September 2021

ಕೆ ಎಸ್ಆರ್ ಟಿಸಿ ಬಸ್ಸೊಳಗೆ ಕಿಸ್ ನೀಡಿ ಇಳಿದು ಹೋದ ಕಾಮುಕ| ಅನಿರೀಕ್ಷಿತ ಘಟನೆಯಿಂದ ದಂಗಾದ ಯುವತಿ

ಬೆಂಗಳೂರು: ದೇಶದಲ್ಲಿ ಹೆಣ್ಮಕ್ಕಳ ಮೇಲೆ ಒಂದಿಲ್ಲೊಂದು ದೌರ್ಜನ್ಯಗಳು ನಡೆಯುತ್ತಿದ್ದು ಇಡೀ ಮಹಿಳಾ ಸಮಾಜ ಆತಂಕಗೊಳ್ಳುವಂತಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ನಗರದ ಬಸ್ಸೊಂದರಲ್ಲಿ ವಿಚಿತ್ರ ಘಟನೆ ನಡೆದಿದ್ದು ಮಹಿಳಾ ಪ್ರಯಾಣಿಕರನ್ನು ಆತಂಕಕ್ಕೆ ಈಡು ಮಾಡಿದೆ.ಸಿನಿಮಾ ರೀತಿಯಲ್ಲಿ ಕಾಮುಕನೊಬ್ಬ ವಿದ್ಯಾರ್ಥಿನಿಗೆ ಬಸ್ನಲ್ಲಿ ಕಿಸ್ ಮಾಡಿ ಓಡಿ ಹೋಗಿದ್ದಾನೆ. ಬಳ್ಳಾರಿಯಿಂದ ಬೆಂಗಳೂರಿಗೆ ಬರ್ತಿದ್ದ ಕೆಎಸ್ಆರ್ಟಿಸಿ ಬಸ್ ಹೆಸರುಘಟ್ಟ ಕ್ರಾಸ್ ತಲುಪುತ್ತಿದ್ದ ಹಾಗೆ ಮುತ್ತು ಕೊಟ್ಟ ಮಹಾಶಯ ಬಸ್ ಇಳಿದು ಹೋಗಿದ್ದಾನೆ. ಯುವತಿ ನಿದ್ದೆ ಮಂಪರಿನಲ್ಲಿದ್ದ ಕಾರಣ ಕೂಡಲೇ ಪ್ರತಿರೋಧಿಸಲು ಸಾಧ್ಯವಾಗಿಲ್ಲ. ಏನು […]

ಕೆ ಎಸ್ಆರ್ ಟಿಸಿ ಬಸ್ಸೊಳಗೆ ಕಿಸ್ ನೀಡಿ ಇಳಿದು ಹೋದ ಕಾಮುಕ| ಅನಿರೀಕ್ಷಿತ ಘಟನೆಯಿಂದ ದಂಗಾದ ಯುವತಿ Read More »

