August 2021

ಮಂಗಳೂರು: ಪಂಪ್ವೆಲ್, ಕಂಕನಾಡಿಯಲ್ಲಿ ಸಾವರ್ಕರ್ ಬ್ಯಾನರ್ ಅಳವಡಿಸಿದ ಭಜರಂಗದಳ

ಮಂಗಳೂರು: ಇಲ್ಲಿನ ಪ್ರಮುಖ ಜನನಿಬಿಡ ಪ್ರದೇಶ ಪಂಪ್ವೆಲ್ ಮೇಲ್ಸೇತುವೆ ಮೇಲೆ ಬಜರಂಗದಳದ ಕಾರ್ಯಕರ್ತರು ವೀರ ಸಾವರ್ಕರ್ ಬ್ಯಾನರ್ ಮತ್ತೆ ಅಳವಡಿಸಿರುವ ಘಟನೆ ಇಂದು ರಾತ್ರಿ ನಡೆದಿದೆ. ಪುತ್ತೂರು ಸಮೀಪದ ಕಬಕದಲ್ಲಿ ನಿನ್ನೆ ಎಸ್ ಡಿಪಿಐ ಕಾರ್ಯಕರ್ತರು ಸ್ವಾತಂತ್ರ್ಯ ರಥಯಾತ್ರೆಯಲ್ಲಿನ ಸಾವರ್ಕರ್ ಫೋಟೋ ತೆಗೆಯಲು ಕ್ಯಾತೆ ತೆಗೆದು ವಿವಾದಕ್ಕೀಡಾದ ಬೆನ್ನಲ್ಲೇ ಮತ್ತೆ ಕರಾವಳಿಯಲ್ಲಿ ಕೋಮುದ್ವೇಷ ಭುಗಿಲೇಳುವ ಲಕ್ಷಣಗಳು ಕಂಡುಬರುತ್ತಿವೆ. ಈ ಹಿಂದೆ ಪಂಪ್ವೆಲ್ ಮೇಲ್ಸೇತುವೆ ಮೇಲೆ ಅಳವಡಿಸಿದ್ದ ಸಾವರ್ಕರ್ ಬ್ಯಾನರ್ ಅನ್ನು ತೆರವುಗೊಳಿಸಲಾಗಿದ್ದು, ಇದೀಗ ಮತ್ತೆ ಭಜರಂಗದಳದ ಕಾರ್ಯಕರ್ತರು […]

ಮಂಗಳೂರು: ಪಂಪ್ವೆಲ್, ಕಂಕನಾಡಿಯಲ್ಲಿ ಸಾವರ್ಕರ್ ಬ್ಯಾನರ್ ಅಳವಡಿಸಿದ ಭಜರಂಗದಳ Read More »

ಪಿಚ್ ನಲ್ಲೇ ಓಡ್ತಿದೇನೆ,ನಿನ್ನ ಮನೆಯಲ್ಲಿ ಅಲ್ಲ| ಪರಸ್ಪರ ಬೈದಾದಿಕೊಂಡ ಕೊಹ್ಲಿ- ಆ್ಯಂಡರ್ಸನ್

ಲಂಡನ್: ಟೀಮ್ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಮತ್ತು ಇಂಗ್ಲೆಂಡ್‌ನ ಅನುಭವಿ ವೇಗದ ಬೌಲರ್‌ ಜೇಮ್ಸ್‌ ಆಂಡರ್ಸನ್‌ ನಡುವೆ, ಇಲ್ಲಿ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್‌ ಕ್ರಿಕೆಟ್ ಸರಣಿಯ 2ನೇ ಹಣಾಹಣಿಯಲ್ಲಿ ಮಾತಿನ ಯುದ್ದವೇ ನಡೆದಿದೆ. ಐತಿಹಾಸಿಕ ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್‌ ಪಂದ್ಯದ ನಾಲ್ಕನೇ ದಿನವಾದ ಭಾನುವಾರ, ಪದೇ ಪದೇ ಸ್ಲೆಡ್ಜಿಂಗ್‌ ಮೂಲಕ ಕೆಣಕುತ್ತಿದ್ದ ಜೇಮ್ಸ್‌ ಆಂಡರ್ಸನ್‌ಗೆ ಟೀಮ್ ಇಂಡಿಯಾ ಕ್ಯಾಪ್ಟನ್ ಕೊಹ್ಲಿ ಖಡಕ್‌ ಎಚ್ಚರಿಕೆ ಕೊಟ್ಟಿದ್ದಾರೆ. ಪಂದ್ಯದ ಮೂರನೇ ದಿನಾಟದಲ್ಲೇ ಸ್ಲೆಡ್ಜಿಂಗ್‌ ಶುರು

