October 2021

ಉಗ್ರ ಸಂಘಟನೆಯೊಂದಿಗೆ ಸಂಪರ್ಕ| ಬೆಂಗಳೂರಿನ ಯುವಕ ಅರೆಸ್ಟ್

ಬೆಂಗಳೂರು: ಇಸ್ಲಾಮಿಕ್ ಸ್ಟೇಟ್ ಸಂಘಟನೆಯೊಂದಿಗೆ ಗುರುತಿಸಿಕೊಂಡಿದ್ದ ಎನ್ನಲಾದ ಯುವಕನೊಬ್ಬನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿಗಳು ಶನಿವಾರ ಬಂಧಿಸಿ ಘಟನೆ ನಡೆದಿದೆ.ಬಂಧಿತ ಆರೋಪಿ ಬೆಂಗಳೂರಿನ ಮುಹಮ್ಮದ್ ತಾಖಿರ್ ಮೊಹಮ್ಮದ್ (33) ಎಂದು ಗುರುತಿಸಲಾಗಿದೆ. ಈತನ ವಿರುದ್ಧ ಸೆಕ್ಷನ್ 120ಬಿ, ಐಪಿಸಿ 125 ಮತ್ತು ಸೆಕ್ಷನ್ 17,18 ಹಾಗೂ ಯುಎ (ಪಿ) 18ಬಿ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಎನ್‌ಐಎಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಮುಸ್ಲಿಂ ಸಮುದಾಯದ ಯುವಕರಲ್ಲಿ ಮೂಲಭೂತವಾದವನ್ನು ಪಸರಿಸಿ, ಅವರನ್ನು ಐಎಸ್ ಉಗ್ರ ಸಂಘಟನೆಗೆ ಸೇರಲು ಸಿರಿಯಾಕ್ಕೆ ಕಳುಹಿಸುತ್ತಿದ್ದ ಎಂಬ […]

ಉಗ್ರ ಸಂಘಟನೆಯೊಂದಿಗೆ ಸಂಪರ್ಕ| ಬೆಂಗಳೂರಿನ ಯುವಕ ಅರೆಸ್ಟ್ Read More »

ಸುಳ್ಯ: ಶಾಲಾ ಮಕ್ಕಳಿಂದ ಹದಗೆಟ್ಟ ರಸ್ತೆ ದುರಸ್ತಿ| ಜಾಲತಾಣದಲ್ಲಿ ಫೋಟೋ ವೈರಲ್|

ಸುಳ್ಯ: ಶಾಲಾ ಕಾಲೇಜುಗಳು ಕೊನೆಗೂ ಪ್ರಾರಂಭವಾಗಿವೆ.ಆದರೆ ಅದಕ್ಕೆ ತಕ್ಕಂತೆ ನಮ್ಮೂರಿನ ಜನಪ್ರತಿನಿಧಿಗಳು ತಯಾರಾಗಿಲ್ಲ ಎನ್ನೋದಕ್ಕೆ ದ.ಕ ಜಿಲ್ಲೆಯ ಸುಳ್ಯ ತಾಲೂಕಿ‌ನ ಬೆಳ್ಳಾರೆಯ ಮಂಡೇಪು ಎಂಬಲ್ಲಿ ಶಾಲಾ ಮಕ್ಕಳಿಬ್ಬರು ಮಾಡಿದ ಕೆಲಸವೇ ಸಾಕ್ಷಿ. ಈ ಪುಟ್ಟ ಮಕ್ಕಳು ಶಾಲೆಗೆ ತೆರಳುವ ಹಾದಿಯ ಹದಗೆಟ್ಟ ರಸ್ತೆಯನ್ನು ತಾವೇ ಹಾರೆ ಹಿಡಿದು ಸರಿಪಡಿಸಿದ್ದು, ಈ ಫೋಟೋಗಳು ವೈರಲ್ ಆಗಿದೆ. ಏನಿದು ಘಟನೆ? ಸೋಮವಾರ ಶಾಲೆ ಆರಂಭವಾಗಿದೆ. ಎಲ್ಲ ಮಕ್ಕಳು ಸರಿ ಸುಮಾರು ಎರಡು ವರ್ಷದ ನಂತರ ಶಾಲೆಗಳಿಗೆ ತೆರಳುತ್ತಿದ್ದಾರೆ. ಹೀಗೆ ಖುಷಿಯಲ್ಲಿದ್ದ

