September 2021

ಚಿಕ್ಕ ಮಗಳೂರು|ದಲಿತ ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣ| ಗೋಣಿಬೀಡು ಠಾಣಾ ಪಿಎಸ್ ಐ ಬಂಧನ

ಚಿಕ್ಕಮಗಳೂರು: ದಲಿತ ಯುವಕನೊಬ್ಬನಿಗೆ ಮೂತ್ರ ಕುಡಿಸಿದ ಪ್ರಕರಣ ಸಂಬಂಧ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಗೋಣಿಬೀಡು ಪೊಲೀಸ್​ ಠಾಣೆ ಪಿಎಸ್​ಐ ಅರ್ಜುನ್​ ಅವರನ್ನು ನಿನ್ನೆ ಬುಧವಾರ ರಾತ್ರಿ ಬೆಂಗಳೂರಿನಲ್ಲಿ ಸಿಐಡಿ ಪೊಲೀಸರು ಬಂಧಿಸಿದ್ದಾರೆ. ವಿವಾಹಿತ ಮಹಿಳೆಗೆ ಫೋನ್​ ಮಾಡಿದ್ದ ಆರೋಪದ ಮೇಲೆ ಮೇ 10ರಂದು ಮೂಡಿಗೆರೆ ತಾಲೂಕಿನ ಕಿರುಗುಂದ ಗ್ರಾಮದ ನಿವಾಸಿ ಪುನೀತ್​ನನ್ನು ವಿಚಾರಣೆಗಾಗಿ ಅರ್ಜುನ್​ ಠಾಣೆಗೆ ಕರೆದೊಯ್ದಿದ್ದರು. ‘ಅಂದು ನನ್ನನ್ನು ಠಾಣೆಗೆ ಕರದೊಯ್ದು ಪಿಎಸ್​ಐ ಥಳಿಸಿದ್ದರು. ಕುಡಿಯೋಕೆ ನೀರು ಕೇಳಿದರೂ ಕೊಡದೆ, ವ್ಯಕ್ತಿಯೊಬ್ಬನಿಂದ ನನ್ನ ಬಾಯಿಗೆ […]

ಚಿಕ್ಕ ಮಗಳೂರು|ದಲಿತ ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣ| ಗೋಣಿಬೀಡು ಠಾಣಾ ಪಿಎಸ್ ಐ ಬಂಧನ Read More »

ಹೆಚ್ಚಿದ ಕಳ್ಳರ ಹಾವಳಿ -ಅಮಾಯಕ ವ್ಯಕ್ತಿಗೆ ಹಿಗ್ಗಾಮುಗ್ಗಾ ಥಳಿಸಿದ ಗ್ರಾಮಸ್ಥರು

ವಿಜಯಪುರ: ಕಳ್ಳನೆಂದು ಅಮಾಯಕ ವ್ಯಕ್ತಿಯೋರ್ವನಿಗೆ ಗ್ರಾಮಸ್ಥರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ಇತ್ತೀಚೆಗೆ ಜಿಲ್ಲೆಯ ಇಂಡಿ ತಾಲೂಕಿನ ಹಲಸಂಗಿ ಗ್ರಾಮದಲ್ಲಿ ಕಳ್ಳರ ಹಾವಳಿ ಕಂಡು ಬಂದಿದೆ. ಕಳ್ಳತನ ಮಾಡುವುದಕ್ಕೆ ಖದೀಮರ ತಂಡವೇ ಗ್ರಾಮಕ್ಕೆ ಬಂದಿದ್ದು, ಐವರು ಕಳ್ಳರು ಗ್ರಾಮದಲ್ಲಿ ತಿರುಗಾಡಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ ಆಗಿದೆ. ಆದರೆ ಕಳ್ಳರ ಕೈಗೆ ಏನು ಸಿಗದೇ ಕೊನೆಗೆ ಗ್ರಾಮದಿಂದ ಕಾಲು ಕಿತ್ತಿದ್ದಾರೆ. ಈ ವೇಳೆ ಕಳ್ಳರ ತಂಡದವನೆಂದು ಭಾವಿಸಿ ಅಂಗಡಿ ಮುಂದೆ ಮಲಗಿದ್ದ ವ್ಯಕ್ತಿಯೋರ್ವನಿಗೆ ಗ್ರಾಮಸ್ಥರು