ಪಿಚ್ ನಲ್ಲೇ ಓಡ್ತಿದೇನೆ,ನಿನ್ನ ಮನೆಯಲ್ಲಿ ಅಲ್ಲ| ಪರಸ್ಪರ ಬೈದಾದಿಕೊಂಡ ಕೊಹ್ಲಿ- ಆ್ಯಂಡರ್ಸನ್ Read More »

ಮಂಗಳೂರು: ಕಾಡುಪ್ರಾಣಿ ಬೇಟೆ – 12 ಮಂದಿ ಅರೆಸ್ಟ್, ಆಯುಧಗಳ ವಶ

ಮಂಗಳೂರು: ಮೂಡುಬಿದಿರೆ ಪೊಲೀಸ್‌ ಠಾಣಾ ವ್ಯಾಪ್ತಿಯ ಕೊಡ್ಯಡ್ಕ ಗುಡ್ಡೆಯಂಗಡಿಯಲ್ಲಿ ಕಾಡು ಪ್ರಾಣಿ ಬೇಟೆಯಾಡುತ್ತಿದ್ದ12 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಜಾನ್‌ ಮನೆಜಸ್‌‌, ಶ್ರೀನಿವಾಸ್‌, ಗುರುಪ್ರಸಾದ್‌, ಜೋಯಲ್‌ ಅನಿಲ್‌ ಡಿಸೋಜಾ, ಅನಜಯ್‌‌, ಸನತ್‌, ಹರೀಶ್‌ ಪೂಜಾರಿ, ಮೋಹನ್‌ ಗೌಡ, ನೋಣಯ್ಯ, ವಿನಯ್‌‌ ಪೂಜಾರಿ, ರಮೇಶ್‌ ಹಾಗೂ ಗಣೇಶ್‌ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ 4 ಗನ್, 1 ಗ್ಯಾಸ್ ಸಿಲಿಂಡರ್, 12 ಮೊಬೈಲ್ ಫೋನ್, 2ಮರದ ತುಂಡು, ಗ್ಯಾಸ್ ಬರ್ನರ್, ನೆಟ್, ಮತ್ತಿತ್ತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಂಗಳೂರು: ಕಾಡುಪ್ರಾಣಿ ಬೇಟೆ – 12 ಮಂದಿ ಅರೆಸ್ಟ್, ಆಯುಧಗಳ ವಶ Read More »

