Ad Widget .

ಬೆಳ್ತಂಗಡಿ:ರಾತ್ರೋರಾತ್ರಿ ನಾಪತ್ತೆಯಾದ ಮಹಿಳೆಗಿದೆಯಾ ಉಗ್ರಗಾಮಿ ಸಂಘಟನೆ ಲಿಂಕ್?, ಪತಿಯನ್ನೇ ಯಾಮಾರಿಸಿ ಆಕೆ ಪರಾರಿಯಾಗಿದ್ದೆಲ್ಲಿಗೆ? ಉಗ್ರರೊಂದಿಗೆ ಲಿಂಕ್ ಇದೆ ಎಂದು ದೂರಿತ್ತ ಪತಿ. ದುಬೈ ಲೇಡಿ ಡಾನ್…!

ಬೆಳ್ತಂಗಡಿ, ಸೆ.2: ಕಳೆದ ಹನ್ನೊಂದು ವರ್ಷಗಳಿಂದ ವಿದೇಶದಲ್ಲಿ ನೆಲೆಸಿದ್ದ ಎರಡು ಮಕ್ಕಳ ತಾಯಿಯೊಬ್ಬಳು ಇತ್ತೀಚೆಗೆ ಊರಿಗೆ ಬಂದಿದ್ದ ವೇಳೆ ದಿಢೀರ್ ಆಗಿ ನಾಪತ್ತೆಯಾಗಿದ್ದು, ಆಕೆಗೆ ಉಗ್ರವಾದಿ ಸಂಘಟನೆಗಳ ಜೊತೆ ಲಿಂಕ್ ಇರುವ ಬಗ್ಗೆ ಶಂಕಿಸಿ ಗಂಡನೇ ಪೊಲೀಸರಿಗೆ ದೂರು ನೀಡಿದ್ದಾರೆ.

Ad Widget . Ad Widget .

ನೆರಿಯಾ ಗ್ರಾಮದ ತೋಟತ್ತಾಡಿ ನಿವಾಸಿ ಚಿದಾನಂದ ಎಂಬವರ ಪತ್ನಿ ರಾಜಿ (35) ನಾಪತ್ತೆಯಾದ ಮಹಿಳೆ. ಆಗಸ್ಟ್ 26ರಂದು ರಾತ್ರಿ ಈಕೆ ಮನೆಯಿಂದ ನಾಪತ್ತೆಯಾಗಿದ್ದು, ಈ ಬಗ್ಗೆ ಪತಿ ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದಾರೆ. ಹನ್ನೊಂದು ವರ್ಷಗಳಿಂದ ದುಬೈನಲ್ಲಿ ಪಾಕಿಸ್ಥಾನ ಮೂಲದ ಆಡಳಿತದ ಶಾಲೆಯಲ್ಲಿ ಆಯಾ ಆಗಿ ಕೆಲಸ ಮಾಡುತ್ತಿದ್ದ ರಾಜಿ ಪ್ರತಿ ವರ್ಷ ಊರಿಗೆ ಬಂದು ಹೋಗುತ್ತಿದ್ದಳು. 2019ರ ಅಕ್ಟೋಬರ್ ತಿಂಗಳಲ್ಲಿ ಮನೆಗೆ ಬಂದಿದ್ದ ಪತ್ನಿಯನ್ನು ದುಬೈಗೆ ಹೋಗದಂತೆ ಗಂಡ ತಡೆದಿದ್ದರು. ಮಕ್ಕಳು ದೊಡ್ಡವರಾಗಿದ್ದಾರೆ. ಹೆಣ್ಣುಮಗು ತಂದೆ ಜೊತೆಗಲ್ಲ. ತಾಯಿ ಜೊತೆಗೇ ಇರಬೇಕು ಎಂದು ಹೇಳಿದ್ದಾರೆ.

Ad Widget . Ad Widget .

ಆನಂತರ ಆರು ತಿಂಗಳ ಕಾಲ ಮನೆಯಲ್ಲೇ ಇದ್ದ ರಾಜಿ ಪತಿಯ ಮಾತನ್ನು ಕೇಳದೇ ಮತ್ತೆ ದುಬೈಗೆ ತೆರಳಿದ್ದಳು. ಆನಂತರ ಪ್ರತಿ ಬಾರಿ, ಮಗಳನ್ನು ಕಳಿಸಿಕೊಡುವಂತೆ ಒತ್ತಡ ಹೇರುತ್ತಿದ್ದಳು. ವಿಡಿಯೋ ಕರೆ ಮಾಡುತ್ತಿದ್ದ ಪತ್ನಿ, ಮಕ್ಕಳ ಜೊತೆ ಮಾತ್ರ ಮಾತನಾಡುತ್ತಿದ್ದಳು. ಆನಂತರ, ಆಕೆಯ ಒತ್ತಡಕ್ಕೆ ಕಟ್ಟುಬಿದ್ದು ನೀನೇ ಬಂದು ಪಾಸ್ ಪೋರ್ಟ್ ಮಾಡಿಸಿ ಮಗಳನ್ನು ಕರೆದೊಯ್ಯುವಂತೆ ಗಂಡ ಹೇಳಿದ್ದರು. ಅದರಂತೆ, ಕಳೆದ ಜುಲೈ 11ರಂದು ಊರಿಗೆ ಬಂದಿದ್ದ ಮಹಿಳೆ, 14 ದಿನ ಕ್ವಾರಂಟೈನ್ ಇದ್ದಳು. ಮಗಳನ್ನು ದುಬೈಗೆ ಕರೆದೊಯ್ಯುತ್ತೇನೆ ಎಂದಿದ್ದಕ್ಕೆ ಮನೆಯವರೆಲ್ಲ ಸೇರಿ ವಿರೋಧ ಮಾಡಿದ್ದಾರೆ.

