ಮಾಧ್ಯಮಗಳ ವರದಿ‌ ಸುಳ್ಳು| ಎಲ್ಲಾ ‌ಮಾದರಿ ಕ್ರಿಕೆಟ್ ಗೂ‌ ಕೊಹ್ಲಿಯೇ ನಾಯಕ| ಸ್ಪಷ್ಟನೆ ನೀಡಿದ ಬಿಸಿಸಿಐ

ನವದೆಹಲಿ: ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿಯೂ ವಿರಾಟ್ ಕೊಹ್ಲಿಯವರೇ ಟೀಂ ಇಂಡಿಯಾ ನಾಯಕರಾಗಿ ಮುಂದುವರಿಯಲಿದ್ದಾರೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸ್ಪಷ್ಟಪಡಿಸಿದೆ.

Ad Widget ... ..

ಐಸಿಸಿ ಟಿ20 ವಿಶ್ವಕಪ್ ಬಳಿಕ ಕೊಹ್ಲಿಯವರು ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಭಾರತ ತಂಡದ ನಾಯಕತ್ವ ತೊರೆಯಲಿದ್ದಾರೆ.
ಆರಂಭಿಕ ಆಟಗಾರ ರೋಹಿತ್ ಶರ್ಮಾ ಅವರು ನಾಯಕನಾಗಿ ಆಯ್ಕೆಯಾಗುವ ಸಾಧ್ಯತೆ ಇದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದವು. ಈ ವರದಿಯಲ್ಲಿ ಸತ್ಯಾಂಶವಿಲ್ಲ ಎಂದು ಬಿಸಿಸಿಐ ಖಜಾಂಚಿ ಅರುಣ್ ಧುಮಲ್ ಹೇಳಿದ್ದಾರೆ.

Ad Widget

ಮಾಧ್ಯಮ ವರದಿ ನಿಜವಲ್ಲ. ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಭಾರತ ತಂಡದ ನಾಯಕತ್ವ ಬದಲಾಯಿಸುವ ಬಗ್ಗೆ ಬಿಸಿಸಿಐ ಯಾವುದೇ ಸಭೆ ನಡೆಸಿಲ್ಲ ಹಾಗೂ ಚರ್ಚಿಸಿಯೂ ಇಲ್ಲ ಎಂದು ಧುಮಲ್ ಹೇಳಿಕೆ ಉಲ್ಲೇಖಿಸಿ ಐಎಎನ್‌ಎಸ್ ವರದಿ ಮಾಡಿದೆ.

Leave a Comment

Your email address will not be published. Required fields are marked *