ಪುತ್ತೂರು: ಮನೆ ಕೆಡವಿದ ಆರೋಪ: ದೇವಾಲಯದ ಕಾರ್ಯನಿರ್ವಹಣಾಧಿಕಾರಿಯ ವಿರುದ್ಧ ಪ್ರಕರಣ ದಾಖಲು

ಪುತ್ತೂರು: ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಾಲಯಕ್ಕೆ ಸಂಬಂಧಿಸಿದ ಸ್ಥಳದಲ್ಲಿ ವಾಸವಿದ್ದ ಕುಟುಂಬದ ಮನೆಯನ್ನು ಕೆಡವಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ದೇವಾಲಯದ ಕಾರ್ಯನಿರ್ವಹಣಾಧಿಕಾರಿಯ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ದೇವಾಲಯದ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಪ್ರಕರಣದ ಆರೋಪಿ. ದೇವಳದ ಮತ್ತು ನಗರಸಭೆ ಅನುಮತಿ ಪಡೆಯದೆ ಪತ್ರಕರ್ತ ಸಹೋದರರಾದ ಶೇಖ್ ಇಸಾಕ್ ಮತ್ತು ಶೇಖ್ ಜೈನುದ್ದೀನ್, ಕುಟುಂಬದವರು ತಾವಿರುವ ಹಳೆಯ ಮನೆಯನ್ನು ಕೆಡವಿ ಸ್ಥಳವನ್ನು ಕಬಳಿಸಿ ಅಕ್ರಮವಾಗಿ ಮೂರು ಮನೆ ನಿರ್ಮಾಣ ಮಾಡುತ್ತಿದ್ದಾರೆ. ಈ ರೀತಿ ದಿನೇಶ್ ಜೈನ್ ಎಂಬಾತ

ಪುತ್ತೂರು: ಮನೆ ಕೆಡವಿದ ಆರೋಪ: ದೇವಾಲಯದ ಕಾರ್ಯನಿರ್ವಹಣಾಧಿಕಾರಿಯ ವಿರುದ್ಧ ಪ್ರಕರಣ ದಾಖಲು Read More »

ಮಂಗಳೂರು: ಕೆ.ಜಿ ಗಟ್ಟಲೆ ಅಪಾಯಕಾರಿ ಸ್ಫೋಟಕ ಪತ್ತೆ : ಓರ್ವ ಬಂಧನ

ಮಂಗಳೂರು: ಅಕ್ರಮವಾಗಿ 1725 ಕೆ.ಜಿ.ಗೂ ಅಧಿಕ ಅಪಾಯಕಾರಿ ಸ್ಫೋಟಕಳನ್ನು ನಗರದ ಬಂದರ್‍ನ ಗಾಂಧಿ ಸನ್ಸ್ ಕಟ್ಟಡದ ಕೊಠಡಿಯೊಂದರಲ್ಲಿ ದಾಸ್ತಾನು ಇರಿಸಿರುವ ವಿಷಯ ಬೆಳಕಿಗೆ ಬಂದಿದ್ದು, ಇದಕ್ಕೆ ಸಂಬಂಧಸಿದಂತೆ ಓರ್ವನ್ನು ಮಂಗಳೂರು ಪೆÇಲೀಸರು ಬಂಧಿಸಿದ್ದಾರೆ. ಬಂಟ್ವಾಳ ತಾಲೂಕು ಮುಡಿಪು ಕೈರಂಗಳ ನಿವಾಸಿ ಆನಂದ ಗಟ್ಟಿ (50) ಬಂಧಿತ ಆರೋಪಿ. ಈತನಿಂದ 400 ಕೆ.ಜಿ. ಸಲ್ಫರ್ ಪೌಡರ್, 350 ಕೆ.ಜಿ. ಪೆÇಟ್ಯಾಷಿಯಂ ನೈಟ್ರೇಟ್, 50 ಕೆ.ಜಿ. ಬ್ಯಾರಿಯಂ ನೈಟ್ರೇಟ್, 395 ಕೆ.ಜಿ. ಪೆÇಟ್ಯಾಷಿಯಂ ಕ್ಲೊರೈಟ್, 260 ಕೆ.ಜಿ. ತೂಕದ ವಿವಿಧ

ಮಂಗಳೂರು: ಕೆ.ಜಿ ಗಟ್ಟಲೆ ಅಪಾಯಕಾರಿ ಸ್ಫೋಟಕ ಪತ್ತೆ : ಓರ್ವ ಬಂಧನ Read More »