ಆ ಬಳಿಕ ಮನೆಯಲ್ಲೇ ಇದ್ದರೂ ಆಕೆ, ಮನೆಯ ಸದಸ್ಯರ ಜೊತೆ ಬೆರೆಯುತ್ತಿರಲಿಲ್ಲ. ಹಿಂದು ಸಂಪ್ರದಾಯದಂತೆ ನಡೆದುಕೊಳ್ಳುತ್ತಿರಲಿಲ್ಲ. ಹಣೆಗೆ ತಿಲಕ ಇಡುತ್ತಿರಲಿಲ್ಲ. ಕೈಗೆ ಬಳೆ ಹಾಕುತ್ತಿರಲಿಲ್ಲ. ಪ್ರತ್ಯೇಕವಾಗಿ ಇರುತ್ತಿದ್ದಳು. ದೇವರ ಪೂಜೆಗೆ ಬರುತ್ತಿರಲಿಲ್ಲ. ರಾತ್ರಿ ತಡವಾಗಿ ಸ್ನಾನಕ್ಕೆ ಹೋಗುತ್ತಿದ್ದಳು. ಹೀಗಾಗಿ ಸಂಶಯಗೊಂಡಿದ್ದ ಗಂಡ, ಆಕೆಯನ್ನು ಪ್ರಶ್ನೆ ಮಾಡಿದ್ದರು. ಈ ವೇಳೆ, ನನ್ನ ಜೊತೆ ದೊಡ್ಡ ಸಂಘಟನೆಯವರಿದ್ದಾರೆ. ನನ್ನ ಬಗ್ಗೆ ಹಗುರವಾಗಿ ತಿಳಿದುಕೊಳ್ಳಬೇಡಿ ಎನ್ನುತ್ತಿದ್ದಳು.

ಈ ನಡುವೆ, ಮಹಮ್ಮದ್ ಇಸಾಕ್ ಎಂಬ ಲಕ್ಷದ್ವೀಪ ಮೂಲದ ವ್ಯಕ್ತಿ ಆಕೆಗೆ ಕರೆ ಮಾಡುತ್ತಿದ್ದ. ಮಗಳನ್ನು ಕರೆದುಕೊಂಡು ಕೇರಳದ ಮಲಪ್ಪುರಂಗೆ ಬರುವಂತೆ ಹೇಳುತ್ತಿದ್ದ. ಈ ಬಗ್ಗೆ ಆಕೆಯ ಗಂಡನ ಜೊತೆಗೂ ಮಾತನಾಡಿದ್ದ ಮಹಮ್ಮದ್ ಇಸಾಕ್, ಅವರಿಬ್ಬರನ್ನೂ ಕೇರಳದ ಮಲಪ್ಪುರಂಗೆ ಕರೆತರುವಂತೆ ಹೇಳಿದ್ದ. ಈ ಬಗ್ಗೆ ಚಿದಾನಂದ್ ಪ್ರಶ್ನೆ ಮಾಡಿದರೆ, ಮಹಮ್ಮದ್ ಸೂಕ್ತ ಉತ್ತರ ನೀಡುತ್ತಿರಲಿಲ್ಲ. ಚಿದಾನಂದ್ ಹೇಳುವ ಪ್ರಕಾರ, ಮಹಮ್ಮದ್ ಇಸಾಕ್ ಲಕ್ಷದ್ವೀಪ ಮೂಲದ ವ್ಯಕ್ತಿ. ಆತನ ಪತ್ನಿಯ ಮನೆ ಮಲಪ್ಪುರಂನಲ್ಲಿದೆ. ಅಲ್ಲಿಗೆ ಕರೆತರುವಂತೆ ಹೇಳುತ್ತಿದ್ದಾನೆ.

