September 2021

ಗಂಭೀರ ಚರ್ಚೆವೇಳೆ ಜಾರಿದ ಪಂಚೆ| ಸಿದ್ದು ಪಂಚೆಪ್ರಸಂಗಕ್ಕೆ ಸಾಕ್ಷಿಯಾದ ಸದನ

ಬೆಂಗಳೂರು: ವಿಧಾನಸಭೆ ಕಲಾಪ ಅಂದಮೇಲೆ ಅಲ್ಲಿ ಜನಪ್ರತಿನಿಧಿಗಳು ಬಿಸಿ ಬಿಸಿ ಚರ್ಚೆಯಲ್ಲಿ ತೊಡಗಿರುತ್ತಾರೆ. ರಾಜ್ಯದಲ್ಲಿ ನಡೆಯುತ್ತಿರುವ ಸಾಕಷ್ಟು ಗಂಭೀರ ವಿಚಾರಗಳ ಬಗ್ಗೆ ವಾದ ಪ್ರತಿವಾದ ನಡೆಯುತ್ತದೆ. ಆದರೆ ಇಂದು ನಡೆದ ಕಲಾಪವು ಹಾಸ್ಯಪ್ರಸಂಗಕ್ಕೆ ಸಾಕ್ಷಿಯಾಗಿದೆ. ಕಲಾಪದಲ್ಲಿ ಅತ್ಯಾಚಾರದ ವಿಚಾರವಾಗಿ ಸಿದ್ದರಾಮಯ್ಯ ಗಂಭೀರವಾಗಿ ಚರ್ಚೆ ನಡೆಸುತ್ತಿದ್ದ ವೇಳೆ ಅವರ ಪಂಚೆ ಕಳಚಿ ಹೋಗಿತ್ತು. ಕೂಡಲೇ ತಮ್ಮ ಸೀಟಿನಿಂದ ಎದ್ದು ಬಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಪಂಚೆ ಕಳಚಿರುವ ಬಗ್ಗೆ ಸಿದ್ದರಾಮಯ್ಯಗೆ ಕಿವಿಯಲ್ಲಿ ಗುಟ್ಟಾಗಿ ಹೇಳಿದರು. ಆದರೆ ಸಿದ್ದರಾಮಯ್ಯ […]

ಗಂಭೀರ ಚರ್ಚೆವೇಳೆ ಜಾರಿದ ಪಂಚೆ| ಸಿದ್ದು ಪಂಚೆಪ್ರಸಂಗಕ್ಕೆ ಸಾಕ್ಷಿಯಾದ ಸದನ Read More »

ಪಾಣತ್ತೂರು ಬಸ್ ದುರಂತ ಪ್ರಕರಣ| ವಿಶೇಷ ಪ್ರಕರಣವೆಂದು ಪರಿಗಣಿಸಿ ಪರಿಹಾರ ಮಂಜೂರು|

ಪುತ್ತೂರು: ಪುತ್ತೂರಿನ ಬಲ್ನಾಡುವಿನಿಂದ ಕೇರಳದ ಪಾಣತ್ತೂರಿಗೆ ಹೊರಟಿದ್ದ ಮದುವೆ ದಿಬ್ಬಣದ ಬಸ್ ಕೇರಳದ ಕಾಸರಗೋಡು ಜಿಲ್ಲೆಯ ಪಾಣತ್ತೂರು ಸಮೀಪದ ಪರಿಯಾರಂ ಎಂಬಲ್ಲಿ ಪಲ್ಟಿಯಾಗಿ ಬಸ್‌ನಲ್ಲಿದ್ದ 7 ಮಂದಿ ದಾರುಣ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ಪರಿಹಾರ ಘೋಷಿಸಿದೆ. ವಿಮೆ ಅವಕಾಶ ಇಲ್ಲದಿದ್ದರೂ ಅಪಘಾತದಲ್ಲಿ ಮೃತಪಟ್ಟಿರುವ ಕುಟುಂಬಕ್ಕೆ ಪರಿಹಾರಕ್ಕಾಗಿ ಪುತ್ತೂರು ಶಾಸಕ ಸಂಜೀವ ಮಠಂದೂರು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಅವರ ಮನವಿಯಂತೆ ವಿಶೇಷ ಪ್ರಕರಣವೆಂದು ಪರಿಗಣಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೃತರ ಕುಟುಂಬಕ್ಕೆ ತಲಾ

ಪಾಣತ್ತೂರು ಬಸ್ ದುರಂತ ಪ್ರಕರಣ| ವಿಶೇಷ ಪ್ರಕರಣವೆಂದು ಪರಿಗಣಿಸಿ ಪರಿಹಾರ ಮಂಜೂರು| Read More »

