August 2021

ಕಾಳ್ಗಿಚ್ಚಿಗೆ ನಲುಗಿದ ಅಲ್ಜೀರಿಯಾ| 25 ಕ್ಕೂ ಹೆಚ್ಚು ಸೈನಿಕರ ಮಾರಣಹೋಮ|

ಅಲ್ಜೀರಿಯಾ : ರಾಜಧಾನಿಯ ಪೂರ್ವಕ್ಕಿರುವ ಪರ್ವತ ಕಾಡುಗಳು ಮತ್ತು ಹಳ್ಳಿಗಳನ್ನು ಧ್ವಂಸಗೊಳಿಸುತ್ತಿರುವ ಕಾಡ್ಗಿಚ್ಚಿನಿಂದ ನಿವಾಸಿಗಳನ್ನು ರಕ್ಷಿಸುತ್ತಿರುವ ಕನಿಷ್ಠ 25 ಅಲ್ಜೀರಿಯನ್ ಸೈನಿಕರು ಬೆಂಕಿಯಿಂದ ಸಾವನ್ನಪ್ಪಿದ್ದಾರೆ ಎಂದು ಅಧ್ಯಕ್ಷರು ಮಂಗಳವಾರ ರಾತ್ರಿ ಘೋಷಿಸಿದರು, ಬೆಂಕಿಯಿಂದ ನಾಗರಿಕರ ಸಾವಿನ ಸಂಖ್ಯೆ ಕನಿಷ್ಠ 17 ಕ್ಕೆ ಏರಿದೆ. ಉತ್ತರ ಆಫ್ರಿಕಾ ರಾಷ್ಟ್ರದ ಬರ್ಬರ್ ನಲ್ಲಿ ನೆಲೆಯಾಗಿರುವ ಕಬೈಲ್ ನ ಎರಡು ಪ್ರದೇಶಗಳಲ್ಲಿ ಸೈನಿಕರು 100 ಜನರನ್ನು ಬೆಂಕಿಯಿಂದ ರಕ್ಷಿಸಿದ್ದಾರೆ ಎಂದು ಅಧ್ಯಕ್ಷ ಅಬ್ದೆಲ್ಮದ್ಜಿದ್ ಟೆಬ್ಬೌನ್ ಟ್ವೀಟ್ ಮಾಡಿದ್ದಾರೆ.ಬೆಂಕಿಯ ವಿರುದ್ಧ ಹೋರಾಡುತ್ತಿದ್ದ ಇತರ […]

ಕಾಳ್ಗಿಚ್ಚಿಗೆ ನಲುಗಿದ ಅಲ್ಜೀರಿಯಾ| 25 ಕ್ಕೂ ಹೆಚ್ಚು ಸೈನಿಕರ ಮಾರಣಹೋಮ| Read More »

ಬಿಜೆಪಿ ನಾಯಕನನ್ನು ಕಾರಿನಲ್ಲಿ ಲಾಕ್ ಮಾಡಿ ಸುಟ್ಟ ದುಷ್ಕರ್ಮಿಗಳು| ಬೆಚ್ಚಿಬಿದ್ದ ತೆಲಂಗಾಣ|

ತೆಲಂಗಾಣ: ಬಿಜೆಪಿ ನಾಯಕನೋರ್ವನನ್ನು ಕಾರಿನೊಳಗೆ ಜೀವಂತವಾಗಿ ಸುಟ್ಟು ಹಾಕಿರುವ ಅಮಾನವೀಯ ಘಟನೆ ತೆಲಂಗಾಣದ ಮೇದಕ್​ ಜಿಲ್ಲೆಯಲ್ಲಿ ನಡೆದಿರುವುದಾಗಿ ಪೊಲೀಸರು ಇಂದು ತಿಳಿಸಿದ್ದಾರೆ. ಕಾರಿನ ಡಿಕ್ಕಿಯಲ್ಲಿ ಬಿಜೆಪಿ ನಾಯಕನನ್ನು ಲಾಕ್​ ಮಾಡಿ ಕೆಲ ಅಪರಿಚಿತ ವ್ಯಕ್ತಿಗಳು ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಘಟನೆಯ ಬಗ್ಗೆ ಮಾತನಾಡಿರುವ ಮೇದಕ್​ ಜಿಲ್ಲೆಯ ಪೊಲೀಸ್​ ವರಿಷ್ಠಾಧಿಕಾರಿ ಚಂದನಾ ದೀಪ್ತಿ, ಕೆಲವು ಅಪರಿಚಿತ ವ್ಯಕ್ತಿಗಳು ಬಿಜೆಪಿ ನಾಯಕನನ್ನು ಕಾರಿನ ಲಾಕ್​ ಮಾಡಿ

