August 2021

ಎರಡು ವರ್ಷ ಹನಿಮೂನ್ ಮಾಡಿಕೊಂಡ ದಂಪತಿ| ಹೀಗೂ ಉಂಟೇ…?

ಮದುವೆಯಾದ ಮೇಲೆ ಎಲ್ಲ ದಂಪತಿ ಹನಿಮೂನ್ ಗೆ ಹೋಗ್ತಾರೆ. ಮದುವೆಯಾದ ಕೆಲ ದಿನಗಳ ನಂತರ ಒಂದು ವಾರ ಹನಿಮೂನ್ ಗೆ ಹೋಗುವುದು ಸಾಮಾನ್ಯ ಸಂಗತಿ. ಆದರೆ ಇಲ್ಲೊಂದು ದಂಪತಿ ಒಂದು ವಾರವಲ್ಲ, ಒಂದು ತಿಂಗಳಲ್ಲ ಬರೋಬ್ಬರಿ 2 ವರ್ಷ ಹನಿಮೂನ್ ಗೆ ಹೋಗಿದ್ದರು. ಇದಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದಾರೆ. ಬರೀ ಪತಿ-ಪತ್ನಿಯಲ್ಲ ಮಗ ಹಾಗೂ ಸಾಕು ನಾಯಿ ಕೂಡ ಹನಿಮೂನ್ ಗೆ ಬಂದಿದ್ದರು ಎಂಬುದು ಇನ್ನೊಂದು ವಿಶೇಷ. 2 ವರ್ಷ ಹನಿಮೂನ್ ಆಚರಿಸಿದ ದಂಪತಿ ಹೆಸರು […]

ಎರಡು ವರ್ಷ ಹನಿಮೂನ್ ಮಾಡಿಕೊಂಡ ದಂಪತಿ| ಹೀಗೂ ಉಂಟೇ…? Read More »

ಮತ್ತೆ ಮದುವೆಯಾದ ಪ್ರಕಾಶ್ ರಾಜ್

ಬಹುಭಾಷಾ ನಟ ಪ್ರಕಾಶ್‌ ರಾಜ್‌ ಮತ್ತೆ ಮದುವೆಯಾಗುವ ಮೂಲಕ ಸುದ್ದಿಯಲ್ಲಿದ್ದಾರೆ. ಅರೆ ಪ್ರಕಾಶ್​ ರಾಜ್​ ಮತ್ತೆ ಮದುವೆಯಾದ್ರಾ ಅಂತ ಯೋಚಿಸಬೇಡಿ. ಅವರು ಇದೀಗ ತಮ್ಮ ಮಗ ವೇದಾಂತ್​ ಆಸೆಯಂತೆ ಪತ್ನಿಯೊಂದಿಗೆ ಮತ್ತೆ ಮದುವೆಯಾಗಿದ್ದಾರೆ. ಪ್ರಕಾಶ್​ ರಾಜ್​ ಮತ್ತು ಪೋನಿ ವರ್ಮಾ ದಂಪತಿ ನಿನ್ನೆ (ಆಗಸ್ಟ್ 24) ತಮ್ಮ 11ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಇವರ ಪುತ್ರ ವೇದಾಂತ್​ಗೆ ತನ್ನ ತಂದೆ-ತಾಯಿ ಮದುವೆಯನ್ನು ನೋಡುವ ಬಯಕೆ ಇತ್ತಂತೆ. ಅದನ್ನು ಅಪ್ಪ-ಅಮ್ಮನ ಬಳಿ ಹೇಳಿಕೊಂಡಿದ್ದ. ಮಗನ ಆಸೆಯಂತೆ ಪ್ರಕಾಶ್​ ರಾಜ್​

ಮತ್ತೆ ಮದುವೆಯಾದ ಪ್ರಕಾಶ್ ರಾಜ್ Read More »