ಕರಾವಳಿಯಲ್ಲಿ ಮತ್ತೆ ವಿವಾದದ ಕಿಡಿ ಹೊತ್ತಿಸಿದ ಎಸ್ ಡಿಪಿಐ| ಘಟನೆ ಖಂಡಿಸಿ ಆ.17ರಂದು ವೀರ ಸಾವರ್ಕರ್ ರಥಯಾತ್ರೆ|

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಬಕದಲ್ಲಿ ಸ್ವಾತಂತ್ರ್ಯ ರಥಯಾತ್ರೆಯನ್ನು ಎಸ್‌ಡಿಪಿಐ ಕಾರ್ಯಕರ್ತರು ತಡೆದ ವಿಚಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಾದದ ಕಿಡಿ ಹೊತ್ತಿಸಿದೆ. ಸ್ವಾತಂತ್ರ್ಯ ರಥ ಯಾತ್ರೆಯಲ್ಲಿದ್ದ ಸಾವರ್ಕರ್ ಭಾವಚಿತ್ರವನ್ನು ಹರಿಯಲು ಯತ್ನಿಸಿದ ಎಸ್‌ಡಿಪಿಐ ವಿರುದ್ಧ ಹಿಂದೂ ಸಂಘಟನೆಗಳು ತೊಡೆ ತಟ್ಟಿದ್ದು, ಕಬಕ ಜಂಕ್ಷನ್‌ನಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದಾರೆ. ಪುತ್ತೂರು ತಾಲೂಕಿನ ಕಬಕ ಜಂಕ್ಷನ್‌ನಲ್ಲಿ ಹಿಂದೂಪರ ಸಂಘಟನೆಗಳ ನೂರಾರು ಕಾರ್ಯಕರ್ತರು ಸೇರಿದ್ದು, ಸಾವರ್ಕರ್ ಫೋಟೋ ಹಿಡಿದು, ಎಸ್‌ಡಿಪಿಐ ವಿರುದ್ಧ ಘೋಷಣೆ ಕೂಗಿದ್ದಾರೆ.

ಕರಾವಳಿಯಲ್ಲಿ ಮತ್ತೆ ವಿವಾದದ ಕಿಡಿ ಹೊತ್ತಿಸಿದ ಎಸ್ ಡಿಪಿಐ| ಘಟನೆ ಖಂಡಿಸಿ ಆ.17ರಂದು ವೀರ ಸಾವರ್ಕರ್ ರಥಯಾತ್ರೆ| Read More »

ಆ.23 ರಿಂದ ಶಾಲಾರಂಭ| ಮಾರ್ಗಸೂಚಿ ಬಿಡುಗಡೆ| ಪ್ರಾಥಮಿಕ ತರಗತಿಗಳ ಆರಂಭಕ್ಕೂ ಚಿಂತನೆ

ಬೆಂಗಳೂರು : ಆಗಸ್ಟ್ 23ರಿಂದ ರಾಜ್ಯದಲ್ಲಿನ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರೌಡ ಶಾಲೆಗಳಲ್ಲಿನ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆಗಳನ್ನು ಪೂರ್ಣ ಪ್ರಮಾಣದಲ್ಲಿ ಪ್ರಾರಂಭಿಸಿ, ಬೋಧನಾ ತರಗತಿಗಳನ್ನು ನಡೆಸಲು, ಮಾರ್ಗಸೂಚಿ ಕ್ರಮಗಳನ್ನು ಬಿಡುಗಡೆ ಮಾಡಲಾಗಿದೆ. ಈ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಮಾರ್ಗಸೂಚಿ ಬಿಡುಗಡೆ ಮಾಡಿದ್ದು, 2021-22ನೇ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭ ಕುರಿತಂತೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಆರೋಗ್ಯ ಇಲಾಖೆಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಸದಸ್ಯರು ಹಾಗೂ ವಿವಿಧ ಇಲಾಖೆಯ