ಕನ್ನಡಿಗ ನ್ಯಾ.ಅರವಿಂದ್ ಕುಮಾರ್ ಹೆಸರು ಗುಜರಾತ್ ಹೈಕೋರ್ಟ್ ಮು.ನ್ಯಾ. ಸ್ಥಾನಕ್ಕೆ ಶಿಫಾರಸು

ನವದೆಹಲಿ: ಸುಪ್ರೀಂಕೋರ್ಟ್ ಕೊಲಿಜಿಯಂ 8 ಹೈಕೋಟ್‍ಗಳಿಗೆ ಹೊಸ ಮುಖ್ಯ ನ್ಯಾಯಮೂರ್ತಿಗಳ ನೇಮಕಕ್ಕೆ ಹೆಸರುಗಳನ್ನು ಶಿಫಾರಸು ಮಾಲಾಗಿದ್ದು, ಈ ಪಟ್ಟಿಯಲ್ಲಿ ರಾಜ್ಯ ಹೈಕೋಟ್‍ನಲ್ಲಿ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುತ್ತಿರುವ ಕನ್ನಡಿಗರಾದ ನ್ಯಾ. ಅರವಿಂದ್ ಕುಮಾರ್ ಹೆಸರು ಕೂಡ ಇದ್ದು ಅವರನ್ನು ಗುಜರಾತ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸ್ಥಾನಕ್ಕೆ ಶಿಫಾರಸು ಮಾಡಲಾಗಿದೆ. ಸೆಪ್ಟೆಂಬರ್ 16 ರಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ ನೇತೃತ್ವದಲ್ಲಿ ನಡೆದ ಕೊಲಿಜಿಯಂ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದೀಗ ಗುಜರಾತ್ ಹೈಕೋರ್ಟ್ ಮುಖ್ಯ ನಾಯಮೂರ್ತಿ ಸ್ಥಾನಕ್ಕೆ

ಕನ್ನಡಿಗ ನ್ಯಾ.ಅರವಿಂದ್ ಕುಮಾರ್ ಹೆಸರು ಗುಜರಾತ್ ಹೈಕೋರ್ಟ್ ಮು.ನ್ಯಾ. ಸ್ಥಾನಕ್ಕೆ ಶಿಫಾರಸು Read More »

ರಾಜ್ಯದಲ್ಲಿ ವಿಚಿತ್ರ ಜ್ವರ ಪತ್ತೆ| 170ಕ್ಕೂ ಅಧಿಕ ಮಕ್ಕಳು ಆಸ್ಪತ್ರೆಗೆ ದಾಖಲು|

ದಾವಣಗೆರೆ : ರಾಜ್ಯದಲ್ಲಿ ಮಕ್ಕಳಿಗೆ ವಿಚಿತ್ರ ರೀತಿಯ ಜ್ವರ ಕಂಡುಬಂದಿದ್ದು, ನೂರಾರು ಮಕ್ಕಳನ್ನು ಬಾಧಿಸುತ್ತಿದ್ದು, 171 ಮಕ್ಕಳು ಆಸ್ಪತ್ರೆಗೆ ದಾಖಲಾಗುವಂತಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ ಹೀಗೆ ಹೊಸ ಮಾದರಿಯ ಜ್ವರ ಕಾಣಿಸಿಕೊಂಡಿದ್ದು, ಇಲ್ಲಿ ಹೊಸ ಥರದ ಡೆಂಘೆ ಜ್ವರ ಕಂಡುಬಂದಿದೆ. 171 ಮಕ್ಕಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ದಾವಣಗೆರೆ ಜಿಲ್ಲಾಸ್ಪತ್ರೆಯ ಮಕ್ಕಳ ವಿಭಾಗ, ಬಾಪೂಜಿ ಆಸ್ಪತ್ರೆ ಹಾಗೂ ಎಸ್.ಎಸ್. ಹೈಟೆಕ್ ಆಸ್ಪತ್ರೆಯಲ್ಲಿ ಒಟ್ಟು 171 ಮಕ್ಕಳು ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಇವರಲ್ಲಿ 45 ಮಕ್ಕಳು ಶಂಕಿತ ಡೆಂಘೆ ಜ್ವರದಿಂದ ಬಳಲುತ್ತಿದ್ದಾರೆ. ಎಲ್ಲರಿಗೂ

ರಾಜ್ಯದಲ್ಲಿ ವಿಚಿತ್ರ ಜ್ವರ ಪತ್ತೆ| 170ಕ್ಕೂ ಅಧಿಕ ಮಕ್ಕಳು ಆಸ್ಪತ್ರೆಗೆ ದಾಖಲು| Read More »