ಮಡದಿಯ ಅಗಲಿಕೆ ಸಹಿಸದೆ ಚಿತೆಯೇರಿದ ಗಂಡ| ಸತಿಯಲ್ಲ ಇದು ‘ಪತಿಸಹಗಮನ’

ಭವಾನಿಪಟ್ನಾ (ಒಡಿಶಾ): ಹಿಂದೆಲ್ಲಾ ಸತಿಸಹಗಮನ ಪದ್ಧತಿ ಜಾರಿಯಲ್ಲಿತ್ತು. ಪತಿ ಮೃತಪಟ್ಟ ತಕ್ಷಣ ಆತನ ಚಿತೆಯನ್ನು ಪತ್ನಿಯಾದವಳು ಏರಬೇಕಿತ್ತು. ಮನಸ್ಸಿಲ್ಲದಿದ್ದರೂ ಒತ್ತಾಯಪೂರ್ವಕವಾಗಿ ಆಕೆಯನ್ನು ಚಿತೆಯ ಮೇಲೆ ಕುಳ್ಳರಿಸಲಾಗುತ್ತಿತ್ತು. ಈ ಅನಿಷ್ಠ ಪದ್ಧತಿ ತೊಗಲಿ ಹಲವಾರು ದಶಕಗಳು ನಡೆದರೂ ಅಲ್ಲಲ್ಲಿ ಇಂಥ ಘಟನೆಗಳು ಕೇಳಿಬರುತ್ತಲೇ ಇರುತ್ತವೆ.ಆದರೆ ಒಡಿಶಾದಲ್ಲಿ ನಡೆದದ್ದು ಮಾತ್ರ ಇದಕ್ಕೆ ವಿರುದ್ಧವಾಗಿರುವ ಘಟನೆ. ಇಲ್ಲಿ ಪತಿಯೇ ಪತ್ನಿಯ ಚಿತೆಯನ್ನು ಏರಿ ಪ್ರಾಣ ಬಿಟ್ಟಿದ್ದಾರೆ. ಪ್ರೀತಿಯ ಪತ್ನಿಯ ಅಗಲಿಕೆಯನ್ನು ಸಹಿಸದ ಅವರು, ಉರಿಯುವ ಚಿತೆಯನ್ನೇರಿದ್ದಾರೆ. ಇಂಥ ಘಟನೆ ನಡೆದಿರುವುದು ಕಾಲಹಂದಿ

ಮಡದಿಯ ಅಗಲಿಕೆ ಸಹಿಸದೆ ಚಿತೆಯೇರಿದ ಗಂಡ| ಸತಿಯಲ್ಲ ಇದು ‘ಪತಿಸಹಗಮನ’ Read More »

ಹೆದ್ದಾರಿಯಿಂದ 40 ಮೀ. ಒಳಗಡೆ ಕಟ್ಟಡ ನಿರ್ಮಿಸುವಂತಿಲ್ಲ – ಹೈಕೋರ್ಟ್ ಮಹತ್ವದ ಆದೇಶ

ಬೆಂಗಳೂರು: ರಾಷ್ಟ್ರೀಯ ಹೆದ್ದಾರಿಯಿಂದ 40 ಮೀ.ಒಳಗೆ ಕಟ್ಟಡ ನಿರ್ಮಿಸುವಂತಿಲ್ಲ ಎಂದು ಹೈಕೋರ್ಟ್ ವಿಭಾಗೀಯ ಪೀಠ ಮಹತ್ವದ ಆದೇಶ ನೀಡಿದೆ. ರಾಷ್ಟ್ರೀಯ, ರಾಜ್ಯ ಹೆದ್ದಾರಿಯ ಮಧ್ಯಭಾಗದಿಂದ 40 ಮೀ. ಒಳಗೆ ಕಟ್ಟಡ ನಿರ್ಮಿಸುವಂತಿಲ್ಲ. ಜಿಲ್ಲಾ ಹೆದ್ದಾರಿಯ 25 ಮೀ. ಒಳಗೆ ಕಟ್ಟಡ ನಿರ್ಮಿಸುವಂತಿಲ್ಲ ಎಂದು ಈ ಹಿಂದೆ ಸರ್ಕಾರ ಸುತ್ತೋಲೆ ಹೊರಡಿಸಿತ್ತು. ಕಟ್ಟಡ ರಹಿತ ವಲಯವಾಗಿ ಅಂತರ ಕಾಯ್ದುಕೊಳ್ಳಬೇಕು ಎಂದು 1999 ರಲ್ಲಿ ಹೈಕೋರ್ಟ್ ವಿಭಾಗೀಯ ಪೀಠ ಈ ಬಗ್ಗೆ ಆದೇಶಿಸಿತ್ತು.ಸುತ್ತೋಲೆಯಲ್ಲಿ ಸ್ಪಷ್ಟವಾಗಿ ಹೇಳಿದ್ದರೂ ಉಡುಪಿಯ ಕಾಪು ಬಳಿ