ಉಪ್ಪಿನಂಗಡಿ: ಮನೆಗೆ ನುಗ್ಗಿ ನಗ-ನಗದು ದೋಚಿದ ಕಳ್ಳರು

ಉಪ್ಪಿನಂಗಡಿ: ಸರಳಿಕಟ್ಟೆ ಮನೆಯೊಂದಕ್ಕೆ ಕಳ್ಳರು ನುಗ್ಗಿದ್ದು ಸುಮಾರು ಒಂದು ಲಕ್ಷದ ಇಪ್ಪತ್ತು ಸಾವಿರ ಹಣ ಮತ್ತು ಹತ್ತು ಪವನ್ ಚಿನ್ನದೊಂದಿಗೆ ಪರಾರಿಯಾಗಿದ್ದಾರೆ. ನಿನ್ನೆ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಈ ಘಟನೆ ನಡೆದಿದ್ದು ಉಪ್ಪಿನಂಗಡಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.ಉಪ್ಪಿನಂಗಡಿ ಸಮೀಪದ ಬಾರ್ಯ ಗ್ರಾಮದ ಸರಳಿಕಟ್ಟೆ ಬೇನಪ್ಪು ನಿವಾಸಿ ಅಬೂಬಕ್ಕರ್ ಮದನಿ ರವರ ಮನೆಗೆ ಕಳ್ಳರು ನುಗ್ಗಿದ್ದು ಇಂದು ಮನೆಗೆ ಮರಳಿದಾಗ ಘಟನೆ ಬೆಳಕಿಗೆ ಬಂದಿದೆ.ಸ್ಥಳಕ್ಕೆ ಪುತ್ತೂರು ಡಿವೈಎಸ್ಪಿ ಗಾನ .ಪಿ.ಕುಮಾರ್, ಪುತ್ತೂರು ಗ್ರಾಮಾಂತ ವೃತ್ತ ನಿರೀಕ್ಷಕ ಉಮೇಶ್

ಉಪ್ಪಿನಂಗಡಿ: ಮನೆಗೆ ನುಗ್ಗಿ ನಗ-ನಗದು ದೋಚಿದ ಕಳ್ಳರು Read More »

‘ಸರಿಗಮಪ’ ರಿಯಾಲಿಟಿ ಶೋ‌ನಿಂದ ಅನುಶ್ರೀಗೆ ಗೇಟ್ ಪಾಸ್..! ಯಾರು ಗೊತ್ತಾ ಹೊಸ ಆ್ಯಂಕರ್?

ಬೆಂಗಳೂರು: ಕರ್ನಾಟಕದ ಜನತೆಯ ನೆಚ್ಚಿನ ಸಂಗೀತ‌ ಕಾರ್ಯಕ್ರಮದಿಂದ ಆ್ಯಂಕರ್ ಅನುಶ್ರೀಗೆ ಗೇಟ್ ಪಾಸ್ ನೀಡ್ತಾರೆ ಅನ್ನುವ ಸುದ್ದಿ ಗಾಂಧಿನಗರದ ಗಲ್ಲಿಗಳಲ್ಲಿ ‌ಹರಿದಾಡ್ತಿದೆ. ಜೀ ಕನ್ನಡದಲ್ಲಿ ಪ್ರಸಾರವಾಗುವ ಈ ಕಾರ್ಯಕ್ರಮಕ್ಕೆ ಮತ್ತೊಬ್ಬ ನಿರೂಪಕಿಯನ್ನು ತಂಡ ಹುಡುಕಾಡ್ತಿದೆ ಅಂತ ಹೇಳಲಾಗುತ್ತಿದೆ. ಸರಿಗಮಪ ಕಾರ್ಯಕ್ರಮ ಬಹಳ ವರ್ಷಗಳಿಂದ ಪ್ರಸಾರವಾಗುತ್ತಿರುವ ಸಂಗೀತ ರಿಯಾಲಿಟಿ ಶೋ. ಈ ಕಾರ್ಯಕ್ರಮವನ್ನು ಹಿಂದಿ ಸರಿಗಮಪ ಶೋನಂತೆ ನಡೆಸಿಕೊಳ್ಳಲಾಗುತ್ತಿದೆ.ಇಲ್ಲಿಯವರೆಗೂ ಸರಿಗಮಪ ಕಾರ್ಯಕ್ರಮದ ಮೂಲಕ ಹಲವಾರು ಪ್ರತಿಭೆಗಳು ತಮ್ಮ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಯಶಸ್ಸು ಕೂಡ ಗಳಿಸಿದ್ದಾರೆ. ಅಷ್ಟೇ ಅಲ್ಲದೆ

‘ಸರಿಗಮಪ’ ರಿಯಾಲಿಟಿ ಶೋ‌ನಿಂದ ಅನುಶ್ರೀಗೆ ಗೇಟ್ ಪಾಸ್..! ಯಾರು ಗೊತ್ತಾ ಹೊಸ ಆ್ಯಂಕರ್? Read More »

