Ad Widget .

ಹಂದಿಯೆಂದು ತಿಳಿದು ಯುವಕನಿಗೆ ಗುಂಡಿಕ್ಕಿದ ಬೇಟೆಗಾರರು| ಗಾಯಾಳು ಗಂಭೀರ

ಮಂಡ್ಯ: ಕಾಡುಹಂದಿಗೆ ಬೇಟೆಗೆ ಬಂದಿದ್ದ ಹವ್ಯಾಸಿ ಬೇಟೆಗಾರರಿಂದ ಯುವಕನಿಗೆ ಗುಂಡು ತಗುಲಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.

Ad Widget . Ad Widget .

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮೇಳಾಪುರ ಗ್ರಾಮದ ಹೊರವಲಯದಲ್ಲಿ ಈ ದುರಂತ ಸಂಭವಿಸಿದೆ.
ಮಾದೇಶ್ (25) ಎಂಬ ಯುವಕನಿಗೆ ಗುಂಡೇಟು ತಗುಲಿದೆ.

Ad Widget . Ad Widget .

ಮೈಸೂರು ಜಿಲ್ಲೆಯ 6 ಮಂದಿ ಯುವಕರ ತಂಡ ಬೇಟೆಗೆ ಬಂದಿತ್ತು. ನಾಡಬಂದೂಕು ಬಳಸಿ ಕಾಡುಹಂದಿ ಬೇಟೆಗೆ ಈ ತಂಡ ಬಂದಿತ್ತು. ಮಾದೇಶ ಅವರ ಕಬ್ಬಿನ ಗದ್ದೆಯಲ್ಲಿ ಹಂದಿಗಾಗಿ ತಂಡ ಶೋಧ ನಡೆಸುತ್ತಿತ್ತು. ಈ ಸಮಯದಲ್ಲಿ ಅದೇ ಗದ್ದೆಯ ಬದುವಿನಲ್ಲಿ ಮಾದೇಶ ಹುಲ್ಲು ಕೊಯ್ಯುತ್ತಿದ್ದ. ಕಬ್ಬಿನ ಗರಿಗಳು ಅಲುಗಾಡುತ್ತಿದ್ದನ್ನು ಗಮನಿಸಿದ ತಂಡ ಹಂದಿ ಇರಬಹುದು ಎಂದುಕೊಂಡು ಫೈರಿಂಗ್ ಮಾಡಿದೆ. ಇದು ಮಾದೇಶನಿಗೆ ತಗುಲಿದೆ.

ಮಾದೇಶನ ಹೊಟ್ಟೆ ಭಾಗಕ್ಕೆ ಗುಂಡು ತಗುಲಿ ಗಂಭೀರ ಗಾಯವಾಗಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆರು ಮಂದಿ ಯುವಕರ ಪೈಕಿ ಮೂವರನ್ನು ಹಿಡಿದು ಗ್ರಾಮಸ್ಥರು ಪೊಲೀಸರಿಗೆ ಒಪ್ಪಿಸಿದ್ದು, ತನಿಖೆ ನಡೆಯುತ್ತಿದೆ.

Leave a Comment

Your email address will not be published. Required fields are marked *