ಹೆದ್ದಾರಿಯಿಂದ 40 ಮೀ. ಒಳಗಡೆ ಕಟ್ಟಡ ನಿರ್ಮಿಸುವಂತಿಲ್ಲ – ಹೈಕೋರ್ಟ್ ಮಹತ್ವದ ಆದೇಶ Read More »

ಮೈಸೂರು| ಚಾಮುಂಡಿ ಬೆಟ್ಟದ ತಪ್ಪಲಲ್ಲಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್| ಬೆಚ್ಚಿಬಿದ್ದ ಸಾಂಸ್ಕೃತಿಕ ನಗರಿ|

ಮೈಸೂರು, ಆಗಸ್ಟ್ 25: ಶಾಂತಿ ಹಾಗೂ ಸೌಹಾರ್ದತೆಗೆ ಹೆಸರಾಗಿರುವ ಸಾಂಸ್ಕೃತಿಕ‌ ನಗರಿ ಮೈಸೂರು ಇದೀಗ ಕ್ರೈಂ ಸಿಟಿಯಾಗಿ ಬದಲಾಗುತ್ತಿದೆ. ಒಂದು ಕಾಲದಲ್ಲಿ ಪೆನ್ಷನರ್ಸ್ ಪ್ಯಾರಡೈಸ್ ಎನಿಸಿದ್ದ ಮೈಸೂರಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳು ಮೈಸೂರಿಗರನ್ನು ಬೆಚ್ಚಿಬೀಳಿಸಿದೆ. ಹೊರ ರಾಜ್ಯಗಳಲ್ಲಿ ಹೆಚ್ಚಾಗಿ ನಡೆಯುತ್ತಿದ್ದ ಗ್ಯಾಂಗ್ ರೇಪ್ ಪ್ರಕರಣ ಇದೀಗ ಮೈಸೂರಿಗೂ ವಕ್ಕರಿಸಿದೆ. ಮೈಸೂರಿನ ಪ್ರತಿಷ್ಠಿತ ಖಾಸಗಿ ಕಾಲೇಜು ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್ ನಡೆದಿರುವ ಘೋರ ಘಟನೆ ಮೈಸೂರಿನಲ್ಲಿ ನಡೆದಿದೆ. ಹೊರ ರಾಜ್ಯದಿಂದ ವ್ಯಾಸಂಗಕ್ಕೆ ಬಂದು ಖಾಸಗಿ

ಮೈಸೂರು| ಚಾಮುಂಡಿ ಬೆಟ್ಟದ ತಪ್ಪಲಲ್ಲಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್| ಬೆಚ್ಚಿಬಿದ್ದ ಸಾಂಸ್ಕೃತಿಕ ನಗರಿ| Read More »

ಕಡಬ: ಪಾಲುದಾರಿಕೆಯಲ್ಲಿ ಲಕ್ಷಾಂತರ ರೂ. ಲೂಟಿ ಪರಾರಿ| ಮನೆಯಿಂದ 10 ವರ್ಷದ ಹಿಂದೆಯೇ ನಾಪತ್ತೆ!!