ಹೆಚ್ಚಿದ ಕಳ್ಳರ ಹಾವಳಿ -ಅಮಾಯಕ ವ್ಯಕ್ತಿಗೆ ಹಿಗ್ಗಾಮುಗ್ಗಾ ಥಳಿಸಿದ ಗ್ರಾಮಸ್ಥರು Read More »

ಅಪಘಾತ: ಕುಡಿದು ವಾಹನ ಚಲಾಯಿಸಿದಲ್ಲದೆ ಪೊಲೀಸರಿಗೆ ಅವಾಜ್ – ಚಾಲಕ ಬಂಧನ

ಹಾಸನ: ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದ ಕಾರಣ ನಿಯಂತ್ರಣ ತಪ್ಪಿದ ಕಾರು ಅಪಘಾತಕ್ಕೀಡಾದ ಘಟನೆ ಮುತ್ತಿಗೆ ಗೇಟ್ ಬಳಿ ನಡೆದಿದೆ. ಚಾಲಕನನ್ನು ಬಾಬು ಎಂದು ಗುರುತಿಸಲಾಗಿದೆ. ಈತ ಅರಕಲಗೂಡು ತಾಲೂಕಿನ ಮುತ್ತಿಗೆ ಗೇಟ್ ಬಳಿ ಕಾರು ಚಲಾಯಿಸುತ್ತಿದ್ದ ವೇಳೆ ಅಪಘಾತ ಸಂಭವಿಸಿದ್ದು,ಇದಕ್ಕೆ ಕಾರಣ ಕುಡಿದ ಮತ್ತಿನಲ್ಲಿ ವಾಹನ ಚಾಲನೆ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಇದೇ ವೇಳೆ ಅಪಘಾತ ನಂತರ ಸ್ಥಳಕ್ಕೆ ಬಂದ ಪೊಲೀಸರ ವಿರುದ್ಧ ಅನವಶ್ಯಕವಾಗಿ ಹರಿಹಾಯ್ದಿರುವ ಚಾಲಕ ಬಾಬು, ಪೊಲೀಸರ ಎದುರು ಕೂಗಾಡುತ್ತಾ ನಾನು

ಅಪಘಾತ: ಕುಡಿದು ವಾಹನ ಚಲಾಯಿಸಿದಲ್ಲದೆ ಪೊಲೀಸರಿಗೆ ಅವಾಜ್ – ಚಾಲಕ ಬಂಧನ Read More »

ಮರಬಿದ್ದು ಚಾರ್ಮಾಡಿ ಘಾಟ್ ನಲ್ಲಿ ಸಂಚಾರ ಸ್ಥಗಿತ

ಬೆಳ್ತಂಗಡಿ: ರಾಷ್ಟ್ರೀಯ ಹೆದ್ದಾರಿ 73 ರ ಚಾರ್ಮಾಡಿ ಘಾಟ್ ನಲ್ಲಿ ಇಂದು ಮುಂಜಾನೆ ಮರ ಬಿದ್ದು ರಸ್ತೆ ತಡೆ ಉಂಟಾದ ಘಟನೆ ನಡೆದಿದೆ. ತಕ್ಷಣ ಸ್ಥಳೀಯರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳ ಸಹಕಾರದಿಂದ ಮರ ತೆರವುಗೊಳಿಸುವ ಕಾರ್ಯ ನಡೆಸಿದರು. ಅತೀ ಹೆಚ್ಚಿನ ವಾಹನಗಳು ಸಂಚರಿಸುವ ಮುಂಜಾನೆ ವೇಳೆ ಈ ಘಟನೆ ನಡೆದ ಕಾರಣ ಎರಡು ಕಡೆ ರಸ್ತೆ ತಡೆ ಉಂಟಾಯಿತು. ಮುಂಜಾನೆ 8.45 ರ ಸುಮಾರಿಗೆ ಮರ ಬಿದ್ದಿದ್ದು, ಇದೀಗ ತೆರವು ಕಾರ್ಯ ಯಶಸ್ವಿಯಾಗಿದೆ. ಸುಮಾರು 100

ಮರಬಿದ್ದು ಚಾರ್ಮಾಡಿ ಘಾಟ್ ನಲ್ಲಿ ಸಂಚಾರ ಸ್ಥಗಿತ Read More »

ದೇಶದಲ್ಲಿ ಮತ್ತೆ ಏರಿಕೆಯತ್ತ ಕೊರೊನಾ| ಇದು ಮೂರನೇ ಅಲೆ ಸೂಚನೆಯೇ?