ಆ.23 ರಿಂದ ಶಾಲಾರಂಭ| ಮಾರ್ಗಸೂಚಿ ಬಿಡುಗಡೆ| ಪ್ರಾಥಮಿಕ ತರಗತಿಗಳ ಆರಂಭಕ್ಕೂ ಚಿಂತನೆ Read More »

ಉಪರಾಷ್ಟ್ರಪತಿಗೆ ಪುಸ್ತಕ ನೀಡಿ ಸ್ವಾಗತಿಸಿದ ಸಿಎಂ ಬೊಮ್ಮಾಯಿ

ಬೆಂಗಳೂರು: ಇಂದು ಬೆಂಗಳೂರಿಗೆ ಆಗಮಿಸಿದ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರಿಗೆ ಸಿಎಂ ಬಸವರಾಜ ಬೊಮ್ಮಾಯಿ ಪುಸ್ತಕ ನೀಡಿ ಸ್ವಾಗತ ಕೋರಿದ್ದಾರೆ. ಕಾರ್ಯಕ್ರಮ ನಿಮಿತ್ತ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವೆಂಕಯ್ಯನಾಯ್ಡು ಅವರನ್ನು ಸಿಎಂ ಸಂಭ್ರಮದಿಂದ ಸ್ವಾಗತಿಸಿದರು. ವಿಮಾನದ ಬಳಿಯೇ ತೆರಳಿದ ಸಿಎಂ ಬೊಮ್ಮಾಯಿವರು ವಿಶೇಷ ಹಾರ, ಶಾಲು ಸೇರಿದಂತೆ ಪುಸ್ತಕ ನೀಡಿ ಅವರನ್ನು ಬರ ಮಾಡಿಕೊಂಡರು. ಇನ್ನೂ ಇದೇ ವೇಳೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಸಹ ಉಪರಾಷ್ಟ್ರಪತಿಗಳನ್ನ ಸ್ವಾಗತಿಸಿದರು. ಸಚಿವರಾದ ಅಶ್ವತ್ಥನಾರಾಯಣ್, ಸಂಸದ ಪಿ.ಸಿ.ಮೋಹನ್ ಸಹ

ಉಪರಾಷ್ಟ್ರಪತಿಗೆ ಪುಸ್ತಕ ನೀಡಿ ಸ್ವಾಗತಿಸಿದ ಸಿಎಂ ಬೊಮ್ಮಾಯಿ Read More »

ಮಾತು ಕೊಟ್ಟಂತೆ ನಡೆದುಕೊಂಡ ಪ್ರಧಾನಿ ಸಿಂಧು ಜೊತೆ ಐಸ್‍ಕ್ರೀಂ ಸವಿದ ಮೋದಿ

ನವದೆಹಲಿ: ಟೋಕಿಯೋ ಒಲಿಂಪಿಕ್ಸ್‍ನಲ್ಲಿ ಭಾಗವಹಿಸಿ ಬಂದ ನಂತರ ನಿಮ್ಮೊಂದಿಗೆ ಐಸ್‍ಕ್ರೀಂ ಸೇವಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು ಅವರಿಗೆ ಮಾತುಕೊಟ್ಟಿದ್ದರು. ಇದೀಗ ಆ ಮಾತನ್ನು ಪ್ರಧಾನಿ ಮೋದಿ ಉಳಿಸಿಕೊಂಡಿದ್ದಾರೆ. ಟೋಕಿಯೋ ಒಲಿಂಪಿಕ್ಸ್‍ನಲ್ಲಿ ಭಾಗವಹಿಸಿದ ಭಾರತೀಯ ಕ್ರೀಡಾಪಟುಗಳಿಗೆ ಔತಣಕೂಟವನ್ನು ಮೋದಿ ತಮ್ಮ ನಿವಾಸದಲ್ಲಿ ಆಯೋಜಿಸಿದ್ದರು. ಇದೇ ವೇಳೆ ಒಲಿಂಪಿಕ್ಸ್‍ನಲ್ಲಿ ಕಂಚಿನ ಪದಕ ಗೆದ್ದ ಸಿಂಧು ಜೊತೆ ಕೂತು ಐಸ್‍ಕ್ರೀಂ ಸೇವಿಸುತ್ತ ಕೆಲಹೊತ್ತು ಮಾತುಕತೆ ನಡೆಸಿದ್ದಾರೆ. ಔತಣಕೂಟದಲ್ಲಿ ಟೋಕಿಯೋ ಒಲಿಂಪಿಕ್ಸ್‍ನಲ್ಲಿ ಭಾಗವಹಿಸಿದ ಕ್ರೀಡಾಪಟುಗಳೆಲ್ಲರೂ ಭಾಗವಹಿಸಿದ್ದರು. ಅವರೆಲ್ಲರೊಂದಿಗೆ