ಬಿಜೆಪಿ ನಾಯಕನನ್ನು ಕಾರಿನಲ್ಲಿ ಲಾಕ್ ಮಾಡಿ ಸುಟ್ಟ ದುಷ್ಕರ್ಮಿಗಳು| ಬೆಚ್ಚಿಬಿದ್ದ ತೆಲಂಗಾಣ| Read More »

ಮಂಗಳೂರು: ಕೈದಿಗೆ ಗಾಂಜಾ ನೀಡಲು ಯತ್ನ : ಅನನಾಸಿನ ಹಣ್ಣು ತಂದ ವ್ಯಕ್ತಿ ಪೊಲೀಸ್ ಅತಿಥಿ

ಮಂಗಳೂರು: ಅನನಾಸಿನ ಹಣ್ಣಿ ನೊಳಗೆ ಗಾಂಜಾ ವನ್ನು ಇಟ್ಟು ಕೈದಿಯೋರ್ವನಿಗೆ ನೀಡಲು ಯತ್ನಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ ಘಟನೆ ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ನಡೆದಿದೆ. ಅಬ್ದುಲ್ ಮಜೀದ್ ಬಿನ್ ಅಬ್ದುಲ್ ಖಾದ್ರಿ ಎಂಬಾತ ಬಂಧಿತ ವ್ಯಕ್ತಿ. ಈತ ಕಾರಾಗೃಹದಲ್ಲಿರುವ ರಾಜು ಯಾನೆ ರಾಜಪ್ಪ ಎನ್ನುವ ವಿಚಾರಣಾಧೀನ ಕೈದಿಗೆ ನೀಡಲೆಂದು ಆಗಸ್ಟ್ 9ರ ಬೆಳಗ್ಗೆ ಅನನಾಸು ಹಣ್ಣು ತಂದಿದ್ದ. ಜೈಲಿನ ಪ್ರವೇಶದ್ವಾರದ ಬಳಿ ಎಕ್ಸರೇ ಬ್ಯಾಗಿನಲ್ಲಿ ಹಣ್ಣನ್ನು ಪರಿಶೀಲಿಸಿದಾಗ ಹಣ್ಣಿನೊಳಗೆ ಅನುಮಾನಾಸ್ಪದ ವಸ್ತು ಇರುವುದು ಗೊತ್ತಾಯಿತು. ಅದನ್ನು ಒಡೆದು

ಮಂಗಳೂರು: ಕೈದಿಗೆ ಗಾಂಜಾ ನೀಡಲು ಯತ್ನ : ಅನನಾಸಿನ ಹಣ್ಣು ತಂದ ವ್ಯಕ್ತಿ ಪೊಲೀಸ್ ಅತಿಥಿ Read More »

