October 2021

ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದಾರೆ ಮಾಜಿ ಪಿಎಂ ಮನಮೋಹನ್ ಸಿಂಗ್| ಏಮ್ಸ್ ವೈದ್ಯರಿಂದ ಮಾಹಿತಿ|

ನವದೆಹಲಿ: ಬುಧವಾರ ಸಂಜೆ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರಿಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಡೆಂಗ್ಯೂ ಇರುವುದು ಪತ್ತೆಯಾಗಿದೆ ಎಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ. AIMS ಆಸ್ಪತ್ರೆಯಲ್ಲಿ ಮನಮೋಹನ್ ಸಿಂಗ್ ಚಿಕಿತ್ಸೆ ಪಡೆಯುತ್ತಿದ್ದು, ಹೃದ್ರೋಗ ತಜ್ಞರ ತಂಡ, ನಿತೀಶ್ ನಾಯಕ್ ಅವರ ಮಾರ್ಗದರ್ಶನದಲ್ಲಿ ಅವರ ವೈಯಕ್ತಿಕ ವೈದ್ಯಾಧಿಕಾರಿ, ಹಲವು ವರ್ಷಗಳಿಂದ ಮಾಜಿ ಪ್ರಧಾನಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಐಎಎನ್‌ಎಸ್ ಜೊತೆ ಮಾತನಾಡಿದ ಏಮ್ಸ್ ಅಧಿಕಾರಿ, ಕಾಂಗ್ರೆಸ್ ನಾಯಕನ […]

ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದಾರೆ ಮಾಜಿ ಪಿಎಂ ಮನಮೋಹನ್ ಸಿಂಗ್| ಏಮ್ಸ್ ವೈದ್ಯರಿಂದ ಮಾಹಿತಿ| Read More »

ಐವತ್ತಾರು‌ ಇಂಚಿನ ಎದೆ ಇದ್ದರೆ ಸಾಲದು, ಅದರಲ್ಲಿ ಹೃದಯವಿರಬೇಕು – ಪ್ರಧಾನಿ ವಿರುದ್ಧ ಸಿದ್ದು ಗುಡುಗು

ಹಾನಗಲ್: ಪ್ರಧಾನಿ ನರೇಂದ್ರ ಮೋದಿ ಐವತ್ತಾರು ಇಂಚಿನ ಎದೆಯಿದೆ ಅಂತಾರೆ‌. ಎದೆ ಇರೋದು ಮುಖ್ಯವಲ್ಲ. ಎದೆಯಲ್ಲಿ ಮಾತೃ ಹೃದಯ ಇರಬೇಕು. ಅದಿಲ್ಲದಿದ್ದರೆ ಎಷ್ಟು ಇಂಚಿನ ಎದೆ ಇದ್ದರೇನು ಉಪಯೋಗ? ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದರು. ವೋಟಿನ ಮೂಲಕ ಬಿಜೆಪಿ ಅಭ್ಯರ್ಥಿ ಸಜ್ಜನರನ್ನ ಸೋಲಿಸಿ, ಕಾಂಗ್ರೆಸ್​ ಅಭ್ಯರ್ಥಿ ಮಾನೆಯವರನ್ನ ಗೆಲ್ಲಿಸಿ ವಿಧಾನಸಭೆಗೆ ಕಳಿಸಿ. ದೀಪಾವಳಿಗೆ ಮುಂಚೆಯೇ ಮಾನೆಯವರನ್ನ ಗೆಲ್ಲಿಸಿ, ಪಟಾಕಿ ಹೊಡಿರಿ. ಈ ಚುನಾವಣೆಯನ್ನ ದೇಶದ ಜನರು ನೋಡ್ತಿದ್ದಾರೆ‌. ಕೊರೊನಾ‌ ಓಡಿಸಿ ಅಂದ್ರೆ ಜಾಗಟೆ ಬಾರಿಸಿ, ಚಪ್ಪಾಳೆ

ಐವತ್ತಾರು‌ ಇಂಚಿನ ಎದೆ ಇದ್ದರೆ ಸಾಲದು, ಅದರಲ್ಲಿ ಹೃದಯವಿರಬೇಕು – ಪ್ರಧಾನಿ ವಿರುದ್ಧ ಸಿದ್ದು ಗುಡುಗು Read More »