ಸುಳ್ಯ: ಶಾಲಾ ಮಕ್ಕಳಿಂದ ಹದಗೆಟ್ಟ ರಸ್ತೆ ದುರಸ್ತಿ| ಜಾಲತಾಣದಲ್ಲಿ ಫೋಟೋ ವೈರಲ್| Read More »

ಶಾಲೆಗೆ ಹೊರಟಿದ್ದಾರೆ ಚಿಣ್ಣರು| ಇಂದಿನಿಂದ 1ರಿಂದ 5ನೇ ತರಗತಿಗಳು ಕೂಡಾ ಓಪನ್

ಬೆಂಗಳೂರು: ಒಂದೂವರೆ ವರ್ಷದ ನಂತರ ರಾಜ್ಯದಲ್ಲಿ ಇಂದಿನಿಂದ 1 ರಿಂದ 5 ನೇ ತರಗತಿ ಆರಂಭವಾಗಿವೆ. ನೀಟಾಗಿ ಯೂನಿಫಾರ್ಮ್ ತೊಟ್ಟು ಪುಟ್ಟ ಪುಟಾಣಿಗಳು ವರ್ಷದ ಬಳಿಕ ಶಾಲೆಗೆ ಹೊರಟಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆ ಕೋವಿಡ್ ಮಾರ್ಗಸೂಚಿಯಂತೆ ಭೌತಿಕವಾಗಿ ತರಗತಿ ನಡೆಸಲು ಸೂಚನೆ ನೀಡಿದ್ದು, ಶಾಲೆಗಳಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಶಾಲೆಗಳಲ್ಲಿ ಶಾಲಾ ಕೊಠಡಿ, ಶೌಚಾಲಯ, ಅಡುಗೆ ಮನೆ ಮತ್ತು ಶಾಲಾ ಆವರಣವನ್ನು ಕಡ್ಡಾಯವಾಗಿ ಸ್ಯಾನಿಟೈಸ್ ಮಾಡಿಸಬೇಕು. ಮಕ್ಕಳು ಶಾಲೆಗಳಿಗೆ ಬರಲು ಪೋಷಕರಿಂದ ಕಡ್ಡಾಯವಾಗಿ ಅನುಮತಿ ಪತ್ರ ಪಡೆದುಕೊಂಡು

ಶಾಲೆಗೆ ಹೊರಟಿದ್ದಾರೆ ಚಿಣ್ಣರು| ಇಂದಿನಿಂದ 1ರಿಂದ 5ನೇ ತರಗತಿಗಳು ಕೂಡಾ ಓಪನ್ Read More »

ಮಂಗಳೂರು: ಬೆಳಿಗ್ಗೆ ಆಟವಾಡುತ್ತಿದ್ದ ಬಾಲಕಿ ಮಧ್ಯಾಹ್ನ ಶವವಾಗಿ ಪತ್ತೆ!!

ಮಂಗಳೂರು: ಭಾನುವಾರ ಕುದ್ರೋಳಿಯ ಹೈದರಾಲಿ ರಸ್ತೆಯಲ್ಲಿದ್ದ ಮನೆಯೊಂದರಿಂದ ಏಕಾಏಕಿ ನಾಪತ್ತೆಯಾಗಿದ್ದ ಬಾಲಕಿಯ ಮೃತದೇಹ ಮನೆ ಸಮೀಪದ ನದಿಯಲ್ಲಿ ಮಧ್ಯಾಹ್ನದ ವೇಳೆಗೆ ಪತ್ತೆಯಾಗಿರುವ ಆಘಾತಕಾರಿ ಘಟನೆ ನಡೆದಿದೆ.ಹೈದರಲಿ ರಸ್ತೆಯ ನಿವಾಸಿ ಸಲಾಂ ಎಂಬವರ ಮಗಳು ಮುಫೀದಾ(11) ಮೃತಪಟ್ಟ ಬಾಲಕಿ. ಭಾನುವಾರ ಬೆಳಗ್ಗೆ ಎಂದಿನಂತೆ ಎಲ್ಲರ ಜೊತೆ ಖುಷಿಯಲ್ಲಿ ಆಟವಾಡಿತ್ತಿದ್ದಳು, ಬಳಿಕ ಮನೆಯಿಂದ ದಿಢೀರ್ ನಾಪತ್ತೆಯಾಗಿದ್ದಳು. ಈ ಹಿನ್ನಲೆ ಆಕೆಗಾಗಿ ಸ್ಥಳೀಯರು ಎಲ್ಲಾ ಕಡೆ ಹುಡುಕಾಟ ನಡೆಸಿದ್ದರು.ಬಳಿಕ ಮನೆ ಸಮೀಪದ ಅಂಗಡಿಯೊಂದರ ಸಿಸಿಟಿವಿ ಕ್ಯಾಮರಾ ಪರಿಶೀಲಿಸಿದಾಗ ಮನೆಯಿಂದ ಸುಮಾರು 200