ಮಾತು ಕೊಟ್ಟಂತೆ ನಡೆದುಕೊಂಡ ಪ್ರಧಾನಿ ಸಿಂಧು ಜೊತೆ ಐಸ್‍ಕ್ರೀಂ ಸವಿದ ಮೋದಿ Read More »

ಜೀವ ರಕ್ಷಣೆಗೆ ತಾಯ್ನಾಡು ತೊರೆಯುತ್ತಿರುವ ಅಪ್ಘನ್ನರು| ಬಸ್ ಏರಿದಂತೆ ವಿಮಾನ ಏರುತ್ತಿರುವ ಜನ| ಟಯರ್ ಹಿಡಿದು ಪ್ರಯಾಣ ಮಾಡಿದ ಮೂರು ಜನ ಸಾವು

ಕಾಬೂಲ್: ತಾಲಿಬಾನ್ ಉಗ್ರರು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ಬೆನ್ನಲ್ಲೇ ನೂರಾರು ನಿವಾಸಿಗಳ ತಾಯ್ನಾಡಾದ ಅಫ್ಘಾನಿಸ್ತಾನವನ್ನು ತೊರೆಯಲು ಆರಂಭಿಸಿದ್ದಾರೆ, ಇದೇ ವೇಳೆ ವಿಮಾನಕ್ಕೆ ಏರುತ್ತಿದ್ದಂತೆ ಮೂರು ಜನ ಪ್ರಯಾಣಿಕರು ಪ್ರಾಣ ಕಳೆದುಕೊಂಡಿದ್ದಾರೆ. ವಿಮಾನ ನಿಲ್ದಾಣಗಳಲ್ಲಿ ವಿಮಾನ ಹತ್ತಲು ನಿಯಮಗಳು ಇರುತ್ತದೆ. ದಾಖಲೆಗಳನ್ನು ಪರಿಶೀಲಿಸಿದ ಬಳಿಕ ವಿಮಾನ ಹತ್ತಲು ಅನುಮತಿ ನೀಡಲಾಗುತ್ತದೆ. ಆದರೆ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಬಸ್ ಹತ್ತಲು ಪ್ರಯಾಣಿಕರು ಹೇಗೆ ಮುಗಿಬೀಳುತ್ತಾರೋ ಆ ರೀತಿಯಾಗಿ ಒಂದು ಏಣಿ ಮೂಲಕ ವಿಮಾನ ಹತ್ತಲು ಪ್ರಯತ್ನಿಸಿದ್ದಾರೆ. ಸುರಕ್ಷಿತ ಸ್ಥಳ ತಲುಪಲು ವಿಮಾನ

ಜೀವ ರಕ್ಷಣೆಗೆ ತಾಯ್ನಾಡು ತೊರೆಯುತ್ತಿರುವ ಅಪ್ಘನ್ನರು| ಬಸ್ ಏರಿದಂತೆ ವಿಮಾನ ಏರುತ್ತಿರುವ ಜನ| ಟಯರ್ ಹಿಡಿದು ಪ್ರಯಾಣ ಮಾಡಿದ ಮೂರು ಜನ ಸಾವು Read More »