ಇದರ ನಡುವೆಯೇ ಆಗಸ್ಟ್ 26ರಂದು ರಾತ್ರಿ ದಿಢೀರ್ ಆಗಿ ರಾಜಿ ನಾಪತ್ತೆಯಾಗಿದ್ದಾಳೆ. ಬ್ಯಾಂಕಿನಿಂದ ತಂದಿಟ್ಟಿದ್ದ 95 ಸಾವಿರ ರೂ. ನಗದು, ತಾಯಿಯ ಎರಡು ಬಳೆ, ಆಧಾರ್ ಕಾರ್ಡ್, ಐಡಿ ಕಾರ್ಡ್, ಎರಡು ಮೊಬೈಲ್ ಜೊತೆಗೆ ನಾಪತ್ತೆಯಾಗಿದ್ದಾಳೆ. ರಾತ್ರಿ ಮಲಗಿದ್ದವಳು ಬೆಳಗ್ಗೆ ನಾಪತ್ತೆಯಾಗಿದ್ದಳು. ಈ ಬಗ್ಗೆ ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದೇವೆ. ಅಲ್ಲಿನ ಎಸ್ಐ ಅವರು ಆ.31ಕ್ಕೆ ಫೋನ್ ಮಾಡಿ, ರಾಜಿ ಮಂಗಳೂರಿನಲ್ಲಿದ್ದಾಳಂತೆ. ಯಾವುದೋ ಆಯುರ್ವೇದಿಕ್ ಸೆಂಟರಲ್ಲಿ ಇದ್ದಾಳೆ. ಹತ್ತು ದಿನಗಳ ನಂತರ ಬರುತ್ತಾಳೆ ಎಂದು ಹೇಳಿದ್ದರು.

ಆದರೆ, ಮಹಮ್ಮದ್ ಇಸಾಕ್ ಆನಂತರ ನನ್ನ ತಾಯಿ ಮೊಬೈಲಿಗೆ ಫೋನ್ ಮಾಡಿದ್ದ. ಮಗಳನ್ನು ಕರೆದೊಯ್ಯಲು ಬಿಡಲಿಲ್ಲ ಯಾಕೆ ಎಂದು ಪ್ರಶ್ನೆ ಮಾಡಿದ್ದಾನೆ. ನಿನಗೆ ತಾಯಿ ನಂಬರ್ ಹೇಗೆ ಸಿಕ್ತು ಎಂದು ಪ್ರಶ್ನೆ ಮಾಡಿದ್ದಕ್ಕೆ, ನಮಗೆಲ್ಲ ಅದು ಸಿಗತ್ತೆ. ನಾವು ಅಷ್ಟು ಚಿಲ್ಲರೆಗಳಲ್ಲ ಎಂದಿದ್ದ. ಈಗ ನನಗೆ ಭಯ ಆಗುತ್ತಿದೆ. ಇವರು ಯಾವ ಹೊತ್ತಲ್ಲಿ ಬಂದು ನನ್ನ 12 ವರ್ಷದ ಮಗಳನ್ನು ಕರೆದೊಯ್ಯುತ್ತಾರೋ ಎಂದು ಭಯ ಶುರುವಾಗಿದೆ. ನಾನು ತೋಟಕ್ಕೆಲ್ಲ ಹೋಗುವಾಗ ಯಾರಾದ್ರೂ ಮನೆಗೆ ಬರುತ್ತಾರೆಯೇ ಎಂದು ಭಯವಾಗುತ್ತಿದೆ. ಮಕ್ಕಳನ್ನು ಒಂದು ವರ್ಷ ಇದ್ದಾಗಿನಿಂದ ನಾನೊಬ್ಬನೇ ಸಾಕಿದ್ದೇನೆ ಎಂದು ಚಿದಾನಂದ ಅಲವತ್ತುಕೊಂಡಿದ್ದಾರೆ. ಈ ಬಗ್ಗೆ ಪೊಲೀಸರಿಗೆ ನೀಡಿದ ದೂರಿನಲ್ಲಿ ನನ್ನ ಪತ್ನಿಗೆ ಉಗ್ರಗಾಮಿ ಸಂಘಟನೆಗಳ ಜೊತೆ ಸಂಪರ್ಕ ಇದೆಯೆಂದು ಉಲ್ಲೇಖಿಸಿದ್ದು ಸಂಶಯ ಮತ್ತು ಆತಂಕಕ್ಕೆ ಕಾರಣವಾಗಿದೆ.

ಈ ಬಗ್ಗೆ ದಕ್ಷಿಣ ಕನ್ನಡ ಎಸ್ಪಿ ಋಷಿಕೇಷ್ ಸೋನವಾನೆ ಬಳಿ ಕೇಳಿದರೆ, ಈ ಬಗ್ಗೆ ನಾವು ಪರಿಶೀಲನೆ ಮಾಡುತ್ತಿದ್ದೇವೆ. ಮಿಸ್ಸಿಂಗ್ ಆಗಿರುವ ಮಹಿಳೆ ಮಂಗಳೂರಿನಲ್ಲಿ ಇರುವ ಬಗ್ಗೆ ಪೊಲೀಸರು ಟ್ರೇಸ್ ಮಾಡಿದ್ದಾರೆ. ಆದರೆ, ಆನಂತರ ಆಕೆಗೆ ಈ ರೀತಿ ಏನೋ ಸಂಪರ್ಕ ಇದೆಯೆಂದು ಗಂಡ ದೂರು ಕೊಟ್ಟಿದ್ದು, ನಾವು ವೆರಿಫೈ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ…

Leave a Comment

Your email address will not be published. Required fields are marked *