ಮಂಗಳೂರು: ಬೆಳಿಗ್ಗೆ ಆಟವಾಡುತ್ತಿದ್ದ ಬಾಲಕಿ ಮಧ್ಯಾಹ್ನ ಶವವಾಗಿ ಪತ್ತೆ!! Read More »

ಜೈಲಲ್ಲಿ ರಾಮಾಯಣದ ಮೊರೆ ಹೋದ ಆರ್ಯನ್ ಖಾನ್|

ಮುಂಬೈ: ಡ್ರಗ್ಸ್ ಪ್ರಕರಣದಲ್ಲಿ ಮುಂಬೈನ ಆರ್ಥರ್ ರಸ್ತೆಯ ಜೈಲಿನಲ್ಲಿರುವ ಶಾರುಖ್ ಖಾನ್ ಮಗ ಆರ್ಯನ್ ಖಾನ್ ಅವರ ಜಾಮೀನು ಅರ್ಜಿಯನ್ನು ಎರಡು ಬಾರಿ ತಿರಸ್ಕರಿಸಲಾಗಿದೆ. ನಂತರ ಆರ್ಯನ್​ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದು, ಅಕ್ಟೋಬರ್ 26ರಂದು ವಿಚಾರಣೆಗೆ ನಡೆಯಲಿದೆ. ಏತನ್ಮಧ್ಯೆ, ಆರ್ಯನ್ ಜೈಲಿನಲ್ಲಿ ಸಮಯ ಕಳೆಯಲು ಏನು ಮಾಡ್ತಿದ್ದಾರೆ ಎಂಬ ಪ್ರಶ್ನೆಗಳು ಏಳದೇ ಇರದು. ಅವರು ಜೈಲಿನಲ್ಲಿ ಕಾಲಕಳೆಯಲು ಪುಸ್ತಕಗಳನ್ನು ಓದುತ್ತಿದ್ದಾರೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಆರ್ಥರ್ ರೋಡ್ ಜೈಲಿನ ಗ್ರಂಥಾಲಯದಿಂದ ಆರ್ಯನ್ ಎರಡು ಪುಸ್ತಕಗಳನ್ನು

ಜೈಲಲ್ಲಿ ರಾಮಾಯಣದ ಮೊರೆ ಹೋದ ಆರ್ಯನ್ ಖಾನ್| Read More »

‘ಬೆತ್ತಲೆ ದೃಶ್ಯವನ್ನು ಹತ್ತಾರು ಬಾರಿ ಚಿತ್ರಿಸಿದ್ದರು..!’ – ಭಾವುಕರಾಗಿ ನೋವು ಹಂಚಿಕೊಂಡ ನಟಿ ಕುಬ್ರಾ ಸೇಠ್

ಡಿಜಿಟಲ್ ಡೆಸ್ಕ್: ನಟ, ಆ್ಯಂಕರ್​ ಹಾಗೂ ಆರ್​ಸಿಬಿ ಇನ್​ಸೈಡರ್​ ದ್ಯಾನಿಶ್ ಸೇಠ್​ ಸಹೋದರಿ ಕುಬ್ರಾ ಸೇಠ್​ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ವೆಬ್​ ಸೀರಿಸ್​ನಲ್ಲಿ ಮಿಂಚಿರುವ ಅವರಿಗೆ ಹಾಲಿವುಡ್​ನಿಂದಲೂ ಆಫರ್​ ಇದೆ. ಈಗ ಅವರು ಹಳೆಯ ಘಟನೆ ಒಂದನ್ನು ನೆನಪು ಮಾಡಿಕೊಂಡಿದ್ದಾರೆ. ಈ ಘಟನೆ ಬಗ್ಗೆ ವಿವರಿಸುವಾಗ ಅವರು ಭಾವುಕರಾಗಿದ್ದರು. ‘ಸೇಕ್ರೆಡ್​ ಗೇಮ್ಸ್​’ ವೆಬ್​ ಸರಣಿಯಲ್ಲಿ ಕುಬ್ರಾ ಸೇಠ್​ ಮಾಡಿದ್ದ ಕುಕೂ ಎಂಬ ಪಾತ್ರ ಗಮನ ಸೆಳೆದಿತ್ತು. ಅವರು ಆ ವೆಬ್​ ಸೀರಿಸ್​ನಲ್ಲಿ ಇಂಟಿಮೇಟ್​ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಅವರ ಪಾತ್ರ

