ಸ್ಪೆಷಲ್ ಸಮಾಚಾರ : ಇಂದಿನ ಡಿಜಿಟಲ್ ಯುಗದಲ್ಲಿ ಇಂಟರ್ ನೆಟ್ ಸಮಸ್ಯೆ ಯಾರಿಗೂ ತಪ್ಪಿಲ್ಲ ಹೇಳಿ. ಹಲವರು ಇಂಟರ್ ನೆಟ್ ಗೆ ನೆಟ್ ವರ್ಕ್ ಸಿಗದೇ ತೊಂದರೆ ಅನುಭವಿಸುತ್ತಾರೆ, ಅಲ್ಲದೇ ಮಕ್ಕಳ ಆನ್ ಲೈನ್ ಕ್ಲಾಸ್ ಗೆ ನೆಟ್ ವರ್ಕ್ ಸಿಗದೇ ಪೋಷಕರು-ಮಕ್ಕಳು ನೆಟ್ ವರ್ಕ್ ಗಾಗಿ ಬೆಟ್ಟ-ಗುಡ್ಡ ಏರುವುದನ್ನು ಕೂಡ ನೋಡಿದ್ದೇವೆ
ಈ ಎಲ್ಲಾ ಸಮಸ್ಯೆಗಳಿಗೆ ಗುಡ್ ಬೈ ಹೇಳಲು ಸ್ಯಾಟಲೈಟ್ ಇಂಟರ್ ನೆಟ್ ವ್ಯವಸ್ಥೆ ರೂಪಿಸಲು ಕಂಪನಿಗಳು ಸಜ್ಜಾಗಿದೆ.
ಹೌದು, ಭಾರತದಲ್ಲಿ ಸ್ಯಾಟಲೈಟ್ ಇಂಟರ್ನೆಟ್ ಸೇವೆಯ ವ್ಯವಸ್ಥೆ ಕಲ್ಪಿಸಲು ಟಾಟಾ ಗ್ರೂಪ್ ನೆಲ್ಕಾ ಕಂಪನಿ ಕೆನಡಾದ ಟೆಲಿಸ್ಯಾಟ್ ಕಂಪನಿ ಜೊತೆ ಮಾತುಕತೆ ನಡೆಸಿದೆ.
ಸ್ಯಾಟಲೈಟ್ ಅಥವಾ ಉಪಗ್ರಹಗಳ ಮೂಲಕ ಇಂಟರ್ ನೆಟ್ ನೀಡಲಾಗುತ್ತಿದ್ದು, ಇದಕ್ಕ ಯಾವುದೇ ನೆಟ್ ವರ್ಕ್ ಬೇಕಾಗಿಲ್ಲ, ಸ್ಯಾಟಲೈಟ್ ಬ್ಯಾಂಡ್ ಬ್ಯಾಂಡ್ ಮೂಲಕ ಇಂಟರ್ ನೆಟ್ ಸಿಗಲಿದೆ.ನಿಮಗೆ ಯಾವುದೇ ಮೂಲೆಗ ಹೋದರೂ ಇಂಟರ್ ನೆಟ್ ಸಿಗಲಿದೆ, ಒಟ್ಟಿನಲ್ಲಿ ನೀವು ಆಕಾಶದ ಕೆಳಗಿದ್ದರೆ ಸಾಕು ಇಂಟರ್ ನೆಟ್ ಸಿಗುತ್ತೆ. ಇಂತಹದ್ದೊಂದು ಯೋಜನೆಯನ್ನು ಭಾರತದಲ್ಲಿ ಪರಿಚಯಿಸಲು ಟಾಟಾ ಗ್ರೂಪ್ ನೆಲ್ಕಾ ಕಂಪನಿ ಕೆನಡಾದ ಟೆಲಿಸ್ಯಾಟ್ ಕಂಪನಿ ಜೊತ ಮಾತುಕತೆ ನಡೆಸಿದೆ. ಸದ್ಯ ಇದರ ಪ್ರಾಯೋಗಿಕ ಪರೀಕ್ಷೆಗಳು ನಡೆದಿದ್ದು, 2022 ರ ವೇಳೆಗೆ ಜನರು ಈ ಸೇವೆಯ ಲಾಭ ಪಡೆಯಬಹುದಾಗಿದೆ.