ಸಮುದ್ರ ಪಾಲಾಗಲಿವೆ ಭಾರತದ ಕರಾವಳಿಯ 12 ನಗರಗಳು…! ಕಾರಣ ಕೇಳಿದ್ರೆ ಶಾಕ್ ಆಗ್ತಿರಾ…

ನವದೆಹಲಿ: ಮಂಗಳೂರು ನಗರ ಸೇರಿದಂತೆ ಭಾರತದ ಕರಾವಳಿ ತೀರಗಳಲ್ಲಿರುವ 12 ನಗರಗಳು ಈ ಶತಮಾನದ ಅಂತ್ಯಕ್ಕೆ ಮುಳುಗಲಿವೆ ಎಂಬ ಎಚ್ಚರಿಕೆಯನ್ನು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಮಾಹಿತಿ ನೀಡುವ ಮೂಲಕ ಎಚ್ಚರಿಕೆ ನೀಡಿದೆ. ಜಾಗತಿಕ ತಾಪಮಾನದ ದುಷ್ಪರಿಣಾಮಗಳ ಬಗ್ಗೆ ವಿಶ್ವಸಂಸ್ಥೆಯ 195 ಪರಿಸರ ತಜ್ಞರ ಸಮಿತಿ, ಸೋಮವಾರ ಬಿಡುಗಡೆ ಮಾಡಿದೆ. ಬಳಿಕ ಎಚ್ಚರಿಕೆಯ ವರದಿಯನ್ನು (ಐಪಿಸಿಸಿ ವರದಿ) ಅವಲೋಕನ ಮಾಡಿರುವ ಅಮೆರಿಕ ಬಾಹ್ಯಾಕಾಶ ಸಂಸ್ಥೆ (ನಾಸಾ) ಭಾರತಕ್ಕೆ ಮುನ್ನೆಚ್ಚರಿಕೆ ನೀಡಿದೆ. ಐಪಿಸಿಸಿ ವರದಿ ಹಾಗೂ ತನ್ನ ಉಪಗ್ರಹಗಳು

ಸಮುದ್ರ ಪಾಲಾಗಲಿವೆ ಭಾರತದ ಕರಾವಳಿಯ 12 ನಗರಗಳು…! ಕಾರಣ ಕೇಳಿದ್ರೆ ಶಾಕ್ ಆಗ್ತಿರಾ… Read More »

ಮಾಜಿ ಶಾಸಕ ಬಿ.ಎಂ. ಇದಿನಬ್ಬರ ಪುತ್ರನ ಮನೆಗೆ ಐಸಿಸ್ ನಂಟು ಆರೋಪ: ಬಜರಂಗದಳದ ಕಾರ್ಯಕರ್ತರಿಂದ ಮನೆಗೆ ಮುತ್ತಿಗೆ- 50 ಕ್ಕೂ ಹೆಚ್ಚು ಕಾರ್ಯಕರ್ತರ ಬಂಧನ

ವಿಡಿಯೋ ವರದಿ ಮಂಗಳೂರು: ಉಳ್ಳಾಲದ ಮಾಜಿ ಶಾಸಕ ಬಿ.ಎಂ. ಇದಿನಬ್ಬ ಅವರ ಪುತ್ರನ ಮನೆಗೆ ಐಸಿಸ್ ನಂಟು ಆರೋಪದ ಹಿನ್ನಲೆ ಇಂದು ಬೆಳಗ್ಗೆ ಬಜರಂಗದಳದ ಕಾರ್ಯಕರ್ತರು ಆರೋಪಿತರ ಮನೆಗೆ ಮುತ್ತಿಗೆ ಹಾಕಿದ್ದು ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾರೆ. ವಿಶ್ವ ಹಿಂದು ಪರಿಷತ್ ಜಿಲ್ಲಾ ಮುಖಂಡ ಶರಣ್ ಪಂಪ್ವೆಲ್ ನೇತೃತ್ವದಲ್ಲಿ ಇಂದು ಬಿ.ಎಂ. ಇದಿನಬ್ಬ ಅವರ ಪುತ್ರ ಅಬ್ದುರ್ರಹ್ಮಾನ್ ಬಾಷಾ ಅವರ ಮನೆಗೆ ಮುತ್ತಿಗೆ ಹಾಕಲಾಗಿದೆ. ಮನೆಯ ಗೇಟ್ ವರೆಗೆ ತೆರಳಿದ ಬಜರಂಗದಳದ 50 ಕ್ಕೂ ಹೆಚ್ಚು ಕಾರ್ಯಕರ್ತರನ್ನ ಪೊಲೀಸರು ಬಂಧಿಸಿದ್ದಾರೆ.