ಅರಣ್ಯಕ್ಕೆ ಬಿಟ್ಟ ಕೋತಿ ಗೊಬ್ಬರದ ಲಾರಿ ಏರಿ ಮತ್ತೆ ಪೇಟೆಗೆ | ಆ ಮರ್ಕಟನ ಕತೆಯೇ ರೋಚಕ|

ಚಿಕ್ಕಮಗಳೂರು: ರೇಗಿಸಿದವನ ಮೇಲೆ ಮತ್ತು ಇತರರ ಮೇಲೆ ದಾಳಿ ಮಾಡಿದ ಹಿನ್ನಲೆ ಕೋತಿಯನ್ನು ಸೆರೆಹಿಡಿದು 22 ಕಿ.ಮೀ. ದೂರದ ದಟ್ಟ ಅರಣ್ಯಕ್ಕೆ ಬಿಡಲಾಗಿದ್ದ ಕೋತಿ ನಾಲ್ಕೇ ದಿನಕ್ಕೆ ಗೊಬ್ಬರದ ಲಾರಿ ಏರಿ ಮತ್ತೆ ಅದೇ ಜಾಗಕ್ಕೆ ಬಂದಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ನಡೆದಿದೆ. ಸೆಪ್ಟೆಂಬರ್ 16 ರಂದು ಕೊಟ್ಟಿಗೆಹಾರ ಸಮೀಪದ ತುರುವೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿದ್ದ ಕೋತಿಯನ್ನು ಹಿಡಿಯಲು ಹೋದಾಗ ಅರಣ್ಯ ಇಲಾಖೆ ಸಿಬ್ಬಂದಿ ಜೊತೆ ಹೋಗಿದ್ದ ಆಟೋ ಚಾಲಕ ಕೋತಿಗೆ ರೇಗಿಸಿದ್ದರಿಂದ

ಅರಣ್ಯಕ್ಕೆ ಬಿಟ್ಟ ಕೋತಿ ಗೊಬ್ಬರದ ಲಾರಿ ಏರಿ ಮತ್ತೆ ಪೇಟೆಗೆ | ಆ ಮರ್ಕಟನ ಕತೆಯೇ ರೋಚಕ| Read More »

ಸುಳ್ಯ| ಅರಣ್ಯಾಧಿಕಾರಿಗಳಿಂದ ಮನೆ ಮೇಲೆ ದಾಳಿ| ರಕ್ತಚಂದನ ವಶ

ಸುಳ್ಯ: ಚಿಕ್ಕಮಗಳೂರಿನ ಅರಣ್ಯಾಧಿಕಾರಿಗಳು ಸುಳ್ಯ ತಾಲೂಕಿನ ಬಾಳಿಲದ ವ್ಯಕ್ತಿಯೋಬ್ಬರ ಮನೆಯೊಂದಕ್ಕೆ ದಾಳಿ ನಡೆಸಿ ರಕ್ತಚಂದನ ಮರದ ತುಂಡುಗಳನ್ನು ವಶಪಡಿಸಿಕೊಂಡಿರುವ ಘಟನೆ ಇಂದು ವರದಿಯಾಗಿದೆ. ಬಾಳಿಲದ ಮಜೀದ್ ಎಂಬವರ ಮನೆಗೆ ಅರಣ್ಯಧಿಕಾರಿಗಳು ಖಚಿತ ಮಾಹಿತಿ ಪಡೆದು ದಾಳಿ ನಡೆಸಿದಾಗಿ ತಿಳಿದುಬಂದಿದೆ. ಈ ವೇಳೆ ರಕ್ತಚಂದನ ಮರದ ತುಂಡುಗಳ ಪತ್ತೆಯಾಗಿದ್ದು, ಈ ಮರದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಸುಳ್ಯ| ಅರಣ್ಯಾಧಿಕಾರಿಗಳಿಂದ ಮನೆ ಮೇಲೆ ದಾಳಿ| ರಕ್ತಚಂದನ ವಶ Read More »