‘ಬೆತ್ತಲೆ ದೃಶ್ಯವನ್ನು ಹತ್ತಾರು ಬಾರಿ ಚಿತ್ರಿಸಿದ್ದರು..!’ – ಭಾವುಕರಾಗಿ ನೋವು ಹಂಚಿಕೊಂಡ ನಟಿ ಕುಬ್ರಾ ಸೇಠ್ Read More »

ಪೊಲೀಸ್ ಪರೀಕ್ಷೆಯಲ್ಲಿ ನಕಲು| 14 ಮಂದಿ ಬಂಧನ

ಬೆಳಗಾವಿ: ನಗರದಲ್ಲಿ ಭಾನುವಾರ ನಡೆದ ನಾಗರಿಕ ಪೊಲೀಸ್ ಕಾನ್‌ಸ್ಟೆಬಲ್ ಲಿಖಿತ ಪರೀಕ್ಷೆ ವೇಳೆ ಬ್ಲೂಟೂತ್ ಸಾಧನ‌ ಬಳಸಿ ನಕಲು ಮಾಡಲು ಯತ್ನಿಸಿದ ಇಬ್ಬರು ಅಭ್ಯರ್ಥಿಗಳು ಸೇರಿದಂತೆ 14 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಅವರಿಂದ 33 ಮೊಬೈಲ್‌ಗಳು, 9 ಮಾಸ್ಟರ್ ಕಾರ್ಡ್ ಸಾಧನಗಳು, 19 ಬ್ಲೂಟೂತ್ ಉಪಕರಣಗಳು, 3 ಟ್ಯಾಬ್‌ಗಳು, 1 ಲ್ಯಾಪ್‌ಟಾಪ್, 1 ಪ್ರಿಂಟರ್, 1 ಕಾರು ಹಾಗೂ ಮೂರು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್‌ಪಿ ಲಕ್ಷ್ಮಣ‌ ನಿಂಬರಗಿ ತಿಳಿಸಿದ್ದಾರೆ. ಬ್ಲೂಟೂತ್ ಸಾಧನ ಬಳಸಿ

ಪೊಲೀಸ್ ಪರೀಕ್ಷೆಯಲ್ಲಿ ನಕಲು| 14 ಮಂದಿ ಬಂಧನ Read More »

ಮೊದಲ ಪಂದ್ಯದಲ್ಲಿ ಭಾರತಕ್ಕೆ ಹತಾಶೆ, ಗೆಲುವಿನ ನಗೆ ಬೀರಿದ ಪಾಕಿಸ್ತಾನ

ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾನುವಾರ ದುಬೈಯಲ್ಲಿ ಸೂಪರ್-12 ಹಂತದ ಎರಡನೇ ಗುಂಪಿನ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಸೋಲುಂಡಿದೆ. ಮೊದಲು ಬ್ಯಾಟಿಂಗ್ ನಡೆಸಿರುವ ಭಾರತ, ನಾಯಕ ವಿರಾಟ್ ಕೊಹ್ಲಿ (57) ಸಮಯೋಚಿತ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 151 ರನ್‌ಗಳ ಸವಾಲಿನ ಮೊತ್ತ ಪೇರಿಸಿದೆ. ರನ್ ಬೆನ್ನತ್ತಿದ‌ ಪಾಕ್.17.5 ಓವರ್ನಲ್ಲಿ ಗೆಲುವಿನ ನಗೆ ಬೀರಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಅತ್ಯಂತ ಕಳಪೆ ಆರಂಭ ಪಡೆಯಿತು. ಆರು

ಮೊದಲ ಪಂದ್ಯದಲ್ಲಿ ಭಾರತಕ್ಕೆ ಹತಾಶೆ, ಗೆಲುವಿನ ನಗೆ ಬೀರಿದ ಪಾಕಿಸ್ತಾನ Read More »

ಮುಸ್ಲಿಂ ಹುಡುಗಿಯ ಪ್ರೀತಿಸುತ್ತಿದ್ದ ಹಿಂದೂ ಹುಡುಗ| ಪ್ರೀತಿ ಕೊಂದ ಕೊಲೆಗಾರರು..!?