ಮಾಜಿ ಶಾಸಕ ಬಿ.ಎಂ. ಇದಿನಬ್ಬರ ಪುತ್ರನ ಮನೆಗೆ ಐಸಿಸ್ ನಂಟು ಆರೋಪ: ಬಜರಂಗದಳದ ಕಾರ್ಯಕರ್ತರಿಂದ ಮನೆಗೆ ಮುತ್ತಿಗೆ- 50 ಕ್ಕೂ ಹೆಚ್ಚು ಕಾರ್ಯಕರ್ತರ ಬಂಧನ Read More »

ಬೆಳ್ತಂಗಡಿ : ಅಜ್ಜನ ಜೊತೆಗಿದ್ದ ಮಗು ನಾಪತ್ತೆ ಪ್ರಕರಣ ಎರಡು ವರ್ಷದ ಹೆಣ್ಣು ಮಗು ಶವವಾಗಿ ಪತ್ತೆ

ಬೆಳ್ತಂಗಡಿ: ಇಲ್ಲಿನ ಸುಲ್ಕೇರಿ ಗ್ರಾಮದಲ್ಲಿ ಆ.10 ರ ಮಧ್ಯಾಹ್ನ ನಾಪತ್ತೆಯಾಗಿದ್ದ ಎರಡು ವರ್ಷದ ಹೆಣ್ಣು ಮಗು ಇಂದು ಶವವಾಗಿ ಪತ್ತೆಯಾಗಿದೆ. ಜಂತಿಗೂಳಿಯ ಪರಾರಿ ನಿವಾಸಿ ಸಂಜೀವ ಶೆಟ್ಟಿ ಅವರ ಪುತ್ರಿ ಸುಚಿತ್ರ ಮತ್ತು ಸುಭಾಷ್ ದಂಪತಿಯು ತಮ್ಮ ಎರಡು ವರ್ಷದ ಹೆಣ್ಣು ಮಗುವಿನೊಂದಿಗೆ ಸುಲ್ಕೇರಿ ಯ ತವರು ಮನೆಯಲ್ಲಿ ವಾಸವಿದ್ದರು. ಮಂಗಳವಾರ ಮಧ್ಯಾಹ್ನ ಸುಚಿತ್ರಾ ಅವರು ಮಗುವನ್ನು ಅಜ್ಜನೊಂದಿಗೆ ಮನೆಯಲ್ಲಿ ಬಿಟ್ಟು ತಾಯಿಯೊಂದಿಗೆ ಹುಲ್ಲು ತರಲು ಎಂದು ತೋಟಕ್ಕೆ ಹೋಗಿದ್ದರು ಎನ್ನಲಾಗಿದೆ. ಹಿಂತಿರುಗಿ ಬರುವಷ್ಟರಲ್ಲಿ ಮಗು ಕಾಣಿಸದೆ

ಬೆಳ್ತಂಗಡಿ : ಅಜ್ಜನ ಜೊತೆಗಿದ್ದ ಮಗು ನಾಪತ್ತೆ ಪ್ರಕರಣ ಎರಡು ವರ್ಷದ ಹೆಣ್ಣು ಮಗು ಶವವಾಗಿ ಪತ್ತೆ Read More »

ಪ್ರಾಧ್ಯಾಪಕನ ಕಾಮಕೃತ್ಯಕ್ಕೆ ಎನ್ ಎಸ್ ಯು ಐ ನಿಂದ ಖಂಡನೆ – ಕ್ರಮ ಕೈಗೊಳ್ಳದ್ದಿದ್ದರೆ ಪ್ರತಿಭಟನೆಯ ಎಚ್ಚರಿಕೆ

ಮಂಗಳೂರು: ವಿದ್ಯಾರ್ಥಿಗಳಿಗೆ ಮಾರ್ಗದರ್ಶರಾಗಬೇಕಿದ್ದ ಶಿಕ್ಷಕನಿಂದಲೇ ವಿದ್ಯಾರ್ಥಿಯ ಮೇಲೆ ಸುಬ್ರಹ್ಮಣ್ಯದ ಪ್ರತಿಷ್ಠಿತ ಶಾಲೆಯಲ್ಲಿ ಅತ್ಯಾಚಾರ ನಡೆದಿರುವುದು ಖಂಡನೀಯ ಈ ಕೃತ್ಯವನ್ನು ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (ಎನ್ ಎಸ್ ಯು ಐ) ಉಗ್ರವಾಗಿ ಖಂಡಿಸಿದೆ. ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ತನಿಖೆ ಆಗಿ ಸಂತ್ರಸ್ತೆಗೆ ನ್ಯಾಯ ಒದಗಿಸಬೇಕು ‌ಮತ್ತು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತಕ್ಕೊಳಪಟ್ಟ ವಿದ್ಯಾಸಂಸ್ಥೆಗೆ ಕಪ್ಪು ಚುಕ್ಕೆಯನ್ನಿಟ್ಟ ಈತನನ್ನು ಈ ಕೂಡಲೇ ಹುದ್ದೆಯಿಂದ ವಜಾಗೊಳಿಸಬೇಕು ಎಂದು ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಆಗ್ರಹಿಸಿದ್ದು, ಈತನ ವಿರುದ್ಧ ಸೂಕ್ತ ಕ್ರಮ