ಪೇಸ್ಬುಕ್ ಗೆಳೆಯನಿಂದ ಅಪ್ರಾಪ್ತೆಯ ಅತ್ಯಾಚಾರ

ಬಲಿಯಾ: ಫೇಸ್‍ಬುಕ್ ಜಾಲತಾಣದಲ್ಲಿ ಪರಿಚಯಗೊಂಡ ಕಾಮುಕನೊಬ್ಬನ 16 ವರ್ಷದ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಆಕೆಯ ಮೇಲೆ ಅತ್ಯಾಚಾರ ನಡೆಸಿರುವ ಪ್ರಕರಣ ಉತ್ತರಪ್ರದೇಶದ ಬಲಿಯಾ ಜಿಲ್ಲೆಯ ದೊಕಾಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹರ್ದೋಯಿ ಜಿಲ್ಲೆಯ 31 ವರ್ಷದ ಯುವಕ ಫೇಸ್‍ಬುಕ್‍ನಲ್ಲಿ ಬಾಲಕಿಯನ್ನು ಪರಿಚಯಿಸಿಕೊಂಡು ನಿನ್ನನ್ನು ಮದುವೆಯಾಗುವುದಾಗಿ ನಂಬಿಸಿದ್ದ. ಆತನ ಮಾತು ನಂಬಿ ಕಳೆದ ಆ.25 ರಂದು ಬಾಲಕಿ ಆತನ ಬಳಿಗೆ ತೆರಳಿದ್ದಾಗ ಆತ ಪುಸಲಾಯಿಸಿ ಅತ್ಯಚಾರ ನಡೆಸಿ ಅಪ್ರಾಪ್ತೆಯೊಂದಿಗೆ ತಲೆಮರೆಸಿಕೊಂಡಿದ್ದ. ತನ್ನ ಮಗಳ ನಾಪತ್ತೆ ಕುರಿತಂತೆ ಬಾಲಕಿಯ

ಪೇಸ್ಬುಕ್ ಗೆಳೆಯನಿಂದ ಅಪ್ರಾಪ್ತೆಯ ಅತ್ಯಾಚಾರ Read More »

ಎಂಡೋಪೀಡಿತ ಯುವಕನ ಮೇಲೆ ಅತ್ಯಾಚಾರ| ಆರೋಪಿ ಅಂದರ್

ಪುತ್ತೂರು: ಅನ್ಯಕೋಮಿನ ವ್ಯಕ್ತಿಯಿಂದ ಎಂಡೋಸಲ್ಪಾನ್ ಪೀಡಿತ 20 ವರ್ಷದ ಯುವಕನೊಬ್ಬನ ಮೇಲೆ ಅತ್ಯಾಚಾರ ನಡೆದ ಘಟನೆ ಪುತ್ತೂರಿನ ಮುರದಲ್ಲಿ ಬೆಳಕಿಗೆ ಬಂದಿದೆ. ಬಂಧಿತ ಆರೋಪಿ ಮುರ ನಿವಾಸಿ ಮಹಮ್ಮದ್ ಹನೀಫ್ (50) ಎನ್ನಲಾಗಿದೆ. ಈ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಯುವಕನ ತಂದೆ ನೀಡಿದ ದೂರಿನ ಆಧಾರದ ಮೇಲೆ ಆರೋಪಿಯನ್ನು ಪುತ್ತೂರು ನಗರ ಠಾಣೆಯಲ್ಲಿ ಬಂಧಿಸಿ, ತನಿಖೆ ನಡೆಸಲಾಗುತ್ತಿದೆ. ಶುಕ್ರವಾರ ಸಂಜೆ ಯುವಕ ಸಂಜೆ 6.00 ಗಂಟೆಗೆ ವಾಕಿಂಗ್ ಗೆಂದು ಮನೆಯಿಂದ ಹೋಗಿದ್ದು ಮನೆಗೆ ಮರಳಿದ ಸಂದರ್ಭದಲ್ಲಿ ಆತನ

ಎಂಡೋಪೀಡಿತ ಯುವಕನ ಮೇಲೆ ಅತ್ಯಾಚಾರ| ಆರೋಪಿ ಅಂದರ್ Read More »

