Ad Widget .

ಫೇಸ್ಬುಕ್, ವಾಟ್ಸಪ್ ಸರ್ವರ್ ಡೌನ್| ಲಾಭ ಪಡೆದುಕೊಂಡ ಪೋರ್ನ್ ಸೈಟ್ ಗಳು| ಅಶ್ಲೀಲ ತಾಣಗಳಿಗೆ ಭೇಟಿ‌ ನೀಡಿದವರೆಷ್ಟು ಮಂದಿ ಗೊತ್ತಾ?

Ad Widget . Ad Widget .

Ad Widget . Ad Widget .

ಡಿಜಿಟಲ್ ಡೆಸ್ಕ್: ಸಾಮಾಜಿಕ ಜಾಲತಾಣ ಜನರ ಜೀವನದ ಒಂದು ಅಂಗವಾಗಿದೆ. ಒಂದು ಗಳಿಕೆ ಕೂಡ ಸಾಮಾಜಿಕ ಜಾಲತಾಣದಿಂದ ದೂರವಿರದ ಜನರಿದ್ದಾರೆ. ಆದ್ರೆ ಸೋಮವಾರ, ಫೇಸ್ಬುಕ್, ವಾಟ್ಸ್ ಅಪ್, ಇನ್ಸ್ಟಾಗ್ರಾಮ್ ಕೈಕೊಟ್ಟಿತ್ತು. ಕೆಲ ಗಂಟೆಗಳ ಕಾಲ ಸೇವೆ ನಿಧಾನವಾಗಿತ್ತು. ಫೇಸ್ಬುಕ್ ಒಡೆತನದ ಈ ಸಾಮಾಜಿಕ ಜಾಲತಾಣದ ವೇಗ ಕಡಿಮೆಯಾಗಿದ್ದು, ಪೋರ್ನ್ ಸೈಟ್ ಗೆ ಲಾಭ ನೀಡಿದೆ.

ಪೋನ್ ಸೈಟ್ ಗಳಲ್ಲಿ ಹೆಚ್ಚು ಪ್ರಸಿದ್ಧಿಯಾಗಿರುವ ಪೋರ್ಟಲ್ ಪೋರ್ನ್‌ಹಬ್‌ ನ ಟ್ರಾಫಿಕ್ ಶೇಕಡಾ 10.5 ರಷ್ಟು ಏರಿಕೆಯಾಗಿದೆ. ಸಾಮಾಜಿಕ ಜಾಲತಾಣದ ವೇಗ ಕಡಿಮೆಯಾಗಿದ್ದೇ, ಇದಕ್ಕೆ ಮುಖ್ಯ ಕಾರಣವಾಗಿದೆ.

ಫೇಸ್ಬುಕ್ ಗೆ ಅರ್ಧದ್ದ ಗಂಟೆಗೂ ನಷ್ಟವಾಗ್ತಿದ್ದರೆ ಪೋರ್ನ್ ಹಬ್ ಅರ್ಧ ಗಂಟೆಗೊಮ್ಮೆ ಅರ್ಧ ಮಿಲಿಯನ್ ಬಳೆಕದಾರರನ್ನು ಹೆಚ್ಚುವರಿಯಾಗಿ ಪಡೆಯುತ್ತಿತ್ತು. ಅಕ್ಟೋಬರ್ ನಾಲ್ಕರಂದು ಸುಮಾರು ಒಂದು ದಿನಗಳ ಕಾಲ, ಫೇಸ್ಬುಕ್ ಒಡೆತನದ ಈ ಕಂಪನಿಗಳು ಕೆಲಸ ನಿಧಾನಗೊಳಿಸಿದ್ದವು. ಅನೇಕ ಬಳಕೆದಾರರಿಗೆ ಈ ವೆಬ್ಸೈಟ್ ಗಳು ಸಂಪೂರ್ಣ ಬಂದ್ ಆಗಿದ್ದವು. 2008ರ ನಂತ್ರ ಇದೇ ಮೊದಲ ಬಾರಿ ಫೇಸ್ಬುಕ್ ಇಂಥ ದೊಡ್ಡ ಸಮಸ್ಯೆ ಎದುರಿಸಿದೆ.

ಪೋರ್ನ್ ಹಬ್ ಈ ಸಮಯದಲ್ಲಿ ಯಾವುದೇ ಮ್ಯಾಜಿಕ್ ಮಾಡಿಲ್ಲ. ಫೇಸ್ಬುಕ್ ಸೇವೆ ಸ್ಥಗಿತವಾಗ್ತಿದ್ದಂತೆ ಬಳಕೆದಾರರು ತಾವಾಗಿಯೇ ಪೋರ್ನ್ ಹಬ್ ನತ್ತ ಮುಖ ಮಾಡಿದ್ದರು.

ಪೋರ್ನ್ ವೆಬ್ಸೈಟ್ ಗಳನ್ನು ಭಾರತದಲ್ಲಿ ನಿಷೇಧಿಸಲಾಗಿದೆ. ಆದ್ರೆ ಖಾಸಗಿಯಾಗಿ ಪೋರ್ನ್ ವೆಬ್ ವೀಕ್ಷಣೆ ಮಾಡುವುದು ಯಾವುದೇ ಅಪರಾಧವಲ್ಲ.

ಒಂದು ವಾರದಲ್ಲಿ ಎರಡನೇ ಬಾರಿ ಫೇಸ್ಬುಕ್ ಸ್ಥಗಿತಗೊಂಡಿದೆ ಎಂದು ಬಳಕೆದಾರರು ದೂರಿದ್ದಾರೆ. ಇಂದು ಕೂಡ ಅನೇಕರು, ಫೇಸ್ಬುಕ್ ನಿಧಾನವಾಗಿದೆ ಎಂದು ದೂರಿದ್ದಾರೆ. ಈ ಬಗ್ಗೆ ಈಗಾಗಲೇ ಕಂಪನಿ ಕ್ಷಮೆ ಕೇಳಿದೆ. ಏನೇ ಇರಲಿ ಫೇಸ್ಬುಕ್ ನಿಧಾನಗತಿ, ಪೋರ್ನ್ ಹಬ್ ಗೆ ಲಾಭ ನೀಡಿದೆ.

Leave a Comment

Your email address will not be published. Required fields are marked *