Ad Widget .

ಬಿಟ್ ಕಾಯಿನ್ ಎಂಬ ಮಾಯಾಂಗನೆ..! ಏನಿದು ಗೊತ್ತಾ ನಿಮ್ಗೆ?

Ad Widget . Ad Widget .

ಡಿಜಿಟಲ್ ಡೆಸ್ಕ್: ಸದ್ಯ‌ ಬಿಟ್ ಕಾಯಿನ್ ಸುದ್ದಿಗಳು ಎಲ್ಲೆಡೆ ಹರಿದಾಡುತ್ತಿವೆ. ರಾಜ್ಯ ರಾಜಕೀಯದಲ್ಲೂ ಪರಸ್ಪರ ಕೆಸರೆರಚಾಟ, ಸಂಚಲಕ್ಕೆ ಕಾರಣವಾಗಿರುವ ಈ ಮಾಯಾ ಕರೆನ್ಸಿ‌ ಬಗ್ಗೆ ಎಲ್ಲರೂ ಕುತೂಹಲದಿಂದ ವಿಚಾರ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ಹಾಗಿದ್ದರೆ ಏನಿದು ಬಿಟ್ ಕಾಯಿನ್? ಬಗ್ಗೆ ತಿಳಿದುಕೊಳ್ಳೋಣ ಬನ್ನಿ..

Ad Widget . Ad Widget .

ಬಿಟ್ ಕಾಯಿನ್ ಏನಿದು? ಇದರ ಬಗ್ಗೆ ಎಚ್ಚರವಿರಲಿ..

ಬಿಟ್ ಕಾಯಿನ್ ಡಿಜಿಟಲ್ ಯುಗದ ಡಿಜಿಟಲ್ ಕರೆನ್ಸಿ. ಇದಕ್ಕೆ ಮುದ್ರಣ ರೂಪ ಇಲ್ಲ. ಬಿಟ್ ಕಾಯಿನ್ ಎಂಬ ಮಾಯಾಂಗನೆ ಕೇವಲ ಎಲೆಕ್ಟ್ರಾನಿಕ್ ರೂಪದಲ್ಲಿದ್ದು, ರೂಪಾಯಿ, ಡಾಲರ್, ಯುರೋ ಗಳಂತೆ ಭೌತಿಕ ರೂಪದಲ್ಲಿ ಇರುವುದಿಲ್ಲ. ಅಲ್ಲದೇ ಇದಕ್ಕೆ ಯಾವುದೇ ದೇಶ, ಭಾಷೆ, ಬ್ಯಾಂಕು ಇದ್ಯಾವುದು ಇರುವುದಿಲ್ಲ.

ಬಿಟ್ ಕಾಯಿನ್ ವಿಶ್ವದ ಯಾವುದೇ ಮೂಲದಿಂದ ಕೆಲವೇ ನಿಮಿಷಗಳಲ್ಲಿ ಕಳಿಸಲು ಅಥವಾ ಪಡೆಯಲು ಬಳಸಬಹುದು. ಉತ್ಪನ್ನ- ಸೇವೆಗಳನ್ನು ಪಡೆಯಲು ಇಲ್ಲವೇ ಷೇರು ಮತ್ತು ಚಿನ್ನದಲ್ಲಿ ಹೂಡಿಕೆ ಮಾಡಬಹುದು. ಆದರೆ ಈ ಪ್ರಕ್ರಿಯೆಗಳೆಲ್ಲ ಅಂತರ್ಜಾಲದ ಮೂಲಕ ಮಾತ್ರ ನಡೆಯುತ್ತದೆ

ಬಿಟ್ ಕಾಯಿನ್ ಉಪಯೋಗ?