ನವದೆಹಲಿ: ದೇಶದಲ್ಲಿ ಕೊರೊನಾ ಮೂರನೇ ಅಲೆ ಆತಂಕ ಎದುರಾಗಿದ್ದು, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರುತ್ತಿದೆ. ಕಳೆದ 24 ಗಂಟೆಯಲ್ಲಿ 47,092 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 3,28,57,937ಕ್ಕೆ ಏರಿಕೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆ ಕೊಂಚ ಕುಸಿತವಾಗಿದ್ದು, ಕಳೆದ 24 ಗಂಟೆಯಲ್ಲಿ 509 ಜನ ಮಹಾಮಾರಿಗೆ ಬಲಿಯಾಗಿದ್ದಾರೆ. ದೇಶದಲ್ಲಿ ಈವರೆಗೆ ಕೋವಿಡ್ ಗೆ ಸಾವನ್ನಪ್ಪಿದವರ ಸಂಖ್ಯೆ 439529 ಕ್ಕೆ ಏರಿಕೆಯಾಗಿದೆ. ಇನ್ನು ದೇಶದಲ್ಲಿ 389583 ಕೋವಿಡ್ ಸಕ್ರಿಯ ಪ್ರಕರಣಗಳಿದ್ದು, 24

ದೇಶದಲ್ಲಿ ಮತ್ತೆ ಏರಿಕೆಯತ್ತ ಕೊರೊನಾ| ಇದು ಮೂರನೇ ಅಲೆ ಸೂಚನೆಯೇ? Read More »

ಹಿರಿಯ ಪತ್ರಕರ್ತ ಚಂದನ್ ಮಿತ್ರಾ‌ ವಿಧಿವಶ

ನವದೆಹಲಿ: ಮಾಜಿ ರಾಜ್ಯಸಭಾ ಸದಸ್ಯ ಹಾಗೂ ಖ್ಯಾತ ಹಿರಿಯ ಪತ್ರಕರ್ತ ಚಂದನ್ ಮಿತ್ರಾ ಅವರು ಗುರುವಾರ ನಿಧನರಾಗಿದ್ದಾರೆ. ಅವರಿಗೆ 65 ವರ್ಷ ವಯಸ್ಸಾಗಿತ್ತು. ಈ ಕುರಿತಂತೆ ಚಂದನ್ ಮಿತ್ರಾ ಅವರ ಪುತ್ರ ಕುಶನ್ ಮಿತ್ರಾ ಅವರು ಮಾಹಿತಿ ನೀಡಿದ್ದು, ಟ್ವೀಟ್ ಮಾಡಿ ತಮ್ಮ ನೋವು ಹಂಚಿಕೊಂಡಿದ್ದಾರೆ. ಚಂದನ್ ಮಿತ್ರಾ ದೆಹಲಿಯ ದಿ ಪಯೋನಿಯರ್ ಪತ್ರಿಕೆಯ ಸಂಪಾದಕ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಅಲ್ಲದೆ ಅವರು ಎರಡು ಬಾರಿ ರಾಜ್ಯಸಭೆಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು – ಮೊದಲಿಗೆ 2003 ರಿಂದ

ಹಿರಿಯ ಪತ್ರಕರ್ತ ಚಂದನ್ ಮಿತ್ರಾ‌ ವಿಧಿವಶ Read More »

ಅಪ್ಘಾನ್ ನಲ್ಲಿ ಸಕ್ರಿಯರಾಗಿದ್ದಾರೆ ಭಾರತದ ಮೋಸ್ಟ್ ವಾಂಟೆಂಡ್ ಟೆರರಿಸ್ಟ್| 25 ಮಂದಿಯಲ್ಲಿ ಕೇರಳದವರೇ ಹೆಚ್ಚು…!

