Ad Widget .

ಮುಸ್ಲಿಂ ಹುಡುಗಿಯ ಪ್ರೀತಿಸುತ್ತಿದ್ದ ಹಿಂದೂ ಹುಡುಗ| ಪ್ರೀತಿ ಕೊಂದ ಕೊಲೆಗಾರರು..!?

ವಿಜಯಪುರ: ವಿಜಯಪುರದಲ್ಲಿ ಮರ್ಯಾದಾ ಹತ್ಯೆ ಪ್ರಕರಣ ನಡೆದಿರುವ ಶಂಕೆ ವ್ಯಕ್ತವಾಗಿದೆ. ಮುಸ್ಲಿಂ ಯುವತಿಯನ್ನು ಪ್ರೀತಿಸುತ್ತಿದ್ದ ಹಿಂದೂ ಯುವಕನ ಹತ್ಯ ನಡೆದಿದ್ದು, ಬಾವಿಯಲ್ಲಿ ಶವ ಸಿಕ್ಕಿದೆ.

Ad Widget . Ad Widget .

ಮೃತಪಟ್ಟ ಯುವಕನನ್ನು ಆಲಮೇಲ ತಾಲೂಕಿನ ಬಳಗಾನೂರ ಗ್ರಾಮದ ರವಿ ನಿಂಬರಗಿ (34) ಎಂದು ಗುರುತಿಸಲಾಗಿದೆ. ಅಕ್ಟೋಬರ್ 21ರಂದು ನಾಪತ್ತೆಯಾಗಿದ್ದ ರವಿ ಶವ ಹೊಲದ ಬಾವಿಯಲ್ಲಿ ಅಕ್ಟೋಬರ್ 23ರಂದು ಪತ್ತೆಯಾಗಿದೆ.

Ad Widget . Ad Widget .

ಅಕ್ಟೋಬರ್ 21ರಂದು ದಿನಸಿ ತರಲು ಮನೆಯಿಂದ ಹೊರ ಹೋಗಿದ್ದ ರವಿ ನಿಂಬರಗಿ ನಾಪತ್ತೆಯಾಗಿದ್ದ. ರವಿ ಪ್ರೀತಿಸುತ್ತಿದ್ದ ಯುವತಿ 24 ವರ್ಷದ ಅಮ್ರಿನ್ ಪೊಲೀಸ್ ಸಹಾಯವಾಣಿಗೆ 112ಕ್ಕೆ ಕರೆ ಮಾಡಿದ್ದಳು.

ರವಿಯನ್ನು ಎತ್ತಿಕೊಂಡು ಹೋಗಿ ಹೊಡೆಯುತ್ತಿದ್ದಾರೆ. ಆತನ ಜೀವಕ್ಕೆ ಅಪಾಯವಿದೆ ಎಂದು ಸಹಾಯವಾಣಿಗೆ ಕರೆ ಮಾಡಿದಾಗ ಮಾಹಿತಿ ನೀಡಿದ್ದಳು. ಅಕ್ಟೋಬರ್ 23ರಂದು ರವಿ ಶವ ಬಾವಿಯಲ್ಲಿ ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.

ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್. ಡಿ. ಆನಂದ್ ಕುಮಾರ್ ಈ ಘಟನೆ ಕುರಿತು ಮಾತನಾಡಿದ್ದು, “ರವಿ ನಿಂಬರದಿ ತಮ್ಮದೇ ಗ್ರಾಮದ ಅಮ್ರಿನ್ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದ. ಇಬ್ಬರು ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಯುವತಿ ತಂದೆ, ತಾಯಿ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದರು. ಪ್ರೇಮಿಗಳಿಗೆ ಎಚ್ಚರಿಕೆಯನ್ನು ನೀಡಿದ್ದರು” ಎಂದರು.

ಯುವತಿ ಸಹಾಯವಾಣಿಗೆ ಕರೆ ಮಾಡಿದ ಮಾಹಿತಿ ಅನ್ವಯ ದೂರು ದಾಖಲಿಸಿಕೊಳ್ಳಲಾಗಿದೆ. ಯುವತಿಯ ಮನೆಯವರು ನಾಪತ್ತೆಯಾಗಿದ್ದರು. ಆರೋಪಿಗಳನ್ನು ಪತ್ತೆ ಹಚ್ಚಲು ಮೂರು ತಂಡ ರಚನೆ ಮಾಡಲಾಗಿತ್ತು. ಯುವತಿಯ ಮಾವ ಮತ್ತು ಸಹೋದರನನ್ನು ಪೊಲೀಸರು ಬಂಧಿಸಿದ್ದಾರೆ.

Leave a Comment

Your email address will not be published. Required fields are marked *