ಕಡಬ:ಕಾಲೇಜು ವಿದ್ಯಾರ್ಥಿ ನಾಪತ್ತೆ| ಅಪಹರಣ ಶಂಕೆ, ಪೊಲೀಸ್ ದೂರು- ಸಂಬಂಧಿಕರ ಮನೆಯಲ್ಲಿ ಪತ್ತೆ|

ಕಡಬ: ಇಲ್ಲಿನ ಸಮೀಪದ ರಾಮಕುಂಜ ಶ್ರೀ ರಾಮಕುಂಜೇಶ್ವರ ವಸತಿ ನಿಲಯದಲ್ಲಿದ್ದ ವಿದ್ಯಾರ್ಥಿಯೋರ್ವ ಕಾಲೇಜಿಗೂ ಹೋಗದೆ, ಮನೆಗೂ ತೆರಳದೆ ನಾಪತ್ತೆಯಾಗಿರುವ ಘಟನೆ ಮಂಗಳವಾರದಂದು ನಡೆದಿದೆ. ನಿಗೂಢವಾಗಿ ನಾಪತ್ತೆಯಾಗಿರುವ ವಿದ್ಯಾರ್ಥಿ ಕುರಿತು ಅಪಹರಣ ಆಗಿರಬಹುದೆಂದು ಶಂಕಿಸಿ ಕಡಬ ಠಾಣೆಯಲ್ಲಿ ಪ್ರಕರಣ ದ ದಾಖಲಾಗಿತ್ತು. . ದೂರಿನ ಬಳಿಕ ತ‌ನಿಖೆ ನಡೆಸಿದ‌ ಪೊಲೀಸರಿಗೆ ಆತ ಬೆಂಗಳೂರಿನಲ್ಲಿ ‌ತನ್ನ ಸಂಬಂಧಿಕರ ಮನೆಯಲ್ಲಿ ‌ಇರುವುದು ಗೊತ್ತಾಗಿದೆ. ರಾಮಕುಂಜೇಶ್ವರ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಚಿಕ್ಕಮಗಳೂರು ನಿವಾಸಿ ಅಂಜನ್ ಸಿ.ಎಂ. ಎಂಬಾತನೇ ಕಾಣೆಯಾಗಿರುವ ವಿದ್ಯಾರ್ಥಿ.

ಕಡಬ:ಕಾಲೇಜು ವಿದ್ಯಾರ್ಥಿ ನಾಪತ್ತೆ| ಅಪಹರಣ ಶಂಕೆ, ಪೊಲೀಸ್ ದೂರು- ಸಂಬಂಧಿಕರ ಮನೆಯಲ್ಲಿ ಪತ್ತೆ| Read More »

ಸಿನಿಮಾ ಸ್ಟೈಲ್‌ನಲ್ಲಿ ಮುತ್ತು ಕೊಟ್ಟವನನ್ನು ಬಂಧಿಸಿದ ಪೊಲೀಸರು

ಬೆಂಗಳೂರು: ತೆಲುಗಿನ ಗೀತಾ-ಗೋವಿಂದಂ ಸಿನಿಮಾ ಮಾದರಿ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಯುವತಿಗೆ ಮುತ್ತು ಕೊಟ್ಟ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಳ್ಳಾರಿ ಮೂಲದ ಮಧುಸೂದನ್ ರೆಡ್ಡಿ (25) ಬಂಧಿತ.ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಧುಸೂದನ್ ರೆಡ್ಡಿ, ವಿಜಯನಗರದಲ್ಲಿ ನೆಲೆಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರತಿಷ್ಠಿತ ಕಾಲೇಜಿನಲ್ಲಿ ಆರ್ಕಿಟೆಕ್ಟರ್ ವಿದ್ಯಾರ್ಥಿನಿಯೊಬ್ಬಳು ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಬಳ್ಳಾರಿಗೆ ಹೋಗಿದ್ದರು. ಸೆ.12ರ ರಾತ್ರಿ ಬಳ್ಳಾರಿಯಿಂದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದರು. ಅಪರಿಚಿತ ಯುವಕ ಪಕ್ಕದಲ್ಲೇ ಕುಳಿತು ಪ್ರಯಾಣ ಬೆಳೆಸಿದ್ದ. ಸೆ.13ರ ಬೆಳಗಿನ ಜಾವ

ಸಿನಿಮಾ ಸ್ಟೈಲ್‌ನಲ್ಲಿ ಮುತ್ತು ಕೊಟ್ಟವನನ್ನು ಬಂಧಿಸಿದ ಪೊಲೀಸರು Read More »

