ಡಿಜಿಟಲ್ ವಹಿವಾಟು ಕೂಡ ಏರಿಕೆ ಕಂಡಿದೆ. ನೋಟ್ ಬ್ಯಾನ್ ಮಾಡಿದ ಸಂದರ್ಭದಲ್ಲಿ ಯುಪಿಐ, ನೆಟ್ ಬ್ಯಾಂಕಿಂಗ್ ಮೊದಲಾದವುಗಳ ಮೂಲಕ ನಗದು ರಹಿತ

ನೋಟು ಅಮಾನ್ಯೀಕರಣಕ್ಕೆ ಐದು ವರ್ಷ| ಏರಿಕೆಯಾದ ಡಿಜಿಟಲ್ ವ್ಯವಹಾರ Read More »

ಟಿ.20 ವಿಶ್ವಕಪ್ ನಿಂದ ಹೊರಕ್ಕೆ ಬಿದ್ದ ಭಾರತ| ಸೆಮೀಸ್ ಗೆ ಲಗ್ಗೆ ಇಟ್ಟ ಕಿವೀಸ್|

ದುಬೈ : ಟಿ20 ವಿಶ್ವಕಪ್ ಪಂದ್ಯಾವಳಿಯ ಭಾನುವಾರ ನಡೆದ ನಿರ್ಣಾಯಕ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡ ಅಫ್ಘಾನಿಸ್ಥಾನವನ್ನು ಅಧಿಕಾರಯುತವಾಗಿ ಸೋಲಿಸಿ ಸೆಮಿ ಫೈನಲ್ ಪ್ರವೇಶಿಸಿದ್ದು, ಭಾರತ ತಂಡದ ಕನಸು ಭಗ್ನಗೊಂಡಿದೆ. ಅಫ್ಘಾನ್ ತಂಡದ ಗೆಲುವನ್ನು ನಂಬಿಕೊಂಡಿದ್ದ ಭಾರತಕ್ಕೆ ಮೊದಲೆರಡು ಪಂದ್ಯಗಳ ಸೋಲು ಮತ್ತೆ ಕಾಡುವಂತೆ ಮಾಡಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಅಫ್ಘಾನಿಸ್ಥಾನ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 124 ರನ್ ಗಳಿಸಿ ಭಾರತೀಯ ಆಶಾವಾದಿಗಳಿಗೆ ನಿರಾಸೆ ಮೂಡಿಸಿತು. ಗುರಿ ಬೆನ್ನಟ್ಟಿದ ಕಿವೀಸ್ ಪಡೆ

ಟಿ.20 ವಿಶ್ವಕಪ್ ನಿಂದ ಹೊರಕ್ಕೆ ಬಿದ್ದ ಭಾರತ| ಸೆಮೀಸ್ ಗೆ ಲಗ್ಗೆ ಇಟ್ಟ ಕಿವೀಸ್| Read More »