ಕಾಬೂಲ್, ಸೆ.1: ಭಾರತದಲ್ಲಿ ಮೋಸ್ಟ್ ವಾಂಟೆಡ್ ಲಿಸ್ಟ್ ನಲ್ಲಿರುವ 25ಕ್ಕೂ ಹೆಚ್ಚು ಮಂದಿ ಉಗ್ರರು ಅಪ್ಘಾನಿಸ್ತಾನದಲ್ಲಿ ಸಕ್ರಿಯರಾಗಿದ್ದಾರೆ ಎಂಬ ಮಾಹಿತಿಯನ್ನು ಗುಪ್ತಚರ ಮೂಲಗಳು ತಿಳಿಸಿವೆ. ಇತ್ತೀಚೆಗೆ ಕಾಬೂಲನ್ನು ತಾಲಿಬಾನಿಗಳು ವಶಕ್ಕೆ ಪಡೆಯುತ್ತಿದ್ದಂತೆ, ಅಲ್ಲಿನ ಜೈಲಿನಲ್ಲಿದ್ದ ಸಾವಿರಾರು ಕೈದಿಗಳನ್ನು ಹೊರಕ್ಕೆ ಬಿಡಲಾಗಿತ್ತು. ಅದರಲ್ಲಿ ಹಲವು ಭಾರತ ಮೂಲದವರೂ ಇದ್ದರು ಎನ್ನಲಾಗಿದ್ದು, ಇದೀಗ ಅಫ್ಘಾನಿಸ್ತಾನದ ನಂಗರ್ಹರ್ ಪ್ರಾಂತ್ಯದಲ್ಲಿ ಬೀಡುಬಿಟ್ಟಿದ್ದಾರೆ ಎನ್ನಲಾಗುತ್ತಿದೆ. 25 ಮಂದಿಯ ಪೈಕಿ ಹೆಚ್ಚಿನವರು ಭಾರತದ ಕೇರಳದವರು ಎನ್ನುವ ಮಾಹಿತಿಯನ್ನು ಗುಪ್ತಚರ ಪಡೆಗಳು ಹೇಳುತ್ತಿವೆ. ಕಳೆದ ವಾರ ಕಾಬೂಲ್

ಅಪ್ಘಾನ್ ನಲ್ಲಿ ಸಕ್ರಿಯರಾಗಿದ್ದಾರೆ ಭಾರತದ ಮೋಸ್ಟ್ ವಾಂಟೆಂಡ್ ಟೆರರಿಸ್ಟ್| 25 ಮಂದಿಯಲ್ಲಿ ಕೇರಳದವರೇ ಹೆಚ್ಚು…! Read More »

GDP ಏರಿಕೆ ಎಂದರೆ ಗ್ಯಾಸ್, ಡೀಸೆಲ್‌, ಪೆಟ್ರೋಲ್ ಬೆಲೆಯೇರಿಕೆ – ಕೇಂದ್ರದ ವಿರುದ್ದ ರಾಗಾ ವಾಗ್ದಾಳಿ

ನವದೆಹಲಿ: ಅಡುಗೆ ಅನಿಲ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಜಿಡಿಪಿಯ ಹೊಸ ಪರಿಕಲ್ಪನೆ ಇದೆ. ಅಲ್ಲಿ ಜಿಡಿಪಿ ಏರಿಕೆ ಎಂದರೆ ಗ್ಯಾಸ್, ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಏರಿಕೆ. ‘ಜಿಡಿಪಿ ಏರುತ್ತಿದೆ ಎಂದು ಮೋದಿ ಜೀ ಹೇಳುತ್ತಲೇ ಇದ್ದಾರೆ, ಜಿಡಿಪಿ ಮೇಲ್ಮುಖವಾಗಿದೆ ಎಂದು ಹಣಕಾಸು ಸಚಿವರು ಹೇಳುತ್ತಾರೆ. ಜಿಡಿಪಿ- ಇದರ ಅರ್ಥವೇನೆಂದು ನನಗೆ ಈಗ ಅರ್ಥವಾಯಿತು.