ಸಂಗೀತದ ಮಹಾ ಸಂಗ್ರಾಮ ಆರಂಭ|ಅ.18ರಿಂದ ಬರ್ತಾ‌ ಇದೆ‌ ‘ಸರಿಗಮಪ’ ರಿಯಾಲಿಟಿ ಶೋ|

ಬೆಂಗಳೂರು: ಜೀ ಕನ್ನಡದ ಜನಪ್ರಿಯ ರಿಯಾಲಿಟಿ ಕಾರ್ಯಕ್ರಮವಾದ ‘ಸರಿಗಮಪ’, ಹೊಸ ರೂಪದಲ್ಲಿ ಮತ್ತೊಮ್ಮೆ ಎಂಟ್ರಿ ಕೊಡುವುದಕ್ಕೆ ಸಜ್ಜಾಗಿದೆ. ಇದೇ 18ರಿಂದ ಈ ಕಾರ್ಯಕ್ರಮವು ಶನಿವಾರ ಮತ್ತು ಭಾನುವಾರ ರಾತ್ರಿ 7.30ಕ್ಕೆ ಪ್ರಸಾರವಾಗಲಿದೆ. ಈ ಬಾರಿಯ ಕಾರ್ಯಕ್ರಮದಲ್ಲಿ ಒಂದಿಷ್ಟು ಬದಲಾವಣೆಗಳಾಗಿವೆ. ಈ ಹಿಂದಿನ ವರ್ಷಗಳಲ್ಲಿ ತೀರ್ಪಗಾರರಾಗಿ ವಿಜಯಪ್ರಕಾಶ್, ಅರ್ಜುನ್ ಜನ್ಯ ಮತ್ತು ರಾಜೇಶ್ ಕೃಷ್ಣನ್ ಇದ್ದರು. ಮಹಾಗುರುಗಳಾಗಿ ಹಂಸಲೇಖ ಇದ್ದರು. ಈ ಬಾರಿ ರಾಜೇಶ್ ಕೃಷ್ಣನ್ ಬದಲಿಗೆ ಹಂಸಲೇಖ, ಅರ್ಜುನ್ ಜನ್ಯ ಮತ್ತು ವಿಜಯ ಪ್ರಕಾಶ್ ತೀರ್ಪಗಾರರಾಗಿರಲಿದ್ದಾರೆ. ಇನ್ನು,

ಸಂಗೀತದ ಮಹಾ ಸಂಗ್ರಾಮ ಆರಂಭ|ಅ.18ರಿಂದ ಬರ್ತಾ‌ ಇದೆ‌ ‘ಸರಿಗಮಪ’ ರಿಯಾಲಿಟಿ ಶೋ| Read More »