ಕಡಬ: ಹೊಟೇಲೊಂದರಲ್ಲಿ ಕೆಲಸದಲ್ಲಿದ್ದ ವ್ಯಕ್ತಿಯೋರ್ವ ಪಾಲುದಾರಿಕೆಯ ಹೆಸರಿನಲ್ಲಿ ಸ್ಥಳೀಯ ಜನರೊಂದಿಗೆ ಸ್ನೇಹ ಸಂಪಾದಿಸಿ ನಂತರ ಲಕ್ಷಾಂತರ ರೂ. ಹಣವನ್ನು ಹಾಗೂ ಬೆಲೆಬಾಳುವ ವಸ್ತುಗಳನ್ನು ಲೂಟಿ ಮಾಡಿ ಪರಾರಿಯಾಗಿರುವ ಘಟನೆ ಕಡಬದಿಂದ ವರದಿಯಾಗಿದೆ. ಈತ ಮನೆ ಬಿಟ್ಟು 10 ವರ್ಷವಾಗಿದ್ದರೂ ಘಟನೆ ಇತ್ತೀಚೆಗೆ ಬೆಳಕಿಗೆ ಬಂದಿರುವ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ. ಪಿರಿಯಾಪಟ್ಟಣ ತಾಲೂಕಿನ ಹಾರನಹಳ್ಳಿ ಹೋಬಳಿಯ ರಾಮಮಂದಿರ ಸಮೀಪದ ನಿವಾಸಿ ಎಂ.ಟಿ. ಕರೀಗೌಡ ಎಂಬವರ ಪುತ್ರ ಶರತ್ ಬಾಬು ಸಿ.ಕೆ. ಪರಾರಿಯಾಗಿರುವ ವ್ಯಕ್ತಿ. ಈತ ಕಡಬದಲ್ಲಿ ನೂತನವಾಗಿ ಆರಂಭವಾದ

ಕಡಬ: ಪಾಲುದಾರಿಕೆಯಲ್ಲಿ ಲಕ್ಷಾಂತರ ರೂ. ಲೂಟಿ ಪರಾರಿ| ಮನೆಯಿಂದ 10 ವರ್ಷದ ಹಿಂದೆಯೇ ನಾಪತ್ತೆ!! Read More »

ಇಂದು ಹೈಕಮಾಂಡ್ ಭೇಟಿ ಮಾಡಲಿರುವ ಸಿಎಂ ಬೊಮ್ಮಾಯಿ; ಖಾಲಿ ಉಳಿದಿರುವ ನಾಲ್ಕು ಸಚಿವ ಸ್ಥಾನ ಭರ್ತಿ ಮಾಡುವ ಯೋಚನೆ

ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಕೇಂದ್ರ ನಾಯಕರನ್ನು ಭೇಟಿಯಾಗಲು ದೆಹಲಿಗೆ ತೆರಳುತ್ತಿದ್ದಾರೆ. ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಚರ್ಚಿಸಲು ಕೇಂದ್ರ ನೀರಾವರಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿಯಾಗಲಿದ್ದಾರೆ. ಹೀಗಾಗಿ ಇಂದು ಮಧ್ಯಾಹ್ನ 1.20ಕ್ಕೆ ನೀರಾವರಿ ಸಚಿವ ಗೋವಿಂದ ಕಾರಜೋಳ ಜೊತೆ ಸಿಎಂ ದೆಹಲಿ ಪ್ರವಾಸ ಕೈಗೊಳ್ಳಲಿದ್ದಾರೆ. ನೀರಾವರಿ ಇಲಾಖೆಯ ಹಿರಿಯ ಅಧಿಕಾರಿಗಳು ಕೂಡ ಸಿಎಂ ಜೊತೆ ಪ್ರಯಾಣ ಬೆಳೆಸಲಿದ್ದಾರೆ. ದೆಹಲಿಯಲ್ಲಿ ಕೇಂದ್ರ ನೀರಾವರಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಿ ರಾಜ್ಯದ