GDP ಏರಿಕೆ ಎಂದರೆ ಗ್ಯಾಸ್, ಡೀಸೆಲ್‌, ಪೆಟ್ರೋಲ್ ಬೆಲೆಯೇರಿಕೆ – ಕೇಂದ್ರದ ವಿರುದ್ದ ರಾಗಾ ವಾಗ್ದಾಳಿ Read More »

ರಾಜ್ಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪರೀಕ್ಷೆ ಮುಂದೂಡಿಕೆ

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯ ಸಬ್‌ ಇನ್ಸ್​ಪೆಕ್ಟರ್​ ಹುದ್ದೆಗಳ ನೇಮಕಾತಿಗೆ ನಿಗದಿಯಾಗಿದ್ದ ಲಿಖಿತ ಪರೀಕ್ಷೆ ದಿನಾಂಕವನ್ನು ತಾಂತ್ರಿಕ ಸಮಸ್ಯೆಯಿಂದ ಇಲಾಖೆ ಮುಂದೂಡಿದೆ. 545 ಸಬ್​ ಇನ್ಸ್​ಪೆಕ್ಟರ್ ಹುದ್ದೆಗಳ ನೇಮಕಾತಿಗೆ ಸೆಪ್ಟೆಂಬರ್ 26ಕ್ಕೆ ಲಿಖಿತ ಪರೀಕ್ಷೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ತಾಂತ್ರಿಕ ಸಮಸ್ಯೆಯಿಂದ ಅಂದು ಪರೀಕ್ಷೆ ನಡೆಸಲು ಸಾಧ್ಯವಾಗುತ್ತಿಲ್ಲ. ಬದಲಿಗೆ ಅಕ್ಟೋಬರ್ 3ರ ಬೆಳಗ್ಗೆ 10.30 ರಿಂದ 12 ಗಂಟೆ ವರೆಗೆ ಪತ್ರಿಕೆ-1 ಮತ್ತು ಮಧ್ಯಾಹ್ನ 1.30ರಿಂದ 3 ಗಂಟೆ ವರೆಗೆ ಪತ್ರಿಕೆ-2 ನಡೆಸಲು ನಿರ್ಧರಿಸಲಾಗಿದೆ ಎಂದು ಪೊಲೀಸ್

ರಾಜ್ಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪರೀಕ್ಷೆ ಮುಂದೂಡಿಕೆ Read More »

ಗಣೇಶ ಹಬ್ಬಕ್ಕೆ ಇನ್ನೆಲ್ಲೂ ಸಿಗದ ಆಫರ್ ನೀಡಿದ ವೆಂಕಟರಮಣ ಸೊಸೈಟಿ| ಕೇವಲ 10% ಬಡ್ಡಿಗೆ ಹೊಸ ವಾಹನ ಸಾಲ

ಸುಳ್ಯ: ಸುಳ್ಯದ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ವತಿಯಿಂದ ಗಣೇಶ ಹಬ್ಬದ ಪ್ರಯುಕ್ತ ಸೆ.1ರಿಂದ 30ರವರೆಗೆ ಖರೀದಿಸುವ ಹೊಸ ವಾಹನಕ್ಕೆ ಶೆ.10ರ ಬಡ್ಡಿ ದರದಲ್ಲಿ ಶೀಘ್ರ ವಾಹನ ಸಾಲ ವಿತರಣೆ ಮಾಡುವ ಯೋಜನೆ ಹಮ್ಮಿಕೊಂಡಿದೆ. ಈ ಆಫರ್ ಕೇವಲ ಒಂದು ತಿಂಗಳ ಅವಧಿಯದ್ದಾಗಿದ್ದು, ಸೂಕ್ತ ದಾಖಲೆ‌ ಒದಗಿಸಿದಲ್ಲಿ ತಕ್ಷಣ ಸಾಲ ವಿತರಿಸುವ ಭರವಸೆಯನ್ನು ಸಂಸ್ಥೆಯ ಪ್ರಕಟಣೆ ತಿಳಿಸಿದೆ. ಹೊಸ ವಾಹನ ಖರೀದಿಸುವ ಗ್ರಾಹಕರಿಗೆ ಇದೊಂದು ಉತ್ತಮ ಆಫರ್ ಆಗಿದ್ದು, ಸಂಘವು ಸುಳ್ಯ, ಪುತ್ತೂರು, ಬಿ.ಸಿ

ಗಣೇಶ ಹಬ್ಬಕ್ಕೆ ಇನ್ನೆಲ್ಲೂ ಸಿಗದ ಆಫರ್ ನೀಡಿದ ವೆಂಕಟರಮಣ ಸೊಸೈಟಿ| ಕೇವಲ 10% ಬಡ್ಡಿಗೆ ಹೊಸ ವಾಹನ ಸಾಲ Read More »