ದೇಗುಲಗಳ ತೆರವು ಕುರಿತಂತೆ ಸರಕಾರದ ನಡೆ ಖಂಡಿಸಿ ಹಿಂದೂ ಸಂಘಟನೆಗಳಿಂದ ಪ್ರತಿಭಟನೆ

ಮಂಗಳೂರು: ಮೈಸೂರು ಪುರಾತನ ದೇವಸ್ಥಾನ ದ್ವಂಸ ಮತ್ತು ರಾಜ್ಯದಾದ್ಯಂತ ದೇವಸ್ಥಾನಗಳನ್ನು ತೆರವುಗೊಳಿಸುವ ಸರಕಾರದ ನಡೆಯನ್ನು ವಿಶ್ವ ಹಿಂದು ಪರಿಷತ್ ಬಜರಂಗದಳ ಖಂಡಿಸಿ ನಗರದ ಕದ್ರಿ ಮಲ್ಲಿಕಟ್ಟೆ ದ್ವಾರದ ಬಳಿ ಬಳಿ ಸೆ.16 ರ ಗುರುವಾರ ಪ್ರತಿಭಟನೆ ನಡೆಸಿತು. ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಆದಿಶಕ್ತಿ ಶ್ರೀ ಮಹದೇವಮ್ಮ ಭೈರವೇಶ್ವರ ಪುರಾತನ ದೇವಸ್ಥಾನವನ್ನು ಬಲವಂತದಿಂದ ಒಡೆದು ಹಾಕಿರುವ ಈ ಕೃತ್ಯವನ್ನು ಹಾಗು ರಾಜ್ಯದಾದ್ಯಂತ ದೇವಸ್ಥಾನಗಳನ್ನು ತೆರವುಗೊಳಿಸುವ ಸರ್ಕಾರದ ನಡೆಯನ್ನು ಖಂಡಿಸಿದ ವಿಶ್ವ ಹಿಂದು ಪರಿಷತ್ ಬಜರಂಗದಳ ತಕ್ಷಣ ಸರಕಾರ

ದೇಗುಲಗಳ ತೆರವು ಕುರಿತಂತೆ ಸರಕಾರದ ನಡೆ ಖಂಡಿಸಿ ಹಿಂದೂ ಸಂಘಟನೆಗಳಿಂದ ಪ್ರತಿಭಟನೆ Read More »

ಟಿ 20 ವಿಶ್ವಕಪ್ ಬಳಿಕ ನಾಯಕತ್ವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಕೊಹ್ಲಿ

ನವದೆಹಲಿ : ದುಬೈನಲ್ಲಿ ಟಿ20 ವಿಶ್ವಕಪ್ ಬಳಿಕ ತಂಡದ ಟಿ20 ನಾಯಕ ಸ್ಥಾನದಿಂದ ಕೆಳಗಿಳಿಯುತ್ತಿರುವುದಾಗಿ ವಿರಾಟ್ ಕೊಹ್ಲಿ ಘೋಷಿಸಿದ್ದಾರೆ. ಈ ಕುರಿತಂತೆ ಟ್ವಿಟ್ ಮಾಡಿರುವಂತ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯವರು, ತಾವು ಮುಂಬರುವಂತ ದುಬೈನಲ್ಲಿ ನಡೆಯುತ್ತಿರುವಂತ ಟಿ20 ವಿಶ್ವಕಪ್ ಆಟದ ನಂತ್ರ, ಟೀಂ ಇಂಡಿಯಾ ಕ್ರಿಕೆಟ್ ನಾಯಕತ್ವ ಸ್ಥಾನದಿಂದ ಕೆಳಗೆ ಇಳಿಯೋದಾಗಿ ಪ್ರಕಟಿಸಿದ್ದಾರೆ.

ಟಿ 20 ವಿಶ್ವಕಪ್ ಬಳಿಕ ನಾಯಕತ್ವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಕೊಹ್ಲಿ Read More »

ಕರಾವಳಿ ‌ಜಿಲ್ಲೆಗಳಲ್ಲಿ ನಾಳೆ‌ ಮಹಾ ಲಸಿಕೆ‌ ಅಭಿಯಾನ

ಮಂಗಳೂರು: ಸರಕಾರದ ಸೂಚನೆಯಂತೆ ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಸೆ.17ರಂದು ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಬೃಹತ್‌ ಲಸಿಕಾಕರಣ ಅಭಿಯಾನ ನಡೆಯಲಿದೆ. ದ.ಕ.ದಲ್ಲಿ 533 ಮತ್ತು ಉಡುಪಿ ಜಿಲ್ಲೆಯಲ್ಲಿ ಸುಮಾರು 300 ಕೇಂದ್ರಗಳಲ್ಲಿ ಲಸಿಕೆ ನೀಡಲು ಕ್ರಮಕೈಗೊಳ್ಳಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಉಭಯ ಜಿಲ್ಲಾಧಿಕಾರಿಗಳಾದ ಡಾ| ರಾಜೇಂದ್ರ ಕೆ.ವಿ.ಮತ್ತು ಕೂರ್ಮಾ ರಾವ್‌ ಎಂ. ಅವರು ಹೇಳಿದರು. ಮೆಗಾ ಲಸಿಕೆ ಮೇಳದಲ್ಲಿ 1.5 ಲಕ್ಷ ಡೋಸ್‌ ಕೋವಿಡ್‌ ಲಸಿಕೆ ನೀಡುವ ಗುರಿಯನ್ನು ಹೊಂದಿದ್ದು,