ಸುಬ್ರಹ್ಮಣ್ಯ: ಬೈಕಿನ ಮೇಲೆ ಕಡವೆ ಹಾರಿ ಸವಾರ ಸಾವು

ಸುಬ್ರಹ್ಮಣ್ಯ: ಚಲಿಸುತ್ತಿದ್ದ ಬೈಕಿನ ಮೇಲೆ ಕಡವೆ ಹಾರಿದ ಪರಿಣಾಮವಾಗಿ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ ಕಛೇರಿ ಸಿಬ್ಬಂದಿ ರಾಮಚಂದ್ರ ಅರ್ಬಿತ್ತಾಯ ಎಂಬವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಇಂದು ಸುಬ್ರಹ್ಮಣ್ಯ ಸಮೀಪದ ಕುಲ್ಕುಂದ ಎಂಬಲ್ಲಿ ನಡೆದಿದೆ. ಇಂದು ಮುಂಜಾನೆ ಸುಮಾರು 5.45ರ ಹೊತ್ತಿಗೆ ರಾಮಚಂದ್ರ ಅರ್ಬಿತ್ತಾಯರು ತಮ್ಮ ಸಹೋದರ ರವಿ ಅರ್ಬಿತ್ತಾಯರೊಂದಿಗೆ ಕುಲ್ಕುಂದಕ್ಕೆ ಶಟಲ್ ಬ್ಯಾಡ್ಮಿಂಟನ್ ಆಟ ಆಡಲು ತೆರಳುತ್ತಿರುವ ಸಂದರ್ಭ ಕುಲ್ಕುಂದದ ಬ್ರಾಮರಿ‌ ನೆಸ್ಟ್ ವಸತಿಗೃಹದ ಬಳಿ ಅವರು ಚಲಿಸುತ್ತಿದ್ದ ದ್ವಿಚಕ್ರ ವಾಹನದ ಮೇಲೆ ಪಕ್ಕದ ಗುಡ್ಡದಿಂದ ಕಡವೆ

ಸುಬ್ರಹ್ಮಣ್ಯ: ಬೈಕಿನ ಮೇಲೆ ಕಡವೆ ಹಾರಿ ಸವಾರ ಸಾವು Read More »

ದಸರಾ ಪಾರ್ಟಿಯಲ್ಲಿ ಉಂಟಾದ ಜಗಳ ಕೊಲೆಯಲ್ಲಿ ಅಂತ್ಯ

ಮಂಗಳೂರು: ಇಲ್ಲಿನ ಲಾಡ್ಜ್ ಒಂದರಲ್ಲಿ ಯುವಕನ ಕೊಲೆಯಾಗಿರುವ ಘಟನೆ ತಡರಾತ್ರಿ ನಡೆದಿದೆ. ಮೃತ ಯುವಕನನ್ನು ಧನುಷ್ (20 ವರ್ಷ) ಎಂದು ಗುರುತಿಸಲಾಗಿದ್ದು, ಗೆಳೆಯರೊಂದಿಗೆ ದಸರಾ ಹಬ್ಬದ ಪ್ರಯುಕ್ತ ಪಾರ್ಟಿ ಮಾಡುವ ಉದ್ದೇಶದಿಂದ ತೆರಳಿದಾಗ ಘಟನೆ ನಡೆದಿದೆ. ಘಟನೆಯ ವಿವರ: ಅ.15ರಂದು ದಸರಾ ಹಬ್ಬದ ಪ್ರಯುಕ್ತ ಪಾರ್ಟಿ ಮಾಡುವ ಉದ್ದೇಶದಿಂದ ಪಂಪವೆಲ್ ಬಳಿಯ ಲಾಡ್ಜ್ ಒಂದಕ್ಕೆ ಪ್ರಮೀತ್, ಜೇಸನ್, ಕಾರ್ತೀಕ್, ಧನುಷ್, ದುರ್ಗೇಶ್ & ಪ್ರಜ್ವಲ್ ಎಂಬವರು ತೆರಳಿದ್ದಾರೆ. ಸಮಯ ಸುಮಾರು ರಾತ್ರಿ 2 ಗಂಟೆಗೆ ಜೇಸನ್ ಸುರತ್ಕಲ್

ದಸರಾ ಪಾರ್ಟಿಯಲ್ಲಿ ಉಂಟಾದ ಜಗಳ ಕೊಲೆಯಲ್ಲಿ ಅಂತ್ಯ Read More »

