Ad Widget .

ಪಂಚಾಯತ್ ಗಳಲ್ಲಿ ‘ಸರ್’, ‘ಮೇಡಂ’ ಪದಬಳಕೆ ಸಲ್ಲದು – ಕೆಪಿಸಿಸಿ ಆದೇಶ

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ತಿರುವನಂತಪುರಂ: ಕಾಂಗ್ರೆಸ್ ಅಧಿಕಾರದಲ್ಲಿರುವ ಕೇರಳದ ಯಾವ ಪಂಚಾಯತ್​ಗಳ ಕಾಂಗ್ರೆಸ್ ಕಚೇರಿಗಳಲ್ಲೂ ಸರ್ ಮತ್ತು ಮೇಡಂ ಎಂಬ ಪದಗಳನ್ನು ಬಳಸುವಂತಿಲ್ಲ ಎಂದು ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಕೆ. ಸುಧಾಕರನ್ ಆದೇಶ ನೀಡಿದ್ದಾರೆ. ಕೇರಳ ರಾಜ್ಯದ ಪಲಕ್ಕಾಡ್ ಜಿಲ್ಲೆಯ ಮಥೂರ್ ಗ್ರಾಮ ಪಂಚಾಯತ್​ನಿಂದ ಆರಂಭವಾಗಿರುವ ಈ ಸಂಪ್ರದಾಯ ಕಾಂಗ್ರೆಸ್ ಅಧಿಕಾರದಲ್ಲಿರುವ ಕೇರಳದ ಎಲ್ಲ ಪಂಚಾಯತ್​ಗಳಿಗೂ ಅನ್ವಯವಾಗಲಿದೆ.

Ad Widget . Ad Widget . Ad Widget .

ಈ ಮೊದಲು ಮಥೂರ್ ಗ್ರಾಮ ಪಂಚಾಯಿತಿಯಲ್ಲಿ ಮಾತ್ರ ಸರ್ ಮತ್ತು ಮೇಡಂ ಎಂದು ಕರೆಯುವುದನ್ನು ನಿಷೇಧಿಸಲಾಗಿತ್ತು. ಆದರೆ, ಕಾಂಗ್ರೆಸ್ ಅಧಿಕಾರದಲ್ಲಿರುವ ಉಳಿದ ಪಂಚಾಯತ್​ಗಳಲ್ಲೂ ಇದನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ. ಬದಲಾಗಿ ಪ್ರತಿಯೊಬ್ಬರನ್ನೂ ಅವರ ಹೆಸರಿನಿಂದಲೇ ಸಂಬೋಧಿಸಬೇಕು ಎಂಬ ನಿಯಮ ಜಾರಿಗೆ ತರಲಾಗಿದೆ. ಸರ್, ಮೇಡಂ ಎಂಬುದು ವಸಾಹತುಶಾಹಿಗಳು ಬಿಟ್ಟುಹೋದ ಪದಗಳಾಗಿದ್ದು, ಅದನ್ನು ಬಳಸದಿರಲು ಸೂಚಿಸಲಾಗಿದೆ.

ಈ ಬಗ್ಗೆ ಪತ್ರಿಕಾ ಹೇಳಿಕೆಯನ್ನೂ ಬಿಡುಗಡೆ ಮಾಡಿರುವ ಕೆಪಿಸಿಸಿ ಅಧ್ಯಕ್ಷ ಕೆ. ಸುಧಾಕರನ್, ಸರ್ ಮತ್ತು ಮೇಡಂ ಎಂಬ ಪದಗಳನ್ನು ಬಳಸದಿರುವಂತೆ ಮಾಡಲು ಕೇರಳ ಸರ್ಕಾರದ ಕಚೇರಿಗಳಲ್ಲಿ ಮತ್ತು ಪೊಲೀಸ್ ಠಾಣೆಗಳಲ್ಲಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಮನವಿ ಮಾಡಿದ್ದಾರೆ.

Leave a Comment

Your email address will not be published. Required fields are marked *