ಕರಾವಳಿ ‌ಜಿಲ್ಲೆಗಳಲ್ಲಿ ನಾಳೆ‌ ಮಹಾ ಲಸಿಕೆ‌ ಅಭಿಯಾನ Read More »

ಸುಳ್ಯ:ನೆರೆಮನೆಯವನ ಜೊತೆ ಗ್ರಾ. ಪಂ ಸದಸ್ಯೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ|

ಸುಳ್ಯ: ಮಡಿಕೇರಿ ತಾಲೂಕು ಚೆಂಬು ಗ್ರಾ.ಪಂ ಸದಸ್ಯೆ ಕಮಲಾ ಕೇಶವ ನೆರೆಮನೆಯ ಮುತ್ತು ಎಂಬಾತನ ಜೊತೆಗೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ನೆರೆಮನೆಯ ಮುತ್ತು ಹಾಗೂ ಕಮಲ ಇಬ್ಬರೂ ಒಂದೇ ಮರದಲ್ಲಿ ನೇಣುಬಿಗಿದು ಮೃತಪಟ್ಟಿರುವುದರಿಂದ ಅಕ್ರಮ ಸಂಬಂಧವೇ ಈ ಘಟನೆಗೆ ಕಾರಣ ಎನ್ನುವುದು‌ ಮೇಲ್ನೋಟಕ್ಕೆ ಸಾಬೀತಾಗಿದೆ. ಚೆಂಬು ಗ್ರಾ.ಪಂ ದಬ್ಬಡ್ಕ ವಾರ್ಡ್ ನ ಸದಸ್ಯೆ ಕಮಲಾ ಹಾಗೂ ಮುತ್ತು ಪಯಸ್ವಿನಿ ನದಿ ದಡದಲ್ಲಿ ಕಾಣಿಸಿಕೊಂಡಿದ್ದರು. ನಂತರ ಕಮಲಾ ಕಾಣೆಯಾಗಿರುವ ಬಗ್ಗೆ ವರದಿಯಾಗಿತ್ತು. ಮುತ್ತು ಆಕೆಯನ್ನು ಹೊಳೆಗೆ ತಳ್ಳಿರುವುದಾಗಿಯೂ ಸುದ್ದಿಯಾಗಿದ್ದು,

ಸುಳ್ಯ:ನೆರೆಮನೆಯವನ ಜೊತೆ ಗ್ರಾ. ಪಂ ಸದಸ್ಯೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ| Read More »