ಇಲ್ಲಿ ಹಣದ ತ್ವರಿತವಾದ ವರ್ಗಾವಣೆ ಸಾಧ್ಯವಾಗಿದ್ದು, ಸಂಸ್ಕರಣೆ ಶುಲ್ಕ ಇರುವುದಿಲ್ಲ. ಯಾವುದೇ ಅಡೆತಡೆಯಿಲ್ಲದೇ ಜಗತ್ತಿನಾದ್ಯಂತ ಚಲಾವಣೆ ಮಾಡಬಹುದು. ಬ್ಯಾಂಕಿಂಗ್ ಬಳಕೆ ಅಗತ್ಯವಿಲ್ಲ. ವರ್ಡ್‌ಪ್ರೆಸ್, ರೆಡಿಟ್, ನೇಮ್‌ಚೀಪ್ ಮತ್ತು ಫ್ಲಾಟ್ಟರ್ ನಂತಹ ಅಂತರ್ಜಾಲ ತಾಣಗಳು ಬಿಟ್‌ಕಾಯಿನ್‌ಗಳನ್ನು ನೇರವಾಗಿ ಸ್ವೀಕರಿಸುತ್ತವೆ.

ಬಿಟ್ ಕಾಯಿನ್ ಅಪಾಯಗಳೇನು?

ಜನಸಾಮಾನ್ಯರು ಬಿಟ್ ಕಾಯಿನ್ ನಿಯಮಗಳನ್ನು ತಿಳಿದುಕೊಳ್ಳುವುದು ತುಂಬಾ ಕಷ್ಟ.
ಒಮ್ಮೆ ಬಿಟ್ ಕಾಯಿನ್ ಸಂದಾಯವಾದರೆ ಮತ್ತೆ ಮರಳಿ ಪಡೆಯಲು ಸಾಧ್ಯವಿಲ್ಲ.
ಅಪರಾಧಿಗಳು ಆರ್ಥಿಕ ಅಪರಾಧ, ಮೋಸಗಳನ್ನು ಎಸಗಲು ಸಾಧ್ಯವಿದೆ.
ಡ್ರಗ್ಸ್/ಮಾದಕ ದ್ರವ್ಯಗಳ ಕಳ್ಳಸಾಗಣೆಗೆ ಬಿಟ್ ಕಾಯಿನ್ ಬಳಸಲ್ಪಡುತ್ತದೆ.
ಬಿಟ್ ಕಾಯಿನ್ ವರ್ಗಾವಣೆ ಯಾರು ಯಾರಿಗೆ ಮಾಡಿದ್ದಾರೆ ಎಂಬುದು ಗೊತ್ತಾಗುವುದಿಲ್ಲ.
ಬಿಟ್ ಕಾಯಿನ್ ಬೆಲೆ ಕ್ಷಣ ಕ್ಷಣಕ್ಕೆ ತೀವ್ರ ಏರಿಳಿತಗಳಿಗೆ ಒಳಗಾಗುವುದರಿಂದ ಹೂಡಿಕೆದಾರರಿಗೆ ಭಾರಿ ನಷ್ಟ ಆಗಬಹುದು.

ಕಾನೂನು ಬದ್ದವೆ?

ಬಿಟ್ ಕಾಯಿನ್ ಭಾರತದಲ್ಲಿ ಕಾನೂನು ಬದ್ದವಾಗಿ ಚಲಾವಣೆಗೆ ತಂದಿಲ್ಲ. ಭಾರತೀಯ ರಿಸರ್ವ್ ಬ್ಯಾಂಕ್ ಇದರ ಒಳಿತು ಕೆಡುಕುಗಳ ಬಗ್ಗೆ ಗಮನ ಹರಿಸಿದೆ. ಬಿಟ್ ಕಾಯಿನ್ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯಿಂದ ನಿಯಂತ್ರಿಸಲ್ಪಡುವುದಿಲ್ಲ. ಹಾಗಿದ್ದಾಗ ನಿಷೇಧ ಮಾಡುವುದು ಕೂಡಾ ಅಸಾಧ್ಯದ ಮಾತು.

Leave a Comment

Your email address will not be published. Required fields are marked *