ವಿಜಯಪುರ: ವಿಜಯಪುರದಲ್ಲಿ ಮರ್ಯಾದಾ ಹತ್ಯೆ ಪ್ರಕರಣ ನಡೆದಿರುವ ಶಂಕೆ ವ್ಯಕ್ತವಾಗಿದೆ. ಮುಸ್ಲಿಂ ಯುವತಿಯನ್ನು ಪ್ರೀತಿಸುತ್ತಿದ್ದ ಹಿಂದೂ ಯುವಕನ ಹತ್ಯ ನಡೆದಿದ್ದು, ಬಾವಿಯಲ್ಲಿ ಶವ ಸಿಕ್ಕಿದೆ. ಮೃತಪಟ್ಟ ಯುವಕನನ್ನು ಆಲಮೇಲ ತಾಲೂಕಿನ ಬಳಗಾನೂರ ಗ್ರಾಮದ ರವಿ ನಿಂಬರಗಿ (34) ಎಂದು ಗುರುತಿಸಲಾಗಿದೆ. ಅಕ್ಟೋಬರ್ 21ರಂದು ನಾಪತ್ತೆಯಾಗಿದ್ದ ರವಿ ಶವ ಹೊಲದ ಬಾವಿಯಲ್ಲಿ ಅಕ್ಟೋಬರ್ 23ರಂದು ಪತ್ತೆಯಾಗಿದೆ. ಅಕ್ಟೋಬರ್ 21ರಂದು ದಿನಸಿ ತರಲು ಮನೆಯಿಂದ ಹೊರ ಹೋಗಿದ್ದ ರವಿ ನಿಂಬರಗಿ ನಾಪತ್ತೆಯಾಗಿದ್ದ. ರವಿ ಪ್ರೀತಿಸುತ್ತಿದ್ದ ಯುವತಿ 24 ವರ್ಷದ ಅಮ್ರಿನ್

ಮುಸ್ಲಿಂ ಹುಡುಗಿಯ ಪ್ರೀತಿಸುತ್ತಿದ್ದ ಹಿಂದೂ ಹುಡುಗ| ಪ್ರೀತಿ ಕೊಂದ ಕೊಲೆಗಾರರು..!? Read More »

ವಕೀಲ ರಾಜೇಶ್ ಭಟ್ ನಿಂದ ಲೈಂಗಿಕ ದೌರ್ಜನ್ಯ| ಮಾಧ್ಯಮಗಳ ಮುಂದೆ ಕಾಣಿಸಿಕೊಂಡ ಸಂತ್ರಸ್ತೆ| ಘಟನೆ ಕುರಿತಂತೆ ಎಲ್ಲವನ್ನೂ ಬಿಚ್ಚಿಟ್ಟ ಯುವತಿ|

ಮಂಗಳೂರು: ಮಂಗಳೂರಿನ ಖ್ಯಾತ ವಕೀಲ ರಾಜೇಶ್ ಭಟ್ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿ ವಾರ ಕಳೆದಿದೆ. ಆದರೂ ಈವರೆಗೂ ರಾಜೇಶ್ ಭಟ್ ಬಂಧನ ಆಗಿಲ್ಲ. ಪೊಲೀಸರು ನಾಲ್ಕು ವಿಶೇಷ ತಂಡಗಳನ್ನು ರಚಿಸಿ, ರಾಜೇಶ್ ಭಟ್ ಪತ್ತೆಗಾಗಿ ಬಲೆ ಬೀಸಿದ್ದಾರೆ. ಈ ನಡುವೆ ಸಂತ್ರಸ್ತ ಯುವತಿ ಮಾಧ್ಯಮಗಳ ಮುಂದೆ ಘಟನೆಯ ಸಂಪೂರ್ಣ ಮಾಹಿತಿ ನೀಡಿದ್ದಾಳೆ.ಮಾಧ್ಯಮಗಳ ಜೊತೆ ಮಾತನಾಡಿದ ಯುವತಿ ಘಟನೆ ಬಗ್ಗೆ ಮಾಹಿತಿ ನೀಡಿದ್ದಾಳೆ. ಮಂಗಳೂರಿನ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ವಿದ್ಯಾಭ್ಯಾಸ ಮಾಡುತ್ತಿರುವ ಯುವತಿ ತರಬೇತಿಗೆಂದು

ವಕೀಲ ರಾಜೇಶ್ ಭಟ್ ನಿಂದ ಲೈಂಗಿಕ ದೌರ್ಜನ್ಯ| ಮಾಧ್ಯಮಗಳ ಮುಂದೆ ಕಾಣಿಸಿಕೊಂಡ ಸಂತ್ರಸ್ತೆ| ಘಟನೆ ಕುರಿತಂತೆ ಎಲ್ಲವನ್ನೂ ಬಿಚ್ಚಿಟ್ಟ ಯುವತಿ| Read More »