ಹೆಬ್ರಿ : ಲಾರಿಗೆ ಬೈಕ್ ಢಿಕ್ಕಿ – ಸವಾರ ಸ್ಥಳದಲ್ಲೇ ಸಾವು

ಹೆಬ್ರಿ: ಲಾರಿ ಬೈಕ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹೆಬ್ರಿ ತಾಲೂಕಿನ ವರಂಗ ಎಂಬಲ್ಲಿ ನಿನ್ನೆ ಸಂಜೆ ಸಂಭವಿಸಿದೆ. ಸಾಗರ ತಾಲೂಕಿನ ಸಿರದಂಗೂರು ಗ್ರಾಮದ ನಿವಾಸಿಯಾಗಿರುವ ಜಿನದತ್ತ ಜೈನ್ (42) ಮೃತಪಟ್ಟ ಬೈಕ್ ಸವಾರ. ಈತ ಅಪಾಯಕಾರಿ ತಿರುವಿನಲ್ಲಿ ತನ್ನ ಮುಂದಿನಿಂದ ಹೋಗುತ್ತಿದ್ದ ಲಾರಿಯನ್ನು ಓವರ್ ಟೇಕ್ ಮಾಡಲು ಹೋಗಿ ಎದುರಿನಿಂದ ಬರುತ್ತಿದ್ದ ಇನ್ನೊಂದು ಲಾರಿಗೆ ಡಿಕ್ಕಿಯಾಗಿ ಹಿಂದಿನಿಂದ ಬರುತ್ತಿದ್ದ ಲಾರಿಯಡಿ‌ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಕಾರ್ಕಳ ಕಡೆಯಿಂದ ಹೆಬ್ರಿ ಮಾರ್ಗವಾಗಿ ಸಾಗರಕ್ಕೆ ಬೈಕಿನಲ್ಲಿ ಹೋಗುತ್ತಿದ್ದ

ಹೆಬ್ರಿ : ಲಾರಿಗೆ ಬೈಕ್ ಢಿಕ್ಕಿ – ಸವಾರ ಸ್ಥಳದಲ್ಲೇ ಸಾವು Read More »

ಸುಳ್ಯ: ಪಂಚಾಯತ್ ಸದಸ್ಯೆ ‌ಹೊಳೆಗೆ ತಳ್ಳಿದ ವ್ಯಕ್ತಿ- ಇಬ್ಬರೂ ‌ನಾಪತ್ತೆ, ಅನೈತಿಕ ಸಂಬಂಧ ಶಂಕೆ?

ಸುಳ್ಯ: ಮಡಿಕೇರಿ ತಾಲೂಕು ಚೆಂಬು‌ ಗ್ರಾ.ಪಂ ಸದಸ್ಯೆಯೋರ್ವರನ್ನು ನೆರೆಮನೆಯಾತ ಹೊಳೆಗೆ ತಳ್ಳಿದ್ದು, ಬಳಿಕ ಇಬ್ಬರೂ ‌ನಾಪತ್ತೆಯಾದ ಘಟನೆ ಬುಧವಾರ ಸಂಜೆ ನಡೆದಿದೆ. ಚೆಂಬು‌ ಗ್ರಾ.ಪಂ ಸದಸ್ಯೆ ಕಮಲ ದಬ್ಬಡ್ಕ ಎಂಬವರು ಕಾರ್ಯಕ್ರಮವೊಂದಕ್ಕೆ ತೆರಳಿ ಮನೆಗೆ ಮರಳುವ ವೇಳೆ ದಾರಿ ಮದ್ಯೆ ಎದುರಾದ ‌ಮುತ್ತು‌ ಎಂಬಾತ‌ ಅವರನ್ನು ಸೇತುವೆಯಿಂದ ಹೊಳೆಗೆ ತಳ್ಳಿರುವುದಾಗಿ ಹೇಳಲಾಗಿದೆ. ಘಟನೆ ಬಳಿಕ ಕಮಲ ಅವರ ಸುಳಿವೂ ಸಿಗದೇ ಇತ್ತ ಮುತ್ತು ಕೂಡಾ ಕಾಣೆಯಾಗಿರುವುದಾಗಿ‌ ತಿಳಿದುಬಂದಿದೆ. ಕಮಲ ಮತ್ತು‌ ಮುತ್ತು‌ ಇಬ್ಬರಿಗೂ ಅನೈತಿಕ ಸಂಬಂಧ ‌ಇರುವುದಾಗಿ

ಸುಳ್ಯ: ಪಂಚಾಯತ್ ಸದಸ್ಯೆ ‌ಹೊಳೆಗೆ ತಳ್ಳಿದ ವ್ಯಕ್ತಿ- ಇಬ್ಬರೂ ‌ನಾಪತ್ತೆ, ಅನೈತಿಕ ಸಂಬಂಧ ಶಂಕೆ? Read More »