ದಸರಾ ಮೆರವಣಿಗೆಯ ಮೇಲೆ ಹರಿದ ಕಾರು| ನಾಲ್ವರ ಸಾವು, ಹಲವರು ಗಂಭೀರ

ಹೊಸದಿಲ್ಲಿ: ಛತ್ತೀಸ್‌ಗಡದ ಜಶ್‌ಪುರ ಜಿಲ್ಲೆಯಲ್ಲಿ ದುರ್ಗಾದೇವಿಯ ವಿಗ್ರಹವನ್ನು ವಿಸರ್ಜಿಸಲು ಭಕ್ತರು ತೆರಳುತ್ತಿದ್ದಾಗ ಕಾರೊಂದು ಜನರ ಮೇಲೆ ಹರಿದ ಪರಿಣಾಮವಾಗಿ ನಾಲ್ಕು ಮಂದಿ‌ ಸಾವನ್ನಪ್ಪಿದ್ದು, ಸುಮಾರು 20 ಮಂದಿ ಗಾಯಗೊಂಡಿದ್ದಾರೆ ಎಂದು NDTV ವರದಿ ಮಾಡಿದೆ. ಗಾಯಗೊಂಡವರನ್ನು ಚಿಕಿತ್ಸೆಗಾಗಿ ಪಾಥಲ್ ಗಾಂವ್ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮರೂನ್ ಮಹೀಂದ್ರ ಕ್ಸೈಲೊ ಕಾರು ಮಧ್ಯಪ್ರದೇಶದ ನಂಬರ್ ಪ್ಲೇಟ್ ಹೊಂದಿದ್ದು, ಭೀಕರ ಅಪಘಾತದ ನಂತರ ವೇಗವಾಗಿ ಸುಖ್ರಪಾರ ಕಡೆಗೆ ಚಲಿಸಿದೆ ಎಂದು ತಿಳಿದುಬಂದಿದೆ. ಕೋಪಗೊಂಡ ಸ್ಥಳೀಯರು ವಾಹನವನ್ನು ಹಿಂಬಾಲಿಸಿದರು ಹಾಗೂ ವಾಹನವು

ದಸರಾ ಮೆರವಣಿಗೆಯ ಮೇಲೆ ಹರಿದ ಕಾರು| ನಾಲ್ವರ ಸಾವು, ಹಲವರು ಗಂಭೀರ Read More »

‘ಆಲಯಕ್ಕೆ ಹೋಗ್ಬೇಡಿ, ದೇವರಿಗೆ ಹೂ ಸಮರ್ಪಿಸಬೇಡಿ’ – ವಿವಾದಕ್ಕೆ ಕಾರಣವಾದ ಎರಡನೇ ತರಗತಿ ಪಠ್ಯ ಪುಸ್ತಕ| ಆಕ್ರೋಶ ವ್ಯಕ್ತಪಡಿಸಿದ ಹಿಂದೂ ಪರ ಸಂಘಟನೆಗಳು

ಪುತ್ತೂರು: ರಾಜ್ಯ ಶಿಕ್ಷಣ ಇಲಾಖೆ ಹೊರತಂದಿರುವ ಎರಡನೇ ತರಗತಿಯ ಇಂಗ್ಲಿಷ್ ಪಠ್ಯ ಪುಸ್ತಕ ಇದೀಗ ವಿವಾದಕ್ಕೆ ಕಾರಣವಾಗಿದ್ದು, ಪುಸ್ತಕದಲ್ಲಿರುವ ರವೀಂದ್ರನಾಥ ಟಾಗೋರ್ ಬರೆದಿರುವ ಕವಿತೆಯಲ್ಲಿನ ಅಂಶಗಳು ಹಿಂದೂ ಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. “ಗೋ ನಾಟ್ ಟು ಟೆಂಪಲ್” ಎನ್ನುವ ಶೀರ್ಷಿಕೆಯಡಿ ಇರುವ ಈ ಕವಿತೆಯಲ್ಲಿ ಎಳೆಯ ಮನಸ್ಸುಗಳಲ್ಲಿ ಹಿಂದೂ ಧರ್ಮ ಹಾಗೂ ಅದರ ಆಚರಣೆಗಳ ಬಗ್ಗೆ ಅವಹೇಳನಕಾರಿಯಾಗಿ ಬಿಂಬಿಸಲಾಗಿದೆ ಎಂದು ಸಂಘಟನೆಗಳು ಆರೋಪಿಸಿವೆ. ಈ ಕವಿತೆಯಲ್ಲಿ ದೇವಸ್ಥಾನಕ್ಕೆ ಹೋಗೋದು ಬೇಡ, ದೇವರಿಗೆ ಹೂವು ಅರ್ಪಿಸೋದು ಬೇಡ,