ಪ್ರಾಧ್ಯಾಪಕನ ಕಾಮಕೃತ್ಯಕ್ಕೆ ಎನ್ ಎಸ್ ಯು ಐ ನಿಂದ ಖಂಡನೆ – ಕ್ರಮ ಕೈಗೊಳ್ಳದ್ದಿದ್ದರೆ ಪ್ರತಿಭಟನೆಯ ಎಚ್ಚರಿಕೆ Read More »

ಬ್ಯಾಂಕ್ ನೌಕರರಿಗೆ ಗುಡ್ ನ್ಯೂಸ್| ವಾರ್ಷಿಕ ಸರ್ಪ್ರೈಜ್ ರಜೆ ಗಿಪ್ಟ್ ನೀಡಿದ ಆರ್ ಬಿ ಐ|

ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಉದ್ಯೋಗಿಗಳಿಗೆ ವಾರ್ಷಿಕ 10 ದಿನಗಳ ವಾರ್ಷಿಕ ರಜೆಯ ಸರ್ಪ್ರೈಜ್ ಗಿಫ್ಟ್ ನೀಡಿದೆ. ವಾಣಿಜ್ಯ ಬ್ಯಾಂಕುಗಳು, ಗ್ರಾಮೀಣಾಭಿವೃದ್ಧಿ ಬ್ಯಾಂಕುಗಳು ಮತ್ತು ಸಹಕಾರಿ ಬ್ಯಾಂಕುಗಳಿಗೆ ಅನ್ವಯವಾಗುವಂತೆ ಪ್ರತಿ ವರ್ಷ ಕನಿಷ್ಠ 10 ದಿನಗಳ ಅನಿರೀಕ್ಷಿತ ನೀಡಬಹುದಾಗಿದೆ. ಟ್ರೆಜರಿ ಆಪರೇಷನ್, ಕರೆನ್ಸಿ, ರಿಸ್ಕ್ ಮಾಡೆಲಿಂಗ್ ಮೊದಲಾದ ಅತಿಸೂಕ್ಷ್ಮ ವಿಭಾಗಗಳಲ್ಲಿ ಕೆಲಸ ಮಾಡುವವರಿಗೆ ಪ್ರತಿವರ್ಷ 10 ದಿನಗಳ ರಜೆ ನೀಡಲಾಗುವುದು. ಇಂತಹ ರಜೆಗಳನ್ನು ನೀಡುವ ಬಗ್ಗೆ ಮೊದಲೇ ತಿಳಿಸುವುದಿಲ್ಲ. ಅನಿರೀಕ್ಷಿತ ರಜೆ ನೀಡಲಾಗುತ್ತದೆ. ಬ್ಯಾಂಕ್

ಬ್ಯಾಂಕ್ ನೌಕರರಿಗೆ ಗುಡ್ ನ್ಯೂಸ್| ವಾರ್ಷಿಕ ಸರ್ಪ್ರೈಜ್ ರಜೆ ಗಿಪ್ಟ್ ನೀಡಿದ ಆರ್ ಬಿ ಐ| Read More »