ಲಾರಿ- ಕ್ಯಾಂಟರ್ ಢಿಕ್ಕಿ| 8 ಎಮ್ಮೆಗಳ ಸಹಿತ ಓರ್ವ ಸ್ಥಳದಲ್ಲೇ ಸಾವು, ಮೂವರು ಗಂಭೀರ|

ವಿಜಯಪುರ: ಲಾರಿ-ಕ್ಯಾಂಟರ್ ಮುಖಾಮುಖಿ ಡಿಕ್ಕಿಯಾಗಿ ಓರ್ವ ಸ್ಥಳದಲ್ಲೇ ಮೃತಪಟ್ಟು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಕೊಲ್ಹಾರ ತಾಲೂಕಿನ ರೋಣಿಹಾಳ ಬಳಿ ಹೆದ್ದಾರಿಯಲ್ಲಿ ಮಂಗಳವಾರ ನಡೆದಿದೆ. ಎಮ್ಮೆಗಳನ್ನು ತುಂಬಿಕೊಂಡು ಹುಬ್ಬಳ್ಳಿಯಿಂದ ಸೋಲಾಪುರ ಕಡೆಗೆ ಹೊರಟಿದ್ದ ಕ್ಯಾಂಟರ್ ಹಾಗೂ ವಿಜಯಪುರದಿಂದ ಹುಬ್ಬಳ್ಳಿ ಕಡೆಗೆ ಸರಕು ತುಂಬಿಕೊಂಡು ಹೊರಟಿದ್ದ ಲಾರಿ ಮಧ್ಯೆ ಅಪಘಾತ ಸಂಭವಿಸಿದೆ. ಕ್ಯಾಂಟರ್ ನಲ್ಲಿದ್ದ ಎಂಟು ಎಮ್ಮೆಗಳೂ ಅಪಘಾತದ ರಭಸಕ್ಕೆ ವಾಹನದ ಒಳಗೇ ಜೀವ ಕಳೆದುಕೊಂಡಿವೆ. ಲಾರಿಯಲ್ಲಿ ಸಿಲುಕಿದವರನ್ನು ಅಗ್ನಿಶಾಮಕದಳದ ಸಿಬ್ಬಂದಿ ಸ್ಥಳೀಯರ ಸಹಕಾರದಿಂದ ಹೊರತೆಗೆಯುವ ಕಾರ್ಯಾಚರಣೆ

ಲಾರಿ- ಕ್ಯಾಂಟರ್ ಢಿಕ್ಕಿ| 8 ಎಮ್ಮೆಗಳ ಸಹಿತ ಓರ್ವ ಸ್ಥಳದಲ್ಲೇ ಸಾವು, ಮೂವರು ಗಂಭೀರ| Read More »

ಹೆದ್ದಾರಿ ಬದಿ ಸಿಕ್ಕಿದ ಕಾಂಡೋಮ್ ರಾಶಿ ಪ್ರಕರಣ| ಅಲ್ಲಿ ಅಷ್ಟೊಂದು ಕಾಂಡೋಮ್ ರಾಶಿ ಬಿದ್ದಿದ್ದು ಹೇಗೆ ಗೊತ್ತಾ?

ತುಮಕೂರು: ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆಯುದ್ದಕ್ಕೂ ಕಂಡುಬಂದಿದ್ದ ರಾಶಿ ರಾಶಿ ಕಾಂಡೋಮ್ ಗಳ ಪತ್ತೆ ಪ್ರಕರಣಕ್ಕೆ ಮರುಜೀವ ಬಂದಿದ್ದು ಶಾಕಿಂಗ್ ತಿರುವು ಪಡೆದುಕೊಂಡಿದೆ‌. ಪ್ರಕರಣದ ಜಾಡು ಹಿಡಿದ ಪೊಲೀಸರಿಗೆ ಲಾಡ್ಜ್ ಒಂದರ ಸುರಂಗದಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಜಾಲವೊಂದು ಸಿಕ್ಕಿಬಿದ್ದಿದೆ. ರಸ್ತೆಯಲ್ಲಿ ಬಿಸಾಕಿದ್ದ ರಾಶಿ ರಾಶಿ ಕಾಂಡೋಮ್ ಗಳ ಮೂಲ ಹುಡುಕಲು ಖಚಿತ ಮಾಹಿತಿ ಆಧಾರದ ಮೇಲೆ ಮೈಸೂರಿನ ಒಡನಾಡಿ ಸಂಸ್ಥೆ ಹಾಗೂ ಪೊಲೀಸರು ತುಮಕೂರಿನ ಕ್ಯಾತ್ಸಂದ್ರದ ಲಾಡ್ಜ್ ಒಂದರ ಮೇಲೆ ದಾಳಿ ನಡೆಸಿದ್ದು, ಹೈಟೆಕ್

ಹೆದ್ದಾರಿ ಬದಿ ಸಿಕ್ಕಿದ ಕಾಂಡೋಮ್ ರಾಶಿ ಪ್ರಕರಣ| ಅಲ್ಲಿ ಅಷ್ಟೊಂದು ಕಾಂಡೋಮ್ ರಾಶಿ ಬಿದ್ದಿದ್ದು ಹೇಗೆ ಗೊತ್ತಾ? Read More »