ಇಂದು ಹೈಕಮಾಂಡ್ ಭೇಟಿ ಮಾಡಲಿರುವ ಸಿಎಂ ಬೊಮ್ಮಾಯಿ; ಖಾಲಿ ಉಳಿದಿರುವ ನಾಲ್ಕು ಸಚಿವ ಸ್ಥಾನ ಭರ್ತಿ ಮಾಡುವ ಯೋಚನೆ Read More »

ಅಪ್ರಾಪ್ತೆ ಮೇಲೆ ಅತ್ಯಾಚಾರ: ಮಾಜಿ ಶಾಸಕನಿಗೆ 25 ವರ್ಷ ಜೈಲೂಟ

ಶಿಲಾಂಗ್: ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಅಪರಾಧದ ಮೇಲೆ ಮೇಘಾಲಯದ ಮಾಜಿ ಶಾಸಕ ಜೂಲಿಯಸ್ ಡಾರ್‍ಫಾಂಗ್ ಅವರಿಗೆ ಬರೋಬ್ಬರಿ 25 ವರ್ಷ ಜೈಲುಶಿಕ್ಷೆ ಸಿಕ್ಕಿದೆ. ಮೇಘಾಲಯದ ರೀ-ಭೋಯ್ ಜಿಲ್ಲೆಯ ಪೆÇೀಕ್ಸೋ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಎಫ್‍ಎಸ್ ಸಾಂಗ್ಮಾ ಅವರು ನಿನ್ನೆ ಮಂಗಳವಾರ ಈ ವಿಶೇಷ ತೀರ್ಪು ನೀಡಿದ್ದಾರೆ. ಆದರೆ, ಮಾಜಿ ಶಾಸಕನ ಪರ ವಕೀಲರು ಈ ತೀರ್ಪನ್ನ ಪ್ರಶ್ನಿಸಿ ಮೇಘಾಲಯದ ಹೈಕೋರ್ಟ್ ಬಾಗಿಲು ಬಡಿಯಲು ನಿರ್ಧರಿಸಿದ್ದಾರೆ. “ಹೌದು ಜೂಲಿಯಸ್ ಡಾರ್‍ಫಾಂಗ್ ಅವರನ್ನ ದೋಷಿ ಎಂದು

ಅಪ್ರಾಪ್ತೆ ಮೇಲೆ ಅತ್ಯಾಚಾರ: ಮಾಜಿ ಶಾಸಕನಿಗೆ 25 ವರ್ಷ ಜೈಲೂಟ Read More »