ಪಿಯುಸಿ ದಾಖಲಾತಿಗೆ ಗ್ರೀನ್ ಸಿಗ್ನಲ್ | ಸುತ್ತೋಲೆ ಹೊರಡಿಸಿದ ಪ.ಪೂ.ಶಿಕ್ಷಣ ಇಲಾಖೆ

ಬೆಂಗಳೂರು: ಎಸ್‌ಎಸ್‌ಎಲ್ಸಿ ಪರೀಕ್ಷೆ ಫಲಿತಾಂಶದ ಬೆನ್ನಲ್ಲೇ ಪ್ರವೇಶಕ್ಕೆ ಗ್ರೀನ್ ಸಿಗ್ನಲ್ ನೀಡಲಾಗಿದೆ. ಆಗಸ್ಟ್ 30 ರ ವರೆಗೆ ದಂಡ ಶುಲ್ಕವಿಲ್ಲದೆ ದಾಖಲಾತಿಗೆ ಅವಕಾಶ ನೀಡಲಾಗಿದೆ. ಸೆಪ್ಟೆಂಬರ್ 1 ರಿಂದ 11 ರವರೆಗೆ ವಿಳಂಬ ಶುಲ್ಕ ನೀಡಿ ಪ್ರವೇಶ ಪಡೆಯಬಹುದು. 670 ರೂಪಾಯಿ ವಿಳಂಬ ಶುಲ್ಕ ಪಾವತಿಸಿ ದಾಖಲಾತಿ ಮಾಡಿಕೊಳ್ಳಬಹುದಾಗಿದೆ. ಸೆ. 11 ರವರೆಗೆ ಪ್ರವೇಶ ಪಡೆಯದವರಿಗೆ 2890 ರೂಪಾಯಿ ವಿಶೇಷ ದಂಡದೊಂದಿಗೆ ಪ್ರವೇಶ ನೀಡಲಾಗುವುದು. 2890 ರೂಪಾಯಿ ದಂಡ ಪಾವತಿಸಿ ಸೆಪ್ಟೆಂಬರ್ 13 ರಿಂದ 25ರವರೆಗೆ ದಾಖಲಾತಿ

ಪಿಯುಸಿ ದಾಖಲಾತಿಗೆ ಗ್ರೀನ್ ಸಿಗ್ನಲ್ | ಸುತ್ತೋಲೆ ಹೊರಡಿಸಿದ ಪ.ಪೂ.ಶಿಕ್ಷಣ ಇಲಾಖೆ Read More »

‘5ಡಿ’ ಶೂಟಿಂಗ್ ಮುಗಿಸಿದ ಚಿತ್ರತಂಡ

ಬೆಂಗಳೂರು : ಬಹುನಿರೀಕ್ಷಿತ ‘5ಡಿ’ ಚಿತ್ರದ ಚಿತ್ರೀಕರಣವು ಆಗಸ್ಟ್ 4ಕ್ಕೆ ಪೂರ್ಣಗೊಂಡಿದ್ದು , ಎಸ್ ನಾರಾಯಣ್ ಅವರ ನಿರ್ದೇಶನದಲ್ಲಿ ಮೂಡಿಬಂದಿದೆ. ಚಿತ್ರೀಕರಣ ಮುಗಿದ ಬಳಿಕ ಮಾಧ್ಯಮದ ಮುಂದೆ ಚಿತ್ರತಂಡವು ಮಾತನಾಡಿ ಆ ಚಿತ್ರದ ಅನುಭವವನ್ನು ಹಂಚಿಕೊಂಡಿದ್ದಾರೆ. ಹಾಗೇ ಈ ಚಿತ್ರದಲ್ಲಿ ನಾಯಕನಾಗಿ ಆದಿತ್ಯ, ನಾಯಕಿಯಾಗಿ ಆದಿತಿ ಅವರು ನಟಿಸಿದ್ದಾರೆ. ಈ ಚಿತ್ರದ ಬಗ್ಗೆ ಮಾತನಾಡಿದ ನಾಯಕ ನಟ ಆದಿತ್ಯ ಅವರು ‘ನಾನು ಎಸ್ ನಾರಾಯಣ್ ಅವರ ಜೊತೆ ಕೆಲಸ ಮಾಡಿದ್ದೆ, ಆದರೆ ಅವರ ಚಿತ್ರದಲ್ಲಿ ನಟಿಸುವ ಅವಕಾಶ

‘5ಡಿ’ ಶೂಟಿಂಗ್ ಮುಗಿಸಿದ ಚಿತ್ರತಂಡ Read More »