Ad Widget .

ಕೆಂಪುಕೋಟೆ‌ ಧ್ವಜಾರೋಹಣಕ್ಕೆ ಈ ಬಾರಿ ಹೊಸ‌ ಮೆರುಗು| ಯಾರು ಗೊತ್ತಾ ಮುಖ್ಯ ಅತಿಥಿ?

Ad Widget . Ad Widget .

ನವದೆಹಲಿ, ಆ. 14: ದೇಶಕ್ಕೆ ಸ್ವತಂತ್ರ ಬಂದು 75 ವರ್ಷಗಳಾದ ಹಿನ್ನಲೆಯಲ್ಲಿ ಈ ವರ್ಷ ‘ಆಜಾದಿ ಕಾ ಅಮೃತ್ ಮಹೋತ್ಸವ’ ಆಚರಿಸಲಾಗುತ್ತಿದೆ. ಸ್ವಾತಂತ್ರ್ಯೋತ್ಸವ ಎಂದಿನಂತೆ ದೇಶಾದ್ಯಂತ ಸಡಗರ ಸಂಭ್ರಮದಿಂದ ಜರುಗುತ್ತದೆಯಾದರೂ ರಾಷ್ಟ್ರ ರಾಜಧಾನಿ ದೆಹಲಿಯ ಕೆಂಪು ಕೋಟೆಯಲ್ಲಿ ನಡೆಯುವ ಕಾರ್ಯಕ್ರಮ ಇನ್ನೊಂದು ಬಗೆಯ ಸಂಭ್ರಮದ್ದು. ಈ ಬಾರಿ ಕೆಂಪು ಕೋಟೆಯಲ್ಲಿ ನಡೆಯುವ ಸ್ವಾತಂತ್ರ್ಯ ದಿನಾಚರಣೆಯ ಮುಖ್ಯ ಅತಿಥಿ ಶತಮಾನದ ಬಳಿಕ ಒಲಂಪಿಕ್ಸ್ ಆಥ್ಲೆಟಿಕ್ ವಿಭಾಗದಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದು ತಂದ ನೀರಜ್ ಚೋಪ್ರಾ.

Ad Widget . Ad Widget .

ಕೆಂಪು ಕೋಟೆಯಲ್ಲಿ ನಡೆಯುವ ಕಾರ್ಯಕ್ರಮ ಸದಾ ಪ್ರಧಾನ ಮಂತ್ರಿಗಳ ನೇತೃತ್ವದಲ್ಲಿ ನಡೆಯುತ್ತದೆ. ಪ್ರಧಾನ ಮಂತ್ರಿಗಳು ಕೆಂಪು ಕೋಟೆಯ ಮೇಲೆ ನಿಂತು ದೇಶವನ್ನು ಉದ್ದೇಶಿಸಿ ಭಾಷಣ ಮಾಡುತ್ತಾರೆ. ಈ ಬಾರಿಯೂ ಇದೇ ರೀತಿಯ ಕಾರ್ಯಕ್ರಮ ಜರುಗಲಿದೆ.

ಈ ಕಾರ್ಯಕ್ರನಕ್ಕೆ ದೇಶ ವಿದೇಶಗಳ ಗಣ್ಯರನ್ನು ಆಹ್ವಾನಿಸಲಾಗುತ್ತದೆ. ಅದೇ ರೀತಿ ಒಲಂಪಿಕ್ಸ್ ನಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದು ತಂದ ನೀರಜ್ ಚೋಪ್ರಾ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಜಾವಲಿನ್ ಎಸೆತಗಾರ ಸುಬೇದಾರ್ ನೀರಜ್ ಚೋಪ್ರಾ ಅಲ್ಲದೆ ಒಲಂಪಿಕ್ಸ್ ನಲ್ಲಿ ಈ ಬಾರಿ ಪದಕ ಗೆದ್ದ ಇನ್ನಿಬ್ಬರನ್ನು ಹಾಗೂ ಭಾರತೀಯ ಕ್ರೀಡಾ ಪ್ರಾಧಿಕಾರದ (ಎಸ್‌ಎಐ) ಇಬ್ಬರು ಅಧಿಕಾರಿಗಳನ್ನು ಆಹ್ವಾನಿಸಲಾಗಿದೆ. ಇದಲ್ಲದೆ ಕೊರೋನಾ ಯೋಧರನ್ನು (Corona warriors) ಅವರನ್ನು ಆಹ್ವಾನಿಸಿದ್ದು ಅವರನ್ನು ಕೂರಿಸಲು ಪ್ರತ್ಯೇಕವಾದ ಬ್ಲಾಕ್ ರೂಪಿಸಲಾಗಿದೆ. ಸ್ವತಂತ್ರ್ಯೋತ್ಸವ ಆಚರಿಸುವ ಸಂದರ್ಭದಲ್ಲಿ ಭಾರತೀಯ ವಾಯು ಸೇನಾ ವಿಮಾನಗಳು ಈ ಬ್ಲಾಕ್ ಮೇಲೆ ಹೂಮಳೆ ಸುರಿಸುವ ಮೂಲಕ ಗೌರವ ಸಲ್ಲಿಸಲಿವೆ.

Leave a Comment

Your email address will not be published. Required fields are marked *