ಹೀರೋದಿಂದ ಹೊಸ ವಿದ್ಯುತ್ ಚಾಲಿತ ಸ್ಕೂಟರ್ ಬಿಡುಗಡೆ| ಹೇಗಿದೆ ಗೊತ್ತಾ ಇದರ ವಿಶೇಷತೆ?

Ad Widget ... ..

ನವದೆಹಲಿ: ಭಾರತದ ವಾಹನ ತಯಾರಿಕಾ ಕಂಪೆನಿಗಳು ವಿದ್ಯುತ್‌ ಚಾಲಿತ ವಾಹನಗಳ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಲು ಆರಂಭಿಸಿದೆ. ಈಗಾಗಲೇ ಹಲವು ಕಂಪೆನಿಗಳು ಇ-ಸ್ಕೂಟರ್​ಗಳನ್ನು ಪರಿಚಯಿಸುತ್ತಿದೆ. ಇದೀಗ ವಿಶ್ವದ ಅತಿದೊಡ್ಡ ದ್ವಿಚಕ್ರ ವಾಹನ ಉತ್ಪಾದನಾ ಸಂಸ್ಥೆ ಹೀರೋ ಕಂಪೆನಿ ಕೂಡ ಹೊಸ ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್​ನ್ನು ಗ್ರಾಹಕರ ಮುಂದಿಡಲು ಸಜ್ಜಾಗಿದೆ. ಈಗಾಗಲೇ ನೂತನ ಸ್ಕೂಟರ್​ನ್ನು ಹೀರೋ ಮೋಟೋಕಾರ್ಪ್ ಅಧ್ಯಕ್ಷ ಪವನ್ ಮುಂಜಾಲ್ ಬಿಡುಗಡೆಗೊಳಿಸಿದ್ದಾರೆ.

Ad Widget

ಹೀರೋ ಕಂಪನಿಯ 10 ವರ್ಷಗಳ ಸಂಭ್ರಮಾಚರಣೆಯ ಲೈವ್ ಸ್ಟ್ರೀಮ್ ಕಾರ್ಯಕ್ರಮದಲ್ಲಿ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಅನಾವರಣಗೊಳಿಸಿದೆ. ಇದಾಗ್ಯೂ ಹೀರೋ ಮೋಟೋಕಾರ್ಪ್ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಹೆಚ್ಚಿನ ವಿವರಗಳನ್ನು ಹಂಚಿಕೊಂಡಿಲ್ಲ.
ಹೀರೋ ಮೋಟಾರ್ಸ್ ಹೊಸ ಸ್ಕೂಟರ್ ವಿನ್ಯಾಸದ ಬಗ್ಗೆ ಹೇಳುವುದಾದರೆ, ಈ ಸ್ಕೂಟರ್​ಗೆ ಬಿಳಿ ಮತ್ತು ಕಪ್ಪು ಬಣ್ಣಗಳನ್ನು ನೀಡಲಾಗಿದೆ. ಅಲ್ಲದೆ ಫ್ಲೈಸ್ಕ್ರೀನ್ ಮತ್ತು ಉದ್ದವಾದ ಆಸನದೊಂದಿಗೆ ಬಾಗಿದ ಫ್ರಂಟ್​ ವಿನ್ಯಾಸವನ್ನು ರೂಪಿಸಲಾಗಿದೆ. ಹಾಗೆಯೇ ಈ ಸ್ಕೂಟರ್ ಮುಂಭಾಗದಲ್ಲಿ 12 ಇಂಚಿನ ಟೈರ್ ಮತ್ತು ಹಿಂಭಾಗದಲ್ಲಿ 10 ಇಂಚಿನ ಟೈರ್ ನೀಡಲಾಗಿದೆ. ಇನ್ನು ಎರಡು ಮಂದಿಗೆ ಆರಾಮದಾಯಕವಾಗಿ ಕುಳಿತುಕೊಳ್ಳುವಂತಹ ವಿನ್ಯಾಸದಲ್ಲಿ ಈ ಸ್ಕೂಟರ್​ ಅನ್ನು ರೂಪಿಸಲಾಗಿದೆ.

ಏಪ್ರಿಲ್‌ನಲ್ಲಿ, ಹೀರೋ ಮೋಟೋಕಾರ್ಪ್ ತೈವಾನ್ ಕಂಪನಿ ಗೊಗೊರೊ ಜೊತೆ ಬ್ಯಾಟರಿ ವಿನಿಮಯ ಮತ್ತು ತಾಂತ್ರಿಕ ವೈಶಿಷ್ಟ್ಯಗಳನ್ನು ಹಂಚಿಕೊಳ್ಳುವ ಒಪ್ಪಂದಕ್ಕೆ ಸಹಿ ಹಾಕಿದೆ. ಆದರೆ ಕಂಪನಿಯು ಪರಿಚಯಿಸಲಿರುವ ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್‌ನ ವಿನ್ಯಾಸವು ಗೊಗೊರೊ ಎಲೆಕ್ಟ್ರಿಕ್ ಸ್ಕೂಟರ್‌ಗಿಂತ ಭಿನ್ನವಾಗಿರುವುದು ವಿಶೇಷ.

Leave a Comment

Your email address will not be published. Required fields are marked *