‘ಆಲಯಕ್ಕೆ ಹೋಗ್ಬೇಡಿ, ದೇವರಿಗೆ ಹೂ ಸಮರ್ಪಿಸಬೇಡಿ’ – ವಿವಾದಕ್ಕೆ ಕಾರಣವಾದ ಎರಡನೇ ತರಗತಿ ಪಠ್ಯ ಪುಸ್ತಕ| ಆಕ್ರೋಶ ವ್ಯಕ್ತಪಡಿಸಿದ ಹಿಂದೂ ಪರ ಸಂಘಟನೆಗಳು Read More »

ಆಯುಧ ಪೂಜೆ ದಿನ ವಿಎಚ್ ಪಿ ಯಿಂದ ತ್ರಿಶೂಲ ದೀಕ್ಷೆ| ಚರ್ಚೆಗೆ ಗ್ರಾಸವಾದ ಪರಿವಾರದ ನಡೆ| ಸ್ಪಷ್ಟನೆ ನೀಡಿದ ಶರಣ್

ಮಂಗಳೂರು: ಆಯುಧ ಪೂಜೆ ದಿನವಾದ ನಿನ್ನೆ ತ್ರಿಶೂಲ ದೀಕ್ಷೆ ಹೆಸರಲ್ಲಿ ಹಿಂದೂ ಕಾರ್ಯಕರ್ತರಿಗೆ ಬಜರಂಗದಳದವರು ಶಸ್ತ್ರ ಹಂಚಿದ ಘಟನೆ ನಡೆದಿದ್ದು, ಕಾರ್ಯಕ್ರಮದ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪರಸ್ಪರ ಆರೋಪ ಪ್ರತ್ಯಾರೋಪಗಳು ನಡೆದಿದೆ. ಮಂಗಳೂರು ನಗರದ ಕದ್ರಿ ವಿಶ್ವ ಹಿಂದೂ ಪರಿಷತ್ ಕಚೇರಿಯಲ್ಲಿ ನಡೆದ ತ್ರಿಶೂಲ ದೀಕ್ಷೆ ಕಾರ್ಯಕ್ರಮದಲ್ಲಿ ಹಿಂದೂ ಕಾರ್ಯಕರ್ತರಿಗೆ ಚೂರಿ ಮಾದರಿಯ ತ್ರಿಶೂಲದಂಥ ಶಸ್ತ್ರವನ್ನು ಹಂಚಿಕೆ ಮಾಡಲಾಗಿದೆ. ಮಂಗಳೂರಿನ ಕದ್ರಿಯ ವಿಶ್ವ ಹಿಂದೂ ಪರಿಷತ್ ಕಚೇರಿಯಲ್ಲಿ ವಿಎಚ್‌ಪಿ ವಿಭಾಗದ ಕಾರ್ಯದರ್ಶಿ ಶರಣ್ ಪಂಪ್

ಆಯುಧ ಪೂಜೆ ದಿನ ವಿಎಚ್ ಪಿ ಯಿಂದ ತ್ರಿಶೂಲ ದೀಕ್ಷೆ| ಚರ್ಚೆಗೆ ಗ್ರಾಸವಾದ ಪರಿವಾರದ ನಡೆ| ಸ್ಪಷ್ಟನೆ ನೀಡಿದ ಶರಣ್ Read More »

ಮೈಸೂರು: ವಿಜೃಂಭಣೆಯಿಂದ ನಡೆಯುತ್ತಿರುವ ದಸರಾ ಮಹೋತ್ಸವ, ಇಲ್ಲಿದೆ ಜಂಬೂಸವಾರಿಯ ನೇರಪ್ರಸಾರ

ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಇಂದು ಕೊನೆಯಾಗಲಿದೆ. ಈಗಾಗಲೇ ಪೂಜಾ ಕೈಂಕರ್ಯಗಳು ನೆರವೇರಿದ್ದು, ಈಗಾಗಲೇ ಜಂಬೂ ಸವಾರಿ ಮೆರವಣಿಗೆ ಆರಂಭವಾಗಿದೆ. ಅರಮನೆ ಆವರಣದಲ್ಲಿ ನಡೆಯುವ ಜಂಬೂ ಸವಾರಿಯ ನೇರ ಪ್ರಸಾರ ಇಲ್ಲಿದೆ. ಕೃಪೆ ಡಿಡಿ ಚಂದನ :

ಮೈಸೂರು: ವಿಜೃಂಭಣೆಯಿಂದ ನಡೆಯುತ್ತಿರುವ ದಸರಾ ಮಹೋತ್ಸವ, ಇಲ್ಲಿದೆ ಜಂಬೂಸವಾರಿಯ ನೇರಪ್ರಸಾರ Read More »