ನಂದಿಬೆಟ್ಟದ ಬ್ರಹ್ಮಗಿರಿಯಲ್ಲಿ ಭೂ ಕುಸಿತ – ಮೇಲ್ಭಾಗದಲ್ಲಿಯೇ ಸಿಲುಕಿಕೊಂಡ ಪ್ರವಾಸಿಗರು

ಚಿಕ್ಕಬಳ್ಳಾಪುರ: ನಂದಿಬೆಟ್ಟದ ಬ್ರಹ್ಮಗಿರಿಯಲ್ಲಿ ಭೂ ಕುಸಿತವಾಗಿದ್ದು, ಮುಖ್ಯ ರಸ್ತೆ 10 ಅಡಿ ಆಳಕ್ಕೆ ಕುಸಿದಿದೆ. ನಂದಿಬೆಟ್ಟದ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ. ಇದರಿಂದ ವಾಸ್ತವ್ಯ ಹೂಡಿದ್ದ ಪ್ರವಾಸಿಗರು ಮೇಲ್ಭಾಗದಲ್ಲಿಯೇ ಸಿಲುಕಿಕೊಂಡಿದ್ದಾರೆ. ಮಂಗಳವಾರ ರಾತ್ರಿ ನಂದಿಬೆಟ್ಟದ ಪರಿಸರದಲ್ಲಿ ಭಾರೀ ಮಳೆಯಾಗಿದ್ದು, ಮೇಲ್ಭಾಗದಿಂದ ಮಣ್ಣು ಕೊಚ್ಚಿಕೊಂಡು ಬಂದಿದೆ. ಮಳೆಯ ನೀರಿನ ಜೊತೆ ಮಣ್ಣು, ಬೃಹತ್ ಬಂಡೆ, ಮರ ಗಿಡಗಳು ರಸ್ತೆಗೆ ಅಡ್ಡಲಾಗಿ ಬಿದ್ದಿವೆ. ಇನ್ನೂ ವಿದ್ಯುತ್ ಕಂಬಗಳು ಧರೆಗೆ ಉಳಿದಿರುವ ಕಾರಣ ನಂದಿಗಿರಿಧಾಮದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ರಸ್ತೆ ಬಂದ್ ಆಗಿದ್ದರಿಂದ

ನಂದಿಬೆಟ್ಟದ ಬ್ರಹ್ಮಗಿರಿಯಲ್ಲಿ ಭೂ ಕುಸಿತ – ಮೇಲ್ಭಾಗದಲ್ಲಿಯೇ ಸಿಲುಕಿಕೊಂಡ ಪ್ರವಾಸಿಗರು Read More »

ಪುತ್ತೂರು: ಕಾರು ಚಾಲಕನ ಕೊಲೆ ಯತ್ನ |6 ಮಂದಿಯ ಬಂಧನ |ಇದು ಕಾರ್ತಿಕ್ ಮೇರ್ಲ ಕೊಲೆ ಕೇಸಿಗೆ ಸಂಬಂಧವೇ?

ಪುತ್ತೂರು: ದರ್ಬೆ ಪೆಟ್ರೋಲ್ ಪಂಪ್‌ನಲ್ಲಿ ಆ.24ರಂದು ರಾತ್ರಿ ಇನ್ನೋವಾ ಕಾರು ಚಾಲಕನಿಗೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಕೆಲವೇ ಗಂಟೆಗಳಲ್ಲಿ 6 ಮಂದಿ ಆರೋಪಿಗಳನ್ನು ಪುತ್ತೂರು ನಗರ ಪೊಲೀಸ್ ಠಾಣಾ ಇನ್‌ಸ್ಪೆಕ್ಟರ್ ಗೋಪಾಲ್ ನಾಯ್ಕ್ ನೇತೃತ್ವದಲ್ಲಿ ಬಂಧಿಸಿದ್ದಾರೆ. ಇದು ಹಿಂಜಾವೇ ಯ ಕಾರ್ತಿಕ್ ಮೇರ್ಲ ಕೊಲೆ ಕೇಸಿಗೆ ಸಂಬಂಧಿಸಿದ ಈ ಕೊಲೆ ಯತ್ನ ನಡೆದಿದೆ ಎಂದು ತನಿಖೆ ವೇಳೆ ತಿಳಿದು ಬಂಧಿದೆ. ಕಿಶೊರ್ ಮೇರ್ಲ, ರಾಕೇಶ್ ಪಂಚೋಡಿ, ರೆಹಮಂತ್, ಇಬ್ರಾಹಿಂ, ದೇವಿಪ್ರಸಾದ್ ಮತ್ತು ಅಶ್ರಫ್ ಬಂಧಿತ ಆರೋಪಿಗಳು.

ಪುತ್ತೂರು: ಕಾರು ಚಾಲಕನ ಕೊಲೆ ಯತ್ನ |6 ಮಂದಿಯ ಬಂಧನ |ಇದು ಕಾರ್ತಿಕ್ ಮೇರ್ಲ ಕೊಲೆ ಕೇಸಿಗೆ ಸಂಬಂಧವೇ? Read More »